ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 3/1 ಪು. 3-4
  • ಸತ್ತವರಿಗೆ ಯಾವ ನಿರೀಕ್ಷೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸತ್ತವರಿಗೆ ಯಾವ ನಿರೀಕ್ಷೆ?
  • ಕಾವಲಿನಬುರುಜು—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ‘ಸತ್ತವರು ಜೀವಂತರಾಗಿರುವರೋ?
  • ಸತ್ತವರು ಪುನಃ ಜೀವಿಸುವರೋ?
  • ಮರಣಾನಂತರದ ಜೀವಿತ—ಬೈಬಲ್‌ ಹೇಳುವುದೇನು?
    ಕಾವಲಿನಬುರುಜು—1999
  • ಪುನರುತ್ಥಾನದಲ್ಲಿ ನಿಮ್ಮ ನಂಬಿಕೆಯು ಎಷ್ಟು ದೃಢವಾಗಿದೆ?
    ಕಾವಲಿನಬುರುಜು—1998
  • ಮನುಷ್ಯನಲ್ಲಿ ಅಮರ ಆತ್ಮ ಇದೆಯಾ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಮೃತರಾದ ನಮ್ಮ ಪ್ರಿಯರಿಗೆ ಏನು ಸಂಭವಿಸುತ್ತದೆ?
    ನಿತ್ಯಜೀವಕ್ಕೆ ನಡೆಸುವ ಜ್ಞಾನ
ಕಾವಲಿನಬುರುಜು—1991
w91 3/1 ಪು. 3-4

ಸತ್ತವರಿಗೆ ಯಾವ ನಿರೀಕ್ಷೆ?

ಒಂದು ಎಳೇ ಕುಟುಂಬವು ರಜೆಯಲ್ಲಿ ದಕ್ಷಿಣ ಆಫ್ರಿಕಾದ ಪೂರ್ವ ತೀರದಲ್ಲಿ ಪ್ರಯಾಣ ಮಾಡುತ್ತಾ ಇತ್ತು. ಹೆಂಡತಿಯ ಹೆತ್ತವರು ಇನ್ನೊಂದು ಕಾರಿನಲ್ಲಿ ಸ್ವಲ್ಪ ಮುಂದೆ ಇದ್ದರು. ಪಕ್ಕನೇ ಒಂದು ಟಯರು ಸ್ಫೋಟನಗೊಂಡಿತು. ರಸ್ತೆಯ ಪಕ್ಕದಲ್ಲಿ ಅವರದನ್ನು ಬದಲಾಯಿಸಲು ಸಿದ್ಧತೆ ಮಾಡುತ್ತಿದ್ದಾಗ, ಒಬ್ಬ ಕುಡಿಕ ವಾಹನಚಾಲಕನು ಎರಡೂ ಕಾರುಗಳಿಗೆ ಢಿಕ್ಕಿಹೊಡೆದನು. ಪ್ರಾಯಸ್ಥರಾದ ಪತಿ-ಪತ್ನಿಯರು ಸತ್ತರು. ಎಳೆಯ ಪುರುಷನು ಕೆಲವು ದಿನಗಳ ನಂತರ ಸತ್ತನು. ಅವನ ಹೆಂಡತಿಯ ಪಕ್ಕೆಲುಬುಗಳು ಮುರಿದವು ಮತ್ತು ಇತರ ಘಾಸಿಗಳಾದವು. ಅವಳ ಮಗುವಿಗೆ ಪಾರ್ಶ್ವವಾಯು ಬರುವ ಮಿದುಳು-ಹಾನಿಯುಂಟಾಯಿತು.

ಈ ದೌರ್ಭಾಗ್ಯಕರ ಕುಟುಂಬಕ್ಕೆ ಎಂಥಹ ಒಂದು ದುರಂತ ! ಎಳೇ ಪತ್ನಿಯ ಸಹೋದರಿ, ಕರೋಲಾನ್‌ ಈ ಸುದ್ದಿಯನ್ನು ಕೇಳಿದಾಗ, ಅವಳು ಸ್ತಂಭೀತಳಾದಳು. ಎಲ್ಲಾ ದೇಶಗಳಲ್ಲಿ ಇಂತಹ ದುರಂತಗಳು ಸಂಭವಿಸುತ್ತವೆ. ದುಃಖ-ತಪ್ತ ಸಂಬಂಧಿಕರು ಮತ್ತು ಗೆಳೆಯರು ಕೆಲವೊಮ್ಮೆ ವಿಸ್ಮಿತರಾಗುತ್ತಾರೆ, ‘ಸತ್ತವರು ನಿಜವಾಗಿಯೂ ಸತ್ತಿರುತ್ತಾರೋ,’ ಇಲ್ಲವೇ . . .

‘ಸತ್ತವರು ಜೀವಂತರಾಗಿರುವರೋ?

ಆತ್ಮವು ಅಮರವೆಂದು ಹೆಚ್ಚಿನ ಧರ್ಮಗಳು ಕಲಿಸುತ್ತವೆ. ಆದಕಾರಣ, ಸತ್ತವರು ನಿಜವಾಗಿಯೂ ಸತ್ತಿರುವುದಿಲ್ಲ, ಬದಲು ಸ್ವರ್ಗದಲ್ಲಿಯೋ, ಪರ್ಗೆಟರಿಯಲ್ಲಿಯೋ, ಯಾ ನರಕದಲ್ಲಿಯೋ ಇನ್ನೂ ಜೀವಿಸಿರುತ್ತಾರೆ ಎಂದು ಆ ಧರ್ಮಗಳ ಅನುಯಾಯಿಗಳು ನಂಬುತ್ತಾರೆ. ಅನೇಕ ಚರ್ಚುಗಳಲ್ಲಿ ಕಲಿಸುವಂತೆ, ಕಡೆಯಲ್ಲಿ ಹೇಳಿದ ಸ್ಥಳಗಳಲ್ಲಿ ಇರುವವರು ನಿತ್ಯಕ್ಕೂ ಭಯಂಕರವಾಗಿ ಬಾಧಿಸಲ್ಪಡುವರು. ಆದರೆ ಪ್ರೀತಿಯ ದೇವರೊಬ್ಬನು ನಿಜವಾಗಿಯೂ ತನ್ನ ಸೃಷ್ಟಿಜೀವಿಗಳಿಗೆ ಅಂತಹ ಬಾಧೆಯನ್ನು ವಿಧಿಸುವನೋ?—1 ಯೋಹಾನ 4:8.

ಇದು ಆಗಿರಲಿಕ್ಕಿಲ್ಲ ಎಂದು ಭಾಸವಾಗುತ್ತದೆ, ಆದರೆ ನಮಗೆ ನಿಶ್ಚಯವಿರಲು ಹೇಗೆ ಸಾಧ್ಯ? ಬೈಬಲಿನ ಕೆಳಗಿನ ರುಜುವಾತನ್ನು ಜಾಗ್ರತೆಯಿಂದ ಗಮನಿಸಿರಿ: “ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು; ಆಗ ಮನುಷ್ಯನು ಬದುಕುವ ಆತ್ಮ (ಪ್ರಾಣಿ) ಆದನು.” (ಆದಿಕಾಂಡ 2:7, NW) ಮೊದಲನೆಯ ಮನುಷ್ಯನಾದ ಆದಾಮನಿ ಆತ್ಮವೊಂದು ಕೊಡಲ್ಪಟ್ಟಿತು ಎಂದು ಈ ಪ್ರೇರಿತ ವಾಕ್ಯ ಹೇಳುತ್ತದೋ? ಇಲ್ಲ, ಅವನು ಬದುಕುವ ಆತ್ಮ, ಜೀವಿಸುವ ಒಬ್ಬ ವ್ಯಕ್ತಿ ಆದನು. ಇದನ್ನು ಅಪೊಸ್ತಲ ಪೌಲನು ಸ್ಥಿರೀಕರಿಸಿದ್ದಾನೆ, ಅವನು ಬರೆದದ್ದು: “ಮೊದಲನೆಯ ಮನುಷ್ಯನಾದ ಆದಾಮನು, ಶಾಸ್ತ್ರವು ಹೇಳುವಂತೆ, ಒಬ್ಬ ಬದುಕುವ ಆತ್ಮವಾದನು.” ಪೌಲನು ಆದಿಕಾಂಡದಿಂದ ಉಲ್ಲೇಖಿಸಿದ್ದನು.—1 ಕೊರಿಂಥದವರಿಗೆ 15:45, ದ ಜೆರೂಸಲೇಮ್‌ ಬೈಬಲ್‌.

ಮಾನವ ಆತ್ಮವು ಸಾಯಬಲ್ಲದೋ? ಪ್ರವಾದಿ ಯೆಹೆಜ್ಕೇಲನು ಬರೆದದ್ದು: “ಎಲ್ಲಾ ಆತ್ಮಗಳು—ನನ್ನವೇ. ತಂದೆಯ ಆತ್ಮದಂತೆಯೇ ಮಗನ ಆತ್ಮವು—ನನಗೆ ಸೇರಿದ್ದು. ಪಾಪ ಮಾಡುವ ಆತ್ಮವೇ ಸಾಯುವುದು.” (ಯೆಹೆಜ್ಕೇಲನು 18:4, 20, NW; ಪ್ರಸಂಗಿ 9:5, 10) ಆತ್ಮವು ಸಾಯುವುದಾದರೆ, ಆ ವ್ಯಕ್ತಿಗೆ ಯಾವುದರ ಅರುಹೂ ಇರುವುದಿಲ್ಲ, ಆದಕಾರಣ ಬಾಧೆ ಪಡುವುದೂ ಇಲ್ಲ ಎಂಬದು ಸ್ಪಷ್ಟ. ಸಾ.ಶ. 33 ರ ಪಂಚಾಶತಮದ ನಂತರ ಅವನ ಮೊದಲ ಬಹಿರಂಗ ಭಾಷಣದಲ್ಲಿ ಅಪೊಸ್ತಲ ಪೇತ್ರನು ಘೋಷಿಸಿದ್ದು: “ಆ ಪ್ರವಾದಿಯ (ಯೇಸುವಿನ) ಮಾತನ್ನು ಕೇಳದಿರುವ ಪ್ರತಿಯೊಂದು ಆತ್ಮವು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವುದು.” ಆದುದರಿಂದ ಆತ್ಮವು ಮರ್ತ್ಯವಾಗಿದೆ.—ಅ. ಕೃತ್ಯಗಳು 3:23, NW.

ಸತ್ತವರು ಪುನಃ ಜೀವಿಸುವರೋ?

ಯೇಸು ಸತ್ತು ಮೂರನೆಯ ದಿನದಲ್ಲಿ ಪುನರುತ್ಥಾನಗೊಳಿಸಲ್ಪಟ್ಟನು ಎಂಬದನ್ನು ಬೈಬಲು ಸತ್ಯವೆಂದು ನಂಬುವವರೆಲ್ಲರೂ ತಿಳಿದಿರುತ್ತಾರೆ. (ಅ. ಕೃತ್ಯಗಳು 10:39, 40) ಇದು ಹೇಗೆ ಸಂಭವಿಸಸಾಧ್ಯವಿದೆ? ದೇವರ ಪವಿತ್ರ ಆತ್ಮನ ಶಕ್ತಿಯ ಮೂಲಕವೇ.

ಯೇಸುವಿನ ಪುನರುತ್ಥಾನವು ಒಂದು ಅಪವಾದವೋ? ಅಲ್ಲ. ಕೊರಿಂಥದ ಸಭೆಗೆ ಪೌಲನು ಬರೆದಂತೆ ಅದಿದೆ: “ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದೇ ಇದ್ದಾನೆ; ನಿದ್ರೆ ಹೋದವರಲ್ಲಿ ಪ್ರಥಮಫಲವಾದನು. ಮನುಷ್ಯನ ಮೂಲಕ ಮರಣ ಉಂಟಾದ ಕಾರಣ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವುಂಟಾಗುವುದು. . . ಕ್ರಿಸ್ತನ ಮೂಲಕ.” (1 ಕೊರಿಂಥದವರಿಗೆ 15:20-22) ಆದುದರಿಂದ, ಸತ್ತವರೊಳಗಿಂದ ಅನೇಕರು ಎದ್ದೇಳುವರು. ಯೇಸುವಂದದ್ದು: “ಅದಕ್ಕೆ ಆಶ್ಚರ್ಯಪಡಬೇಡಿರಿ; ಜ್ಞಾಪಕದ ಸಮಾಧಿಗಳಲ್ಲಿರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ. ಒಳ್ಳೇದನ್ನು ಮಾಡಿದವರಿಗೆ ಜೀವಕ್ಕಾಗಿ ಪುನರುತ್ಥಾನವಾಗುವುದು.” (ಯೋಹಾನ 5:28, 29) ಇದು ಲಕ್ಷಾಂತರ ಜನರ ಪುನರುತ್ಥಾನದ ಖಾತರಿ ನೀಡುತ್ತದೆ.

ಮೇಲಿನ ವಿವರಣೆಯು ನಿಮ್ಮ ಅಭಿರುಚಿಯನ್ನು ಕೆರಳಿಸಿದ್ದರೆ, ನೀವು ಕೇಳಬಹುದು, ‘ಯಾರಿಗೆ ಪುನರುತ್ಥಾನ, ಮತ್ತು ಯಾವಾಗ?’ ಈ ಅತ್ಯಾವಶ್ಯಕ ಪ್ರಶ್ನೆಗಳನ್ನು ನಾವೀಗ ಗಮನಿಸೋಣ. (w89 10/15)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ