ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w90 8/1 ಪು. 7-11
  • ಯೆಹೋವನು ಕೊಟ್ಟಿರುವ ಒಳನೋಟ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನು ಕೊಟ್ಟಿರುವ ಒಳನೋಟ
  • ಕಾವಲಿನಬುರುಜು—1990
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರು ತ್ರಯೈಕ್ಯನೋ?
  • ದೇವರ ನಾಮಕ್ಕೆ ಸಮರ್ಪಕ ಸ್ಥಾನ
  • ಮಾನವಾತ್ಮವು ಅಮರವೋ?
  • ಗಲಭೆಯ ಲೋಕದಲ್ಲಿ ಕ್ರೈಸ್ತ ನಡತೆ
  • ಬೈಬಲ್‌ ಪ್ರವಾದನೆಗಳ ನೆರವೇರಿಕೆ
  • ಒಳನೋಟಕ್ಕಾಗಿ ಯೆಹೋವನ ಕಡೆ ನೋಡಿರಿ
    ಕಾವಲಿನಬುರುಜು—1990
  • ವಿವೇಚನೆ ಬಳಸಿ, ‘ಯಶಸ್ಸು ಗಳಿಸಿ!’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
  • ಯೆಹೋವನ ಸಾಕ್ಷಿಗಳು ಎಚ್ಚರವಾಗಿರುತ್ತಾ ಇರುವ ಕಾರಣ
    ಕಾವಲಿನಬುರುಜು—1994
  • ಬೆಳಕಿನ ಬೆಳಗುಗಳು—ದೊಡ್ಡವೂ ಚಿಕ್ಕವೂ—ಭಾಗ ಒಂದು
    ಕಾವಲಿನಬುರುಜು—1995
ಕಾವಲಿನಬುರುಜು—1990
w90 8/1 ಪು. 7-11

ಯೆಹೋವನು ಕೊಟ್ಟಿರುವ ಒಳನೋಟ

“ಜನರಲ್ಲಿ ಒಳನೋಟವಿರುವವರು ಅನೇಕರಿಗೆ ತಿಳುವಳಿಕೆಯನ್ನು ಹಂಚುವರು.”—ದಾನಿಯೇಲ 11:33, NW.

1, 2. (ಎ) ಇಸ್ರಾಯೇಲ್ಯರು ದೇವರ ಪ್ರೀತಿದಯೆಯನ್ನು ಅನುಭವಿಸಿದ್ದರೂ ತಿರುಗಿಬಿದದ್ದೇಕೆ? (ಬಿ) ನಾವು ಏನು ಮಾಡುವುದು ನಮಗೆ ಪ್ರಯೋಜನಕಾರಿಯಾಗುವುದು? (ಯೆರೆಮೀಯ 51:10)

ಪೂರ್ವದ ಇಸ್ರಾಯೇಲ್‌ ಜನರಿಗೆ, ಯೆಹೋವನು ಒಬ್ಬನೇ ಸತ್ಯದೇವರೆಂದು ತಿಳಿದಿತ್ತು. ಆತನು ಅವರ ಪಿತೃಗಳೊಂದಿಗೆ ವ್ಯವಹರಿಸಿದ್ದು ಅವರಿಗೆ ತಿಳಿಸಲ್ಪಟ್ಟಿತ್ತು, ಮತ್ತು ಆತನ ಪ್ರೀತಿ ದಯೆಯನ್ನು ಅವರು ತಾವೇ ಅನುಭವಿಸಿದ್ದರು. ಆದರೆ ಅನೇಕ ವೇಳೆ ಒಳನೋಟದ ತೀರಾ ಕೊರತೆಯುಳ್ಳವರಾಗಿ ಅವರು ವರ್ತಿಸಿದರು. ಯೆಹೋವನ ಮತ್ತು ಆತನ ಪ್ರತಿನಿಧಿಗಳ ವಿರುದ್ಧ ಅವರು “ತಿರುಗಿಬಿದ್ದರು.” ಏಕೆ? ಏಕೆಂದರೆ ಆತನು ಅವರಿಗೆ ಮಾಡಿದ ವಿಷಯಗಳನ್ನು ಅವರು “ಸ್ಮರಿಸಲಿಲ್ಲ.” (ಕೀರ್ತನೆ 106:7, 13) ಅವರಿಗೆ ಆ ವಿಷಯಗಳು ತಿಳಿದಿರಲಿಲ್ಲವೆಂದು ಇದರ ಅರ್ಥವಲ್ಲ. ಅವರು ಗಣ್ಯತೆಯಿಂದ ಅದನ್ನು ಧ್ಯಾಸಿಸಲು ತಪ್ಪಿದರು. ಇದರ ಪರಿಣಾಮವಾಗಿ “ಅವರು ಕೆಟ್ಟ ವಿಷಯಗಳನ್ನು” ಆಶಿಸುವವರಾದರು.—1 ಕೊರಿಂಥ 10:6.

2 ನಮ್ಮ ದಿನಗಳಲ್ಲಿ, ಯೆಹೋವನು ತನ್ನ ಸಾಕ್ಷಿಗಳನ್ನು ವಿಶಿಷ್ಟ ಜನರಾಗಿ ಪ್ರತ್ಯೇಕಿಸಿರುವ ಒಂದು ದೊಡ್ಡ ವಿಧವು ತನ್ನ ದೃಶ್ಯ ಸಂಸ್ಥೆಯ ಮೂಲಕ ಒಳನೋಟವನ್ನು ಒದಗಿಸಿಯೇ. ಇಂಥ ಒಳನೋಟದ ದೃಷ್ಟಾಂತಗಳನ್ನು ನಾವು ಪುನರ್ವಿಮರ್ಶಿಸುವಲ್ಲಿ, ಯೆಹೋವನು ತನ್ನ ಜನತೆಯನ್ನು ನಡಿಸುವ ವಿಧಕ್ಕೆ ನಮ್ಮ ಸ್ವಂತ ಮಾನ್ಯತೆ ಬಲಾಢ್ಯವಾಗಬಲ್ಲದು. ಇವುಗಳಲ್ಲಿ ಒಂದು ನಮ್ಮ ನಂಬಿಕೆಯ ತಿರುಳನ್ನೇ ಅಂದರೆ ದೇವರ ಗುರುತನ್ನು ತಾನೇ ಒಳಗೊಂಡಿದೆ.

ದೇವರು ತ್ರಯೈಕ್ಯನೋ?

3. ಸುಮಾರು ನೂರು ವರ್ಷಗಳ ಹಿಂದೆ ಯೆಹೋವನ ಸೇವಕರು ದೇವರನ್ನು ಗುರುತಿಸುವ ಸತ್ಯವನ್ನು ಗುರುತಿಸುವಂತೆ ಯಾವುದು ಸಾಧ್ಯಮಾಡಿತು? (1 ಕೊರಿಂಥ 8:5, 6)

3 ತ್ರಯೈಕ್ಯವನ್ನು ನಂಬದವರು ಪಾಷಂಡಿಗಳೆಂದು ಕ್ರೈಸ್ತ ಪ್ರಪಂಚ ಸ್ಥಿರವಾಗಿ ನಂಬುತ್ತದೆ. ಆದರೆ ಜನರಿಂದ ಭಯಭೀತರಾಗುವ ಬದಲಿಗೆ, ಯೆಹೋವನ ಸೇವಕರು, ಅಪ್ರೇರಿತ ಜನರ ಸಂಪ್ರದಾಯ ಮತ್ತು ಪ್ರಮಾಣಗಳಲ್ಲ, ಪವಿತ್ರಶಾಸ್ತ್ರವೇ ಸತ್ಯವನ್ನು ಗ್ರಹಿಸಲು ಬೇಕಾದ ಗುಣಮಟ್ಟಗಳನ್ನು ಒದಗಿಸುತ್ತದೆಂದು ಒಪ್ಪಿದ್ದಾರೆ. ಈ ಅಸ್ತಿವಾರದ ಮೇಲೆ ಕಟ್ಟುತ್ತಾ, 1882 ರಷ್ಟು ಪೂರ್ವದಲ್ಲಿ ಈ ಸಮರ್ಪಿತ ಬೈಬಲ್‌ ವಿದ್ಯಾರ್ಥಿಗಳು ವಾಚ್‌ ಟವರ್‌ (ಕಾವಲಿನಬುರುಜು) ಪತ್ರಿಕೆಯಲ್ಲಿ ಹೀಗೆ ಸ್ಪಷ್ಟವಾಗಿ ತಿಳಿಸಿದರು. “ನಾವು ಯೆಹೋವದೇವರು, ಯೇಸು ಮತ್ತು ಪವಿತ್ರಾತ್ಮದಲ್ಲಿ ನಂಬುತ್ತೇವಾದರೂ ಈ ಮೂವರು ದೇವರುಗಳು ಒಬ್ಬ ವ್ಯಕ್ತಿ ಅಥವಾ ಕೆಲವರು ಹೇಳುವಂತೆ, ಮೂರು ವ್ಯಕ್ತಿಗಳಲ್ಲಿ ಒಬ್ಬ ದೇವರು ಎಂಬ ಭೋದನೆಯನ್ನು ತೀರಾ ಅಶಾಸ್ತ್ರೀಯವೆಂದು ತಳ್ಳಿಹಾಕುತ್ತೇವೆಂದು ನಮ್ಮ ವಾಚಕರಿಗೆ ಗೊತ್ತಿದೆ.”—ಯೋಹಾನ 5:19; 14:28; 20:17.

4. (ಎ) ಮೇಲ್ಮೈಯ ಕೆಳಗಡೆ ಪರೀಕ್ಷಿಸಿದಾಗ, ತ್ರಯೈಕ್ಯ ಭೋದನೆಯ ಆಧಾರ ಮತ್ತು ಇಂಥ ಭೋದನೆಯ ಪರಿಣಾಮದ ಕುರಿತು ಯೆಹೋವನ ಜನರು ಏನು ಗ್ರಹಿಸಿದರು? (ಬಿ) ಯೆಹೋವನ ತನ್ನ ಜನರಿಗೆ ಇಂಥ ಒಳನೋಟವನ್ನೇಕೆ ಕೊಟ್ಟನು?

4 ಈ ಬೈಬಲ್‌ ಸತ್ಯಪ್ರೇಮಿಗಳು ಮೇಲ್ಮೈಯ ಕೆಳಗಡೆ ಪರೀಕ್ಷಿಸಿ, ತ್ರಯೈಕ್ಯದ ನಂಬಿಕೆಯ ಬೇರು ಕ್ರೈಸ್ತೇತರ ಧರ್ಮಗಳಲ್ಲಿದೆ ಎಂದು ನೋಡಿದ್ದಾರೆ. ಶಾಸ್ತ್ರವನ್ನು ಜಾಗ್ರತೆಯಿಂದ ಪರೀಕ್ಷಿಸುತ್ತಾ ಇವರು, ಕೆಲವು ಬೈಬಲ್‌ ವಚನಗಳು ತ್ರಯೈಕ್ಯವನ್ನು ಬೆಂಬಲಿಸುವಂತೆ ಕಾಣುವುದು ಭಾಷಾಂತಗಾರರ ವಕ್ರನೋಟದಿಂದಾಗಿಯೇ ಹೊರತು, ಅವು ಅತಿ ಪೂರ್ವದ ಮೂಲಭಾಷೆಗಳಲ್ಲಿರುವ ಕಾರಣದಿಂದಲ್ಲವೆಂದೂ ಗ್ರಹಿಸಿರುತ್ತಾರೆ. ಈ ಭೋದನೆ, ಯೇಸುವನ್ನು ಗೌರವಿಸುವಂತೆ ಕಂಡರೂ ಅವನ ಭೋದನೆಗಳಿಗೆ ನಿಜವಾಗಿಯೂ ವ್ಯತಿರಿಕ್ತವಾಗಿದ್ದು ಯೆಹೋವನನ್ನು ಅಗೌರವ ಪಡಿಸಿವೆಯೆಂದು ಅವರು ಗುರುತಿಸಿದರು. ಹೀಗೆ, ವಾಚ್‌ಟವರ್‌ ಪತ್ರಿಕೆಯ ಈ ಮೇಲಿನ ಸಂಚಿಕೆ ಹೇಳಿದ್ದು: “ಸತ್ಯಾನೇಶ್ವಿಕರಾದ ನಾವು ನಮ್ಮೊಂದಿಗೂ, ನಮ್ಮನ್ನು ನಿಜವಾಗಿಯೂ ವಿವೇಕಿಗಳಾಗಿ ಮಾಡಶಕ್ತರಾಗಿರುವ ನಮ್ಮ ತಂದೆಯ ವಾಕ್ಯದೊಂದಿಗೂ ಪ್ರಾಮಾಣಿಕರಾಗಿ ವರ್ತಿಸುವ ಕರ್ತವ್ಯ ನಮಗಿದೆ. ಆದುದರಿಂದ, ನಾವು ಅಪ್ರೇರಿತ ಜನರ ಮತ್ತು ಭಷ್ಟ ವ್ಯವಸ್ಥೆಯ ಸಂಪ್ರದಾಯ ಮತ್ತು ಮತ ಸೂತ್ರಗಳನ್ನು ಅಸಡ್ಡೆ ಮಾಡುತ್ತಾ ನಮ್ಮ ಕರ್ತನಿಂದ ಮತ್ತು ಅಪೋಸ್ತಲರಿಂದ ಪಡೆದಿರುವ ಸ್ವಸ್ಥ ಮಾತುಗಳನ್ನು ಭದ್ರವಾಗಿ ಹಿಡಿದುಕೊಂಡಿರೋಣ.” ಅವರು ಸತ್ಯವನ್ನು ನಿಜವಾಗಿಯಾ ಪ್ರೀತಿಸಿದರ್ದಿಂದ ಮತ್ತು ಕೇವಲ ಕೆಲವು ಮೆಚ್ಚುಗೆಯ ವಚನಗಳಿಗಲ್ಲ, ದೇವರ ಪೂರ್ತಿ ವಾಕ್ಯಕ್ಕೆ ಗಮನಕೊಟ್ಟದ್ದರಿಂದ ಯೆಹೋವನು ಅವರಿಗೆ, ಅವರನ್ನು ಸ್ಪಷ್ಟ ರೀತಿಯಲ್ಲಿ ಕ್ರೈಸ್ತಪ್ರಪಂಚದಿಂದ ಪ್ರತ್ಯೇಕಿಸಿದ ಒಳನೋಟವನ್ನು ದಯಪಾಲಿಸಿದನು.—2 ತಿಮೋಥಿ 3:16, 17; ನ್ಯೂವರ್ಲ್ಡ್‌ ಟ್ರಾನ್ಸ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪುಟ 1580, ವಿಭಾಗ 6ಬಿ ನೋಡಿ.

ದೇವರ ನಾಮಕ್ಕೆ ಸಮರ್ಪಕ ಸ್ಥಾನ

5. ದೇವರ ವೈಯಕ್ತಿಕ ಹೆಸರನ್ನು ಬೈಬಲ್‌ ಭಾಷಾಂತರಗಳಿಂದ ತೆಗೆಯುವ ಹಿಂದೆ ಪ್ರವೃತ್ತಿಯು ಏನಿತ್ತು? (ಪ್ರಕಟನೆ 22:18, 19)

5 ಎರಡನೆಯ ಉದಾಹರಣೆಯನ್ನು ಪರಿಗಣಿಸಿರಿ: ಬೈಬಲ್‌ ಭಾಷಾಂತರಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ವ್ಯಕ್ತಿಪರ ನಾಮವನ್ನು ಮರೆ ಮಾಡಿದಾಗ ಅಥವಾ ಪೂರ್ತಿ ತೊರೆದುಬಿಟ್ಟಾಗ, ವಾಚ್‌ಟವರ್‌ ಸೊಸೈಟಿ ಆ ಹೆಸರಿನ ಪ್ರಾಮುಖ್ಯತೆಗೆ ಎಂದಿಗಿಂತಲೂ ಹೆಚ್ಚಾಗಿ ಮಹತ್ವವನ್ನು ಕೊಟ್ಟಿತು. ಯೆಹೋವನ ನಾಮದ ತೆಗೆಯೋಣವು ಸುವಾರ್ತೆಗೆ ಹೆಚ್ಚು ವಿಶ್ವವ್ಯಾಪಕ ರುಚಿಯನ್ನು ಕೊಡುತ್ತದೆಂದು ಕ್ರೈಸ್ತ ಪ್ರಪಂಚವು ವಾದಿಸಿದಾಗ ಯೆಹೋವನ ಅಭಿಷಿಕ್ತ ಸೇವಕರು, ಈ ಸರ್ವ ಪ್ರಾಮುಖ್ಯವಾದ ನಾಮವನ್ನು ತೊಲಗಿಸುವ ಕುತಂತ್ರದ ಹಿಂದಿರುವ ವ್ಯಕ್ತಿಯನ್ನು ಗುರುತಿಸಿದರು. (ಯೆರೆಮೀಯ 23:27 ಹೋಲಿಸಿ.) ಸತ್ಯದೇವರ ನಾಮವನ್ನು ಮಾನವ ಸ್ಮರಣೆಯಿಂದ ಅಳಿಸಿಬಿಡಲಿಕ್ಕಾಗಿ ಇದು ಪಿಶಾಚನ ಪ್ರೇರೇಪಣೆಯೆಂದು ಅವರು ಗ್ರಹಿಸಿದರು.

6. ಕ್ರೈಸ್ತ ಪ್ರಪಂಚದ ವರ್ತನೆಗೆ ವ್ಯತಿರಿಕ್ತವಾಗಿ ದೇವರ ಹೆಸರನ್ನು ಹೊಗಳಲು ಆತನ ನಿಜ ಸೇವಕರೇನು ಮಾಡಿದರು? (ಅಪೋ.15:14)

6 ಕ್ರೈಸ್ತ ಪ್ರಪಂಚದ ನಡವಳಿಕೆಗೆ ಪ್ರತಿಕೂಲವಾಗಿ, ವಾಚ್‌ ಟವರ್‌ ಪತ್ರಿಕೆ, ಅದರ ಪ್ರಕಾಶನದ ಪ್ರಥಮ ವರ್ಷ (1879) ದಿಂದಲೇ ದೈವಿಕ ನಾಮವಾದ ಯೆಹೋವ ಎಂಬ ಹೆಸರಿಗೆ ಪ್ರಾಮುಖ್ಯತೆಯನ್ನು ಕೊಟ್ಟಿತು. 1926 ರಲ್ಲಿ ಈ ಪತ್ರಿಕೆ, “ಯೆಹೋವನನ್ನು ಯಾರು ಗೌರವಿಸುವರು?” ಎಂಬ ಲೇಖನವನ್ನು ಹೊರಡಿಸಿತು. (ಕೀರ್ತನೆ 135:21) 1931 ರಲ್ಲಿ ವಾಚ್‌ ಟವರ್‌ ಸೊಸೈಟಿಯ ಜೊತೆಗಿದ್ದ ಬೈಬಲ್‌ ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಅಂಗೀಕರಿಸಿದರು. (ಯೆಶಾಯ 43:10-12) ಯೆಹೋವನ ನಾಮದ ಪವಿತ್ರೀಕರಣದ ಮಹಾ ಪ್ರಾಮುಖ್ಯತೆಯನ್ನು ಅವರು ಹೆಚ್ಚು ಪೂರ್ಣವಾಗಿ ಗಣ್ಯಮಾಡಿದರು. (ಯೆಶಾಯ 12:4, 5) 1944 ರಲ್ಲಿ ಇವರು ಬೈಬಲಿನ ಅಮೆರಿಕನ್‌ ಸ್ಟ್ಯಾಂಡರ್ಡ್‌ ವರ್ಶನನ್ನು ಪ್ರಕಟಿಸ ತೊಡಗಿದರು. ಇದರಲ್ಲಿ ಯೆಹೋವನ ಹೆಸರು 6,800 ಕ್ಕೂ ಹೆಚ್ಚು ಸಲ ಸೇರಿದೆ. ಆದರೆ ಬೈಬಲ್‌ ಪ್ರಕಾಶನದ ಸಂಬಂಧದಲ್ಲಿ, ಅತ್ಯಂತ ಗಮನಾರ್ಹ ಪ್ರಕಾಶನವು 1950 ರಿಂದ ಪ್ರಕಟವಾದ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌. ಇದು, ಹಿಬ್ರೂ ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳೆರಡರಲ್ಲಿಯೂ ಈ ದೈವಿಕ ಹೆಸರಿಗೆ ಯೋಗ್ಯಸ್ಥಾನವನ್ನು ಕೊಡುತ್ತದೆ.

7. ದೇವರ ಹೆಸರಿನ ಮೇಲೆ ಹಾಕಿದ ಪ್ರಾಧಾನ್ಯತೆ ಮತ್ತು ಅದರೊಂದಿಗೆ ಸೇರಿದ ಎಲ್ಲಾ ವಿಷಯಗಳು ಅನೇಕರ ಮೇಲೆ ಹೇಗೆ ಪ್ರಯೋಜನಕಾರಿಯಾಗಿ ಪರಿಣಾಮ ಬೀರಿದೆ?

7 ಹೀಗೆ, ದೇವರ ವೈಯಕ್ತಿಕ ಹೆಸರಿನ ಮೇಲೆ ಇಟ್ಟಿರುವ ಪ್ರಾಮುಖ್ಯತೆ, ಭೂವ್ಯಾಪಕವಾಗಿ ಲಕ್ಷಾಂತರ ನೀತಿಪ್ರಿಯ ಜನರಿಗೆ ಆನಂದವನ್ನು ತಂದಿದೆ. ವ್ಯಕ್ತಿಯಾಗಿರುವ ಸತ್ಯದೇವರನ್ನು ಮಾನ್ಯಮಾಡುವರೇ ಇದು ಅವರಿಗೆ ಸಹಾಯ ನೀಡಿದೆ. ಮತ್ತು ಅವರು ಆತನ ಮಾರ್ಗಗಳನ್ನು ತಿಳಿದಿರುವ ಕಾರಣ, ವಿವೇಕದಿಂದ ಅಥವಾ ಒಳನೋಟದಿಂದ ನಡೆಯುವಂತೆ ಇದು ಸಾಧ್ಯಮಾಡಿದೆ.

ಮಾನವಾತ್ಮವು ಅಮರವೋ?

8. ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸದ ಮೊದಲಲ್ಲಿ ಆತ್ಮ ಮತ್ತು ಮೃತರ ಅವಸ್ಥೆಯ ಕುರಿತು ಅವರೇನು ಕಲಿತರು?

8 ಈಗ ಮೂರನೆಯ ದೃಷ್ಟಾಂತ. ಯೆಹೋವನ ಸೇವಕರ ಆಧುನಿಕ ಇತಿಹಾಸದ ಆರಂಭಕಾಲದಲ್ಲಿ ದೇವರ ವಾಕ್ಯಕ್ಕೆ ಅವರಿಗಿದ್ದ ಪ್ರೀತಿ, ಇತರ ಪ್ರಾಮುಖ್ಯ ಸತ್ಯಗಳಿಗೆ ಅವರ ನೇತ್ರಗಳನ್ನು ತೆರೆಯಿತು. ಒಂದು ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು ಆತ್ಮವೆಂದರೆ ಮಾನವರೊಳಗೆ ಜೀವಿಸುವ ಬುದ್ಧಿಶಕ್ತಿ ಇರುವ ಪ್ರತ್ಯೇಕ ಜೀವಿಯಾಗಿರದೆ ವ್ಯಕ್ತಿ ತಾನೇ ಆಗಿದೆ ಎಂದು ಸರಿಯಾಗಿ ಗ್ರಹಿಸಿತ್ತು. (ಮತ್ತಾಯ 24:45-47) 1880 ರಲ್ಲಿ ವಾಚ್‌ ಟವರ್‌ ಪತ್ರಿಕೆ ಶಿಯೋಲ್‌ ಮತ್ತು ಹೇಡಿಸ್‌ ಎಂದು ಲಿಪ್ಯಂತರವಾಗಿದ್ದ ಮೂಲಭಾಷೆಗಳ ಪದಗಳನ್ನು ವಿಶೇಷ್ಲಿಸಿ ಇವು ಸಮಾಧಿಯನ್ನು ಸೂಚಿಸುತ್ತವೆ ಎಂದು ತೀರ್ಮಾನಿಸಿತು. ಮತ್ತು ಗೆಹೆನ್ನಕ್ಕೆ ಹಾಕಲ್ಪಡುವವರು ಯಾತನೆಗೊಳಗಾಗದೆ ನಾಶಮಾಡಲ್ಪಡುವರೆಂದು ಸೂಚಿಸಿತು.—ನ್ಯೂ ವರ್ಲ್ಡ್‌ ಟ್ರಾನ್‌ಲೇಶನ್‌ ರೆಫರೆನ್ಸ್‌ ಬೈಬಲ್‌, ಪುಟ 1573-5 ಸಹಾ ನೋಡಿ.

9. 1894 ರಲ್ಲಿ ಮಾನವಾತ್ಮಗಳು ಅಂತರ್ಗತವಾಗಿ ಅಮರವಾಗಿವೆ ಎಂಬ ಭೋದನೆಯ ಮೂಲದ ಕುರಿತು ವಾಚ್‌ ಟವರ್‌ ಪತ್ರಿಕೆ ಏನು ಹೇಳಿತು?

9 1894 ರಲ್ಲಿ ವಾಚ್‌ ಟವರ್‌ ಪತ್ರಿಕೆಯು ಈ ಪ್ರಶ್ನೆಯನ್ನೆತಿತ್ತು: “ಹಾಗಾದರೆ ಎಲ್ಲಾ ಮನುಷ್ಯರು ಅಂತರ್ಗತರಾಗಿ ಮತ್ತು ಸ್ವಭಾವಸಿದ್ಧವಾಗಿ ಅಮರತ್ವವುಳ್ಳವರಾಗಿದ್ದಾರೆ ಎಂಬ ಈ ವಿಚಾರವು ಎಲ್ಲಿಂದ ಬಂತು?” ಒಳನೋಟದಿಂದ ಅದು ಉತ್ತರಕೊಟ್ಟದ್ದು: “ಇತಿಹಾಸದ ಪುಟಗಳನ್ನು ಪರೀಕ್ಷಿಸುವಾಗ ನಾವು, ಮಾನವ ಆಮರತ್ವದ ತತ್ವವು ದೇವರ ಪ್ರೇರಿತ ಸಾಕ್ಷಿಗಳಿಂದ ಕಲಿಸಲ್ಪಟ್ಟಿರುವುದಿಲ್ಲವಾದರೂ ಅದು ಎಲ್ಲಾ ವಿಧರ್ಮಗಳ ಮೂಲಸಾರವಾಗಿದೆ ಎಂದು ನಾವು ತಿಳಿಯುತ್ತೇವೆ. . . . ಆದ್ದರಿಂದ, ಸಾಕ್ರೆಟೀಸ್‌ ಮತ್ತು ಪ್ಲೇಟೋ ಈ ತತ್ವವನ್ನು ಮೊದಲು ಕಲಿಸಿದವರೆಂಬದು ಸತ್ಯವಲ್ಲ: ಅವರಿಗಿಂತ ಪೂರ್ವದ ಒಬ್ಬ ಅಧ್ಯಾಪಕನು ಮತ್ತು ಅವರಿಗಿಂತ ಹೆಚ್ಚು ಸಮರ್ಥನಾದ ಒಬ್ಬನು ಇದ್ದನು ಎಂದು ನಾವು ತಿಳಿಯುತ್ತೇವೆ. ಆದರೆ ಅವರು ಆ ತತ್ವಕ್ಕೆ ಹೊಳಪು ಕೊಟ್ಟರು. . .  ಮತ್ತು ಅದರಿಂದ ಒಂದು ತತ್ವಜ್ಞಾನ ರಚಿಸಿ, ಹೀಗೆ ಆ ದಿನಗಳ ಮತ್ತು ಅಂದಿನಿಂದೀಚಿನ ಸುಸಂಸ್ಕೃತ ಜನರಿಗೆ ಅದನ್ನು ಮೋಹಕವಾಗಿಯೂ ಸ್ವೀಕಾರ ಯೋಗ್ಯವಾಗಿಯೂ ಮಾಡಿದರು. ಈ ಸುಳ್ಳು ಬೋಧನೆಯ ಪ್ರಥಮ ದಾಖಲೆ, ಮಾನವನಿಗೆ ತಿಳಿದಿರುವ ಇತಿಹಾಸದಲ್ಲಿ ಅತಿ ಹಳೆಯದಾದ ಬೈಬಲಲ್ಲಿ ದೊರೆಯುತ್ತದೆ. ಈ ಸುಳ್ಳು ಭೋದಕನು ಸೈತಾನನೇ.”a

10. ಆತ್ಮ ಮತ್ತು ಮೃತರ ಅವಸ್ಥೆಯ ಕುರಿತಾದ ಧಾರ್ಮಿಕ ಸುಳ್ಳಿನಿಂದ ಯಾವ ಕೆಟ್ಟ ಪರಿಣಾಮ ಬಂದಿದೆ, ಆದರೆ ನ್ಯಾಯಸಮ್ಮತರಿಗೆ ಸಹಾಯಮಾಡಲು ಏನು ಮಾಡಲ್ಪಟ್ಟಿತು?

10 ಎಲ್ಲಾ ಮಾನವರಲ್ಲಿ ಅಮರವಾದ ಆತ್ಮವೂಂದಿದೆ ಮತ್ತು ದುಷ್ಟರು ಸದಾ ನರಕದಲ್ಲಿ ಯಾತನೆ ಪಡೆಯುವರೆಂಬ ಸುಳ್ಳನ್ನು ಹರಡಿಸಿ ಸೈತಾನನು ದೇವರ ಹೆಸರನ್ನು ತಪ್ಪಾಗಿ ನಿರೂಪಿಸಿ ದೂಷಿಸಿದ್ದಾನೆ. ವಾಚ್‌ಟವರ್‌ ಪತ್ರಿಕೆಯ ಮೊದಲನೆಯ ಸಂಪಾದಕ ಸಿ. ಟಿ. ರಸ್ಸೆಲರು ಇದನ್ನು ಗ್ರಹಿಸಿದರು. ಬುದ್ಧಿಶಕ್ತಿಯ ಜನರು ನಿತ್ಯಯಾತನೆಯ ವಿಚಾರವನ್ನು ತ್ಯಜಿಸುವರೆಂದೂ, ಆದರೆ ದು:ಖಕರವಾಗಿ ಈ ಅಸಮಂಜಸ ತತ್ವದ ಮೂಲ ಬೈಬಲೆಂದು ತಿಳಿದು ಬೈಬಲನ್ನೂ ತಳ್ಳಿಹಾಕುವರೆಂದೂ ಅವರು ಕಂಡರು. ಅಂಧಕಾರ ಯುಗದ ಹೊಗೆಯನ್ನು ನ್ಯಾಯಸಮ್ಮತರಾದ ಜನರ ಮನಸ್ಸಿನಿಂದ ನಿವಾರಿಸಬೇಕೆಂದು ಹೇಳಿ ಸಹೋದರ ರಸ್ಸೆಲ್‌, “ನರಕದಿಂದ ಹಿಂದಿರುಗಿ ಬರುವುದು! ಅಲ್ಲಿ ಯಾರಿದ್ದಾರೆ” ಎಂಬ ಆಕರ್ಶಕವಾದ ಸಾರ್ವಜನಿಕ ಭಾಷಣವನ್ನು ಕೊಟ್ಟರು.

11. (ಎ) ಪ್ರೇತ ವ್ಯವಹಾರ ವಾದವು ಪ್ರಗತಿ ಹೊಂದುತ್ತಿದ್ದಾಗ ‘ನಂಬಿಗಸ್ತ ಆಳು’ ವರ್ಗವು ಯಾವ ಎಚ್ಚರಿಕೆಯನ್ನು ಕೊಟ್ಟಿತು? (ಬಿ) ಈ ಎಚ್ಚರಿಕೆಯಿಂದ ಯಾರು ಪ್ರಯೋಜನಪಟ್ಟರು ಮತ್ತು ಹೇಗೆ?

11 ಅದು ಪ್ರೇತ ವ್ಯವಹಾರವು ಜನಪ್ರಿಯವಾಗುತ್ತಿದ್ದ ಯುಗವಾಗಿತ್ತು. ಆದ್ರೆ ಯೆಹೋವ ದೇವರು ತನ್ನ ವಾಕ್ಯದ ಮೂಲಕ ಸಾಧ್ಯಮಾಡಿದ ಒಳನೋಟದಿಂದಾಗಿ, ‘ನಂಬಿಗಸ್ತ ಆಳು’ ವರ್ಗದವರು, ಜನರು ಅಗಲಿ ಹೋದ ಆತ್ಮಗಳೆನ್ನುತ್ತಾ ಸಂಪರ್ಕಿಸುವುದು ದೆವ್ವಗಳೊಂದಿಗೆ ಎಂದು ವಿವೇಚಿಸಿ ತಿಳಿದರು. ಸಾರ್ವಜನಿಕ ಭಾಷಣಗಳಲ್ಲಿ ಮತ್ತು ಲೇಖನಗಳಲ್ಲಿ, ಪ್ರೇತ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳುವುದರಲ್ಲಿ ಅಪಾಯವಿದೆ ಎಂದು ಪ್ರಾಮಾಣಿಕ ಹೃದಯಗಳ ಕಣ್ಣುಗಳನ್ನು ತೆರೆಯಲಿಕ್ಕಾಗಿ ಬಲಾಢ್ಯವಾದ ಶಾಸ್ತ್ರೀಯ ಪ್ರಮಾಣಗಳು ಕೊಡಲ್ಪಟ್ಟವು. (ಧರ್ಮೋಪದೇಶ 18:10-12; ಯೆಶಾಯ 8:19) ಯೆಹೋವನು ತನ್ನ ಸೇವಕರಿಗೆ ಕೊಟ್ಟ ಈ ಒಳನೋಟದ ಪರಿಣಾಮವಾಗಿ, ಭೂವ್ಯಾಪಕವಾಗಿ ಸಾವಿರಾರು ಜನರು ಮೃತರ ಭಯ, ಪ್ರೇತವ್ಯವಹಾರ ಮತ್ತು ಪ್ರೇತವಿಧ್ಯೆಯೊಂದಿಗೆ ಸೇರಿರುವ ಕೀಳು ತರದ ಪದ್ಧತಿಗಳಿಂದ ಬಿಡುಗಡೆ ಹೊಂದಿದ್ದಾರೆ.

ಗಲಭೆಯ ಲೋಕದಲ್ಲಿ ಕ್ರೈಸ್ತ ನಡತೆ

12, 13. (ಎ) ದಾನಿಯೇಲ 11:32, 33ನ್ನು ವಿವರಿಸಿರಿ. (ಬಿ) “ಒಳನೋಟವುಳ್ಳವರು” ಕೊಟ್ಟ ತಿಳುವಳಿಕೆಗೆ ಆಧಾರವನ್ನೊದಗಿಸುವ ಕೆಲವು ಮೂಲ ಬೈಬಲ್‌ ಸತ್ಯಗಳು ಯಾವುವು?

12 ದೇವರ ಸೇವಕರು ಮಹತ್ವದ ನಾಲ್ಕನೆಯ ವಿಷಯವಾದ ತಾಟಸ್ಥ್ಯದ ಸಂಬಂಧದಲ್ಲಿ ಒಳನೋಟವನ್ನು ಪ್ರದರ್ಶಿಸುವರೆಂದು ದಾನಿಯೇಲ ಪ್ರವಾದಿ ಸೂಚಿಸಿದನು. ಲೋಕದ ಪ್ರಮುಖ ರಾಜಕೀಯ ಪಕ್ಷಗಳ ಮಧ್ಯೆ ಹೋರಾಟವನ್ನು ವಿವರವಾಗಿ ಹೇಳಿದ ಬಳಿಕ ದಾನಿಯೇಲ 11:32, 33 ಹೇಳುವುದು: “ನಿಬಂಧನೆ ದ್ರೋಹಿಗಳು ಅವನ ನಯನುಡಿಗಳಿಂದ ಕೆಟ್ಟುಹೋಗುವರು.” ಅಂದರೆ, ಉತ್ತರದ ನಿರಂಕುಶ ರಾಜನು, ಕ್ರೈಸ್ತರೆನಿಸಿಕೊಂಡರೂ ಲೋಕವನ್ನು ಪ್ರೀತಿಸಿ, ಅದರ ಒಪ್ಪಿಗೆ ಪಡೆದು ಹೀಗೆ, ಯೇಸು ಕ್ರಿಸ್ತನು ಸರ್ವಭೂಮಿಯನ್ನೇ ಆಳುವ ರಾಜ್ಯಕ್ಕೆ ಯೆಹೋವನು ಮಾಡಿರುವ ಒಡಂಬಡಿಕೆಯನ್ನು ತಿರಸ್ಕರಿಸುವವರನ್ನು ಧರ್ಮಭ್ರಷ್ಟತೆಗೆ ನಡಿಸುವನೆಂದು ಅರ್ಥ. ಆದರೆ ದಾನಿಯೇಲನು ಮುಂದುವರಿಸುವುದು: “ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು. ಜನರಲ್ಲಿ ಒಳನೋಟವುಳ್ಳವರು ಅನೇಕರಿಗೆ ವಿವೇಕ ಹೇಳುವರು.”

13 ನಮ್ಮ ಸುತ್ತಲಿರುವ ಅನೇಕ ಗೊಂದಲದ ಪರಿಸ್ಥಿತಿಗಳಲ್ಲಿ ವಿವೇಕದಿಂದ ವರ್ತಿಸಲು ಬೇಕಾಗುವ ಒಳನೋಟವು, ಮೂಲ ಬೈಬಲ್‌ ಸತ್ಯಗಳಿಗೆ ಕೊಡುವ ಮಾನ್ಯತೆಯ ಮೇಲೆ ಹೊಂದಿಕೊಂಡಿದೆ. ಯೆಹೋವನ ಮಾರ್ಗದರ್ಶನದಿಂದ ‘ನಂಬಿಗಸ್ತ ಆಳು’ ವರ್ಗವು ಈ ಸತ್ಯಗಳನ್ನು ವಿವೇಚಿಸಿದೆ. ಇವುಗಳಲ್ಲಿ ಒಂದು, ಯೇಸು ತಿಳಿಸಿದಂತೆ, ಪಿಶಾಚನಾದ ಸೈತಾನನು ಈ ಲೋಕದ ಅದೃಶ್ಯ ಅಧಿಪತಿ ಎಂಬುದೇ. (ಲೂಕ 4:5-8; ಯೋಹಾನ 12:31) ಈ ಸತ್ಯಕ್ಕೆ ಹೊಂದಿಕೆಯಾಗಿ, ಕೇವಲ ಒಂದು ಅಥವಾ ಇನ್ನೊಂದು ಪಕ್ಷವಲ್ಲ, “ಲೋಕವೆಲ್ಲವು [ಸತ್ಯ ಕ್ರೈಸ್ತ ಸಭೆಯ ಹೊರಗಿರುವ ಎಲ್ಲಾ ಜನರು] ಕೆಡುಕನ ವಶದಲ್ಲಿ ಬಿದಿದ್ದೆ” ಎಂದು 1 ಯೋಹಾನ 5:19 ಕೂಡಿಸಿ ಹೇಳುತ್ತದೆ. (ಪ್ರಕಟನೆ 12:9) ಮತ್ತು ತನ್ನ ಶಿಷ್ಯರು “ಲೋಕದವರಲ್ಲ” ಎಂದು ಯೇಸು ಹೇಳಿರುವುದರಿಂದ ಇದು ಅವರಿಂದ ಕ್ರೈಸ್ತ ತಾಟಸ್ಥ್ಯವನ್ನು ಕೇಳಿಕೊಳ್ಳುತ್ತದೆ.—ಯೋಹಾನ 17:16.

14. (ಎ) 1939 ರಲ್ಲಿ ಮತ್ತು 1941 ರಲ್ಲಿ ಯಾವ ಸಮಯೋಚಿತ ವಿಷಯಗಳಿಗೆ ಯೆಹೋವನ ಸೇವಕರ ಗಮನವನ್ನು ಸೆಳೆಯಲಾಯಿತು? (ಬಿ) ಯೆಹೋವನ ಸಾಕ್ಷಿಗಳು ವಿವೇಕದಿಂದ ವರ್ತಿಸುವಂತೆ ಇಂಥ ಒಳನೋಟ ಹೇಗೆ ಸಹಾಯ ಮಾಡಿದೆ?

14 ಆದುದರಿಂದ, ಯುರೋಪಿನಲ್ಲಿ 2ನೇ ಲೋಕ ಯುದ್ಧದ ಕಪ್ಪು ಮೋಡಗಳು ಕವಿಯಲಾಗಿ, ನವಂಬರ 1, 1939ರ ವಾಚ್‌ಟವರ್‌ ಕ್ರೈಸ್ತ ತಾಟಸ್ಥ್ಯದ ಪ್ರಶ್ನೆಯನ್ನು ಎತ್ತಿತೋರಿಸಿದ್ದು ಸಮಯೋಚಿತವಾಗಿತ್ತು. ಇದಕ್ಕೆ ಸಂಬಂಧಿಸಿದ ಇನ್ನೊಂದು ಮೂಲ ಸತ್ಯವು ವಿಶ್ವ ಪರಮಾಧಿಕಾರದ ಪ್ರಶ್ನೆಯ ಪ್ರಾಮುಖ್ಯತೆ ಮತ್ತು ಈ ವಿವಾದವನ್ನು ಬಗೆಹರಿಸುವುದರಲ್ಲಿ ಮೆಸ್ಸೀಯನ ರಾಜ್ಯಕ್ಕಿರುವ ಪಾತ್ರವಾಗಿತ್ತು. ಯೋಗ್ಯವಾಗಿಯೇ, 1941 ರಲ್ಲಿ ಈ ಪ್ರಶ್ನೆಯ ಕುರಿತು, ಅಮೆರಿಕದ ಮಿಸ್ಸೂರಿಯ ಸೆಂಟ್‌ ಲೂಯಿ ಎಂಬ ನಗರದಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸಮ್ಮೇಳನದಲ್ಲಿ ಭಾಷಣದ ಮೂಲಕ ಮತ್ತು ಮರುವರ್ಷ ದ ನ್ಯೂ ವರ್ಲ್ಡ್‌ ಎಂಬ ಪುಸ್ತಕದಲ್ಲಿ ಚರ್ಚಿಸಲಾಯಿತು. ಈ ವಿಭಜಿತ ಮತ್ತು ಹೋರಾಟದ ಲೋಕದಲ್ಲಿ ಇಂಥ ದಿವ್ಯ ಒಳನೋಟವು ಯೆಹೋವನ ಸೇವಕರುಗಳಿಗೆ ಎಂಥ ಸಂರಕ್ಷಣೆ ಒದಗಿಸಿದೆ! ಕ್ರೈಸ್ತ ಪ್ರಪಂಚದ ಧಾರ್ಮಿಕ ವ್ಯವಸ್ಥೆಯ, ಅವರು ಅಂತರ್ರಾಷ್ಟ್ರೀಯ ಹೋರಾಟಗಳಲ್ಲಿ ಮತ್ತು ಸರಕಾರಗಳನ್ನು ಉರುಳಿಸಲಿಕ್ಕಾಗಿ ಗೆರಿಲ್ಲಾ ಚಳುವಳಿಗಳಲ್ಲಿ ಸೇರಿಕೊಂಡಿರುವುದರಿಂದ ಚಿಧ್ರವಾಗಿರುವುದಾದರೂ, ಯೆಹೋವನ ಸಾಕ್ಷಿಗಳು ಎಲ್ಲಾ ದೇಶಗಳಲ್ಲಿ ಮಾನವ ಸಂತತಿಗಿರುವ ಏಕಮಾತ್ರ ನಿರೀಕ್ಷೆಯಾದ ದೇವರ ರಾಜ್ಯವನ್ನು ಸಾರುವುದರಲ್ಲಿ ತಮ್ಮನ್ನು ಅರ್ಪಿಸಿಕೊಂಡು ಐಕ್ಯತೆಯಿಂದ ಮುಂದುವರಿದಿದ್ದಾರೆ. ಯೇಸುಕ್ರಿಸ್ತನು ಮುಂತಿಳಿಸುತ್ತಾ, “ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ಆಗ ಅಂತ್ಯವು ಬರುವುದು” ಎಂದು ಹೇಳಿದ ಜೀವರಕ್ಷಣೆಯ ಕಾರ್ಯದಲ್ಲಿ ಅವರು ಮಗ್ನರಾಗಿದ್ದಾರೆ.—ಮತ್ತಾಯ 24:14.

ಬೈಬಲ್‌ ಪ್ರವಾದನೆಗಳ ನೆರವೇರಿಕೆ

15. ಯೆಹೋವನ ಸೇವಕರಿಗೆ ಒಳನೋಟ ಇದ್ದದ್ದೇಕೆ?

15 ಯೆಹೋವನ ಸಾಕ್ಷಿಗಳಿಗೆ ಇಂಥ ಒಳನೋಟವಿರುವದೇಕೆ? ಏಕೆಂದರೆ ಅವರಿಗೆ ದೇವರ ಲಿಖಿತ ವಾಕ್ಯದಲ್ಲಿ ಪೂರ್ಣ ವಿಶ್ವಾಸವಿರುವುದು ಮಾತ್ರವಲ್ಲ ಅವರು ಅದಕ್ಕೆ ವಿಧೇಯರಾಗುತ್ತಾರೆ ಮತ್ತು ಯೆಹೋವನ ಆತ್ಮವು ಅವರ ಮೇಲಿದೆ. ಇದು ಅವರು ಮಹತ್ವದ ಬೈಬಲ್‌ ಪ್ರವಾದನೆಗಳನ್ನು ತಿಳಿಯುವಂತೆ ಸಾಧ್ಯಮಾಡಿದೆ ಮತ್ತು ಇದೇ ನಾವು ಪರಿಗಣಿಸಲಿರುವ ಐದನೆಯ ವಿಷಯ.

16, 17. (ಎ) ಯೆಹೋವನ ಸಾಕ್ಷಿಗಳು ಉಪಯೋಗಿಸುವ ತಾರೀಕುಗಳು ಐಹಿಕ ಇತಿಹಾಸಗಾರರು ಕೊಡುವ ತಾರೀಕುಗಳಿಗಿಂತ ಕೆಲವು ಸಲ ಏಕೆ ಭಿನ್ನವಾಗುತ್ತವೆ? (ಬಿ) ಅರ್ತಷಸ್ತನ 20ನೇ ವರ್ಷ ಮತ್ತು ಬಬಿಲೋನ್ಯರು ಯೆರೂಸಲೇಮನ್ನು ನಾಶಮಾಡಿದ ಸಮಯದ ಸಂಬಂಧದಲ್ಲಿ ಬೈಬಲಿನ ಮೇಲೆ ಯೆಹೋವನ ಸಾಕ್ಷಿಗಳಿಗಿದ್ದ ಭರವಸೆ ಅವರಿಗೆ ಹೇಗೆ ಪ್ರಯೋಜನ ತಂದಿದೆ?

16 ಐಹಿಕ ಇತಿಹಾಸಗಾರರು ಕೆಲವು ಸಲ ಭೂಸಂಶೋಧನಾ ಶಾಸ್ತ್ರಜ್ನರು ಅಗೆದು ತೆಗೆದ ಮಣ್ಣಿನ ಘಟಕದ ತುಂಡುಗಳ ತರ್ಜುಮೆಯ ಮೇಲೆ ಆಧಾರಮಾಡಿಕೊಂಡು ಅರ್ತಷಸ್ತ ಲಾಂಜೀಮೆನೆಸ್‌ನ ರಾಜತ್ವದ ಪ್ರಥಮ ವರ್ಷವು ಸಾ.ಶ.ಪೂ. 464 ಎಂದೂ 2ನೇ ನೆಬೂಕದ್ನೆಚ್ಚರನ ರಾಜತ್ವದ ಮೊದಲನೆ ವರ್ಷವು ಸಾ.ಶ.ಪೂ, 604 ಎಂದೂ ತೀರ್ಮಾನಿಸಿದ್ದಾರೆ. ಇದು ಸತ್ಯವಾದರೆ, ಅರ್ತಷಸ್ತನ ಇಪ್ಪತ್ತನೆಯ ವರ್ಷವು ಸಾ.ಶ.ಪೂ. 445 ರಲ್ಲಿ ಆರಂಭವಾಗುವುದು ಮತ್ತು ಬಬಿಲೋನ್ಯರಿಂದ (ನೆಬುಕದ್ನೆಚ್ಚರನ ಆಳಿಕೆಯ 18ನೇ ವರ್ಷದಲ್ಲಿ) ಯೆರೂಸಲೇಮಿನ ನಾಶನವು ಸಾ.ಶ.ಪೂ. 587 ರಲ್ಲಾಗುವುದು. ಆದರೆ ಬೈಬಲ್‌ ವಿದ್ಯಾರ್ಥಿಯು ಪ್ರವಾದನೆಯ ನೆರವೇರಿಕೆಯನ್ನು ಗಣಿಸಲು ಈ ತಾರೀಕುಗಳನ್ನು ಉಪಯೋಗಿಸುವಲ್ಲಿ ಅವನು ತೀರಾ ಗಲಿಬಿಲಿಗೊಳ್ಳುವುದರಲ್ಲಿ ಸಂಶಯವಿಲ್ಲ.

17 ಭೂಸಂಶೋಧನಾ ಶಾಸ್ತ್ರಜ್ನರ ಬೈಬಲಿಗೆ ಸಂಬಂಧಪಟ್ಟ ಸಂಶೋಧನೆಗಳಲ್ಲಿ ಯೆಹೋವನ ಸಾಕ್ಷಿಗಳು ಆಸಕ್ತರಾಗಿದ್ದಾರೆ. ಆದರೆ ಈ ಸಂಶೋಧನೆಗಳ ಅರ್ಥವಿವರಣೆ ಬೈಬಲಿನ ಸ್ಪಷ್ಟ ಹೇಳಿಕೆಗಳಿಗೆ ವ್ಯತಿರಿಕ್ತವಾಗಿರುವಲ್ಲಿ, ಅದು ಕಾಲಗಣನಾ ಶಾಸ್ತ್ರ ಸಂಬಂಧವಾದದಿರ್ದಲಿ, ಇನ್ನಾವ ವಿಷಯವೇ ಆಗಿರಲಿ, ನಾವು ಪವಿತ್ರ ಶಾಸ್ತ್ರ ಹೇಳುವದನ್ನು ಭರವಸೆಯಿಂದ ಅಂಗೀಕರಿಸುತ್ತೇವೆ. ಇದರ ಪರಿಣಾಮವಾಗಿ, ಯೆಹೋವ ಸೇವಕರು, ಅರ್ತಷಸ್ತನ 20ನೇ ವರ್ಷದಲ್ಲಿ ಆರಂಭವಾದ ಪ್ರವಾದನಾ ಸಮಯಾವಧಿಯನ್ನು ಸಾ.ಶ.ಪೂ. 455 ರಿಂದ ಲೆಕ್ಕಮಾಡಬೇಕೆಂದೂ ಮತ್ತು ಹೀಗೆ, ದಾನಿಯೇಲ 9:24-27, ಸಾ.ಶ. 29ರ ಶರತ್ಕಾಲವನ್ನು, ಯೇಸು ಮೆಸ್ಸೀಯನಾಗಿ ಅಭಿಷಿಕ್ತನಾದ ಸಮಯವೆಂದು ತೋರಿಸುತ್ತದೆಂದೂ ದೀರ್ಘಕಾಲದಿಂದ ಗುರುತಿಸಿದ್ದಾರೆ.b ಇದೇ ಕಾರಣಕ್ಕಾಗಿ, ದಾನಿಯೇಲ 4ನೇ ಅಧ್ಯಾಯದ “ಏಳು ಕಾಲಗಳ” ಪ್ರವಾದನೆ, ಸಾ.ಶ.ಪೂ. 607-606 ರಿಂದ ಎಣಿಸಲಾರಂಭವಾಗುತ್ತದೆಂದೂ, ಅದು 1914ರ ಶರತ್ಕಾಲವನ್ನು ಯೇಸು ಸ್ವರ್ಗದಿಂದ ಆಳುವ ರಾಜನಾಗಿ ಸಿಂಹಾಸನಾರೂಢನಾದದ್ದನ್ನು ಮತ್ತು ಈ ಲೋಕ ಅಂತ್ಯಕಾಲವನ್ನು ಪ್ರವೇಶಿಸಿದ್ದನ್ನು ಸ್ಪಷ್ಟವಾಗಿ ತೋರಿಸುತ್ತದೆಂದೂ ಅವರು ಗ್ರಹಿಸಿದರು.c ಆದರೆ ಅವರು ಈ ಪ್ರವಾದನೆಗಳ ರೋಮಾಂಚಕ ನೆರವೇರಿಕೆಗಳನ್ನು, ಪವಿತ್ರಶಾಸ್ತ್ರದ ಪ್ರೇರಣೆಯಲ್ಲಿ ಭರವಸಹೀನರಾಗುತ್ತಿದ್ದರೆ, ಗ್ರಹಿಸುತ್ತಿದ್ದಿರುತ್ತಿಲ್ಲ. ಹೀಗೆ, ಅವರು ತೋರಿಸಿದ ಒಳನೋಟ, ಅವರ ದೇವರ ವಾಕ್ಯದ ಮೇಲಿನ ಭರವಸೆಯ ಮೇಲೆ ನೇರವಾಗಿ ಜತೆಗೂಡಿದೆ.

18. ಯೆಹೋವನ ಕರ್ತವ್ಯನಿಷ್ಟ ಸೇವಕರ ಆತ್ಮಿಕ ಸ್ಥಿತಿಯ ಕುರಿತು ಯೆಶಾಯ 65:13, 14 ಯಾವ ವಾಗ್ದಾನ ಕೊಡುತ್ತದೆ?

18 ತನ್ನ ಕರ್ತವ್ಯನಿಷ್ಟ ಸೇವಕರ ಆತ್ಮಿಕ ಸ್ಥಿತಿಯನ್ನು, ಪ್ರಸ್ತುತ ಜನಪ್ರಿಯವಾಗಿರುವ ವಿಷಯಗಳಿಗಾಗಿ ಶಾಸ್ತ್ರವನ್ನು ಒಡನೆ ಬದಿಗಿಡುವ ವ್ಯಕ್ತಿಗಳಿಗೆ ಮತ್ತು ಗುಂಪುಗಳಿಗೆ ಹೋಲಿಸುತ್ತಾ ಯೆಹೋವನು ಹೇಳುವುದು: “ಇಗೋ, ನನ್ನ ಸೇವಕರು ಊಟಮಾಡುವರು, ನೀವು ಹಸಿದಿರುವಿರಿ; ಇಗೋ, ನನ್ನ ಸೇವಕರು ಕುಡಿಯುವರು, ನೀವು ದಾಹಗೊಳ್ಳುವಿರಿ; ಇಗೋ, ನನ್ನ ಸೇವಕರು ಉಲ್ಲಾಸಗೊಳ್ಳುವರು, ನೀವು ಆಶಾಭಂಗ ಪಡುವಿರಿ; ಇಗೋ, ನನ್ನ ಸೇವಕರು ಹೃದಯಾನಂದದಿಂದ ಹರ್ಷದ್ವನಿಗೈಯುವರು, ನೀವು ಮನೋವ್ಯಥೆಯಿಂದ ಮೊರೆಯಿಟ್ಟು ಆತ್ಮಕ್ಲೇಶದಿಂದ ಗೋಳಾಡುವಿರಿ.”—ಯೆಶಾಯ 65:13, 14.

19. (ಎ) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಪ್ರಧಾನವಾಗಿ ಯಾವುದರ ಮೂಲಕ ಶಾಸ್ತ್ರದ ವಿವರಣೆ ನೀಡುತ್ತಾನೆ? (ಬಿ) ಆತ್ಮಿಕ ಆಹಾರದಿಂದ ಪೂರ್ಣ ಪ್ರಯೋಜನ ಪಡೆಯುವಂತೆ ಯಾವ ರೀತಿಯ ಅಧ್ಯಯನ ಕಾರ್ಯಕ್ರಮ ನಮಗೆ ಸಾಧ್ಯಮಾಡುವುದು?

19 ಈ ಸಂಕ್ಷಿಪ್ತ ಐತಿಹಾಸಿಕ ಪುನರ್ವಿಮರ್ಶೆ ತೋರಿಸಿರುವಂತೆ, ಯೆಹೋವನ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗವು ವಾಚ್‌ಟವರ್‌ ನ ಅಂಕಣಗಳ ಮೂಲಕ ಪ್ರಧಾನ ಶಾಸ್ತ್ರೀಯ ಸತ್ಯಗಳ ವಿವರಣೆಗಳನ್ನು ನಮಗೆ ಒದಗಿಸಿದೆ. ಆತ್ಮಿಕ ಆಹಾರವನ್ನು ಹಂಚಲು “ಆಳು” ವರ್ಗವು ಉಪಯೋಗಿಸುವ ಪ್ರಧಾನ ಉಪಕರಣ ಕಾವಲಿನಬುರುಜು ಆಗಿದೆ. ನೀವು ಅದರಿಂದ ಪೂರ್ತಿ ಪ್ರಯೋಜನ ಪಡೆಯುತ್ತಿದ್ದೀರೋ? ನೀವು ಪ್ರತಿ ಸಂಚಿಕೆಯನ್ನು ಒದುತ್ತೀರೋ? ಮತ್ತು ನಿಮ್ಮ ಅಧ್ಯಯನ ಕಾರ್ಯಕ್ರಮದಲ್ಲಿ ಉದಾಹರಿಸಿದರೂ ಎತ್ತಿಬರೆಯದಿರುವ ಶಾಸ್ತ್ರವಚನಗಳನ್ನು ಹುಡುಕುವುದು ಸೇರಿದೆಯೋ? ನೀವು ಅಭ್ಯಾಸಮಾಡಿದ ವಿಷಯವನ್ನು ಧ್ಯಾನಿಸಿ, ಅದಕ್ಕೆ ಗಣ್ಯತೆಯನ್ನು ಹೆಚ್ಚಿಸಿ, ಅದು ನಿಮ್ಮ ಮನೋಭಾವ, ಅಪೇಕ್ಷೆ, ದೈನಿಕ ಚಟುವಟಿಕೆ ಮತ್ತು ಜೀವನದ ಮೇಲೆ ಹೇಗೆ ಪರಿಣಾಮ ಬೀರಬೇಕೆಂದು ಯೋಚಿಸುವ ಹವ್ಯಾಸ ನಿಮಗಿದೆಯೇ? ನೀವು ಹೀಗೆ ಮಾಡುವುದು, ಯೆಹೋವನು ತಾನೇ ಕೊಟ್ಟಿರುವ ಶುದ್ಧ ಒಳನೋಟದ ಮೇಲೆ ಆಧರಿಸಿರುವ ನಿರ್ಣಯವನ್ನು ನೀವು ಮಾಡುವ ವಿಷಯದಲ್ಲಿ ಒಂದು ದೊಡ್ಡ ಭಾಗವಾಗಿರುವುದು. (w89 3/15)

[ಅಧ್ಯಯನ ಪ್ರಶ್ನೆಗಳು]

a  ಶರೀರದಲ್ಲಿ ಎಂದಿಗೂ ಸಾಯುವುದಿಲ್ಲವೆಂದು ನಂಬಲು ಸೈತಾನನು ಹವ್ವಳನ್ನು ನಡಿಸಿದನು. (ಆದಿಕಾಂಡ 3:1-5) ಹೀಗೆ, ಮಾನವರಲ್ಲಿ, ಅವರ ಶರೀರ ಸತ್ತಬಳಿಕ ಜೀವಿಸುವ ಅಮರ ಆತ್ಮವಿದೆ ಎಂಬ ಸುಳ್ಳು ಭೋದನೆಯನ್ನು ಸೈತಾನನು ಪ್ರಾರಂಭಿಸಿದ್ದು ಸಮಯಾನಂತರವೇ.—ವಾಚ್‌ಟವರ್‌ ಸಪ್ಟಂಬರ 15, 1957, ಪುಟ 575 ನೋಡಿ.

b  ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌, ಸಂಪುಟ 2, ಪುಟ 614-16, 899-901.

c  “ಲೆಟ್‌ ಯುವರ್‌ ಕಿಂಗ್‌ಡಮ್‌ ಕಮ್‌,” ಪುಟ 186-9.

ನಿಮಗೇನು ಜ್ಞಾಪಕದಲ್ಲಿದೆ?

◻ ದೇವರು ತ್ರಯೈಕ್ಯನೋ, ಮತ್ತು ನಿಮ್ಮ ಉತ್ತರ ಹಾಗೇಕೆ?

◻ ದೇವರ ನಾಮ ಸಮರ್ಪಕವಾಗಿ ಎಲ್ಲಿ ಇರಬೇಕಾಗಿದೆ?

◻ ಮಾನವಾತ್ಮ ಅಮರವೋ?

◻ ಗೊಂದಲದ ಲೋಕದ ಕ್ರೈಸ್ತ ನಡತೆಯ ಕುರಿತು ಯೆಹೋವನು ಯಾವ ಒಳನೋಟವನ್ನು ಕೊಟ್ಟಿದ್ದಾನೆ?

◻ ಬೈಬಲ್‌ ಪ್ರವಾದನಾ ನೆರವೇರಿಕೆಯ ಕುರಿತು ಯೆಹೋವನ ಸಾಕ್ಷಿಗಳು ಯಾವ ಒಳನೋಟವನ್ನು ಪಡೆದಿದ್ದಾರೆ?

[ಪುಟ 8 ರಲ್ಲಿರುವ ಚಿತ್ರಗಳು]

ಕಾವಲಿನಬುರುಜು ಪತ್ರಿಕೆಯ ಮೂಲಕ “ನಂಬಿಗಸ್ತನೂ ವಿವೇಕಿಯೂ ಆದ ಆಳು” ಶಾಸ್ತ್ರವಚನಗಳ ಅರ್ಥ ಮತ್ತು ನಮ್ಮ ದಿನಗಳಿಗೆ ಅವುಗಳ ಅನ್ವಯದ ಕುರಿತು ಒಳನೋಟವನ್ನು ಒದಗಿಸುತ್ತಾನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ