ವಾರ್ತೆಗಳ ಒಳನೋಟ
ರೋಗಗ್ರಸ್ಥ ವಿದ್ಯೆ
ಕಳೆದ ಹತ್ತು ವರ್ಷಗಳಿಂದ ನ್ಯೂಯೋರ್ಕ್ ಪ್ರಾಂತ್ಯದ ಒಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮೂರು ಕಾಲೇಜು ಪ್ರಶಸ್ತಿಗಳನ್ನು ಸಂಪಾದಿಸ ಶಕ್ತರಾಗುವಂತೆ ಮಾನವ ಲೈಂಗಿಕ ವಿಷಯಾಸಕ್ತಿಗಳ ಮೇಲೆ ಪಾಠಗಳನ್ನು ನೀಡುತ್ತದೆ. ವಿದ್ಯಾರ್ಥಿಗಳು “ಕ್ಷೇತ್ರ ಸಂಚಾರ” ಗಳಿಗಾಗಿ ಸೂಳೆಗಳೊಡನೆ ಮಾತಾಡಬೇಕಾಗುತ್ತದೆ, ದ್ವಿಲಿಂಗಿ ಸ್ವೇಚ್ಛಾಚಾರದ ಪಾನಶಾಲೆಗಳಿಗೆ ಭೇಟಿ ನೀಡಬೇಕಾಗುತ್ತದೆ ಯಾ ಸಮುದ್ರ ದಂಡೆಗಳಲ್ಲಿರುವ ನಗ್ನರನ್ನು ವಿಚಾರಿಸ ಬೇಕಾಗುತ್ತದೆ” ಎಂದು ನ್ಯೂಯೋರ್ಕ್ ಪೋಸ್ಟ್ ಅಂಕಣಗಾರನೊಬ್ಬನು ವರದಿಸುತ್ತಾನೆ. ಶಾಲಾ ಪಠ್ಯ ಪುಸ್ತಕದಲ್ಲಿ ಮೌಖಿಕ ಸಂಭೋಗದಲ್ಲಿ ತೊಡಗುವ ಕುರಿತು ಸವಿವರವಾದ ಸೂಚನೆಗಳನ್ನು ಕೊಡಲಾಗಿದೆ ಮತ್ತು ಮುಷ್ಟಿಮೈಥುನದ ಹವ್ಯಾಸವನ್ನು ಪ್ರೋತ್ಸಾಹಿಸುತ್ತದೆ. ಪೋಸ್ಟ್‌ಗನುಸಾರ ತರಗತಿಯ ಪಠ್ಯಕ್ರಮದ ಭಾಗವಾಗಿ, “ಲೈಂಗಿಕ ಸಂಭೋಗದಲ್ಲಿ ತೊಡಗಿದ ದಂಪತಿಗಳು” ಮತ್ತು “ಪುರುಷ ಮತ್ತು ಸ್ತ್ರೀ ಅಂಗರಚನೆಗಳ ಸಮೀಪದ ಚಿತ್ರಣಗಳಿರುವ” ಫಿಲ್ಮನ್ನು ತೋರಿಸುವುದು ಸೇರಿದೆ. ಶುದ್ಧತೆ ಮತ್ತು ಸದ್ಗುಣದ ಸಹಜಕ್ರಮದಿಂದ ಇನ್ನೆಷ್ಟು ದೂರ ತೆರಳ ಸಾಧ್ಯವಿದೆ?—ಫಿಲಿಪ್ಪಿ 4:8,9.
ಜೀವದ ವಾಸ್ತವಂಶಗಳನ್ನು ತಿಳಿಯುವ ಮತ್ತು ಅವುಗಳ ಕಡೆಗೆ ಸ್ವಸ್ಥ ಮನೋಭಾವಗಳಿರುವ ಜರೂರಿಯ ಎಳೆಯರಿಗಿರುವುದಾದರೂ, ಅಂತಹ ಉಪದೇಶಗಳನ್ನು ಒದಗಿಸುವ ಪ್ರಥಮ ಜವಾಬ್ದಾರಿಕೆಯು ಇರುವುದು ಹೆತ್ತವರಿಗೆ. (ಜ್ಞಾನೋಕ್ತಿ 22:6) ಮದುವೆಯ ಹೊರಗಿನ ಲೈಂಗಿಕತೆಯನ್ನು ಪ್ರೋತ್ಸಾಹಿಸುವ ಮತ್ತು ಅಶ್ಲೀಲ ಫಿಲ್ಮ್‌ಗಳನ್ನು ನೋಡಲು ಮತ್ತು ಸಲಿಂಗಕಾಮ ಹಾಗೂ ಸೂಳೆತನವನ್ನು ಅನ್ವೇಶಿಸಲು ವಿದ್ಯಾರ್ಥಿಗಳನ್ನು ಅವಶ್ಯಪಡಿಸುವ ಯಾವುದೇ ಶಾಲಾ ಪಠ್ಯಗಳು ದೇವರ ಸತ್ಯಾರಾಧಕರಿಗೆ ಖಂಡಿತವಾಗಿಯೂ ಸ್ವೀಕರಣೀಯವಲ್ಲ. ಹಾದರ, ವ್ಯಭಿಚಾರ, ಮತ್ತು ಸಲಿಂಗ ಕಾಮವನ್ನು ನಡಿಸುವವರನ್ನು “ತುಚ್ಛವಾದ ಕಾಮಾಭಿಲಾಶೆಯುಳ್ಳ” ವ್ಯಕ್ತಿಗಳೆಂದೂ “ಅಸಹ್ಯವಾದುದನ್ನು” ನಡಿಸುವವರೆಂದೂ ಬೈಬಲ್ ಸ್ಪಷ್ಟವಾಗಿ ವರ್ಣಿಸುತ್ತದೆ. ಅಂತಹ ಸಂಗತಿಗಳ ಕುರಿತು ಬೈಬಲ್ ಅಜ್ಞಾಪಿಸುವುದು: “ಜಾರತ್ವದಿಂದ ದೂರವಿರ್ರಿ”. ಇನ್ನೂ ಹೆಚ್ಚಾಗಿ ಅದನ್ನುವುದು: “ಜಾರತ್ವದ. . . . ಸುದ್ಧಿಯಾದರೂ ನಿಮ್ಮಲ್ಲಿ ಇರಬಾರದು”.—ರೋಮಾಪುರ 1;24-32; 1ಥೆಸಲೋನಿಕ 4:3; ಎಫೆಸ 5:3,5; ಗಲಾತ್ಯ 5:19,21.
ಒಂದು ಸಟೆ ನಿರೀಕ್ಷೆ
ಮರಣದಲ್ಲಿ “ಅಧಿಕ ವ್ಯಕ್ತಿಗತ ಸಾಗಣೆಯನ್ನು” ಹುಡುಕುವ ವ್ಯಕ್ತಿಗಳು ಈಗ ಸಾಮಾನ್ಯವಾದ ಹೂಣಿಡುವಿಕೆಯ ಬದಲು ಸುವಾಸಿತ ಪರಿಷ್ಕೃತ ಶವ ಜೋಪಾಸನೆಯ ಪ್ರಾಚೀನ ಪದ್ಧತಿಯ ಪರವಾಗಿದ್ದಾರೆಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿಸಿದೆ. ಕನಿಷ್ಟ ಬೆಲೆಯೆಂದರೆ ಸುಮಾರು ಒಂದು ಲಕ್ಷ ರೂಪಾಯಿಗೆ “ದ್ರಾಕ್ಷಾರಸ. ಸುವಾಸನೆಯ ಮೂಲಿಕೆ ಮತ್ತು ರಾಸಾಯನಿಕ ಪದಾರ್ಥಗಳಲ್ಲಿ ಎರಡು ತಿಂಗಳಷ್ಟು ಕಾಲ ಒದ್ದೆಮಾಡಿ, ಸುಗಂಧ ಉಣ್ಣೆಗಳಿಂದ ಲೇಪ ಹಚ್ಚಿ. ನಾರಗಸೆಯ ಪೊರೆಯಲ್ಲಿ ಸುತ್ತಿ ಫೈಬರ್ ಗ್ಲಾಸ್, ಪೊಲಿಥಿನ್ ಮತ್ತು ಪ್ಲಾಸ್ಟರ್ ಮೂಲಕ ಜೋಪಾಸನೆ ಮಾಡುತ್ತಾರೆ” ಎಂದು ಜರ್ನಲ್ ಹೇಳುತ್ತದೆ. ಬಂಗಾರದ ಲೇಪ ಯಾ ದೇಹ ಆಕಾರಕ್ಕೆ ರೂಪಿಸಲ್ಪಟ್ಟ ಕಂದು ಕಂಚಿನ ರತ್ನಪೋಷಿತ ಸಂಪುಟವೇ ಮುಂತಾದಕ್ಕೆಲ್ಲಾ 15 ಕೋಟಿ ರೂಪೈಗಳಷ್ಟು ಏರಬಹುದು.
ಆದರೂ, ಸುಗಂಧ ದ್ರವ್ಯಗಳಿಂದ ಗಿರಾಕಿಗಳನ್ನು ಆಕರ್ಶಿಸುವುದು ಕೇವಲ ಏಕಮಾತ್ರ ಸಂಗತಿಯಲ್ಲ. ಒಬ್ಬ ವ್ಯಕ್ತಿಯಂದದ್ದು: “ನ್ಯಾಯ ತೀರ್ಪಿನ ದಿನದಲ್ಲಿ ಕ್ರಿಸ್ತನು ನಮ್ಮನ್ನು ಸಮಾಧಿಯಿಂದ ಮೇಲಕ್ಕೆ ಕರೆಯುತ್ತಾನೆಂದು ಕೆಲವರು ಹೇಳುವುದು ನಿಜವಾದರೆ, ನನಗೆ ಸಾಧ್ಯವಾದಷ್ಟು ಅತ್ಯುತ್ತಮ ರೂಪದಲ್ಲಿರಲು ನಾನು ಬಯಸುತ್ತೇನೆ.”
ಜೀವನಾಂತರದಲ್ಲಿ ಆತ್ಮವು ಪುನಃ ಹಿಂತೆರಳುವಂತೆ ಶರೀರವನ್ನು ರಕ್ಷಿಸಿಡಬೇಕೆಂದು ನಂಬುತ್ತಿದ್ದ ಪ್ರಾಚೀನ ಐಗುಪ್ತರಂತೆ. ಇಂತಹ ಜನರು ಸಾಮಾನ್ಯವಾಗಿ ಆತ್ಮದ ಅಮರತ್ವದ ಬೋಧನೆಯ ಮೇಲೆ ತಮ್ಮ ನಿರೀಕ್ಷೆಯನ್ನಿಡುತ್ತಾರೆ. ನ್ಯಾಯ ತೀರ್ಪಿನ ದಿನದಲ್ಲಿ ನೀತಿವಂತರ ಮತ್ತು ದುಷ್ಟರ ದೇಹಗಳು ಅವರವರ ಆತ್ಮಗಳೊಂದಿಗೆ ಸ್ವರ್ಗೀಯ ಸುಖಾನುಭವಕ್ಕಾಗಲಿ ಯಾ ನರಕಾಗ್ನಿ ದಂಡನೆಗಾಗಲಿ ಜತೆಗೂತ್ತದೆಂದು ಧಾರ್ಮಿಕ ಮುಖಂಡರು ಕಲಿಸುತ್ತಾರೆ.
ಆದರೂ ಅಂತರ್ಗತವಾಗಿರುವ ಅಮರತ್ವದ ಭೋದನೋಯು ಬೈಬಲಿನಲ್ಲಿ ಕಲಿಸಲ್ಪಟ್ಟಿರುವುದಿಲ್ಲ. ಬದಲಾಗಿ, ಆತ್ಮವು ಮರ್ತ್ಯವೆಂದು ಬೈಬಲು ತಲಿಸುತ್ತದೆ. “ಪಾಪ ಮಾಡುವ ಆತ್ಮವು ತಾನೇ ಸಾಯುವುದು.” (ಯೆಹೆಜ್ಕೇಲ 18:4) ಈ ರೀತಿ ಅಮರತ್ವ ಆತ್ಮದ ಪಾರಾಗುವಿಕೆಯ ಮೇಲೆ ಭಾವೀ ಜೀವಿತದ ಬೈಬಲ್ ನಿರೀಕ್ಷೆ ಆಧರಿತವಾಗಿದೆ, ಅವನ ಸ್ವಂತ ಜೀವಿತ ನಮೂನೆಯೊಂದಿಗೆ ಸಾಯುವಾಗ ಇದ್ದ ಅದೇ ಗುರುತುಗಳು ಮತ್ತು ಜ್ಞಾಪಕಗಳಿರುವ ಯೋಗ್ಯ ದೇಹದೊಂದಿಗೆ ದೇವರು ಪುನರುತ್ಥಾನಗೊಳಿಸುವದರ ಮೇಲೆ ಆತುಕೊಂಡಿದೆ. ಸರಿಯಾಗಿಯೇ, ಯೇಸುವು ಹೇಳಶಕ್ತನಾದದ್ದು: “ಜ್ಞಾಪಕ ಸಮಾಧಿಯಲ್ಲಿರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28,29.
“ಈ ಲೋಕದ ಭಾಗವಲ್ಲ”
ವಾಚ್‌ಟವರ್ ಬೈಬಲ್ ಎಂಡ್ ಟ್ರಾಕ್ಟ್ ಸೊಸೈಟಿಯ ಕಳೆದ ವರ್ಷ 19 ಮಾಳಿಗೆಗಳ ವಸತಿ ಕಟ್ಟಡದ ಕಟ್ಟುವಿಕೆಗಾಗಿ ವಲಯ ವರ್ಗಣೆಯನ್ನು ವಿನಂತಿಸಲು, ನ್ಯೂಯಾರ್ಕ್ ನಗರದ ಬೋರ್ಡ್ ಆಫ್ ಎಸ್ಟಿಮೇಟ್‌ನ್ನು ಭೇಟಿಯಾಯಿತು. ಬೋರ್ಡ್ ಸದಸ್ಯರಲ್ಲಿ ಅಧಿಕಾಂಶ ಸಂಖ್ಯೆಯವರು ಈ ಯೋಜನೆಗೆ ವಿರೋಧಿಸಿದಾಗ, ನ್ಯೂಯೋರ್ಕ್ ನಗರದ ಮೇಯರ್ ಎಡ್ವರ್ಡ್ ಕೊಚ್, ವಲಯ ಬದಲಾವಣೆಯ ಪರವಾಗಿ ಎರಡು ಮತಗಳನ್ನು ಹಾಕಿದರು. ತನ್ನ ತೀರ್ಮಾನದ ಆಧಾರವಾಗಿ ವಿವರಣೆ ನೀಡುತ್ತಾ ಒಂದು ಹೇಳಿಕೆಯಲ್ಲಿ ಮೇಯರ್ ಕೊಚ್ ಅವಲೋಕಿಸಿದ್ದು: “ಯೆಹೋವನ ಸಾಕ್ಷಿಗಳನ್ನು. . . . ಒಳ್ಳೇ ನೆರೆಯವರೆಂದೇ ಪರಿಗಣಿಸ ಸಾಧ್ಯವಿದೆ. . . . ಮತ್ತು ನಾನವರನ್ನು ಅತ್ಯಂತ ಮಾನ್ಯರೆಂದೆಣಿಸುತ್ತೇನೆ.” ಅನಂತರ ಅವರು ಕೂಡಿಸಿದ್ದು: “ಧಾರ್ಮಿಕ ಕಾರಣಗಳಿಗಾಗಿ ಅವರು ಯಾವುದೇ ಚುನಾವಣೆಯಲ್ಲಿ ಮತಹಾಕುವದಿಲ್ಲವೆಂದು ನನಗೆ ತಿಳಿಸಲಾಗಿದೆ ಮತ್ತು ಈ ಯೋಜನೆಯಲ್ಲಿರುವ ಸಮಸ್ಯೆಗಳಲ್ಲಿ ಅದೊಂದಾಗಿರಬಹುದು ಯಾಕಂದರೆ ಆರಿಸಲ್ಪಟ್ಟ ಅಧಿಕಾರಿಗಳು ಎಲ್ಲಿ ಅಧಿಕ ಸಂಖ್ಯಾತ ಜನರಿಂದ ಒತ್ತಾಯಗೊಳಗಾಗುತ್ತಾರೋ ಅಲ್ಲಿ, ಮತದಾನ ಮಾಡದವರು ವಾಗ್ವಿವಾದವಿರುವ ವಿಷಯದಲ್ಲಿ ಜಯಗಳುಸುವುದು ಬಹಳ ಕಷ್ಟ.”
ಅಷ್ಟೊಂದು ವಿರೋಧಗಳ ಎದುರಿನಲ್ಲಿಯೂ ಮೇಯರ್ ಕೋಚ್‌ರು ತೋರಿಸಿದ ಧೈರ್ಯ ಮತ್ತು ನಿಷ್ಪಕ್ಷಪಾತಕ್ಕಾಗಿ ಅವರನ್ನು ಶ್ಲಾಘಿಸಬೇಕಾಗಿದೆ. ರಾಜಕೀಯ ಚುನಾವಣೆಗಳಲ್ಲಿ ಯೆಹೋವನ ಸಾಕ್ಷಿಗಳು ಪಾಲಿಗರಾಗಿದ್ದಲ್ಲಿ ವಿಷಯಗಳು ಭಿನ್ನವಾಗಿರ ಸಾಧ್ಯತೆ ಇತ್ತಾದರೂ, ರಾಜಕೀಯ ವಿವಾದಗಳಲ್ಲಿ ಅವರ ತಾಟಸ್ಥ್ಯ ನಿಲುವಿನಿಂದ —ಬಹುಮಾನವಷ್ಟೇ ಮಹತ್ತಾಗಿರಲಿ, ಅವರನ್ನು ಬದಲಿಸ ಸಾಧ್ಯವಿಲ್ಲ. ಸತ್ಕ್ರೈಸ್ತನಾದ ಅವರ ಸ್ಥಾನವು ಸ್ಪಷ್ಟವಾಗಿದೆ. ಯೇಸುವಂದದ್ದು: “ನಾನು ಲೋಕದ ಭಾಗವಲ್ಲದಿರುವ ಪ್ರಕಾರ ಇವರೂ ಲೋಕದ ಭಾಗವಲ್ಲ:”—ಯೋಹಾನ 17:16. (w89 2/15)