ಯೆಹೋವನಿಗಾಗಿ ಸಾಕ್ಷಿಕೊಡಿರಿ, ಸೋತು ಹೋಗಬೇಡಿರಿ
“ನೀವು ಮನಗುಂದಿದವರಾಗಿ ಸೋತುಹೋಗದಂತೆ ಆತನನ್ನು ನಿಕಟವಾಗಿ ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.”—ಇಬ್ರಿಯರಿಗೆ 12:3.
1, 2. ತಾನು ಪುನರುತ್ಥಾನಗೊಂಡಿದ್ದೇನೆಂಬುದಕ್ಕೆ ಯಾವ ಖಚಿತ ಪ್ರಮಾಣವನ್ನು ಯೇಸು ತನ್ನ ಶಿಷ್ಯರಿಗೆ ಕೊಟ್ಟನು?
“ನಾನು ಸ್ವಾಮಿಯನ್ನು ನೋಡಿದ್ದೇನೆ!” ಈ ಅಚ್ಚರಿಯ ಮಾತುಗಳಿಂದ ಮಗ್ದಲದ ಮರಿಯಳು ಯೇಸುವಿನ ಪುನರುತ್ಥಾನದ ವಾರ್ತೆಯನ್ನು ಕೊಟ್ಟಳು. (ಯೋಹಾನ 20:18) ಇದಕ್ಕೆ ಮುಂಚೆ ಯೇಸುವಿನ ಮರಣದಿಂದಾಗಿ ದುಃಖಿತರಾಗಿದ್ದ ಕ್ರಿಸ್ತನ ಶಿಷ್ಯರಿಗೆ ಉತ್ತೇಜಕ ಘಟನಾವಳಿಯಿಂದ ತುಂಬಿ ತುಳುಕಿದ್ದ 40 ದಿನಗಳ ಪ್ರಾರಂಭವನ್ನು ಇದು ಗುರುತಿಸಿತು.
2 ತಾನು ಸಾಕ್ಷಾತ್ ಜೀವಂತನಾಗಿದ್ದೇನೆಂಬ ವಿಷಯದಲ್ಲಿ ತನ್ನ ಶಿಷ್ಯರ ಮನಸ್ಸಲ್ಲಿ ಯಾವ ಸಂಶಯವೂ ಇರಬಾರದೆಂದು ಯೇಸು ಬಯಸಿದ್ದನು. ಹೀಗೆ ಲೂಕನು ತಿಳಿಸುವದು: “ಆತನು ಬಾಧೆಪಟ್ಟು ಸತ್ತ ಮೇಲೆ ಅನೇಕ ಪ್ರಮಾಣಗಳಿಂದ ತನ್ನನ್ನು (ಯೇಸು) ಜೀವಂತನೆಂದು ನಾಲ್ವತ್ತು ದಿವಸಗಳ ತನಕ ಅವರಿಗೆ ತೋರಿಸಿಕೊಂಡನು.” (ಅಪೊಸ್ತಲರ ಕೃತ್ಯ 1:3) ಒಂದು ಸಂದರ್ಭದಲ್ಲಿ “ಅವನು ಐನೂರು ಮಂದಿಗಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡದ್ದೂ” ವಾಸ್ತವಿಕವು. (1 ಕೊರಿಂಥ 15:6) ಸಂದೇಹಕ್ಕೆ ಯಾವ ಎಡೆಯೂ ಈಗ ಅಲ್ಲಿರಲಿಲ್ಲವೆಂಬುದು ನಿಶ್ಚಯ. ಯೇಸು ಜೀವಂತನಾಗಿದ್ದನು.
3. ರಾಜ್ಯದ ಕುರಿತಾದ ಯಾವ ಪ್ರಶ್ನೆಯನ್ನು ಯೇಸುವಿನ ಶಿಷ್ಯರು ಅವನಿಗೆ ಹಾಕಿದರು, ಮತ್ತು ಅವನ ಉತ್ತರವು ಅವರನ್ನು ಅಚ್ಚರಿಗೊಳಿಸಿದ್ದೇಕೆ?
3 ಯೇಸುವಿನ ಶಿಷ್ಯರು ಆಗ ಒಂದು ಐಹಿಕ “ದೇವರ ರಾಜ್ಯದ” ಅಂದರೆ ಆತನು ಇಸ್ರಾಯೇಲ್ಯರಿಗೆ ಪುನಃ ಸ್ಥಾಪಿಸಿ ಕೊಡುವ ರಾಜ್ಯದ ಕುರಿತಾಗಿ ಮಾತ್ರವೇ ಆಲೋಚಿಸಿದ್ದರು. (ಲೂಕ 19:11; 24:21) ಆದ್ದರಿಂದ ಅವರು ಯೇಸುವನ್ನು ಕೇಳಿದ್ದು: ಸ್ವಾಮಿ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” ಅವನ ಉತ್ತರವು ಅವರನ್ನು ಅಚ್ಚರಿಪಡಿಸಿರಬೇಕೆಂಬುದಕ್ಕೆ ಸಂಶಯವಿಲ್ಲ. ಯಾಕೆಂದರೆ ಅವನಂದದ್ದು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ. ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬರಲು ನೀವು ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು:” (ಅಪೊಸ್ತಲರ ಕೃತ್ಯ 1:6-8) ಎಂತಹ ಪಂಥಾಹ್ವಾನವು ಈಗ ಶಿಷ್ಯರ ಮುಂದೆ ಇಡಲ್ಪಟ್ಟಿತು! ಎಂತಹ ದೊಡ್ಡ ಜವಾಬ್ದಾರಿಕೆಯು! ಅಂತಹ ಒಂದು ಮಹಾ ಕಾರ್ಯವನ್ನು ಅವರು ಪೂರೈಸುವದು ಹೇಗೆ ಸಾಧ್ಯ? ಇದಕ್ಕೆ ಉತ್ತರವು ಒಂದು ಆಶ್ಚರ್ಯಕರ ರೀತಿಯಲ್ಲಿ ಬೇಗನೆ ಕೊಡಲ್ಪಟ್ಟಿತು.
ಆ ಪಂಥಾಹ್ವಾನವನ್ನು ಸ್ವೀಕರಿಸುವದು
4. ಪಂಚಾಷತ್ತಮ ದಿನದಲ್ಲಿ ಏನು ಸಂಭವಿಸಿತ್ತೆಂಬುದಾಗಿ ವಿವರಿಸಿರಿ.
4 ಲೂಕನು ವಿವರಿಸುವದು: “ಪಂಚಾಶತ್ತಮ ಹಬ್ಬವು ಬಂದಿರಲಾಗಿ ಅವರೆಲ್ಲರು ಒಂದೇ ಸ್ಥಳದಲ್ಲಿ ಕೂಡಿದ್ದರು. ಆಗ ಬಿರುಗಾಳಿ ಬೀಸಿತ್ತದೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದ ಉಂಟಾಗಿ ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಅದಲ್ಲದೇ, ಉರಿಯಂತಿರುವ ನಾಲಗೆಗಳು ವಿಂಗಡಿಸಿಕೊಳ್ಳುವ ಹಾಗೇ ಅವರಿಗೆ ಕಾಣಿಸಿ ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕೂತುಕೊಂಡವು. ಆಗ ಅವರೆಲ್ಲರು ಪವಿತ್ರಾತ್ಮ ಭರಿತವಾಗಿ ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆ ಬೇರೆ ಭಾಷೆಗಳಿಂದ ಮಾತಾಡುವದಕ್ಕೆ ಪ್ರಾರಂಭಿಸಿದರು.” ಅವರ ಶಬ್ದವು ಎಷ್ಟು ದೊಡ್ಡದ್ದಾಗಿತ್ತೆಂದರೆ ಹಬ್ಬಕ್ಕಾಗಿ ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಯೆಹೂದಿ ಸಮುದಾಯದ ಗಮನವನ್ನು ಅದು ಆಕರ್ಷಿಸಿತು. ಇವರು ‘ದೇವರ ಮಹತ್ವಗಳ ವಿಷಯವಾಗಿ ಅವರ ಸ್ವಂತ ಭಾಷೆಗಳಲ್ಲಿ ಹೇಳುವುದನ್ನು’ ಕೇಳಿದಾಗ ಅವರು ಬೆರಗಾದರು.—ಅಪೊಸ್ತಲರ ಕೃತ್ಯ 2:1-11.
5. ಅಪೊಸ್ತಲರ ಕೃತ್ಯ 1:8 ರ ಯೇಸುವಿನ ಭವಿಷ್ಯವಾದವು ಎಷ್ಟರ ಮಟ್ಟಿಗೆ ಶೀಘ್ರದಲ್ಲಿ ನೆರವೇರಿತು?
5 ಆಗ ಪೇತ್ರನು ಸ್ವಲ್ಪವೂ ವಿಳಂಬಿಸದೆ ಒಂದು ಬಲವತ್ತಾದ ಭಾಷಣವನ್ನು ಕೊಡುತ್ತಾ, ಅವರು ಯಾರನ್ನು ಕಂಭಕ್ಕೆ ಜಡಿದರೋ ಆ “ನಜರೇತಿನ ಯೇಸುವು” ದಾವೀದನಿಂದ ಮುಂತಿಳಿಸಲ್ಪಟ್ಟ “ಒಡೆಯನು” ಎಂದು ಯಾವ ಸಂದೇಹವೂ ಇಲ್ಲದ ಹಾಗೆ ರುಜು ಮಾಡಿಕೊಟ್ಟನು. “ನಾನು ನಿನ್ನ ವಿರೋಧಿಗಳನ್ನು ನಿನ್ನು ಪಾದಗಳಿಗೆ ಪೀಠವಾಗಿ ಮಾಡುವ ತನಕ ನನ್ನು ಬಲಗಡೆಯಲ್ಲಿ ಕೂತುಕೊಂಡಿರು ಎಂದು ಯೆಹೋವನು ನನ್ನ ಒಡೆಯನಿಗೆ ನುಡಿದನು.” ಎಂದಿದ್ದನು ದಾವೀದನು. ಪೇತ್ರನಿಗೆ ಕಿವಿಗೊಡುತ್ತಿದ್ದವರು ಇದನ್ನು ಕೇಳಿ ಹೃದಯದಲ್ಲಿ ಅಲುಗು ನೆಟ್ಟಂತಾಗಿ “ಸಹೋದರರೇ, ನಾವೇನು ಮಾಡಬೇಕು?” ಎಂದು ಕೇಳಲು ಪೇತ್ರನು ಅವರಿಗೆ “ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ದೇವರ ಕಡೆಗೆ ತಿರುಗಿಕೊಂಡು ಯೇಸುಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ” ಎಂದು ಪ್ರೇರೆಪಿಸಿದನು. ಫಲಿತಾಂಶವೇನಾಯಿತು? ಮೂರು ಸಾವಿರ ಮಂದಿ ದೀಕ್ಷಾಸ್ನಾನ ಮಾಡಿಸಿಕೊಂಡರು. (ಅಪೊಸ್ತಲರ ಕೃತ್ಯ 2:14-41) ಯೆರೂಸಲೇಮಿನಲ್ಲಿ ಸಾಕ್ಷಿಯು ಅವಾಗಲೇ ಕೊಡಲ್ಪಡತೊಡಗಿತು. ತರುವಾಯ ಎಲ್ಲಾ ಯೂದಾಯ ಅನಂತರ ಸಮಾರ್ಯ ಸೀಮೆಗೆ ವಿಸ್ತಾರ್ಯಗೊಂಡು ಕೊನೆಗೆ “ಭೂಲೋಕದ ಕಟ್ಟಕಡೆಯವರೆಗೆ” ಹಬ್ಬಿತು. ರಾಜ್ಯ ಸಾರುವಿಕೆಯ ಹಬ್ಬುವಿಕೆಯ ಎಷ್ಟು ತೀವ್ರಗಾಮಿಯಾಗಿತ್ತೆಂದರೆ ಸಾ.ಶ. 60ರ ಸಮಯದೊಳಗೆ ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಠಿಗೆ ಸಾರಲ್ಪಟ್ಟಿತು” ಎಂದು ಅಪೊಸ್ತಲ ಪೌಲನು ಹೇಳಸಾಧ್ಯವಾಗಿತ್ತು.—ಕೊಲೊಸ್ಸೆ 1:23.
ರಾಜ್ಯ ವಿಸ್ತಾರ್ಯ ಮತ್ತು ಹಿಂಸೆ
6, 7. (ಎ)ಒಂದನೇ ಶತಕದಲ್ಲಿ ರಾಜ್ಯ ವಿಸ್ತಾರ್ಯ ಮತ್ತು ಕ್ರೈಸ್ತರ ಹಿಂಸೆ ಜತೆಜತೆಯಾಗಿ ಮುಂದೆ ಸಾಗಿತು ಹೇಗೆ? ಯೆರೂಸಲೇಮಿನ ಕ್ರೈಸ್ತರ ನಡುವೆ ಯಾವ ಜರೂರಿಯ ಅಗತ್ಯವು ಉಂಟಾಯಿತು ಮತ್ತು ಈ ಅಗತ್ಯತೆಯನ್ನು ಪೂರೈಸಿದ್ದು ಹೇಗೆ?
6 ಸಾ.ಶ. 33ರ ಪಂಚಶತ್ತಮದ ತರುವಾಯ ಸ್ವಲ್ಪ ಸಮಯದೊಳಗೇ ಯೇಸುವಿನ ಶಿಷ್ಯರಿಗೆ ಆತನ ಮಾತುಗಳನ್ನು ನೆನಪಿಗೆ ತಂದುಕೊಳ್ಳುವ ಸಂದರ್ಭ ಒದಗಿತು: “ಧಣಿಗಿಂತ ಆಳು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ ಮಾತುಗಳನ್ನು ಜ್ಞಾಪಕಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ.” (ಯೋಹಾನ 15:20) “ದೇವರ ವಾಕ್ಯವು ಪ್ರಬಲವಾದಾಗ ಮತ್ತು ಶಿಷ್ಯರ ಸಂಖ್ಯೆಯು ಯೆರೂಸಲೇಮಿನಲ್ಲಿ ಬಹಳವಾಗಿ ಹೆಚ್ಚುತ್ತಾ ಬಂದಾಗ” ಯೆಹೂದಿ ಮುಖಂಡರು ಬಹು ಕ್ರೋಧಿತರಾದರು. ಶಿಷ್ಯ ಸ್ತೆಫನನನ್ನು ಸುಳ್ಳಾರೋಪದಿಂದ ಕಲ್ಲಿಸೆದು ಕೊಲ್ಲಲಾಯಿತು. ಅನೇಕರು ಕಾಯುತ್ತಿದ್ದ ಒಂದು ಸೂಚನೆಯಾಗಿ ಅದು ತೋರಿಬಂತು. ಯಾಕೆಂದರೆ “ಆ ದಿವಸದಲ್ಲಿ ಯೆರೂಸಲೇಮಿನಲ್ಲಿ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರು ಹೊರತಾಗಿ ಎಲ್ಲರೂ ಯೂದ್ಯ ಸಮಾರ್ಯ ಸೀಮೆಗಳಲ್ಲಿ ಚದರಿಹೋದರು.”—ಅಪೊಸ್ತಲರ ಕೃತ್ಯ 6:7; 7:58-60; 8:1.
7 ಆ ಹಿಂಸೆಯು ತಾತ್ಕಾಲಿಕವಾಗಿ ಕಡಿಮೆಯಾಯಿತು. ಆದರೆ ಅನಂತರ ಸ್ವಲ್ಪ ಸಮಯದೊಳಗೇ 1ನೇ ಹೆರೋದ ಅಗ್ರಿಪ್ಪನು ಅಪೊಸ್ತಲ ಯಾಕೋಬನನ್ನು ಕೊಲ್ಲಿಸಿದನು. ಪೇತ್ರನನ್ನು ಸೆರೆಮನೆಯಲ್ಲಿ ಹಾಕಲಾಯಿತು. ಆದರೆ ಒಬ್ಬ ದೇವದೂತನಿಂದ ಅವನು ಬಿಡಿಸಲ್ಪಟ್ಟನು. ತರುವಾಯ ಯೆರೂಸಲೇಮಿನ ಸಹೋದರರ ಮೇಲೆ ಐಹಿಕ ಕುಂದುಕೊರತೆಗಳು ಬಂದಾಗ ಬೇರೆ ಕಡೆಗಳ ಜತೆ ವಿಶ್ವಾಸಿಗಳು ಹಣ ಸಹಾಯವನ್ನು ಮಾಡುವ ಅಗತ್ಯ ಉಂಟಾಯಿತು. (ಅಪೊಸ್ತಲರ ಕೃತ್ಯ 9:31; 12:1-11; 1ಕೊರಿಂಥ 16:1-3) ಅಪೊಸ್ತಲ ಪೌಲನು ಯೆರೂಸಲೇಮಿಗೆ ಮಾಡಿದ ಸಂದರ್ಶನಯೊಂದರಲ್ಲಿ “ಇಂಥವನನ್ನು ಭೂಮಿಯಿಂದ ತೆಗೆದು ಹಾಕಿಬಿಡು; ಇವನು ಬದುಕುವುದು ಯುಕ್ತವಲ್ಲ” ಎಂದು ಜನಸಮೂಹವು ಕೂಗಿಹೇಳಿದಾಗ ಧರ್ಮಾಂಧತೆಯ ಅತಿರೇಕವು ಅಲ್ಲಿ ಪ್ರತ್ಯೇಕವಾಗಿ ತೋರಿಬಂತು. (ಅಪೊಸ್ತಲರ ಕೃತ್ಯ 22:22) ನಿಶ್ಚಯವಾಗಿಯೂ ಯೆರೂಸಲೇಮ್ ಮತ್ತು ಯೂದಾಯದಲ್ಲಿ ಜೀವಿಸಿದ್ದ ಆ ಕ್ರೈಸ್ತರಿಗೆ ರಾಜ್ಯದ ಕುರಿತು ಸಾಕ್ಷಿಕೊಡುತ್ತಾ ನಂಬಿಗಸ್ತಿಕೆಯಿಂದ ಮುಂದುವರಿಯಲು ಬಹಳ ಉತ್ತೇಜನದ ಅಗತ್ಯವಾಗಿತ್ತು. ಯೇಸು ತನ್ನ ಶಿಷ್ಯರಿಗೆ “ಸಹಾಯಕನನ್ನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮ”ವನ್ನು ವಾಗ್ದಾನಿಸಿದ್ದನು. (ಯೋಹಾನ 14:26) ಆದರೆ ಈಗ ತಂದೆಯು ಅಂತಹ ಅತ್ಯಗತ್ಯದ ಸಹಾಯವನ್ನು ಅಂಥಾ ಸಾಂತ್ವನವನ್ನು ಹೇಗೆ ಕಳುಹಿಸಿದನು? ಸ್ವಲ್ಪಾಂಶದಲ್ಲಿ ಅಪೊಸ್ತಲ ಪೌಲನ ಮುಖಾಂತರವಾಗಿ ಅದು ಬರಲಿತ್ತು.
ಇಬ್ರಿಯರಿಗೆ ಪೌಲನ ಪತ್ರವು
8. (ಎ)ಇಬ್ರಿಯರಿಗೆ ತನ್ನ ಪತ್ರಿಕೆಯನ್ನು ಬರೆಯಲು ಪೌಲನನ್ನು ಪ್ರೇರೇಪಿಸಿದ್ದು ಹೇಗೆ? (ಬಿ) ಅವನ ಪತ್ರದ ಯಾವ ವೈಶಿಷ್ಟ್ಯದ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸುತ್ತೇವೆ ಮತ್ತು ಏಕೆ?
8 ಸಾ.ಶ. 61ರ ಸುಮಾರಿಗೆ ಪೌಲನು ರೋಮಿನಲ್ಲಿ ಕೈದಿಯಾದನು, ಆದರೆ ಯೆರೂಸಲೇಮಿನಲ್ಲಿ ತನ್ನ ಸಹೋದರರಿಗೆ ಏನು ಸಂಭವಿಸುತ್ತಾ ಇತ್ತೆಂಬ ಅರಿವು ಅವನಿಗಿತ್ತು. ಆದ್ದರಿಂದ ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನೆಯ ಕೆಳಗೆ ಆತನು ಇಬ್ರಿಯರಿಗೆ ತನ್ನ ಸಮಯೋಚಿತ ಪತ್ರಿಕೆಯನ್ನು ಬರೆದನು. ತನ್ನ ಹಿಬ್ರೂ ಸಹೋದರ ಮತ್ತು ಸಹೋದರಿಯರಿಗಾಗಿ ಅವನಲ್ಲಿದ್ದ ಪ್ರೀತಿಯುಕ್ತ ಚಿಂತೆಯಿಂದ ಅದು ತುಂಬಿರುತ್ತದೆ. ತಮ್ಮ ಸಹಾಯಕನಾದ ಯೆಹೋವನಲ್ಲಿ ತಮ್ಮ ನಂಬಿಕೆ ಮತ್ತು ಭರವಸವನ್ನು ಕಟ್ಟುವರೇ ಅವರಿಗೇನು ಬೇಕಿತ್ತೆಂಬುದು ಪೌಲನಿಗೆ ತಿಳಿದಿತ್ತು. ಆಗ ಅವರು ತಮಗೆ “ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡಲು” ಶಕ್ತರಾಗುವರು ಮತ್ತು “ಯೆಹೋವನು ನನ್ನ ಸಹಾಯಕನು, ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?” ಎಂದು ಭರವಸದಿಂದ ಹೇಳ ಶಕ್ತರು. (ಇಬ್ರಿಯ 12:1; 13:6) ಪೌಲನು ಇಬ್ರಿಯರಿಗೆ ಬರೆದ ಪತ್ರಿಕೆಯ ಈ ವೈಶಿಷ್ಟ್ಯದ ಮೇಲೆಯೇ (ಅಧ್ಯಾಯ 11-13ರ ಮೇಲೆ) ನಾವೀಗ ನಮ್ಮ ಗಮನವನ್ನು ಕೇಂದ್ರೀಕರಿಸಬಯಸುತ್ತೇವೆ. ಏಕೆ? ಏಕೆಂದರೆ ಆ ಆರಂಭದ ಕ್ರೈಸ್ತರು ಎದುರಿಸುತ್ತಿದ್ದ ಅದೇ ಪರಿಸ್ಥಿತಿಯು ಇಂದು ಯೆಹೋವನ ಸಾಕ್ಷಿಗಳನ್ನು ಎದುರಿಸುತ್ತದೆ.
9. ಒಂದನೇ ಶತಕದ ಕ್ರೈಸ್ತರನ್ನು ಎದುರಿಸಿದ್ದ ಯಾವ ವಾದಾಂಶವು ಇಂದಿನ ಕ್ರೈಸ್ತರನ್ನು ಎದುರಿಸಿಯದೆ, ಯಾವ ರೀತಿಯಲ್ಲಿ ಮಾತ್ರವೇ ಅದನ್ನೆದುರಿಸ ಸಾಧ್ಯವಿದೆ?
9 ನಮ್ಮ ಸಂತತಿಯೊಳಗೇ ಬಹು ಮಂದಿ ಜನರು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು ಆತನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಪಡೆದ ಮೂಲಕ ರಾಜ್ಯ ಸಂದೇಶಕ್ಕೆ ನಿಶ್ಚಿತ ಪ್ರತಿಕ್ರಿಯೆ ತೋರಿಸಿದ್ದಾರೆ. ಆದರೂ, ಸತ್ಯಾರಾಧನೆಯು ಈ ಅಭಿವೃದ್ಧಿಯೊಂದಿಗೆ ತೀಕ್ಷ್ಣ ಹಿಂಸೆಯು ಸಹಾ ಬಂದಿರುತ್ತದೆ. ಸ್ತೆಫನ, ಯಾಕೋಬ ಮತ್ತು ಒಂದನೇ ಶತಕದ ಇತರ ನಂಬಿಗಸ್ತ ಸಾಕ್ಷಿಗಳಂತೆ ಅನೇಕ ಕ್ರೈಸ್ತರು ಕೂಡಾ ತಮ್ಮ ಪ್ರಾಣವನ್ನು ಕಳಕೊಂಡಿರುವರು. ಹೀಗೆ ಈಗಿರುವ ವಾದಾಂಶವು ಸಹಾ ಅಂದಿನಂತೆಯೇ ಇದೆ. ರಾಜ್ಯ ಸಂದೇಶಕ್ಕೆ ಇರುವ ತೀವ್ರ ವಿರೋಧದ ಮಧ್ಯೆ ತಮ್ಮ ಸಮಗ್ರತೆಯ ಪರೀಕ್ಷೆಯಲ್ಲಿ ಸ್ಥಿರವಾಗಿ ನಿಲ್ಲಲು ಯಾರು ಶಕ್ತರಾಗುವರು? ಅದಲ್ಲದೆ, ಈಗಿನ ಈ ಸಂತತಿಯ ಮೇಲೆ ಬೇಗನೇ ಬರಲಿರುವ ಆ ಅಸಾಮಾನ್ಯ “ಮಹಾಸಂಕಟ”ದ ಭೀಕರ ಸಂಭವಗಳನ್ನು ಎದುರಿಸಲು ಶಕ್ತರಾದರು? (ಮತ್ತಾಯ 24:21) ಯಾರು “ನಂಬಿಕೆಗಾಗಿ ಶ್ರೇಷ್ಟ ಹೋರಾಟವನ್ನು ಮಾಡಲು” ಸಿದ್ಧರಿದ್ದಾರೋ ಮತ್ತು ಯಾರು “ನಂಬಿಕೆಯಲ್ಲಿ ದೃಢರಾಗಿ” ನಿಂತಿದ್ದಾರೋ ಅವರೇ ಅದಕ್ಕೆ ಶಕ್ತರು. ಕೊನೆಗೆ ಹೀಗೆ ಹೇಳಶಕ್ತರಾಗುವವರು ಇವರೇ: “ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ.”—1 ತಿಮೊಥಿ 6:12; 1ಪೇತ್ರ 5:9; 1ಯೋಹಾನ 5:4)
ನಂಬಿಗಸ್ತ ಮಾದರಿಗಳಿಂದ ಪ್ರಯೋಜನ ಪಡೆಯುವುದು
10. (ಎ) ನಂಬಿಕೆ ಎಂದರೇನು? (ಬಿ) ಪೂರ್ವಕಾಲದ ನಂಬಿಗಸ್ತ ಸ್ತ್ರೀಪುರುಷರ ವಿಷಯವಾಗಿ ದೇವರ ಭಾವನೆ ಹೇಗಿತ್ತು?
10 ನಂಬಿಕೆ ಎಂದರೇನು? ಪೌಲನು ಉತ್ತರಿಸುವದು: “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದು ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದು ಆಗಿದೆ. ನಮ್ಮ ಪೂರ್ವಿಕರು ನಂಬಿಕೆಯುಳ್ಳವರಾಗಿದ್ದದರಿಂದಲೇ ಒಳ್ಳೇ ಹೆಸರನ್ನು ಹೊಂದಿದ್ದರು.”(ಇಬ್ರಿಯ 11:1,2) ನಂಬಿಕೆಯ ತನ್ನ ಅರ್ಥ ವಿವರಣೆಗೆ ಬೆಂಬಲವಾಗಿ ಅನಂತರ ಪೌಲನ ನಂಬಿಕೆಯ ಕ್ರಿಯೆಗಳನ್ನು ತೋರಿಸಿಕೊಟ್ಟನು. “ನಮ್ಮ ಪೂರ್ವಿಕರಲ್ಲಿ” ಕೆಲವರ ಹಾಗೂ ಸಾರ ಮತ್ತು ರಾಹಾಬರಂತಹ ಸ್ತ್ರೀಯರ ಜೀವನದಲ್ಲೂ ನಂಬಿಕೆಯ ಕೆಲವು ಮುಖ್ಯಾಂಶಗಳನ್ನು ಆತನು ತಿಳಿಸಿರುತ್ತಾನೆ. “ದೇವರು ಅವರ ದೇವರೆನಿಸಿಕೊಳ್ಳುವದಕ್ಕೆ ನಾಚಿಕೊಳ್ಳಲಿಲ್ಲ” ಎಂದು ತಿಳಿಯುವದಷ್ಟು ಉತ್ತೇಜನಕಾರಿಯು! (ಇಬ್ರಿಯ 11:16) ನಮ್ಮ ನಂಬಿಕೆಯ ವಿಷಯದಲ್ಲೂ ನಮ್ಮ ಕುರಿತು ದೇವರು ಅದನ್ನೇ ಹೇಳಶಕ್ತನೋ? ಪ್ರತಿದಿನವು ಕೊನೆಗೊಳ್ಳುವಾಗ ಆತನನ್ನು ನಾಚಿಸುವದಕ್ಕೆ ನಾವು ಯಾವ ಕಾರಣವನ್ನೂ ಕೊಡದಿರುವವರಾಗೋಣ.
11. “ನಮ್ಮ ಸುತ್ತಲೂ ಇರುವ ಮೇಘದೋಪಾದಿ ಸಾಕ್ಷಿಗಳ” ಮೂಲಕ ನಾವಿಂದು ಹೇಗೆ ಪ್ರಯೋಜನ ಪಡೆಯಬಹುದು?
11 ಈ ನಂಬಿಗಸ್ತ ಪುರುಷನ ಮತ್ತು ಸ್ತ್ರೀಯರ ವೃತ್ತಾಂತಗಳನ್ನು ಹಿಂಬಾಲಿಸಿ ಪೌಲನನ್ನುವದು: “ಆದಕಾರಣ ಇಷ್ಟು ಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲೂ ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಮಗೆ ನೇಮಕವಾದ ಓಟವನ್ನು ತಾಳ್ಮೆಯಿಂದ ಓಡೋಣ.”(ಇಬ್ರಿಯ 12:1) ಈ ಆದರ್ಶ ಮಾದರಿಯ ನಂಬಿಗಸ್ತ ಸಾಕ್ಷಿಗಳು ಈಗ ಸಮಾಧಿಯಲ್ಲಿ ನಿದ್ರಿಸುತ್ತಿದ್ದಾರಾದರೂ ನಮ್ಮ ಮನಸ್ಸಿನಲ್ಲಿ ಅವರಿನ್ನೂ ಜೀವಿತರಾಗಿ ಇದ್ದಾರೋ? ಹೌದು ಎಂದು ಉತ್ತರಿಸಲಿಕ್ಕೆ ನಿಮಗೆ ಅವರ ಮತ್ತು ಅವರ ಅನುಭವಗಳ ಚೆನ್ನಾದ ಪರಿಚಯವು ಇದೆಯೋ? ಈ “ಮೇಘದೋಪಾದಿ ಸಾಕ್ಷಿಗಳ” ಉತ್ತೇಜಕ ಅನುಭವಗಳನ್ನು ಪುನರ್ಜೀವಿಸಲು ನಮ್ಮೆಲ್ಲಾ ಭಾವನೆಗಳನ್ನುಪಯೋಗಿಸುವವದು ಕ್ರಮದ ಬೈಬಲ್ ಅಧ್ಯಯನದ ಅನೇಕ ಆಶೀರ್ವಾದಗಳಲ್ಲೊಂದಾಗಿದೆ. ಅವರ ನಂಬಿಗಸ್ತ ಮಾದರಿಯನ್ನು ಹೃದಯಕ್ಕೆ ತಕ್ಕೊಳುವದರಿಂದ ನಂಬಿಕೆಯಲ್ಲಿ ಯಾವುದೇ ಕೊರತೆಯನ್ನು ಪರಿಹರಿಸಲು ನಿಜವಾದ ನಮಗೆ ಬಹಳಷ್ಟು ಸಹಾಯವು ದೊರೆಯುವದು. ಪ್ರತಿಫಲವಾಗಿ ಇದು ನಮಗೆ ಎಲ್ಲಾ ಪರಿಸ್ಥಿತಿಗಳ ಕೆಳಗೆ ಸತ್ಯಕ್ಕೆ ನಿರ್ಭೀತಿಯಿಂದ ಹಾಗೂ ಧೈರ್ಯದಿಂದ ಸಾಕ್ಷಿಕೊಡುವಂತೆ ಸಹಾಯ ಮಾಡುವದು.—ರೋಮಾಯ 15:4.
ಸೋತುಹೋಗದಿರುವದು.
12. (ಎ)ಯೇಸುವಿನ ಮಾದರಿಯು ನಮ್ಮನ್ನು “ಮನಗುಂದಿದವರಾಗಿ ಸೋತುಹೋಗದಂತೆ” ಹೇಗೆ ಸಹಾಯ ಮಾಡುತ್ತದೆ? (ಬಿ)ಸೋತುಹೋಗದೇ ಇರುವವರ ಆಧುನಿಕ ದಿನದ ಕೆಲವು ಮಾದರಿಗಳಾವುವು?
12 ನಂಬಿಕೆಯಲ್ಲಿ ನಮಗೆ ಅತ್ಯಂತ ದೊಡ್ಡ ಮಾದರಿಯ ಯೇಸುವಿನದ್ದು. ಪೌಲನು ಪ್ರೇರೇಪಿಸಿದನು: “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ತಾಳ್ಮೆಯಿಂದ ಓಡೋಣ. . . ನೀವು ಮನಗುಂದಿದವರಾದಾಗ ಸೋತುಹೋಗದಂತೆ ಆತನನ್ನು ನಿಕಟವಾಗಿ ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.” (ಇಬ್ರಿಯ 12:1-3) ಎಷ್ಟು “ನಿಕಟವಾಗಿ” ನೀವು ಯೇಸುವಿನ ಮಾದರಿಯನ್ನು ಆಲೋಚಿಸಿದ್ದೀರಿ? ಎಷ್ಟು “ಏಕಾಗ್ರತೆ”ಯಿಂದ ನೀವಾತನನ್ನು ದೃಷ್ಟಿಸುತ್ತೀರಿ? (1ಪೇತ್ರ 2:21) ನಾವು “ಮನಗುಂದಿದವರಾಗಿ ಸೋತುಹೋಗುವಂತೆ” ಸೈತಾನನು ಬಯಸುತ್ತಾನೋ. ಸಾಕ್ಷಿಕೊಡುವ ಕಾರ್ಯವನ್ನು ನಿಲ್ಲಿಸಬೇಕೆಂದು ಅವನ ಬಯಕೆ. ಅವನದನ್ನು ಮಾಡುವುದು ಹೇಗೆ? ಕೆಲವು ಸಾರಿ ಧಾರ್ಮಿಕ ಮತ್ತು ಐಹಿಕ ಅಧಿಕಾರಿಗಳಿಂದ ತೀವ್ರ ವಿರೋಧದ ಮೂಲಕವಾಗಿ ಅವನಿದನ್ನು ಮಾಡುತ್ತಾನೆ, ಒಂದನೇ ಶತಕದಲ್ಲಿ ಮಾಡಿದಂತೆಯೆ. ಕಳೆದ ವರ್ಷ ರಾಜ್ಯ ಸಾರುವಿಕೆಯ ಕಾರ್ಯವು ಕೆಲವು 40 ದೇಶಗಳಲ್ಲಿ ನಿಷಿದ್ಧಿಸಲ್ಪಟ್ಟಿತು. ಆದರೆ ಅದು ನಮ್ಮ ಸಹೋದರರನ್ನು ಸೋಲಿಸಿತೋ? ಇಲ್ಲ! ಅವರ ನಂಬಿಗಸ್ತ ಸೇವೆಯು ಆ ದೇಶಗಳಲ್ಲಿ 1988ರಲ್ಲಿ 17,000ಕ್ಕಿಂತಲೂ ಹೆಚ್ಚು ದೀಕ್ಷಾಸ್ನಾನಗಳನ್ನು ಫಲಿಸಿತು. ಎಲ್ಲಿ ಸಾಮಾನ್ಯ ಸ್ವತಂತ್ರತೆ ಇದೆಯೋ ಆ ದೇಶಗಳಲ್ಲಿ ಜೀವಿಸುವವರೆಲ್ಲರಿಗೆ ಇದೆಂತಹ ಹುರಿದುಂಬಿಸುವಿಕೆಯನ್ನು ಕೊಡುತ್ತದೆ? ರಾಜ್ಯದ ಸುವಾರ್ತೆಯನ್ನು ಸಾರುವದರಲ್ಲಿ ನಾವೆಂದೂ ಸೋತುಹೋಗದಿರೋಣ.
13. (ಎ)ನಾವು ಸಾರುವ ಕಾರ್ಯದಲ್ಲಿ ಬಳಲಿಹೋಗುವಂತೆ ಮಾಡುವ ಕೆಲವು ಸೂಕ್ಷ್ಮ ವಿಷಯಗಳು ಯಾವುವು? (ಬಿ)ಯೇಸುವಿನ “ಮುಂದೆ ಇದ್ದ ಸಂತೋಷವು” ಯಾವುದು ಮತ್ತು ಅಂತಾದ್ದೇ ಸಂತೋಷವುಳ್ಳ ಮಾನೋಭಾವವನ್ನು ನಾವು ಹೇಗೆ ಗಳಿಸಬಹುದು?
13 ಹೀಗಿದ್ದರೂ, ನಾವು ಬಳಲಿ ಹೋಗುವಂತೆ ಮಾಡಬಲ್ಲ ಬೇರೆ ಅತಿ ಸೂಕ್ಷ್ಮ ವಿಚಾರಗಳೂ ಅಲ್ಲಿರಬಹುದು. ಇವುಗಳಲ್ಲಿ ವಿಭಜಿತ ಕುಟುಂಬದಲ್ಲಿನ ವಿರೋಧ, ಮಾನಸಿಕ ಪೀಡೆ, ಆರೋಗ್ಯ ಸಮಸ್ಯೆ, ಗೆಳೆಯರ ಒತ್ತಡ. ನಮ್ಮ ಸಾರುವ ಕಾರ್ಯದಿಂದಾಗಿ ನಿಶ್ಚಿತ ಫಲ ದೊರೆಯದಕ್ಕಾಗಿ ನಿರಾಶೆ, ಅಥವಾ ವಿಷಯ ವ್ಯವಸ್ಥೆಯು ಇನ್ನೂ ಅಂತ್ಯಗೊಳ್ಳದೇ ಇರುವುದಕ್ಕಾಗಿ ತಾಳ್ಮೆ ತಪ್ಪುವಿಕೆ ಮುಂತಾದವುಗಳು ಸೇರಿರಬಹುದು. ಒಳ್ಳೆದು, ಮಾನಸಿಕ, ಮತ್ತು ಶಾರೀರಕ ಕಷ್ಟಾನುಗಳನ್ನು ತಾಳಿಕೊಳ್ಳಲು ಯೇಸುವಿಗೆ ಸಹಾಯ ಮಾಡಿದ್ದು ಯಾವುದು? ಆತನ “ಮುಂದಿದ್ದ ಸಂತೋಷವೇ” ಅದಾಗಿತ್ತು. (ಇಬ್ರಿಯ 12:2) ತನ್ನ ತಂದೆಯ ನಿರ್ದೋಷಿಕರಣವನ್ನು ಮಾಡುವ ಮೂಲಕ ಆತನ ಹೃದಯವನ್ನು ಆನಂದಪಡಿಸುವುದಲ್ಲಿ ಉಂಟಾಗುವ ಸಂತೋಷವು ಮತ್ತು ಮೆಸ್ಸೀಯ ರಾಜ್ಯದ ಆಶೀರ್ವಾದಗಳನ್ನು ಜನರಿಗೆ ನೀಡುವದರಲ್ಲಿ ತಾನು ಅನುಭವಿಸಲಿದ್ದ ಸಂತೋಷವು ಯೇಸುವನ್ನು ಬಲಪಡಿಸಿತ್ತು. (ಕೀರ್ತನೆ 2:6-8; 40:9,10: ಜ್ಞಾನೋಕ್ತಿ 27:11) ಯೇಸುವಿನ ಈ ಸಂತೋಷದ ಮನೋಭಾವನೆಯನ್ನು ನಾವು ಅತಿ ನಿಕಟವಾಗಿ ಹಿಂಬಾಲಿಸ ಸಾಧ್ಯವೂ? “ಲೋಕದಲ್ಲಿರುವ ನಮ್ಮ ಸಹೋದರರ ಪ್ರೀತಿಯು ನಮ್ಮ ಕಡೆಗೆ ಇದೆ; ಮತ್ತು ಮುಂದಿರುವ ರಾಜ್ಯಾಡಳಿತೆಯ ಕೆಳಗಣ ಸಂತೋಷಗಳ ಮೇಲೆ ದೃಷ್ಟಿಯಿಡುವಿಕೆಯೇ ಮುಂತಾದವುಗಳು ಯೆಹೋವನನ್ನು ನಂಬಿಕೆಯಲ್ಲಿ ಸೇವಿಸಿರುವದರಿಂದ ಮತ್ತು ಅಂತ್ಯವು ಬಹು ಸಮೀಪವಾಗಿರುವಾಗ ಸಾರುವದರಲ್ಲಿ ಸೋತುಹೋಗದಂತೆ ನಮಗೆ ಸಹಾಯ ಮಾಡುವದು.
ಯೆಹೋವನು ಶಿಕ್ಷಿಸುವದೇತಕ್ಕೆ?
14. ನಾವು ತಾಳಿಕೊಳ್ಳಲೇ ಬೇಕಾದ ಪರೀಕ್ಷೆಗಳಿಂದ ಮತ್ತು ಕಷ್ಟಗಳಿಂದ ಯಾವ ಪ್ರಯೋಜನಗಳು ದೊರೆಯಬಹುದು?
14 ಪರೀಕ್ಷೆಗಳನ್ನು ಮತ್ತು ಕಷ್ಟಗಳನ್ನು ನಮಗೆ ತಾಳಿಕೊಳ್ಳಲಿರುವದೇತಕ್ಕೆ ಎಂಬದನ್ನು ಪೌಲನು ನಮಗೀಗ ತಿಳಿಸುತ್ತಾನೆ. “ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರಮಾಡಬೇಡ; ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.” (ಇಬ್ರಿಯ 12:5,6) ಯೇಸು ಸಹಾ “ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.”(ಇಬ್ರಿಯ 5:8) ನಮಗೂ ವಿಧೇಯತೆಯನ್ನು ಕಲಿತುಕೊಳ್ಳುವ ಅಗತ್ಯವಿದೆ ನಿಶ್ಚಯ. ಶಿಕ್ಷೆಯು ನಮ್ಮನ್ನು ರೂಪುಗೊಳಿಸುವಂತೆ ಬಿಡುವದರಿಂದಾಗುವ ಉಪಯುಕ್ತ ಪರಿಣಾಮಗಳನ್ನು ಗಮನಿಸಿರಿ. ಪೌಲನು ಅಂದದ್ದು: “ತರುವಾಯ ಅದು ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ.” ಇದೆಷ್ಟು ಉತ್ತೇಜನಕಾರಿಯು!—ಇಬ್ರಿಯ 12:11.
15. “ನಿಮ್ಮ ಕಾಲುಗಳಿಂದ ನೆಟ್ಟಗೆ ಮುಂದೆ ನಡಿಯಿರಿ” ಎಂಬ ಪೌಲನ ಸೂಚನೆಯನ್ನು ನಾವು ಹೇಗೆ ಅನ್ವಯಿಸಬಹುದು?
15 “ಯೆಹೋವನ ಶಿಕ್ಷೆಯನ್ನು” ನಾವು ಈ ಭಾವದಿಂದ ಸ್ವೀಕರಿಸುವದಾದರೆ, ಪೌಲನ ಈ ನಿಶ್ಚಿತ ಸೂಚನೆಯನ್ನು ನಾವು ಹೃದಯಕ್ಕೆ ತಕ್ಕೊಳ್ಳುವೆವು: “ಆದ್ದರಿಂದ ಜೋಲುಬಿದ್ದ ಕೈಗಳನ್ನು ನಡುಗುವ ಮೊಣಕಾಲುಗಳನ್ನು ಸುಧಾರಿಸಿಕೊಳ್ಳಿರಿ. ನಿಮ್ಮ ಕಾಲುಗಳಿಂದ ನೆಟ್ಟಗೆ ಮುಂದೆ ನಡಿಯಿರಿ.” (ಇಬ್ರಿಯ 12:12,13) “ನಿತ್ಯಜೀವಕ್ಕೆ ಹೋಗುವ ಇಕ್ಕಟ್ಟಾದ ದಾರಿ”ಯಿಂದ ತೊಲಗಿ ಹೋಗುವದು ಕೆಲವು ಸಾರಿ ಬಹು ಸುಲಭ. (ಮತ್ತಾಯ 7:14) ಅಪೊಸ್ತಲ ಪೇತ್ರನು ಮತ್ತು ಅಂತಿಯೋಕ್ಯದ ಇತರರು ಒಮ್ಮೆ ಇದಕ್ಕೆ ದೋಷಿಗಳಾಗಿದ್ದರು. ಏಕೆ? ಏಕೆಂದರೆ “ಅವರು ಸುವಾರ್ತೆಯ ಸತ್ಯಾರ್ಥದ ಪ್ರಕಾರ ನೆಟ್ಟಗೆ ನಡೆಯಲಿಲ್ಲ.” (ಗಲಾತ್ಯ 2:14) ಇಂದು ನಾವು ನಮ್ಮ ಮಹಾ ಉಪದೇಶಕನಾದ ಯೆಹೋವ ದೇವರಿಗೆ ಕಿವಿಗೊಡುತ್ತಾ ಮುಂದೆ ಸಾಗಬೇಕು. “ನಂಬಿಗಸ್ತನೂ ವಿವೇಕಿಯೂ ಆದ ಆಳಿ”ನಿಂದ ಒದಗಿಸಲ್ಪಡುವ ಸಹಾಯಕಗಳ ಪೂರ್ಣ ಉಪಯೋಗವನ್ನು ನಾವು ಮಾಡುವ ಅಗತ್ಯವಿದೆ. ಇದು ನಮಗೆ “ನೆಟ್ಟಗೆ ನುಡಿಯುವ” ದಾರಿಯನ್ನು ತೋರಿಸಿಕೊಡುವದು.—ಮತ್ತಾಯ 24:45-47; ಯೆಶಾಯ 30:20,21
16. (ಎ)“ವಿಷವುಳ್ಳ ಬೇರು” ಸಭೆಯನ್ನು ಹೇಗೆ ಕೆಡಿಸ ಸಾಧ್ಯವಿದೆ? (ಬಿ)ಪವಿತ್ರ ವಿಷಯಗಳಿಗಾಗಿ ಗಣ್ಯತೆಯಲ್ಲಿ ನಾವು ನಮ್ಮನ್ನು ಹೇಗೆ ರಕ್ಷಿಸಕೊಳ್ಳಬಹುದು?
16 “ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹಿಂಜರಿಯದಂತೆ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಸಭೆಯವರನ್ನು ಕೆಡಿಸದಂತೆ ಜಾಗ್ರತೆಯಿಂದ ನೋಡಿ”ಕೊಳ್ಳುವಂತೆ ಪೌಲನು ಮುಂದೆ ನಮ್ಮನ್ನು ಎಚ್ಚರಿಸುತ್ತಾನೆ. (ಇಬ್ರಿಯ 12:15) ಅಸಮಾಧಾನ, ಗುಣುಗುಟ್ಟುವಿಕೆ, ಸಭೆಯಲ್ಲಿ ವಿಷಯಗಳು ನಡಿಯುವ ರೀತಿಯಲ್ಲಿ ತಪ್ಪು ಹುಡುಕುವಿಕೆ ಮುಂತಾದವುಗಳು “ವಿಷಕಾರಿ ಬೇರಿ”ನಂತಿದ್ದು ಬೇಗನೇ ಹರಡಬಲ್ಲದು, ಮತ್ತು ಸಭೆಯ ಇತರರ ಒಳ್ಳೆಯ ವಿಚಾರಗಳನ್ನು ಕೆಡಿಸಬಲ್ಲದು. ಅಂತಹ ನಿಶೇಧಾರ್ಥಕ ಭಾವನೆಗಳನ್ನು ಸತ್ಯವು ನಮ್ಮ ಜೀವನಕ್ಕೆ ತಂದಿರುವ ಅಸಂಖ್ಯಾತ ಆಶೀರ್ವಾದಗಳನ್ನು ಯೋಚಿಸುವ ಮೂಲಕ ನಾವು ಎದುರಿಸ ಸಾಧ್ಯವಿದೆ. (ಕೀರ್ತನೆ 40:5) ಇನ್ನೊಂದು ಅಪಾಯವು ಯಾವುದಂದರೆ ಅನೈತಿಕ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳುವುದು ಅಥವಾ ‘ಏಸಾವನಂತೆ ಪವಿತ್ರ ವಿಷಯಗಳ ಕಡೆಗೆ ಗಣ್ಯತೆಯಲ್ಲಿ ಕೊರತೆ’ ಇರುವದೇ. (ಇಬ್ರಿಯ 12:16) ಪೌಲನು ಈ ಎರಡೂ ಅಪಾಯಗಳನ್ನೂ ಒಟ್ಟಾಗಿ ಜತೆಗೂಡಿಸಿರುವದು. ಯಾಕೆಂದರೆ ಅದರಲ್ಲಿ ಒಂದು ಸುಲಭವಾಗಿಯೇ ಇನ್ನೊಂದಕ್ಕೆ ನಡಿಸುತ್ತದೆ. “ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ” ಎಂಬ ಪೇತ್ರನ ಮಾತುಗಳನ್ನು ಅನ್ವಯಿಸುವುದಾದರೆ ಯಾವ ಕ್ರೈಸ್ತನಾದರೂ ಅಂತಹ ಸ್ವಾರ್ಥಪರ ಅಭಿಲಾಶೆಗಳಿಗೆ ಬಲಿಬೀಳಲಾರನು.—1ಪೇತ್ರ 5:9.
“ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದು”
17. ಸೀನಾಯ ಬೆಟ್ಟದಲ್ಲಿ ನಡೆದ ಭಯಚಕಿತ ಸಂಗತಿಗಳನ್ನು ಇಂದು ಕ್ರೈಸ್ತರು ಎದುರಿಸುತ್ತಿರುವ ವಿಷಯಗಳೊಂದಿಗೆ ಹೋಲಿಸಿರಿ.
17 “ಕಣ್ಣಿಗೆ ಕಾಣದವುಗಳನ್ನು ತಿಳುಕೊಳ್ಳುವದರಲ್ಲಿ” ನಮ್ಮ ನಂಬಿಕೆಯು ಬಹಳಷ್ಟು ಆತುಕೊಂಡಿರುತ್ತದೆ. (ಇಬ್ರಿಯ 11:1) ಕಣ್ಣಿಗೆ ಕಾಣದ ಈ ಕೆಲವು ನಿಜತ್ವಗಳನ್ನು ಇಬ್ರಿಯ 12:18-27ದಲ್ಲಿ ಪೌಲನು ತಿಳಿಸಿರುತ್ತಾನೆ. ದೇವರು ಇಸ್ರಾಯೇಲ್ಯರೊಂದಿಗೆ ನೇರವಾಗಿ ಮಾತಾಡಿದಾಗ ಮತ್ತು ಮೋಶೆಯು “ನನಗೆ ಬಹು ಭಯವಾಗುತ್ತದೆ, ನಡುಗುತ್ತೇನೆ” ಎಂದು ಹೇಳಿದಾಗ ಸೀನಾಯ ಬೆಟ್ಟದಲ್ಲಿ ಸಂಭವಿಸಿದ ಭಯಚಕಿತ ಸಂಗತಿಗಳನ್ನು ಅವನು ವರ್ಣನೆ ಮಾಡಿರುವನು. ಅಪೊಸ್ತಲನು ಮತ್ತೂ ಅಂದದ್ದು: “ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಸಮ್ಮೇಳನವಾಗಿ ಕೂಡಿರುವ ಕೋಟ್ಯಾನುಕೋಟಿ ದೇವದೂತರ ಬಳಿಗೂ ಬಂದಿರುತ್ತೀರಿ.” ಸೀನಾಯಿ ಬೆಟ್ಟದ ಬಳಿ ಇಸ್ರಾಯೇಲ್ಯರ ಸಂಬಂಧದಲ್ಲಿ ಯೆಹೋವನ ಧ್ವನಿಯು ಭೂಮಿಯನ್ನು ಕದಲಿಸಿತೆಂದು ಪೌಲನು ಹೇಳಿದ್ದಾನೆ; ಆದರೆ ಈಗಲಾದರೋ “ಭೂಮಿಯನ್ನು ಮಾತ್ರವಲ್ಲದೆ ಪರಲೋಕವನ್ನೂ ನಡುಗಿಸುವೆನು” ಎಂದು ದೇವರು ವಚನಕೊಟ್ಟಿದ್ದಾನೆ. ಈ ಮಾತುಗಳು ಮುಖ್ಯವಾಗಿ ಅಭಿಷಿಕ್ತ ಕ್ರೈಸ್ತರಿಗೆ ಉದ್ದೇಶಿಸಿದ್ದಾಗ್ಯೂ, ಬೇರೆ ಕುರಿಗಳಾದ “ಮಹಾ ಸಮೂಹ”ದವರೂ ಇದನ್ನು ಹೃದಯಕ್ಕೆ ತಕ್ಕೊಳ್ಳಸಾಧ್ಯವಿದೆ. (ಪ್ರಕಟನೆ 7:9) ಪೌಲನು ಏನು ಹೇಳುತ್ತಿದ್ದಾನೆಂದು ನೀವು ಪೂರ್ಣವಾಗಿ ಗಣ್ಯಮಾಡುತ್ತೀರೋ? ಕೋಟ್ಯಾನುಕೋಕೋಟಿ ದೇವದೂತರ ಸಮ್ಮೇಳನದ ಮುಂದೆ ನಾವು ನಿಂತಿರುತ್ತೇವೆ. ನಿಶ್ಚಯವಾಗಿಯೂ ನಾವು ಯೆಹೋವನ ಮುಂದೆಯೂ ನಿಂತಿರುತ್ತೇವೆ. ಆತನ ಬಲಗಡೆಯಲ್ಲಿ ಯೇಸು ಕ್ರಿಸ್ತನಿದ್ದಾನೆ. ಸೀನಾಯ ಬೆಟ್ಟದ ಬಳಿಯಲ್ಲಿದ್ದ ಆ ಪ್ರಾಚೀನ ಇಬ್ರಿಯರಿಗಿಂತ ಎಷ್ಟೋ ಅಧಿಕ ಜವಾಬ್ದಾರಿಕೆಗಳ ಕೆಳಗೆ ನಾವಿದ್ದೇವೆ ನಿಶ್ಚಯ! ಬರಲಿರುವ ಹರ್ಮಗೆದ್ದೋನ್ ಯುದ್ಧವೆಲ್ಲಾಗುವ ನಡುಗಿಸುವಿಕೆಯಿಂದ ಸದ್ಯದ ದುಷ್ಟ ಆಕಾಶ ಮತ್ತು ಭೂಮಿಯು ಮಾಯವಾಗಿ ಹೋಗುವದೆಂದು ನೆನಪಿನಲ್ಲಿಡಿರಿ. ದೇವರ ವಾಕ್ಯಕ್ಕೆ ಕಿವಿಗೊಡುವದಕ್ಕೆ ಮತ್ತು ಅದಕ್ಕೆ ವಿಧೇಯರಾಗುವದಕ್ಕೆ “ಕೇಳಲೊಲ್ಲದೆ” ಇರುವದಕ್ಕೆ ಇದು ಎಷ್ಟು ಮಾತ್ರಕ್ಕೂ ಸಮಯವಲ್ಲ!
18. ಹೇಗೆ ಮಾತ್ರವೇ ನಾವು ಯೆಹೋವನಿಗೆ ಸಾಕ್ಷಿಕೊಡುತ್ತಾ ಮುಂದರಿಯಬಲ್ಲಿವು ಮತ್ತು ಸೋತುಹೋಗಲಾರೆವು?
18 ಹೀಗಿರಲಾಗಿ, ನಾವಿಂದು ನಿಜವಾಗಿಯೂ ಮಾನವ ಇತಿಹಾಸದ ಬಹು ಭೀಕರವಾದ ಸಮಯದಲ್ಲಿ ಜೀವಿಸುತ್ತಿದ್ದೇವೆ. ಯೆಹೋವನ ಸಾಕ್ಷಿಗಳೋಪಾದಿ ನಾವು ದೇವರ ಸ್ಥಾಪಿತ ರಾಜ್ಯದ ಸುವಾರ್ತೆಯನ್ನು ಸಾರುವದಕ್ಕೆ ಭೂಲೋಕದ ಕಟ್ಟಕಡೆಯವರೆಗೂ ಕಳುಹಿಸಲ್ಪಟ್ಟಿರುತ್ತದೆ. ಇದನ್ನು ಮಾಡಲಿಕ್ಕೆ ನಮ್ಮಲ್ಲಿ ನಿಶ್ಚಂಚಲವಾದ ನಂಬಿಕೆಯು ಇರಬೇಕಾದ ಅಗತ್ಯವಿದೆ. ಸೋತುಹೋಗದ ನಂಬಿಕೆಯು ಇರಬೇಕಾಗಿದೆ. ಯೆಹೋವನ ಶಿಕ್ಷೆಯನ್ನು ಸ್ವೀಕರಿಸಶಕ್ತವಾದ ನಂಬಿಕೆಯು ಬೇಕಾಗಿದೆ. ನಮ್ಮಲ್ಲಿ ಅಂತಹ ನಂಬಿಕೆಯು ಇರುವದಾದರೆ, ಯಾರು “ಕೃತಜ್ಞತೆಯುಳ್ಳವರಾಗಿದ್ದು ಆತನಿಗೆ ಪವಿತ್ರ ಸೇವೆಯನ್ನು ದೇವ ಭಕ್ತಿಯಿಂದಲೂ ಭಯದಿಂದಲೂ” ಸಲ್ಲಿಸುತ್ತಾರೋ ಅವರೊಂದಿಗೆ ನಾವೂ ಕಂಡುಬರುವೆವು. (ಇಬ್ರಿ. 12:28) ಹೌದು, ಹೀಗೆ ನಾವು ಯೆಹೋವನಿಗೆ ಸಾಕ್ಷಿಕೊಡುವದನ್ನು ಮುಂದುವರಿಸುವೆವು ಮತ್ತು ಸೋತು ಹೋಗಲಾರೆವು.
ನಿಮ್ಮ ಪ್ರತಿಕ್ರಿಯೆಯೇನು?
▫ ಪೌಲನು ಇಬ್ರಿಯರಿಗೆ ಬರೆದ ಪತ್ರಿಕೆಯು ನಮಗೆ ಪ್ರಯೋಜನಕಾರಿಯೇಕೆ?
▫ ಕ್ರೈಸ್ತರಿಂದು ಯಾವ ವಾದಾಂಶವನ್ನು ಎದುರಿಸಲೇಬೇಕು?
▫ ಪೂರ್ವದ ನಂಬಿಗಸ್ತ ಸಾಕ್ಷಿಗಳಿಂದ ನಾವು ಹೇಗೆ ಪ್ರಯೋಜನ ಹೊಂದಬಹುದು?
▫ ತಾನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಯೆಹೋವನು ಶಿಕ್ಷಿಸುವದೇತಕ್ಕೆ?
▫ ಸೋತುಹೋಗದೆ ಸಾಕ್ಷಿಕೊಡುತ್ತಾ ಇರುವದಕ್ಕೆ ಕೀಲಿಕೈ ಏನು?