ರಾಜ್ಯ ಘೋಷಕರ ವರದಿ
ಪ್ರೀತಿಯು ಕುಟುಂಬಗಳನ್ನು ಐಕ್ಯಗೊಳಿಸುತ್ತದೆ
ವಿವಾಹವು ನಿಸ್ವಾರ್ಥತೆಯಿಂದ ಕೂಡಿದ ಪ್ರೀತಿಯ ಮೇಲೆ ಆಧರಿತವಾಗಿದ್ದರೆ ಮಾತ್ರ ಕುಟುಂಬ ಐಕ್ಯತೆಯನ್ನು ಸಾಧಿಸಬಹುದು. ಪ್ರೀತಿಯ ದೇವರಾದ ಯೆಹೋವನಿಂದ ಅಂಥಹ ಪ್ರೀತಿಯು ಮೂಡಿ ಬರುತ್ತದೆ, ಆದುದರಿಂದ ಅದು ದೇವರ ಆತ್ಮದ ಒಂದು ಫಲವಾಗಿದೆ. (ಗಲಾತ್ಯದವರಿಗೆ 5:22, 23; 1 ಯೋಹಾನ 4:8) ಬೈಬಲಿನ ಜ್ಞಾನಾಧರಿತ ಪ್ರೀತಿಯು ಕುಟುಂಬಗಳನ್ನು ಹೇಗೆ ಐಕ್ಯಗೊಳಿಸುತ್ತದೆಂದು ಈ ಕೆಳಗಿನ ಅನುಭವಗಳು ಉದಾಹರಿಸುತ್ತವೆ.
ಹಾಂಗ್ ಕಾಂಗ್
◻ ಹಾಂಗ್ ಕಾಂಗ್ನಲ್ಲಿ ಪಯನೀಯರಳೊಬ್ಬಳು ಮನೆಯ ಹೆಂಡತಿ ಮತ್ತು ಅವಳ ಇಬ್ಬರು ಹುಡುಗಿಯರೊಂದಿಗೆ ಬೈಬಲ್ ಅಧ್ಯಯನವೊಂದನ್ನು ಆರಂಭಿಸಿದಳು. ಯಾವುದಾದರೊಂದು ತೀವ್ರಗಾಮಿ ಧಾರ್ಮಿಕ ಗುಂಪಿನೊಂದಿಗೆ ಅವಳ ಹೆಂಡತಿಯು ಸೇರ್ಪಡೆಯಾಗಬಹುದೆಂಬ ಚಿಂತೆಯನ್ನು ಗಂಡನು ವ್ಯಕ್ತಪಡಿಸಿದನು. ಅವಳ ಗಂಡನು ಅಭ್ಯಾಸವೊಂದಕ್ಕೆ ಕುಳಿತುಕೊಳ್ಳುವಂತೆ ಮತ್ತು ಅವನಾಗಿ ತೀರ್ಮಾನ ಕೈಗೊಳ್ಳುವಂತೆ ಆಮಂತ್ರಿಸಲು ಹೆಂಡತಿಗೆ ಪಯನೀಯರಳು ಸೂಚಿಸಿದಳು. ಅದನ್ನವನು ಮಾಡಿದನು. ತನ್ಮಧ್ಯೆ, ಹೆಂಡತಿಯು ಕೂಟಗಳಿಗೆ ಹಾಜರಾಗಲು ಆರಂಭಿಸಿದಳು, ಆದರೆ ತನ್ನ ಮಕ್ಕಳನ್ನು ತರಬೇತಿಗೊಳಿಸುವುದರಲ್ಲಿ ಅವಳಿಗೆ ಸಮಸ್ಯೆಯಿತ್ತು. ಅವಳು ಯಾವಾಗಲೂ ಹಿರಿಯಳನ್ನು ಬಯ್ಯುತ್ತಾ, ಕಿರಿಯಳಿಗೆ ಸ್ವಚ್ಛಂದ ಬಿಡುತ್ತಾ ಹಾಳುಮಾಡುತ್ತಿದ್ದಳು. ಅನಂತರ, ಅವಳ ಮತ್ತು ಗಂಡನ ನಡುವೆಯೂ ಸಮಸ್ಯೆಯಿರುವುದು ತಿಳಿದುಬಂತು. ಅವರ ಜಗಳಗಳು ಕೆಲವೊಮ್ಮೆ ಹಿಂಸೆಯ ಮಟ್ಟಕ್ಕೂ ಇಳಿದು, ಪೋಲೀಸರನ್ನು ಹಲವಾರು ಬಾರಿ ಕರೆಯುವ ಹಂತಕ್ಕೆ ಮುಟ್ಟುತ್ತಿದ್ದವು. ಅವರ ವಿವಾಹದಲ್ಲಿ ದೈವಿಕ ಪ್ರೀತಿಯನ್ನು ವ್ಯಕ್ತ ಪಡಿಸುವ ವಿಧವನ್ನು ಕಲಿಸಲು ಪಯನೀಯರಳು ದೇವರ ಬಲವಾದ ವಾಕ್ಯವನ್ನು ಉಪಯೋಗಿಸಿದಳು. ಬೇಗನೇ ಹಳೆಯ ರೀತಿಗಳು ಮತ್ತು ಅಭ್ಯಾಸಗಳು ಬದಲಾಗಲು ಆರಂಭವಾದವು. ಇಬ್ಬರೂ ಕ್ರಮವಾಗಿ ಕೂಟಗಳಿಗೆ ಹಾಜರಾಗಲಾರಂಭಿಸಿದರು, ಮತ್ತು ಸಂತೋಷದ ಉತ್ತಮ ವಾತಾವರಣವು ಮನೆಯಲ್ಲಿ ನೆಲೆಗೊಂಡಿತು. ಗಂಡನು ಧೂಮ್ರಪಾನವನ್ನು ತ್ಯಜಿಸಿದನು ಮತ್ತು ಈಗ ದೇವಪ್ರಭುತ್ವ ಶಾಲೆಯಲ್ಲಿ ಸೇರ್ಪಡೆಗೊಂಡಿದ್ದಾನೆ. ಹೆಂಡತಿಯು ಈಗ ಒಬ್ಬ ಸ್ನಾನಿತ ಪ್ರಚಾರಕಳಾಗಿದ್ದಾಳೆ.
ದೇವರ ಆತ್ಮದ ಫಲವಾದ ಪ್ರೀತಿಯು ತೋರಿಸಿದರ್ದಿಂದ ಕುಟುಂಬ ಐಕ್ಯತೆಯು ಸಾಧಿಸಲ್ಪಟ್ಟಿತು.
ಬ್ರಿಟನ್
◻ ತನ್ನ ಹೆಂಡತಿಯೊಂದಿಗೆ ವ್ಯವಹರಿಸುವಾಗ ಪ್ರೀತಿ, ತಾಳ್ಮೆ ಮತ್ತು ಸಹಿಷ್ಣುತೆ ತೋರಿಸುವ ಗಂಡನನ್ನು ಯೆಹೋವನು ಹೇಗೆ ಆಶೀರ್ವದಿಸುತ್ತಾನೆಂದು ಬ್ರಿಟನ್ನ ಅನುಭವವೊಂದು ಉದಾಹರಿಸುತ್ತದೆ. ಗಂಡನು ಹನ್ನೆರಡು ವರ್ಷಗಳ ಹಿಂದೆ ಸತ್ಯಕ್ಕೆ ಬರುವಾಗ, ಅವನ ಹೆಂಡತಿಯ ಕಡು ವಿರೋಧವು ಕಾನೂನುಬದ್ಧ ವಿಚ್ಛೇದವನ್ನು ಪಡೆಯುವಂತೆ ಅವಳನ್ನು ನಡಿಸಿತು. ಆದಾಗ್ಯೂ, ಗಂಡನು ಅವಳಿಗೆ ದಯೆಯನ್ನು ತೋರಿಸುವುದನ್ನು ಮುಂದುವರಿಸಿದನು, ಅವಳಿಗಾಗಿ ಆರ್ಥಿಕವಾಗಿ ಜಾಗರೂಕತೆಯನ್ನು ತೆಗೆದುಕೊಳ್ಳಲಾಯಿತು ಮತ್ತು ಕ್ರಮವಾದ ರೀತಿಯಲ್ಲಿ ಅವಳ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲಾಯಿತು. ನಾಲ್ಕು ವರ್ಷಗಳ ನಂತರ ಮತ್ತು ಅವಳ ವಿರೋಧವಿದ್ದಾಗ್ಯೂ, ಅವಳೊಡನೆ ಪುನಃ ಸತ್ಯದ ಕುರಿತು ಮಾತಾಡಲು ನಿರ್ಧರಿಸಿದನು. ಸಹೋದರಿಯೊಬ್ಬಳು ಅವಳೊಡನೆ ಬೈಬಲ್ ಅಧ್ಯಯನ ಮಾಡಲು ಅವನು ಸೂಚಿಸಿದಾಗ, ಅವಳು ಒಪ್ಪಿಗೆಯನ್ನಿತ್ತಳು, ಇದು ಅವನಿಗೆ ಬಹಳ ಆಶ್ಚರ್ಯವನ್ನುಂಟುಮಾಡಿತು. ಕಟ್ಟಕಡೆಗೆ ಅವಳು ಸತ್ಯದ ಪರವಾಗಿ ತನ್ನ ನಿಲುವನ್ನು ತೆಗೆದು ಕೊಂಡಳು ಮತ್ತು ದೀಕ್ಷಾಸ್ನಾನ ಪಡೆದಳು. ಗಂಡನು ಅವಳೆಡೆಗಿನ ಪ್ರೀತಿಯನ್ನೆಂದೂ ಕಳೆದುಕೊಂಡಿರಲಿಲ್ಲ, ಮತ್ತು ಅವಳು ಸತ್ಯವನ್ನು ತನ್ನ ಸ್ವಂತದ್ದಾಗಿ ಮಾಡಿಕೊಂಡಿದ್ದಾಳೆಂದು ರುಜುವಾದಾಗ, ತನ್ನನ್ನು ಪುನಃ ಮದುವೆಯಾಗುವಂತೆ ಅವನು ಅವಳನ್ನು ಕೇಳಿದನು. ಅವಳು ಆಗ ಆಶ್ಚರ್ಯಚಕಿತಳಾದಳು, ಅವಳ ಹಿಂದಿನ ಕೆಟ್ಟ ಮನೋಭಾವದ ಕಾರಣ ಅವಳಿದನ್ನು ಅವನಿಂದ ಎಂದಿಗೂ ನಿರೀಕ್ಷಿಸಿರಲಿಲ್ಲ. ಈಗ ಮರು ಮದುವೆಯಾಗಿ ಎಂಟು ವರ್ಷಗಳಷ್ಟು ಗತಿಸಿವೆ ಮತ್ತು ಇಬ್ಬರೂ ಸತ್ಯದಲ್ಲಿ ಪ್ರಗತಿ ಮಾಡುತ್ತಾ ಇದ್ದಾರೆ.
ದಕ್ಷಿಣ ಪೆಸಿಫಿಕ್
◻ ಸುಮಾರು 20 ವರ್ಷಗಳ ಹಿಂದೆ ದಕ್ಷಿಣ ಪೆಸಿಫಿಕ್ನ ಟುವಾಲು ದ್ವೀಪದಲ್ಲಿದ್ದ ಯುವಕನೊಬ್ಬನು ಸಾಹಿತ್ಯಗಳಿಗಾಗಿ ವಾಚ್ ಟವರ್ ಸೊಸೈಟಿಗೆ ಬರೆದನು. ಆ ಸಮಯದಲ್ಲಿ ದ್ವೀಪದಲ್ಲಿ ಬೇರೆ ಯಾರೂ ಸಾಕ್ಷಿ ಇರಲಿಲ್ಲ. ಆದಾಗ್ಯೂ ಅವನು ಸ್ವಂತವಾಗಿ ಸಾಹಿತ್ಯವನ್ನು ಓದಿದನು ಮತ್ತು ಇದು ಸತ್ಯವೆಂದು ಮನಗಂಡನು. ಆದಾಗ್ಯೂ ಅವನ ಹೆಂಡತಿಯು ಕಟುವಾಗಿ ಅವನ ಹೊಸ ನಂಬಿಕೆಯನ್ನು ವಿರೋಧಿಸಿದಳು, ಆದುದರಿಂದ ಅವನು ಅದನ್ನು ತ್ಯಜಿಸಿದನು.
ಇತ್ತೀಚೆಗೆ ಟುವಾಲೌನ್ ಭಾಷೆಯಲ್ಲಿ ಸಾಹಿತ್ಯವು ದೊರಕಲಾರಂಭಿಸಿದಾಗ ಅವನ ಹೆಂಡತಿಯು ಕೆಲವು ಪ್ರಕಾಶನಗಳನ್ನು ಪಡೆದಳು ಮತ್ತು ಸ್ವತಃ ಅವುಗಳನ್ನು ಓದತೊಡಗಿದಳು. ಈಗ ಅದು ಸತ್ಯವೆಂದು ತಿಳಿದುಕೊಂಡಳು ಮತ್ತು ಗಂಡನಿಗೆ ದೂರುತ್ತಾ ಅವಳಂದದ್ದು: “ಇಷ್ಟು ವರ್ಷಗಳ ತನಕ ನಿನ್ನ ಹತ್ತಿರ ಬೆಳಕು ಇತ್ತು, ಆದರೆ ನೀನು ಅದನ್ನು ಸಾಕಷ್ಟು ಉನ್ನತವಾಗಿ ಎತ್ತಿಹಿಡಿಯಲಿಲ್ಲ. ಸಾಕ್ಷಿಗಳು ಸರಿಯೆಂದು ನೀನು ಯಾಕೆ ನಂಬಿದ್ದೀ ಎಂದು ಕಡಿಮೆ ಪಕ್ಷ ಈಗಲಾದರೂ ಯಾಕೆ ಹೇಳುವುದಿಲ್ಲ?” ಬೈಬಲ್ ಸತ್ಯದಿಂದ ಐಕ್ಯರಾಗಿ, ಈಗ ಈ ದಂಪತಿಗಳು ಸಾಕ್ಷಿಗಳೊಂದಿಗೆ ಜತೆಗೂಡಲು ಆರಂಭಿಸಿದರು.
ಫಿಜಿಯಲ್ಲಿ ಶಾಲೆಗೆ ಹೋಗುತ್ತಿದ್ದ ಅವರ ಇಬ್ಬರು ಹುಡುಗಿಯರು ಮನೆಗೆ ಹಿಂತಿರುಗಿದಾಗ, ಹೆತ್ತವರು ತಾವು ಯೆಹೋವನ ಸಾಕ್ಷಿಗಳಾಗುವ ತಮ್ಮ ತೀರ್ಮಾನವನ್ನು ತಿಳಿಸಿದರು. ಬೈಬಲ್ ಅಧ್ಯಯನದಲ್ಲಿ ತಮ್ಮೊಂದಿಗೆ ಜತೆಗೂಡುವಂತೆ ಅವರನ್ನು ಪ್ರೋತ್ಸಾಹಿಸಿದರು, ಆದರೆ ಅವರಿಗೆ ಆಶ್ಚರ್ಯವನ್ನುಂಟುಮಾಡಿದ್ದು ಏನಂದರೆ ಹುಡುಗಿಯರು ಈಗಾಗಲೇ ಫಿಜಿಯಲ್ಲಿ ಕೂಟಗಳಿಗೆ ಹಾಜರಾಗುತ್ತಿದ್ದಾರೆ. ಕುಟುಂಬವು ಒಟ್ಟಿಗೆ ಸತ್ಯವನ್ನು ಸ್ವೀಕರಿಸಿತು ಮತ್ತು ತಂದೆ, ತಾಯಿ ಮತ್ತು ಹುಡುಗಿಯರಲ್ಲಿ ಒಬ್ಬಳು ರಾಜ್ಯ ಪ್ರಚಾರಕರಾದರು.
ಬೈಬಲ್ ಸತ್ಯವು ಮತ್ತು ಪ್ರೀತಿಯು ಲೋಕವ್ಯಾಪಕವಾಗಿರುವ ಕುಟುಂಬಗಳನ್ನು ಐಕ್ಯತೆಗೊಳಿಸುವುದನ್ನು ಕಾಣುವುದು ಎಂಥಹ ಸಂತೋಷ. (w89 4/1)