ಸಂಗೀತದಲ್ಲಿ ಆನಂದಿಸುವುದು ಕೀಲಿಕೈ ಯಾವುದು?
ಪುರಾತನ ಲೋಕದಲ್ಲಿ ಕಡು ದುರಾಚಾರ ಮತ್ತು ವಿಗ್ರಹಾರಾಧನೆಗಳು ನಡೆಯುತ್ತಿದ್ದವು. ಆದುದರಿಂದ, ಕ್ರೈಸ್ತ ನಡತೆಯ ಮೇಲೆ ಬಲವಾದ ಬುದ್ಧಿವಾದ ಕೊಡುವ ಆವಶ್ಯವನ್ನು ಪೌಲನು ಕಂಡನು. ಎಫೆಸದ ಸಭೆಗೆ ಅವನು ಬರೆದುದು: “ಆದದರಿಂದ ಅನ್ಯ ಜನರು ನಡೆದು ಕೊಳ್ಳುವ ಪ್ರಕಾರ ನೀವು ಇನ್ನು ಮೇಲೆ ನಡೆದು ಕೊಳ್ಳಬಾರದೆಂದು ಕರ್ತನಲ್ಲಿರುವವನಾಗಿ ನಿಮಗೆ ಖಂಡಿತವಾಗಿ ಹೇಳುತ್ತೇನೆ. ಅವರು ನಿಷ್ಪ್ರಯೋಜಕವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ; ಅವರ ಮನಸ್ಸು ಮೊಬ್ಬಾಗಿ ಹೋಗಿದೆ. ಅವರು ತಮ್ಮ ಹೃದಯದ ಕಾಠಿಣ್ಯದ ನಿಮಿತ್ತದಿಂದಲೂ ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ.”—ಎಫೆಸ 4:17, 18.
ಇದು ಇಂದಿನ ಸಂಗತಿಗಳ ಸುವರ್ಣನೆಯೂ ಆಗಿರುವುದಿಲ್ಲವೇ? ಇದರಲ್ಲಿ ಸಂಗೀತ ಕ್ಷೇತ್ರವೂ ಸೇರಿದೆ. ಆಧುನಿಕ ಸಂಗೀತದಲ್ಲಿ ಅಧಿಕಾಂಶ ‘ದಿವ್ಯ ಜೀವಕ್ಕೆ ಪರಕೀಯ’ ಶೈಲಿಯನ್ನು ಪ್ರತಿಬಿಂಬಿಸುತ್ತದೆ. ಅನೇಕ ವೇಳೆ, ಭಾವಗೀತಾ ಪದಗಳು ಕರುಣೆ ಅಥವಾ ಕನಿಕರವಿಲ್ಲದ ‘ಹೃದಯ ಕಾಠಿಣ್ಯ’ವನ್ನು ತೋರಿಸುತ್ತವೆ.
ಆದರೆ ಪೌಲನು ತನ್ನ ಸಲಹೆಯನ್ನು ಒಂದು ಹೆಜ್ಜೆ ಮುಂದಕ್ಕಿಡುತ್ತಾ ಹೇಳಿದ್ದು: “ಅವರ ಸರಿ ಮತ್ತು ತಪ್ಪು ಪರಿಜ್ಞಾನ ಮಂದವಾದುದರಿಂದ ಅವರು ಲೈಂಗಿಕಾಸಕ್ತಿಯಲ್ಲಿ ತಮ್ಮನ್ನು ತಲ್ಲೀನರಾಗಿರಿಸುತ್ತಾ ಪ್ರತಿಯೊಂದು ರೀತಿಯ ಅಸಭ್ಯತೆಯನ್ನು ತಮ್ಮ ಜೀವನಗತಿಯಾಗಿ ಅತ್ಯಾಸಕ್ತಿಯಿಂದ ಬೆನ್ನಟ್ಟುತ್ತಾರೆ.”—ಎಫೆಸ 4:19, ಜೆರೂಸಲೇಮ್ ಬೈಬಲ್.
ಈ ‘ಅಸಭ್ಯತೆಯ ಜೀವನಗತಿಯನ್ನು ಅತ್ಯಾಸಕ್ತಿಯಿಂದ ಬೆನ್ನಟ್ಟುವ’ ವಿಷಯವು ಇಂದಿನ ಸಂಗೀತದಲ್ಲಿ ಅಧಿಕಾಂಶ ಪ್ರತಿಬಿಂಬಿಸುತ್ತದೆ. ಭಾವಗೀತ ಪದಗಳು ಮತ್ತು ಸಂಗೀತ, ಕಾಮ, ಬಲಾತ್ಕಾರ, ಮಾದಕದ್ರವ್ಯ ಮತ್ತು ಸುಖಾನುಭವದಲ್ಲಿ ಮುಳುಗಿರುವ ಈ ಸಂತತಿಗೆ ಸಹಾಯಕವಾಗಿವೆ. ಇಂಥ ವ್ಯಸನಗಳನ್ನು ಕ್ರೈಸ್ತನು ಹೇಗೆ ವೀಕ್ಷಿಸಬೇಕು? ಪೌಲನ ಮಾತುಗಳನ್ನು ಗಮನಿಸಿರಿ: “ಯೇಸುವಿನಲ್ಲಿದ್ದ ಸತ್ಯ ಯಾವುದು ಎಂದು ನಿಮಗೆ ಕಲಿಸಲ್ಪಡುವಾಗ ನೀವು ಸರಿಯಾಗಿ ಕಿವಿಗೊಡಲು ತಪ್ಪಿದಿರಬೇಕೇ ಹೊರತು ಕ್ರಿಸ್ತನಿಂದ ನೀವು ಕಲಿತ ಮಾರ್ಗ ಅದಾಗಿರುವುದಿಲ್ಲ.”—ಎಫೆಸ 4:20, 21, ಜೆರೂಸಲೇಮ್ ಬೈಬಲ್.
“ಒಂದು ಆತ್ಮಿಕ ವಿಪ್ಲವ” ಅವಶ್ಯ
ಹಾಗಾದರೆ ಲೋಕಾತ್ಮವನ್ನು ಪ್ರತಿಬಿಂಬಿಸುವ ಸಂಗೀತದ ಸಂಬಂಧದಲ್ಲಿ ನೀವು ಈ ಬುದ್ಧಿವಾದವನ್ನು ಹೇಗೆ ಅನ್ವಯಿಸಬಲ್ಲಿರಿ? ಹೇಗಂದರೆ ನಮ್ಮಲ್ಲಿ “ಕ್ರಿಸ್ತನ ಮನಸ್ಸು” ಅಂದರೆ ಅವನ ಮನೋಭಾವ ಇರುವಲ್ಲಿ, ನಾವು ‘ಭೂಸಂಬಂಧವಾದ, ಮೃಗೀಯ, ಪೈಶಾಚಿಕವಾದ’ ಸಂಗೀತವನ್ನು ಕೇಳಲು ಇಷ್ಟಪಡೆವು.—1 ಕೊರಿಂಥ 2:16; ಯಾಕೋಬ 3:15.
ಆದರೆ ನೀವು, ‘ನನ್ನ ಸಂಗೀತದ ರುಚಿಯನ್ನು ನಾನು ಹೇಗೆ ಬದಲಾಯಿಸಬಲ್ಲಿ?’ ಎಂದು ಕೇಳೀರಿ. ಪುನಃ ಪೌಲನು ಹೀಗೆ ಹೇಳುತ್ತಾ ನಮಗೆ ಸಹಾಯ ಮಾಡುತ್ತಾನೆ: “ನಿಮ್ಮ ಪೂರ್ವದ ಜೀವನರೀತಿಯನ್ನು ನೀವು ತ್ಯಜಿಸಬೇಕು. ಯಾವುದು ಭ್ರಾಂತಿಕಾರಕ ಇಚ್ಛೆಗಳನ್ನು ಅನುಸರಿಸುವುದರಿಂದ ಭ್ರಷ್ಟವಾಗುತ್ತದೋ ಅಂಥ ಹಳೆಯ ವ್ಯಕ್ತಿತ್ವವನ್ನು ನೀವು ಬದಿಗಿಡಬೇಕು. ನಿಮ್ಮ ಮನಸ್ಸು ಆತ್ಮಿಕ ವಿಪ್ಲವದಿಂದ ನವೀಕರಿಸಲ್ಪಡತಕ್ಕದ್ದು.”—ಎಫೆಸ 4:22, 23, ಜೆರೂಸಲೇಮ್ ಬೈಬಲ್.
ಉತ್ತರವು ಇದೇ, ಏನಂದರೆ ಆತ್ಮಿಕ ವಿಪ್ಲವದ ಮೂಲಕ ಮನಸ್ಸಿನ ನವೀಕರಣವೇ. ಇದರಲ್ಲಿ ಸಂಗೀತದ ರುಚಿಗಿಂತ ಹೆಚ್ಚಿನದು ಸೇರಿದೆ. ಇದಕ್ಕೆ ಪುನರ್ವಿದ್ಯೆ, ಮಟ್ಟ, ಮತ್ತು ಮೌಲ್ಯಗಳ ಮೇಲೇರಿಸುವಿಕೆ ಅವಶ್ಯ. ಅಂದರೆ ನಮ್ಮ ಯೋಚನಾ ರೀತಿಯಲ್ಲಿ ಬದಲಾವಣೆ, ಪ್ರತ್ಯೇಕ ಮಾನದಂಡದ ಕಟ್ಟು ನಮಗಿರಬೇಕು ಎಂದರ್ಥ. ಮತ್ತು ಇದರಲ್ಲಿ ದೇವರ ಮತ್ತು ಕ್ರಿಸ್ತನ ದೃಷ್ಟಿಕೋನದಿಂದ ವಿಷಯಗಳನ್ನು ವೀಕ್ಷಿಸುವುದು ಸೇರಿದೆ. ಪೌಲನು ಸ್ಪಷ್ಟವಾಗಿ ಹೇಳಿರುವುದು: “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.”—1 ಕೊರಿಂಥ 10:31.
ಆಧುನಿಕ ಸಂಗೀತದಲ್ಲಿ ಹೆಚ್ಚಿನಾಂಶ ದೇವರಿಗೆ ಯಾವ ಘನವನ್ನೂ ತರುವುದಿಲ್ಲ. ಇದಕ್ಕೆ ಬದಲಾಗಿ ಅದು, ಕ್ರೈಸ್ತರು ಯಾವುದಕ್ಕಾಗಿ ಸ್ಥಿರ ನಿಲ್ಲುತ್ತಾರೊ, ಯಾವುದಕ್ಕಾಗಿ ಸೆರೆಮನೆ ಮತ್ತು ಕೂಟಶಿಬಿರಗಳಲ್ಲಿ ಸಾಯಲು ಸಿದ್ಧರಾಗಿದ್ದಾರೋ ಆ ಮೌಲ್ಯಗಳನ್ನು ತಿರಸ್ಕರಿಸುತ್ತದೆ. ಆದುದರಿಂದ, ‘ಲೋಕವನ್ನೂ ಅದರಲ್ಲಿರುವ ವಿಷಯಗಳನ್ನೂ ಪ್ರೀತಿಸದಿರುವಂತೆ’ ನಾವು ನಮ್ಮ ಸಂಗೀತದ ರುಚಿಯಲ್ಲಿ ಬದಲಾವಣೆ ಮಾಡಬೇಕಾಗಿ ಬರುವಲ್ಲಿ ಅದನ್ನು ತ್ಯಾಗವೆಂದು ಏಕೆ ಎಣಿಸಬೇಕು?—1 ಯೋಹಾನ 2:15-17.
ಉತ್ತಮ ಸಂಗೀತ—ಕೀಲಿಕೈ ಯಾವುದು?
ಶಾಸ್ತ್ರಾಧಾರಿತ ಸೂತ್ರಗಳಿಗೆ ಲಕ್ಷ್ಯಕೊಡುತ್ತಾ ನಾವು ಇಂಥ ನೀಚ ಸಂಗೀತವನ್ನು ತ್ಯಜಿಸುವಲ್ಲಿ ಅದನ್ನು ನಾವು ಯಾವುದರಿಂದ ಭರ್ತಿ ಮಾಡಬಲ್ಲೆವು? ಒಳ್ಳೆಯದು, ನಾವು ಸಂಗೀತದ ಹೊಸ ಮಾರ್ಗಗಳನ್ನು ಏಕೆ ಹುಡುಕಬಾರದು? ಅವು, ನಾವು ಈ ಹಿಂದೆ ಇಷ್ಟ ಪಟ್ಟಿದ್ದ ಸಂಗೀತಕ್ಕಿಂತ ಎಷ್ಟೋ ಹೆಚ್ಚು ಆನಂದದಾಯಕವೂ ಹಿತಕಾರಕವೂ ಆಗಿರಬಹುದು. ಉದಾಹರಣೆಗೆ, ಮಾಜಿ ರಾಕ್ ಸಂಗೀತಕಾರನೊಬ್ಬನು ತಾನು ಮಾಡಿದ ಬದಲಾವಣೆಗಳ ವಿಷಯ ಹೇಳಿದ್ದು:
“ಸುಲಭ ರಾಕ್ ಧ್ವನಿಯಿಂದ ಜನಪ್ರಿಯ ಸಂಗೀತಕ್ಕೆ ಮತ್ತು ಹೆಚ್ಚು ಆಳವಾದ ಶಾಸ್ತ್ರೀಯ ಸಂಗೀತಕ್ಕೆ ಹೋಗಲು ನಾನು ಪ್ರಯತ್ನ ಮಾಡಬೇಕಾಯಿತು. ಆದರೆ, ಅವುಗಳಲ್ಲಿ ಹೆಚ್ಚು ತಿರುಳಿದೆ ಎಂದು ನಾನು ತಿಳಿದು, ಆಧುನಿಕ ಸಂಗೀತದಲ್ಲಿ ಹೆಚ್ಚಿನ ಸಂಗೀತಗಳ ಮನೋಭಾವದೊಂದಿಗೆ ನಾನು ಗುರುತಿಸಿಕೊಳ್ಳಲಾರೆ ಎಂದು ಗ್ರಹಿಸಿದಾಗ ಅದು ಹೆಚ್ಚು ಸುಲಭವೂ ತೃಪ್ತಿದಾಯಕವೂ ಆಗಿ ಪರಿಣಮಿಸಿತು. ಅದು ಥಟ್ಟನೆ ಹಿತಕರವಾಯಿತು. ಇತರ ರೀತಿಯ ಸಂಗೀತಗಳಿಗೆ ನನ್ನಲ್ಲಿದ್ದ ಹಿಂದಿನ ಅವಿಚಾರಭಿಪ್ರಾಯಗಳ ಕಾರಣ ನನಗೆ ಲೋಪವಾಗಿದ್ದ ಸಂದರ್ಭಗಳನ್ನು ನಾನು ಆಗ ಗ್ರಹಿಸಿದೆ.”
ಉತ್ತಮ ಗಾಯನ, ಶುದ್ಧವಾದ ಭಾವಗೀತೆ ಇರುವ ಮತ್ತು ಬೈಬಲ್ ಸೂತ್ರಗಳಿಗೆ ವ್ಯತಿರಿಕ್ತವಾದ ತತ್ವಜ್ಞಾನವನ್ನು ವ್ಯಕ್ತ ಪಡಿಸಿದ ಶಾಸ್ತ್ರೀಯ, ಜನಪದ ಮತ್ತು ಆಧುನಿಕ ಸಂಗೀತಗಳಲ್ಲಿ ವ್ಯಾಪಕವಾದ ಶ್ರೇಣಿಯಿದೆ. ನಮ್ಮ ಯೋಚನೆಯನ್ನು ತಪ್ಪಾಗಿ ಪ್ರಭಾವಿಸಿದ, ‘ನೀತಿಯ, ಶುದ್ಧ, ಪ್ರಶಂಸಾರ್ಹ, ಸದ್ಗುಣದ ಮತ್ತು ಸ್ತುತ್ಯಾರ್ಹ’ ಸಂಗೀತವನ್ನು ಕಂಡು ಹಿಡಿದು ಅದರಲ್ಲಿ ಆನಂದಿಸುವುದೇ ಈ ಕೀಲಿಕೈ.—ಫಿಲಿಪ್ಪಿಯ 4:8.
ಕ್ರೈಸ್ತನ ಜೀವಿತದಲ್ಲಿ ಸಂಗೀತದ ಪಾತ್ರ
ಕೆಲವರಿಗೆ, ಉತ್ತಮ ಸಂಗೀತದಲ್ಲಿ ಆನಂದಿಸುವ ಒಂದು ವಿಧ ಅದನ್ನು ಹಾಡುವುದೆ. ಅಥವಾ ಸಂಗೀತ ಉಪಕರಣವನ್ನು ಬಾಜಿಸಲು ಕಲಿಯುವುದೇ. ತನಿಹಾಡಿಕೆಯಿಂದ ಮತ್ತು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಾಡುವುದರಿಂದ ತುಂಬಾ ಸಂತೋಷ ಪಡೆಯ ಸಾಧ್ಯವಿದೆ. ಆದರೆ, ಇತರ ಎಲ್ಲ ವಿಷಯಗಳಂತೆ, ಇಲಿಯ್ಲೂ ಸಮತೆ ಅವಶ್ಯ. ವಿನೋದವಿಹಾರ ಅಥವಾ ಕ್ರೀಡಾಕಾಲಕ್ಷೇಪಗಳು ಕ್ರೈಸ್ತನೊಬ್ಬನ ಜೀವನದಲ್ಲಿ ಒಂದು ಗೀಳಾಗಬಾರದು. ಇಂಥ ಭ್ರಾಂತಿ ಸಂಭವಿಸುವಲ್ಲಿ, ಹಿತಕರವಾದ ಸಂಗೀತ ಸಹ, ಮಿತಿಮೀರಿ ಮಾಡಲ್ಪಡುವ ಕಾರಣ, ಅನಾರೋಗ್ಯಕರವಾಗಿ ಪರಿಣಮಿಸಬಹುದು. ಆಗ ಕ್ರೈಸ್ತನು ‘ದೇವರಿಗಿಂತ ಹೆಚ್ಚಾಗಿ ಭೋಗಗಳನ್ನು ಪ್ರೀತಿಸುವವನು’ ಆಗುವ ಅಪಾಯವಿರಬಹುದು.—2 ತಿಮೊಥಿ 3:4.
ಸಂಗೀತ, ಯೆಹೋವ ದೇವರಿಗೆ ಮಾಡುವ ನಮ್ಮ ಆರಾಧನೆಯ ಆವಶ್ಯ ಭಾಗ. ಪುರಾತನದ ಇಸ್ರಾಯೇಲಿನಲ್ಲಿ ಆಸಾಫನೂ ಅವನ ಸಹೋದರರೂ ಹಾಡಿದ್ದು: “ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ; ಅವನ ನಾಮ ಮಹತ್ವವನ್ನು ವರ್ಣಿಸಿರಿ. ಜನಾಂಗಗಳಲ್ಲಿ ಅವನ ಕೃತ್ಯಗಳನ್ನು ಪ್ರಸಿದ್ಧ ಪಡಿಸಿರಿ. ಆತನನ್ನು ಕೀರ್ತಿಸಿರಿ, ಭಜಿಸಿರಿ, [ಹಾಡಿರಿ, ಗಾಯನ ಮಾಡಿರಿ, NW;] ಆತನ ಅದ್ಭುತ ಕೃತ್ಯಗಳನ್ನೆಲ್ಲಾ ಧ್ಯಾನಿಸಿರಿ.” ಹೌದು, ಸಂಗೀತ, ದೇವರನ್ನು ಸ್ತುತಿಸಿ ಮೆಚ್ಚಿಸಬಲ್ಲದು.—1 ಪೂರ್ವಕಾಲವೃತ್ತಾಂತ 16:8, 9.
ಯೆಹೋವನ ಸಾಕ್ಷಿಗಳು ತಮ್ಮ ರಾಜ್ಯ ಸಭಾಗೃಹಗಳಲ್ಲಿ ಉಪಯೋಗಿಸುವ ರಾಜ್ಯಗೀತಗಳು ಬೈಬಲ್ ವಚನ, ಕೀರ್ತನೆ, ಪ್ರಾರ್ಥನೆ ಮತ್ತು ಬೋಧನೆಗಳ ಮೇಲೆ ಆಧರಿತವಾಗಿವೆ. ನಾವು ಈ ಪವಿತ್ರ ಸಂಗೀತದಲ್ಲಿ ಸಹ ಆಳವಾಗಿ ಆನಂದಿಸಲಾರೆವೋ? ಮತ್ತು ಈ ಆನಂದವನ್ನು ನಾವು ಅನಿಸಿಕೆ ಮತ್ತು ಆವೇಶದಿಂದ ಹಾಡಿ ತೋರಿಸಬಾರದೋ? ಕ್ರೈಸ್ತ ಕೂಟಗಳಲ್ಲದ ಸಂದರ್ಭಗಳಲ್ಲಿ ಸಹ, ನಮ್ಮ ಜೀವನದ ಹೊರೆಗಳನ್ನು ಕಿಂಗ್ಡಮ್ ಮೆಲೊಡಿಸ್ ಎಂಬ ಸೊಗಸಾದ ಸಂಗೀತ ವ್ಯವಸ್ಥೆಯನ್ನು ಕೇಳಿ ಲಘುಮಾಡಬಾರದೋ?
ಈ ವಾದ್ಯಮೇಳದಲ್ಲಿ ಬಾಜಿಸಿದ ಪ್ರತಿಯೊಬ್ಬ ಸಂಗೀತಕಾರನೂ ಯೆಹೋವನ ಸಾಕ್ಷಿ. ಇವರಲ್ಲಿ ಕೆಲವರು ಸಿಂಫೊನಿ ಆರ್ಕೆಸ್ಟ್ರಗಳಲ್ಲಿ ವಾದ್ಯ ಬಾರಿಸುವವರು. ಈ ಹಿಂದೆ ಉಲ್ಲೇಖಿಸಿರುವ ಮಾಜಿ ರಾಕ್ ಸಂಗೀತಕಾರನು ಸೇರಿರುವ ಇತರರು, ಅನೇಕ ರೀತಿಯ ಸಭ್ಯ ರೀತಿಯ ಸಂಗೀತಗಳಲ್ಲಿ ಆನಂದಿಸುವ ಸಾಮರ್ಥ್ಯವುಳ್ಳ ಯುವ ಜನರು. ಭೂಸಂಬಂಧವಾದ ಮತ್ತು ದೆವ್ವ ಸಂಬಂಧವಾದ ಮನೋಭಾವವನ್ನು ಪ್ರತಿಬಿಂಬಿಸುವ ಸಂಗೀತವನ್ನು ತ್ಯಜಿಸಿದ್ದರಿಂದ ತಮಗೆ ಏನೋ ಲೋಪವಾಗಿದೆ ಎಂದು ಅವರು ಎಣಿಸುವುದಿಲ್ಲ. ನಾವು ಸಹ, ಬೈಬಲ್ ಸೂತ್ರಗಳು ನಮ್ಮ ಆಯ್ಕೆಯನ್ನು ಆಳಲು ಬಿಟ್ಟರೆ, ಐಹಿಕ ಹಾಗೂ ಪವಿತ್ರ ಸಂಗೀತಗಳಲ್ಲಿ ಹೆಚ್ಚು ಹಿತಕರವಾದ ಆನಂದಪಡೆಯಬಲ್ಲಿವೆಂದು ಇವರ ಉತ್ತಮ ಉದಾಹರಣೆಗಳು ತೋರಿಸುತ್ತವೆ.—ಎಫೆಸ 5:18-20. (w89 6/1)
[ಪುಟ 21 ರಲ್ಲಿರುವ ಚೌಕ]
“ರಾಕ್ ಸಂಗೀತಕ್ಕೆ ಒಂದೇ ರಂಜನೆ, ಅಸಂಸ್ಕೃತ ರಂಜನೆಯಿದೆ—ಅದು ಪ್ರೀತಿ ಮತ್ತು ಪ್ರಣಯದ ರಂಜನೆಯಲ್ಲ, ಅದು ಬೆಳೆಯದ ಹಾಗೂ ಅಶಿಕ್ಷಿತ ಲೈಂಗಿಕಾಸಕ್ತಿಯ ರಂಜನೆ . . . ರಾಕ್ ಸಂಗೀತದ ತಾಳ ಲೈಂಗಿಕ ಸಂಭೋಗದ ತಾಳವೆಂದು ಯುವ ಜನರಿಗೆ ಗೊತ್ತು.” ದ ಕ್ಲೋಸಿಂಗ್ ಆಫ್ ದಿ ಅಮೆರಿಕನ್ ಮೈಂಡ್, ಆ್ಯಲನ್ ಬ್ಲೂಮ್ ಅವರಿಂದ.