ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w90 10/1 ಪು. 32
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು—1990
  • ಅನುರೂಪ ಮಾಹಿತಿ
  • ಲಾಟರಿಗಳು ಅಷ್ಟು ಜನಪ್ರಿಯವೇಕೆ?
    ಎಚ್ಚರ!—1992
  • ಲಾಟರಿಗಳು ಗೆಲ್ಲುವುದು ಯಾರು? ಸೋಲುವುದು ಯಾರು?
    ಎಚ್ಚರ!—1992
  • ಲಾಟರಿ ಹುಚ್ಚು ಜಗತ್ತಿನ ಜೂಜು
    ಎಚ್ಚರ!—1992
  • ಜೂಜು—ಬೈಬಲ್‌ ಇದನ್ನು ಖಂಡಿಸುತ್ತದೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
ಇನ್ನಷ್ಟು
ಕಾವಲಿನಬುರುಜು—1990
w90 10/1 ಪು. 32

ವಾಚಕರಿಂದ ಪ್ರಶ್ನೆಗಳು

◼ ಲಾಟರಿಯಿಂದ ಬಂದ ಹಣವು ಧರ್ಮಕಾರ್ಯಕ್ಕಾಗಿರುವುದಾದರೆ, ಕ್ರೈಸ್ತರು ಲಾಟರಿ ಟಿಕೆಟುಗಳನ್ನು ಬರೇ ಮನೋರಂಜನೆಗಾಗಿ ಖರೀದಿಸುವುದು ಯೋಗ್ಯವೂ?

ಯೋಗ್ಯವಾದ ಮನೋರಂಜನೆಯನ್ನು ಬೈಬಲು ನಿಶ್ಚಯವಾಗಿಯೂ ನಿರುತ್ತೇಜಿಸುವುದಿಲ್ಲ ಯಾಕಂದರೆ ಯೆಹೋವನು “ಸಂತೋಷದ ದೇವರು” ಆಗಿದ್ದಾನೆ. (1 ತಿಮೊಥಿ 1:11) ಆತನ ಜನರು ಸಂಗೀತ, ಸಭ್ಯವಾದ ನೃತ್ಯ, ಮಿತವಾದ ಅನ್ನಪಾನದಲ್ಲಿ ಮತ್ತು ಸಮತೂಕದ ಆಟೋಟಗಳಲ್ಲಿ ಆನಂದಿಸ ಸಾಧ್ಯವಿದೆ. (ಕೀರ್ತನೆ 150:4; ಪ್ರಸಂಗಿ 2:24) ಆದರೂ, ಜುಗಾರಿಯು ದೇವರ ಸುಜ್ಞ ಸೂಚನೆಯನ್ನು ಸ್ವಷ್ಟವಾಗಿ ಉಲ್ಲಂಘಿಸುತ್ತದೆ, ಮತ್ತು ಲಾಟರಿಗಳಲ್ಲಿ ಪಾಲಿಗರಾಗುವ ವಿಷಯದಲ್ಲಿ ಇದು ಸತ್ಯ.

ನಿಜವಾಗಿ, ಲಾಟರಿ ಎಂದರೇನು? ಅದೃಷ್ಟಯೋಗದಿಂದ ಒಂದು ಬಹುಮಾನ ಜಯಿಸುವುದಕ್ಕಾಗಿ ಟಿಕೆಟುಗಳನ್ನು ಖರೀದಿ ಮಾಡುವುದು ಅದರಲ್ಲಿ ಸೇರಿದೆ. ಒಂದು ನಂಬ್ರವನ್ನು ಗೊತ್ತುಕಟ್ಟಿಲ್ಲದೆ ಹೆಕ್ಕುವ ಯಾ ಆರಿಸುವ ಮೂಲಕ ಗೆದ್ದವರನ್ನು ನಿರ್ಣಯಿಸಲಾಗುತ್ತದೆ.a ಅದರಲ್ಲಿ ಹೆಚ್ಚಾಗಿ ಒಂದು ದೊಡ್ಡ ಬಹುಮಾನವಿರುತ್ತದೆ, ಮಿಲ್ಯಾಂತರ ಡಾಲರುಗಳು, ಪಿಸೋಸ್‌ ಯಾ ಪೌಂಡುಗಳು ಒಳಗೂಡಿರುತ್ತವೆ. ಇಂತಹ ಮಹಾ ಬಹುಮಾನದ ಮೋಹಕತೆಯು ಎಷ್ಟು ದೊಡ್ಡದಾಗಿದೆಯೆಂದರೆ ಲಾಟರಿಗಳು, “ಅತ್ಯಂತ ವ್ಯಾಪಕವಾದ ಜುಗಾರಿಯಾಗಿ” ಪರಿಣಮಿಸಿವೆ. ಮಿಲ್ಯಾಂತರ ಜನರು ಲಾಟರಿಗಳ ಮೂಲಕ ಜೂಜಾಟವನ್ನು ನಡಿಸುತ್ತಾರೆ.

ಕೆಲವರು ವಿವೇಚಿಸುತ್ತಾರೆ ಏನಂದರೆ ಟಿಕೆಟಿನ ಬೆಲೆಯು ಅಲ್ವವಾಗಿರುವದರಿಂದಲೂ, ಪಾಲಿಗರಾಗುವವರು ಸಯ್ವಿಚ್ಛೆಯಿಂದ ಅದನ್ನು ಮಾಡುವದರಿಂದಲೂ, ಮತ್ತು ಅದರಿಂದ ಬಂದ ಹಣವು ಬಡವರಿಗೆ ಸಹಾಯವಾಗುವದೇ ಮುಂತಾದ ಧರ್ಮಕಾರ್ಯಕ್ಕೆ ಹೋಗುವದರಿಂದ ಲಾಟರಿಯಲ್ಲಿ ಒಳಗೂಡುವುದು ಕೆಟ್ಟದಲ್ಲ ಯಾ ತಪ್ಪಲ್ಲ. ಇಂತಹ ವಿವೇಚನೆಯು ಎಷ್ಟು ಬಲವುಳ್ಳದ್ದು?

ಲಾಟರಿ ಟಿಕೆಟಿನ ಖರೀದಿಯು ಒಂದು ಸಾಮಾನ್ಯವಾದ, ಅಗದ್ಗ ಮನೋರಂಜನೆ ಎಂದು ಕೆಲವರು ವಾದಿಸುವುದಾದರೂ, ಅದರಲ್ಲಿರುವ ಲೋಭದ ವಾಸ್ತವಿಕತೆಯನ್ನು ಅಲ್ಲಗಳೆಯಲಾಗದು. ಬಹಳ ಹಣವನ್ನು ಗೆಲ್ಲುವ ನಿರೀಕ್ಷೆಯಿಂದ ಜನರು ಲಾಟರಿ ಟಿಕೆಟುಗಳನ್ನು ಖರೀದಿಸುತ್ತಾರೆ. ಇದು ನಿಶ್ಚಯವಾಗಿಯೂ ಲೋಭದ ವಿರುದ್ಧ ದೇವರು ಕೊಟ್ಟ ಸೂಚನೆಯ ಉಲ್ಲಂಘನೆ, ಮತ್ತು “ದೇವರ ರಾಜ್ಯಕ್ಕೆ ಬಾಧ್ಯರಾಗುವುದರಿಂದ” ಜನರನ್ನು ತಡೆಯವಷ್ಟು ಗಂಭೀರವಾದ ದುಶ್ಚಟವಾಗಬಲ್ಲದು. ಆದಕಾರಣ, ಕ್ರೈಸ್ತನು ಜುಗಾರಿಯ ಮೂಲಕ ತನ್ನ ಲೋಭತ್ವವನ್ನು ಬಿಡದೆ ತೋರಿಸುವದಾದರೆ, ಸಭೆಯಿಂದ ಅವನನ್ನು ಹೊರಗೆ ಹಾಕಸಾಧ್ಯವಿದೆ. (1 ಕೊರಿಂಥ 5:11; 6:10) ಬೈಬಲನ್ನುವುದು: “ಮೊದಲು ಬೇಗನೇ ಬಾಚಿಕೊಂಡ ಸ್ವಾಸ್ತ್ಯವು ಕೊನೆಗೆ ಶುಭವನ್ನು ಹೊಂದದು.” (ಜ್ಞಾನೋಕ್ತಿ 20:21) ಲಾಟರಿಯ ಮೂಲಕ ತನ್ನ ‘ಅದೃಷ್ಟವನ್ನು’ ಪರೀಕ್ಷಿಸುವ ಪ್ರವೃತ್ತಿಯು ಕ್ರೈಸ್ತನಲ್ಲಿ ಉಂಟಾದರೆ, ಲಾಟರಿಯ ಮೂಲಾಧಾರವಾದ ಲೋಭದ ಕುರಿತು ಅವನು ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಎಫೆಸ 5:3 ಹೇಳುವುದು: ‘ದ್ರವ್ಯಾಶೆಯ ಸುದ್ಧಿಯಾದರೂ ನಿಮ್ಮಲ್ಲಿ ಇರಬಾರದು.’ ಕ್ರೈಸ್ತನು ಆ ಆಶೆಗೆ ಬಲಿಯಾಗುವ ವಿಷಯ ಬೇರೆ.

ಲಾಟರಿ ಆಡುವವರಲ್ಲಿ ಸಾಮಾನ್ಯವಾಗಿ ಅಧಿಕಾಂಶ ಜನ ಬಡಜನರಾಗಿ ಕಂಡುಬರುತ್ತಾರೆ. ಹೀಗೆ, ಟಿಕೆಟಿನ ಬೆಲೆಯು ಅಲ್ಪವಾದರೂ—ಅಧಿಕ ಆಹಾರ, ತಕ್ಕದಾದ ಬಟ್ಟೆಬರೆ, ಒಳ್ಳೆಯ ವೈದ್ಯಕೀಯ ಉಪಚಾರವೇ ಮುಂತಾದ ನಿಜ ಕುಟುಂಬ ಆವಶ್ಯಕತೆಗಳಿಗೆ ಹೋಗುವ ಹಣ ಬೇರೆಡೆ ವ್ಯಯಿಸಲ್ಪಡುತ್ತದೆ. ಕ್ರೈಸ್ತನೆಂದು ವಾದಿಸುವ ಒಬ್ಬನು ಅಂತಹ ಕುಟುಂಬ ಅಗತ್ಯತೆಗಳನ್ನು ದುರ್ಲಕ್ಷ್ಯಿಸುವುದಾದರೆ ಅವನು “ನಂಬದವನಿಗಿಂತ ಕಡೆಯಾದವನಾಗಿರುವನು.”—1 ತಿಮೊಥಿ 5:8.

ಲಾಟರಿ ಟಿಕೆಟಿನ ಬೆಲೆಯು ಒಬ್ಬನ ವೈಯಕ್ತಿಕ ಯಾ ಕುಟುಂಬಿಕ ಆರ್ಥಿಕತೆಯನ್ನು ಗಮನಾರ್ಹವಾಗಿ ಕುಗ್ಗಿಸದಿದ್ದರೂ, ಬೇರೆಯವರಿಗೆ ಅದರಿಂದ ಹಾನಿಯಿಲ್ಲ ಎಂದರ್ಥವಲ್ಲ. ಏಕೆ? ಏಕಂದರೆ ಲಾಟರಿ ಟಿಕೆಟನ್ನು ಖರೀದಿಸುವ ಬಹಳಷ್ಟು ಎಲ್ಲರೂ ಗೆಲ್ಲಲು ಬಯಸುತ್ತಾರೆ. ಅವನು ಗೆದ್ದ ಹಣ ಬರುವುದು ಎಲ್ಲಿಂದ? ಟಿಕೆಟಿನ ಹಣವು 10 ಪೀಸೊಸ್‌ಗಳಾದರೆ ಮತ್ತು ಇನಾಮು 10 ಲಕ್ಷ ಪೀಸೊಸ್‌ಗಳಾದರೆ, ಬೇರೆ 1 ಲಕ್ಷ ಜನರ ಟಿಕೆಟಿನ ಹಣವನ್ನು ಅವನು ಪಡೆಯುತ್ತಾನೆ. ಬೇರೆಯವರ ಸೊತ್ತುಗಳನ್ನು ಆಶಿಸಬಾರದು ಎಂಬ ದೇವರ ಸೂಚನೆಗೆ ಇದು ಹೊಂದಿಕೆಯಾಗಿರುತ್ತದೋ? (ಧರ್ಮೋಪದೇಶ 5:21) ವಾಸ್ತವದಲ್ಲಿ, ಅವನು ಗೆದ್ದ ಹಣದಲ್ಲಿ ಇನ್ನೂ ಅನೇಕ ಜನರಿಂದ ತೆಗೆದ ಹಣವು ಒಳಗೂಡಿದೆ, ಯಾಕಂದರೆ 1 ಲಕ್ಷಕ್ಕಿಂತಲೂ ಹೆಚ್ಚು ಟಿಕೆಟುಗಳು ಮಾರಲ್ಪಡಲೇ ಬೇಕು. ಟಿಕೆಟಿನ ಹಣದಲ್ಲಿ ಕೆಲವಾಂಶ ಮೇಲ್ವಿಚಾರಕ ವೆಚ್ಚಗಳಿಗೆ ಬೇಕು, ಹಾಗೂ ಲಾಟರಿಯ ಮೂಲಕಾರಣವಾಗಿ ಪ್ರಕಟಿತವಾದ ಧರ್ಮಕಾರ್ಯಕ್ಕಾಗಿ ಹಣಕೊಡಬೇಕು. ಹೀಗೆ, ಒಬ್ಬನು ತನ್ನ ಸ್ವಂತ ಕಿಸೆಯಿಂದ 10 ಪೀಸೊಸ್‌ ಖರ್ಚುಮಾಡಶಕ್ತನಾದರೂ ಅಧಿಕ ಸಂಖ್ಯಾತರಾದ ಇತರರ ಕುರಿತೇನು? ಅದಲ್ಲದೆ, ಅವನು ಗೆದ್ದ ಸಂಗತಿಯು ಪ್ರಾಯಶಃ ಪ್ರಕಟವಾಗಬಹುದು, ಇದರಿಂದ ಇನ್ನೂ ಅನೇಕರಿಗೆ ಖರ್ಚಿಸಲು ಅನುಕೂಲವಿಲ್ಲದಿದ್ದರೂ ಲಾಟರಿ ಆಡಲು, ಹೆಚ್ಚು ಟಿಕೇಟು ಖರೀದಿಸಲು ಪ್ರೇರೇಪಣೆ ದೊರಕಬಹುದು.

ದುಡಿಯದೆ ಗಳಿಸುವ ಹಣಲಾಭದ ಕನಸು ಸಹಾ ಲಾಟರಿಯೊಂದಿಗೆ ಜತೆಗೂಡಿದೆ ಎಂಬದನ್ನು ಅಲ್ಲಗಳೆಯಲಾಗದು. ಹೌದು, ಲಾಟರಿ ಸೋಮಾರಿತನವನ್ನು ಉತ್ತೇಜಿಸುತ್ತದೆ ಯಾ ಅದನ್ನು ಇಷ್ಟೈಸುತ್ತದೆ. ದೇವರ ವಾಕ್ಯವಾದರೋ ದೇವಜನರನ್ನು ಮಿತವ್ಯಯ, ಉದ್ಯೋಗಶೀಲತೆ ಹಾಗೂ ಕಷ್ಟಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ‘ಶ್ರಮವಿಲ್ಲದೆ ಲಾಭಗಳಿಸುವ’ ಬದಲು, ಅದು ಸೂಚಿಸುವುದು: “ಕೆಲಸಮಾಡಲೊಲ್ಲದವನು ಊಟಮಾಡಬಾರದು.”—2 ಥೆಸಲೊನೀಕ 3:10; ಜ್ಞಾನೋಕ್ತಿ 13:4; 20:4; 21:25; 1  ಥೆಸಲೊನೀಕ 4:9-12.

ಒಂದು ಲಾಟರಿಯಲ್ಲಿ ಜನರು ಸ್ವಇಚ್ಛೆಯಿಂದ ಭಾಗಿಗಳಾಗುತ್ತಾರೆ ಮತ್ತು ಅದು ಕಾನೂನು ಬದ್ಧವಾಗಿದೆಂಬದು, ಕ್ರೈಸ್ತರು ಅದರಲ್ಲಿ ಸೇರುವುದನ್ನು ಸಮರ್ಥಿಸುವುದಿಲ್ಲ. ಕೆಲವು ಸರಕಾರಗಳು ಬೇರೆ ರೀತಿಯ ಜುಗಾರಿಗಳನ್ನು, ಹಾಗೂ ವೇಶ್ಯಾವೃತ್ತಿ, ಬಹುಪತ್ನಿತ್ವವನ್ನೂ ಕಾನೂನುಬದ್ಧವಾಗಿ ಮಾಡುತ್ತವೆ. ಅಂಥ ವಿಷಯಗಳು ಶಾಸನಬದ್ಧವಾಗಿದ್ದರೂ ಮತ್ತು ಅನೇಕರು ಸಯ್ವಿಚ್ಛೆಯಿಂದ ಅದರಲ್ಲಿ ಒಳಗೂಡಿದರೂ, ದೇವರ ದೃಷ್ಟಿಯಲ್ಲಿ ಅಂತಹ ಚಟುವಟಿಕೆಗಳು ಯೋಗ್ಯವೆಂದು ಅದರರ್ಥವಲ್ಲ. ಬದಲಾಗಿ, ಕ್ರೈಸ್ತರು ದಾವೀದನ ನೋಟವನ್ನು ಪ್ರತಿಬಿಂಬಿಸಲು ಪ್ರಯಾಸ ಪಡುತ್ತಾರೆ: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು. ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು.”—ಕೀರ್ತನೆ 25:4, 5.

ಕ್ರೈಸ್ತನು ಬಡವರಿಗೆ, ನಿರ್ಬಲರಿಗೆ ಯಾ ಮುದುಕರಿಗೆ ಸಹಾಯ ಮಾಡಲು ನಿಜವಾಗಿ ಬಯಸುವುದಾದರೆ, ಅದನ್ನು ನೇರವಾಗಿ ಅಥವಾ ಜುಗಾರಿಯು ಒಳಗೂಡಿರದ ರೀತಿಯಲ್ಲಿ ಖಂಡಿತವಾಗಿ ಮಾಡಬಹುದಾಗಿದೆ. (w89 7/15)

[ಅಧ್ಯಯನ ಪ್ರಶ್ನೆಗಳು]

a  ಲಾಟರಿ ಎಂಬ ಹೆಸರಿಂದ ಪ್ರಖ್ಯಾತವಾಗಿದ್ದರೂ, ಈ ರೀತಿಯ ಜುಗಾರಿಯನ್ನು ಪೂಲ್‌, ರಾಫಲ್‌, ಸ್ವೀಪ್ಸ್‌ಟೇಕ್ಸ್‌ ಅಥವಾ ಬೇರೆ ಸ್ಥಳೀಕ ಹೆಸರುಗಳಿಂದ ಸಹಾ ಕರೆಯಬಹುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ