ನೀವು ಹೊಸ ವಿಚಾರಗಳಿಗೆ ತೆರೆದಿರುವಿರೋ?
ಯಾವುದೇ ಹೊಸ ವಿಚಾರಕ್ಕೆ ಕೆಲವು ಜನರು ತಮ್ಮ ಮನಸ್ಸುಗಳನ್ನು ಮುಚ್ಚುತ್ತಾರೆ. ಅವರ ದೃಷ್ಟಿಕೋನದಿಂದ ಅದು ಭಿನ್ನವಾಗಿರುವುದರಿಂದ ಅದನ್ನವರು ನಿರಾಕರಿಸುತ್ತಾರೆ. ಉದಾಹರಣೆಗೆ, ಡೆನ್ಮಾರ್ಕಿನಲ್ಲಿ ಒಬ್ಬ ನಿರ್ದಿಷ್ಟ ಹೆಂಗಸು ಹೆಮ್ಮಟ್ ಎಂಬ ವಾರಪತ್ರಿಕೆಗೆ ಬರೆದು ಹೇಳಿದ್ದು: “ನಮ್ಮ ಬಾಗಲಲ್ಲಿ ನಾವು ಯೆಹೋವನ ಸಾಕ್ಷಿಗಳಿಂದ ಏಕಪ್ರಕಾರವಾಗಿ ಬೆನ್ನಟ್ಟಲ್ಪಡುತ್ತೇವೆ. ಅವರು ಭಯಂಕರವಾಗಿ ನನಗೆ ಕಿರಿಕಿರಿಯನ್ನುಂಟುಮಾಡುತ್ತಿದ್ದಾರೆ. ಆದರೆ ಅವರು ನನ್ನನ್ನು ಬಿಟ್ಟುಹೋಗುವಂತೆ ಏನು ಮಾಡಲಿ ಎಂದು ನನಗೆ ತೋಚುತ್ತಿಲ್ಲ. . . . ಅವರ ಈ ಕಾಟವನ್ನು ಕಾನೂನು ಬದ್ಧವಾಗಿ ನಿಶೇಧಿಸಲಾಗುವುದಿಲ್ಲವೇ?”
19 ಶತಕದ ಮಧ್ಯಭಾಗದಲ್ಲಿ ಜಪಾನೀಯರಿಗೆ ಪಾಶ್ಚಿಮಾತ್ಯರು ಅವರ ದ್ವಾರ ತಟ್ಟುವದು ಕೂಡ “ಕಾಟ” ವಾಗಿ ಕಂಡಿತ್ತು. ಅವರ ಅನೇಕರ ದೃಷ್ಟಿಯಲ್ಲಿ ತಾನಾಗಿ ಒಳಗೆ ಬರುವವರ ಯಾವುದೇ ಸಂಗತಿ ನಿಷ್ಪ್ರಯೋಜಕ, ಯಾ ಕೆಲವೂಮ್ಮೆ ಹಾನಿಕಾರಕವೆಂದು ತೋರುತ್ತದೆ. ಒಂದು ಪೌರ್ವಾತ್ಯ ಗಾದೆಯು ಹೇಳುವಂತೆ “ಸಂದೇಹವು ಕತ್ತಲೆಯಲ್ಲಿ ವಿಕಾರರೂಪದ ಪ್ರಾಣಿಗಳನ್ನು ಸೃಷ್ಟಿಸುತ್ತದೆ.” ಕಾಮಡೋರ್ ಪೆರ್ರಿಯನ್ನು ಚಿತ್ರಿಸಿರುವ ಅನೇಕ ರೇಖಾಚಿತ್ರಗಳಲ್ಲಿ ಅನೇಕ ಜಪಾನೀಯರ ಮನಸ್ಸಿನ ನೋಟವು ಉತ್ತಮವಾಗಿ ನಿರೂಪಿಸಲ್ಪಟ್ಟಿದೆ. ಉಳಿದಿರುವ ಸುಮಾರು 50 ಚಿತ್ರಗಳಲ್ಲಿ ಕೇವಲ 2 ಯಾ 3 ಅಮೇರಿಕದ ನೌಕಾದಳದ ಸಾಮಾನ್ಯ ಅಧಿಕಾರಿಯಾಗಿ ಅವನನ್ನು ಚಿತ್ರಿಸಿವೆ. ಬೇರೆಯವುಗಳಲ್ಲಿ ಉದಮ್ದೂಗಿನ ಪಿಶಾಚಿ ಯಾ ಬಿಳಿಚಿಕೊಂಡ ವಿಕಾರರೂಪದವನಾಗಿ, ಇಲ್ಲಿ ತೋರಿಸಲ್ಪಟ್ಟಂತೆ ಅವನನ್ನು ನಿರೂಪಿಸಿದ್ದಾರೆ.
ತಮ್ಮ ದೇಶವನ್ನು ತೆರೆದಿಟ್ಟ ಮೇಲೆ ಬಿಚ್ಚು ಮನಸ್ಸಿನ ಜಪಾನೀಯರು ವಿದೇಶಿಯರು ಅನಾಗರಿಕಿರಲ್ಲವೆಂದು ತಿಳಿಯಶಕ್ತರಾದರು. ಅಮೇರಿಕಕ್ಕೆ ಹೋದ ಮೊದಲ ಜಪಾನೀಯ ತಂಡದ ಕೆಲವರ ವಿಷಯದಲ್ಲಾದರೋ, ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಮೊದಲ ಬಾರಿ ಅವರು ನೋಡಿದಾಗ ಅವರ ಕಣ್ಣುಗಳ ಪೊರೆಯು ಕಳಚಿಬಿದ್ದಂತೆ ಆಗಿತ್ತು. ಜಪಾನೀಯ ದೃಷ್ಟಿಕೋನದಲ್ಲಿ ಅಮೇರಿಕಾನರು ಎಷ್ಟು ಅಸಭ್ಯರು ಎಂದು ಉನ್ನತ ಅಧಿಕಾರಿಗಳು ದೂರುತ್ತಾ ಇದ್ದರು. ಆದರೆ ಎಳೆಯ ಸಂತತಿಯವರು ಹೊಸ ಸಂಸ್ಕೃತಿಯ ಹೆಚ್ಚು ಸಮತೂಕದ ತೀರ್ಪನ್ನು ಮಾಡಿದರು.
ಒಬ್ಬ ಉನ್ನತ ಅಧಿಕಾರಿಯ 19 ವಯಸ್ಸಿನ ಪರಿಚಾರಕನು ಅನಂತರ ಬರೆದದ್ದು: “70 ಜಪಾನೀಯ ಪ್ರತಿನಿಧಿಗಳ ಈ ತಂಡದ ಹೆಚ್ಚಿನವರು (ಅಮೇರಿಕನರನ್ನು) ದ್ವೇಷಿಸಿದರು ಇಲ್ಲವೇ ಮುನಿದರು. ಆದಾಗ್ಯೂ, ನೈಜಸ್ಥಿತಿಗಳನ್ನು ಕಂಡಾಗ, ನಮ್ಮಲ್ಲಿ ವೈಯಕ್ತಿಕವಾಗಿ ಭಾವಿಸಿದ್ದೇನಂದರೆ ಅವರು ತಪ್ಪೆಣಿಸಿದ್ದಾರೆ ಮತ್ತು ಅಂತಹ ಭಾವನೆಗಳನ್ನು ತೋರ್ಪಡಿಸಿದ್ದಕ್ಕಾಗಿ ಬೇಸರಿಸಿದೆವು. ವಿದೇಶಿಯರು ನಾಯಿಗಳು ಯಾ ಕುದುರೆಗಳಿಗಿಂತ ನೀಚ ಮಟ್ಟದವರೆಂದು ಪರಿಗಣಿಸುವುದು ಮತ್ತು ಅವಮಾನಿಸುವುದು ನಾವು ನಿಷ್ಕರುಣಿಗಳೆಂದೂ ಅನ್ಯಾಯಿಗಳೆಂದೂ ಕುಪ್ರಸಿದ್ಧತೆ ಪಡೆಯಲು ಅವರಿಗೆ ಕಾರಣಕೊಡುವುದು.” ಈ ಎಳೆಯ ಪರಿಚಾರಕನೋಪಾದಿ, ಹೊಸ ವಿಚಾರಗಳ ಕಡೆಗೆ ಪೂರ್ವಕಲ್ಪಿತ ಅಬಿಪ್ರಾಯರಹಿತ ಮನೋಭಾವದವರಾಗಿದ್ದು ನೀವು ತೆರೆದ ಮನಸ್ಸುಳ್ಳವರೋ?
ಬೆರೋಯದವರ ಮಾದರಿ
ಮೊದಲ ಶತಮಾನದಲ್ಲಿ ಅನೇಕ ಯೆಹೂದ್ಯರು ಕ್ರೈಸ್ತ ಉಪದೇಶಿಗಳೆಡೆಗೆ ಅವಿವೇಚನೆಯ ಪೂರ್ವಕಲ್ಪಿತ ಮನೋಭಾವ ತೋರಿಸಿದ್ದರು. ಕೆಲವೂಂದು ರೀತಿಗಳಲ್ಲಿ ಇದು ಹೊರಗಿನ ಲೋಕದ ವಿರುದ್ದ ಜಪಾನೀಯರ ಏಕಾಂತತೆಯ ಪೂರ್ವಾಗ್ರಹ ಪೀಡಿತಕ್ಕೆ ಹೋಲಿಕೆಯಾಗುತಿತ್ತು. “ಎಲ್ಲೆಲ್ಲಿಯೂ ಕ್ರೈಸ್ತತ್ವಕ್ಕೆ ವಿರುದ್ಧವಾಗಿ ಮಾತಾಡುತ್ತಾರೆ” ಎಂದು ಪ್ರಾಚೀನ ರೋಮಿನ ಯೆಹೂದ್ಯರು ವಾದಿಸಿದರು. (ಅ. ಕೃತ್ಯಗಳು 28:22) ಥೆಸಲೋನಿಕದಲ್ಲಿದ್ದ ನಿರ್ಧಿಷ್ಟ ಕ್ರೈಸ್ತರ ಕುರಿತು ಪೂರ್ವಾಗ್ರಹ ಪೀಡಿತ ಯೆಹೂದ್ಯರು ಕೂಗಿದ್ದು: “ಲೋಕವನ್ನು ಅಲ್ಲಕಲ್ಲೋಲ ಮಾಡಿದ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ.”—ಅ.ಕೃತ್ಯಗಳು 17:6.
ಆದಾಗ್ಯೂ ಅವರ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಹಿಮ್ಮೆಟ್ಟಿಸಲು ಇಚ್ಚಿಸಿದ ಜನರು ಅಲಿದ್ದರು. ಉದಾಹರಣೆಗೆ, ಬೆರೋಯದ ನಿವಾಸಿಗಳು ಅಪೋಸ್ತಲ ಪೌಲ ಮತ್ತು ಅವನ ಸಂಗಾತಿ ಸೀಲನಿಂದ ಸಾರಲ್ಪಟ್ಟ ಸುವಾರ್ತೆಗೆ ಹೇಗೆ ಪ್ರತಿವರ್ತಿಸಿದರು? ಬೆರೋಯದವರ ಕುರಿತಾಗಿ ಬೈಬಲ್ ಲೇಖಕ ಲೂಕನು ಹೇಳಿದ್ದು: “ಆ ಸಭೆಯವರು ಥೆಸಲೋನಿಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು.” (ಅ. ಕೃತ್ಯಗಳು 17:11) ಬೆರೋಯದವರಂತೆ ನೀವೂ “ಸದ್ಗುಣ” ಉಳ್ಳವರೋ?
ಮಸಾಜಿಯ ವಿಷಯವನ್ನು ದಯಮಾಡಿ ಗಮನಿಸಿರಿ. ಒಂದು ಸಮಯದಲ್ಲಿ, ಕ್ರೈಸ್ತತ್ವದ ಕಡೆಗೆ ಬಲವಾದ ವಿರೋಧವು ಅವನಿಗಿತ್ತು. ಜಪಾನಿನ ತೆರೆಯುವಿಕೆಯ ಕಡೆಗೆ ವಿರೋಧವಿದ್ದ ಪ್ರತ್ಯೇಕವಾದಿಗಳಂತೆ ಅವನಿದ್ದನು. ಅವನ ಹೆಂಡತಿ, ಸಾಶಿಕೋ ಬೈಬಲನ್ನು ಅಭ್ಯಾಸಿಸಲು ಆರಂಭ ಮಾಡಿದಾಗ ಅವನು ಉಗ್ರವಾಗಿ ಅವಳನ್ನು ವಿರೋಧಿಸಿದನು. ಅವನು ತನ್ನ ಕುಟುಂಬವನ್ನು ಕೊಂದು ತನ್ನನ್ನೂ ಹತಿಸಿಕೊಳ್ಳುವದನ್ನೂ ಯೋಚಿಸಿದ್ದನು. ಅವನ ಹಿಂಸೆಯ ಕಾರಣ ಉತ್ತರ ಜಾಪಾನಿನಲ್ಲಿರುವ ಸಾಶಿಕೋಳ ಮನೆಗೆ ಅವನ ಹೆಂಡತಿ ಓಡಿಹೋಗಬೇಕಾಯಿತು.
ಕೊನೆಗೆ ಮಸಾಜಿ ತನ್ನ ಮನಸ್ಸನ್ನು ಕೊಂಚ ತೆರೆದು, ತನ್ನ ಹೆಂಡತಿಯ ಧರ್ಮವನ್ನು ಪರೀಕ್ಷಿಸಲು ನಿರ್ಧರಿಸಿದನು. ಬೈಬಲಿನ ಕೆಲವು ಸಾಹಿತ್ಯಗಳನ್ನು ಓದಿದ ನಂತರ ಬದಲಾವಣೆಗಳನ್ನು ಮಾಡಬೇಕಾದ ಅವಶ್ಯಕತೆಯನ್ನು ಮನಗಂಡನು. ಅವನು ಶಾಸ್ತ್ರವಚನಗಳನ್ನು ಪರೀಕ್ಷಿಸಿದಂತೆಯೇ ಅವನ ಹಿಂಸಾಚಾರದ ಮನೋಭಾವವು ದೇವರ ಆತ್ಮದ ಫಲಗಳು ಪ್ರತಿಬಿಂಬಿಸುವಂತೆ ಬದಲಾವಣೆಗೊಂಡವು. (ಗಲಾತ್ಯ 5:22, 23) ಸಾಕ್ಷಿಗಳ ವಿರುದ್ಧ ತಾನು ಗೈದ ಹಿಂಸೆಯ ಕಾರಣ ಅವರು ಸೇಡು ತೀರಿಸಬಹುದೆಂದು ಮಸಾಜಿಯು ಹೆದರಿ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ಸ್ವಲ್ಪ ಹಿಂಜರಿದನು. ಆದರೆ ಕೊನೆಗೆ, ಅವನು ರಾಜ್ಯ ಸಭಾಗೃಹಕ್ಕೆ ಭೇಟಿ ನೀಡಿದಾಗ ಅವನನ್ನು ಎಷ್ಟೊಂದು ಹುರುಪಿನಿಂದ ಸ್ವಾಗತಿಸಲಾಯಿತೆಂದರೆ ಅವನಲ್ಲಿ ಕಣ್ಣೀರಕೋಡಿ ಹರಿಯಿತು.
ಹೌದು, ಪೂರ್ವಾಗ್ರಹ ಪೀಡಿತದಿಂದ ಹೊರಬಂದು ಹೊಸ ವಿಚಾರಗಳನ್ನು ಪರೀಕ್ಷಿಸುವುದರಿಂದ ನಮ್ಮ ದಿಗಂತಗಳನ್ನು ವಿಸ್ತರಿಸಲು ಹಾಗೂ ಇನ್ನಿತರ ವಿಧಗಳಲ್ಲೂ ನಮಗೆ ಪ್ರಯೋಜನಿಸುವುದು. ಆದಾಗ್ಯೂ ದಾರಿಯಲ್ಲಿ ಬರುವ ಪ್ರತಿಯೊಂದು ವಿಚಾರಗಳಿಗೆ ನಾವು ಬಿಚ್ಚು ಮನಸ್ಸಿನವರಾಗಬೇಕೆಂದು ಇದರ ಅರ್ಥವೋ?
ಆರಿಸುವವರಾಗಿರಿ!
ಜಪಾನಿನ ಏಕಾಂತತೆಯು ಕೊನೆಗೊಳ್ಳುವದರೊಂದಿಗೆ ಹೊಸ ವಿಚಾರಗಳು ದೇಶದಲ್ಲಿ ಸುರಿಯಲಾರಂಭಿಸಿದವು. ಇವುಗಳಲ್ಲಿ ಕೆಲವು ಜಪಾನೀಯರಿಗೆ ಪ್ರಯೋಜನ ತಂದವು, ಆದರೆ ಬೇರೆ ಕೆಲವು ಇಲ್ಲದಿರುತ್ತಿದ್ದರೆ ಅವರಿಗೆ ಒಳ್ಳಿತಾಗುತಿತ್ತು. ಎರಡನೆಯ ಲೋಕಯುದ್ಧದ ನಂತರ ಜಪಾನಿನ ಶರಣಾಗತಿಯನ್ನು ಸ್ವೀಕರಿಸುವಾಗ ಜನರಲ್ ಡಗ್ಲಸ್ ಮ್ಯಾಕಾರ್ಥರ್ ಹೇಳಿದ್ದು: “ಕಾಮಡೋರ್ ಪೆರ್ರಿಯ ಉದ್ದೇಶಗಳ ವಿರುದ್ಧವಾಗಿ ಪಾಶ್ಚಿಮಾತ್ಯ ಜ್ಞಾನವನ್ನು ಜಪಾನು ದಬ್ಬಾಳಿಕೆ ಮತ್ತು ದಾಸತ್ವದ ಒಂದು ಉಪಕರಣವಾಗಿ ಪರಿವರ್ತಿಸಿತು.” ಅದರ ಪಾಶ್ಚಿಮಾತ್ಯ ಸಲಹೆಗಾರರನ್ನು ಅನುಕರಿಸಿ, ಯುದ್ಧಗಳ ಸರಣಿಗೆ ನಡಿಸಿದಂತಹ ಪಥದಲ್ಲಿ ಜಪಾನು ತನ್ನನ್ನು ತೊಡಗಿಸಿಕೊಂಡಿತು. ಅದು ಎರಡನೆಯ ಲೋಕಯುದ್ಧಕ್ಕೆ ನಡಿಸಿ ಅದರ ಅಂತ್ಯದಲ್ಲಿ ಜಪಾನಿನ ಕ್ಷೇತ್ರದಲ್ಲಿ ಎರಡು ಅಣುಬಾಂಬುಗಳು ಹಾಕಲ್ಪಟ್ಟವು.
ಇದರಿಂದ ನಾವೇನು ಕಲಿಯಬಹುದು? ಹೊಸ ವಿಚಾರಗಳನ್ನು ಸ್ವೀಕರಿಸುವುದರಲ್ಲಿ ನಾವು ಆರಿಸುವರಾಗಿರಬೇಕೆಂದೇ. “ಇವರು ಹೇಳುವ ಮಾತು (ಪೌಲನಿಂದ ಕಲಿಸಲ್ಪಟ್ಟದ್ದು) ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದ” ಬೆರೋಯದವರನ್ನು ನಾವು ಅನುಸರಿಸಿದರೆ ಒಳ್ಳೇದನ್ನು ಮಾಡುವೆವು. (ಅ.ಕೃತ್ಯಗಳು 17:11) ಇಲ್ಲಿ ಹೇಳಲ್ಪಟ್ಟ “ಶೋಧಿಸು” ಎಂಬ ಗ್ರೀಕ್ ಶಬ್ದದ ಅರ್ಥ “ನ್ಯಾಯಾಂಗ ಕಾರ್ಯವಿಧಾನಗಳಲ್ಲಿ ಹೇಗೋ ಹಾಗೆ ಜಾಗ್ರತೆಯ ಮತ್ತು ನಿಖರವಾದ ಪರಿಶೋಧನೆ” ಎಂದಾಗಿದೆ. (ವರ್ಡ್ ಪಿಚ್ಚರ್ಸ್ ಇನ್ ದ ನ್ಯೂ ಟೆಸ್ಟಮೆಂಟ್- ಎ. ಟಿ. ರಾಬರ್ಟ್ಸನ್ರಿಂದ) ನಮಗೆ ಸಾದರ ಪಡಿಸಿದ ಎಲ್ಲಾ ಹೊಸ ವಿಚಾರಗಳನ್ನು ಕುರುಡುತನದಿಂದ ಸ್ವೀಕರಿಸುವ ಬದಲು, ಒಂದು ಕಾನೂನು ವ್ಯಾಜ್ಯವನ್ನು ಆಲಿಸುವಾಗ ನ್ಯಾಯಾಧೀಶನು ಮಾಡುವಂತೆ ನಾವು ಜಾಗ್ರತೆಯ ಮತ್ತು ನಿಖರವಾದ ಶೋಧನೆಯನ್ನು ಮಾಡುವ ಅಗತ್ಯವಿದೆ.
ನಾವು ಆರಿಸುವವರಾಗಿದ್ದಲ್ಲಿ, ನಿಜವಾಗಿ ಹಾನಿಕಾರಕವಾಗಿರುವ ಹಾದುಹೋಗುವ ಪ್ರತಿಯೊಂದು ಗೀಳು ಯಾ ಹೊಸ ವಿಚಾರಗಳಿಂದ ಪ್ರಭಾವಿತರಾಗುವದಿಲ್ಲ. ಉದಾಹರಣೆಗೆ, 1960 ರ ದಶಕಗಳ ನವ್ಯನೈತಿಕತೆಯೆಂದು ಕರೆಯಲ್ಪಟ್ಟಿತ್ತೋ ಅದು ಕೆಲವರಿಗೆ ಆಕರ್ಷಕ ಹೊಸ ವಿಚಾರವೆಂದು ಭಾಸವಾಗಿತ್ತು. ಆದರೆ ಜಾಗ್ರತೆಯ ವಿಮರ್ಶಕ ಪರೀಕ್ಷೆಯು, ಹೊಸಹೆಸರಿನಡಿಯಲ್ಲಿ ಹಾನಿಕಾರಕ ಹಳೆಯ ಅನೈತಿಕತೆ ಅದೆಂದು ಬಯಲಾಯಿತು. ಅದರಂತೆಯೇ, 1920 ರ ದಶಕದಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿದ್ದ ಜರ್ಮನಿಯು ನಾಝೀಸಂ ಒಂದು ಉದ್ರೇಕಕಾರಿ ಹೊಸ ವಿಚಾರವೆಂದು ಅನೇಕರು ನಿಸ್ಸಂದೇಹವಾಗಿ ದೃಷ್ಟಿಸಿದರು. ಆದರೆ ಎಂತಹ ಯಾತನೆಗೆ ಅದು ಕಾರಣವಾಯಿತು!
ಸಂತಸಕರವಾಗಿಯೇ, ಹೊಸ ವಿಚಾರಗಳನ್ನು ಪರೀಕ್ಷಿಸಲು ಸಾಧ್ಯವಾಗುವಂತೆ ದೇವರು ಒಂದು ಒರೆಗಲ್ಲನ್ನು ಒದಗಿಸಿದ್ದಾನೆ. ಅದು ಆತನ ಪ್ರೇರಿತ ವಾಕ್ಯವಾದ ಬೈಬಲ್. ಕುಟುಂಬ ಜೀವಿತ ಮತ್ತು ಮಾನವ ಸಂಬಂಧಗಳ ಅದರ ಮಾರ್ಗದರ್ಶಕಗಳನ್ನು ಅನ್ವಯಿಸುವುದರಿಂದ ಈ ಕ್ಷೇತ್ರದಲ್ಲಿ ನಿಪುಣರೆಂದು ಹೇಳಿಕೊಳ್ಳುವ ಸಮಾಜ ಶಾಸ್ತ್ರಜ್ಞರ, ಮನಶಾಸ್ತ್ರಜ್ಞರ ಇಂದಿನ ಅನೇಕ ಹೊಸ ವಿಚಾರಗಳನ್ನು ಪರೀಕ್ಷಿಸಲು ನಮಗೆ ಸಹಾಯವಾಗುತ್ತದೆ. (ಎಫೆಸ 5:21–6:4; ಕೊಲೊಸ್ಸೆ 3:5-14) ದೇವರೊಂದಿಗಿನ ಮತ್ತು ನೆರೆಯವರೊಂದಿಗಿನ ನಮ್ಮ ಸಂಬಂಧದ ಕುರಿತು ಬೈಬಲಿನ ಬುದ್ಧಿವಾದವು ಧರ್ಮದ ಕುರಿತಾದ ಇಂದು ಹಬ್ಬಿರುವ ಅನೇಕ ನವೀನ ಕಲ್ಪನೆಗಳನ್ನು ಪರೀಕ್ಷಿಸಲು ಆಧಾರವನ್ನೀಯುತ್ತದೆ. (ಮಾರ್ಕ 12:28-31) ಒಂದು ಹೊಸ ವಿಚಾರವು ನಿಜ ಮೌಲ್ಯದ್ದೋ, ಅಲ್ಲವೋ ಎಂದು ನಿರ್ಧರಿಸಲು ಬೈಬಲಿನ ಸ್ಪಷ್ಟ ಜ್ಞಾನವು ನಮ್ಮನ್ನುಸನ್ನದ್ಧರಾಗಿರಿಸುತ್ತದೆ. ಆಗ ನಾವು ‘ಎಲ್ಲವನ್ನು ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಲು’ ಶಕ್ತರಾಗುತ್ತೇವೆ.—1 ಥೆಸಲೋನಿಕ 5:21.
ಯೆಹೋವನ ಸಾಕ್ಷಿಗಳು ಅವರ ನೆರೆಯವರನ್ನು ಭೇಟಿಯಾದಾಗ, ಬೇರ್ಪಡಿಸುವ ಮನೋಭಾವವನ್ನು ತೋರಿಸಬೇಡಿರಿ. ಬದಲು, ನಿಮ್ಮ ಬಾಗಲನ್ನು ತೆರೆದು, ಅವರಿಗೇನು ಹೇಳಲಿಕ್ಕಿದೆಯೆಂದು ನೀವೇಕೆ ಆಲಿಸಬಾರದು? ನಿಮ್ಮ ನಿತ್ಯ ಪ್ರಯೋಜನವಾಗಿರಬಹುದಾದ ವಿಚಾರಗಳಿಗೆ ನಿಮ್ಮ ಮನಸ್ಸನ್ನು ಮುಚ್ಚಬೇಡಿರಿ. (w89 1/15)
[ಪುಟ 5 ರಲ್ಲಿರುವ ಚಿತ್ರ ಕೃಪೆ]
Library of Congress photo LC-USC62-7258