ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w90 8/1 ಪು. 30-31
  • ದೈವಿಕ ಕಾಪಾಡುವಿಕೆಯ ರುಜುವಾತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೈವಿಕ ಕಾಪಾಡುವಿಕೆಯ ರುಜುವಾತು
  • ಕಾವಲಿನಬುರುಜು—1990
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಶಾಸ್ತ್ರವಚನವೆಷ್ಟು ನಂಬಲರ್ಹವು?
  • ಯೋಹಾನನ ಸುವಾರ್ತೆಯ ಒಂದು ಪ್ರಧಾನ ಅವಶಿಷ್ಟ
  • ಪ್ರಾಚೀನ ಹಸ್ತಪ್ರತಿಗಳು ಬರೆಯಲ್ಪಟ್ಟ ಕಾಲವನ್ನು ಹೇಗೆ ದೃಢೀಕರಿಸಲಾಯಿತು?
    ಎಚ್ಚರ!—2008
  • ಈಜಿಪ್ಟಿನ ಕಸದ ಕುಪ್ಪೆಯಿಂದ ನಿಕ್ಷೇಪ
    ಕಾವಲಿನಬುರುಜು—1992
  • “ಸಮುದ್ರ ಗೀತೆ” ಕಾಲದ ಅಂತರವನ್ನು ಭರ್ತಿಮಾಡುವ ಹಸ್ತಪ್ರತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಕಾವಲಿನಬುರುಜು—1990
w90 8/1 ಪು. 30-31

ದೈವಿಕ ಕಾಪಾಡುವಿಕೆಯ ರುಜುವಾತು

ದೇವರ ಪ್ರೇರಿತ ವಾಕ್ಯವು ನಮಗೆ ನಿಷ್ಕೃಷ್ಟವಾಗಿ ರವಾನಿತವಾಗಿದೆ ಮತ್ತು ಅಂಥ ಆಶ್ಚರ್ಯಕರ ಕಾಪಾಡುವಿಕೆಗಾಗಿ ನಾವು ಮುಖ್ಯವಾಗಿ ಬೈಬಲಿನ ಕರ್ತೃವಿಗೆ ಕೃತಜ್ಞರಾಗಿರಬೇಕು. ಇಡೀ ಹಿಬ್ರೂ ಶಾಸ್ತ್ರದ ಅಥವಾ ಅದರ ಅಂಶಗಳ ಸುಮಾರು 6,000 ಹಸ್ತಪ್ರತಿಗಳಿವೆ ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರದ ಹಲವು 5,000 ಪ್ರತಿಗಳಿವೆ.

“ಯೆಹೋವನ ಮಾತೋ ಸದಾಕಾಲ ಇರುವದು.” (1 ಪೇತ್ರ 1:25) ಆದರೆ ಆತನ ಪವಿತ್ರ ವಾಕ್ಯದ ಕಾಪಾಡುವಿಕೆಯ ಕುರಿತು ಆಧುನಿಕ-ದಿನದ ಸಂಶೋಧನೆಯು ಏನನ್ನು ಬೆಳಕಿಗೆ ತಂದದೆ?

ಶಾಸ್ತ್ರವಚನವೆಷ್ಟು ನಂಬಲರ್ಹವು?

ಕ್ರೈಸ್ತ ಗ್ರೀಕ್‌ ಶಾಸ್ತ್ರದ ವಚನವು ಎಷ್ಟು ನಂಬಲರ್ಹವಾಗಿದೆ? ಪುರಾತನತ್ವವನ್ನು ಪಾರಾಗಿ ಉಳಿದ ಬೇರೆ ಬರಹಗಳಿಗೆ ತುಲನಾತ್ಮಕವಾಗಿ ನಾವು ನೋಡುವುದಾದರೆ, ಅದು ಅತಿ ನಂಬಲರ್ಹತೆಗೆ ಪಾತ್ರವೆಂಬದು ನಿಶ್ಚಯ. ಈ ನಿಜತ್ವವು, ಗರ್‌ಹಾರ್ಡ್‌ ಕ್ರೊಲ್ಲ್‌ ರಚಿತ ಆಫ್‌ಡೆನ್‌ ಸ್ಪುರೆನ್‌ ಜೆಸ್ಸು (ಯೇಸುವಿನ ಹೆಜ್ಜೇಜಾಡಲ್ಲಿ) ಎಂಬ ಪುಸ್ತಕದಲ್ಲಿ ಎತ್ತಿ ಹೇಳಲ್ಪಟ್ಟಿದೆ. ಉದಾಹರಣೆಗೆ, ಗ್ರೀಕ್‌ ತತ್ವಜ್ಞಾನಿ ಅರಿಸ್ಟೋಟಲನ (ಸಾ.ಶ.ಪೂ. ನಾಲ್ಕನೇ ಶತಕದ) ಬರಹಗಳಲ್ಲಿ ಬರೇ ಆರು ಪಪೈರಿಗಳು ಪಾರಾಗಿ ಉಳಿದಿವೆ, ಅದರಲ್ಲೂ ಹೆಚ್ಚಿನವು ಸಾ.ಶ. 10ನೇ ಶತಕದ ಅಥವಾ ಅದರ ನಂತರದ ತಾರೀಕಿನವುಗಳು. ಪ್ಲೇಟೋವಿನ ಕೃತಿಗಳು (ಸಾ.ಶ.ಪೂ. ನಾಲ್ಕನೇ ಶತಕ) ತುಸು ಹೆಚ್ಚು ಬಾಳಿವೆ. 13ನೇ ಶತಮಾನಕ್ಕೆ ಮುಂಚಿನ ತಾರೀಕುಳ್ಳ ಸುಮಾರು 10 ಹಸ್ತಪ್ರತಿಗಳು ಉಳಿದಿರುತ್ತವೆ. ಹೆರೊಡಟಸ್‌ನ ವಿಷಯದಲ್ಲಾದರೋ (ಸಾ.ಶ.ಪೂ. ಐದನೇ ಶತಮಾನ), ಸಾ.ಶ. 1ನೇ ಶತಮಾನದ ಮತ್ತು ಅನಂತರದ ತಾರೀಕುಳ್ಳ ಸುಮಾರು 20 ಪಪೈರಸ್‌ ಹಸ್ತಪ್ರತಿಗಳು ಬದುಕಿ ಉಳಿದವೆ. ಅವನ ಕೃತಿಯ ಮೊದಲ ಪೂರ್ತಿ ಹಸ್ತಪ್ರತಿಯು ಹತ್ತನೆಯ ಶತಕದಿಂದ ಆರಂಭಿಸಿದೆ. ಮತ್ತು ಜೊಸೀಫಸನ ಕೃತಿಗಳ ಅತ್ಯಾರಂಭದ ಹಸ್ತಪ್ರತಿಗಳು 11ನೇ ಶತಮಾನದಷ್ಟು ಮಾತ್ರವೇ ಹಿಂದಿನದ್ದು.

ಇದಕ್ಕೆ ಹೋಲಿಕೆಯಲ್ಲಿ, ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥವು (ಸಾ.ಶ. 1ನೇ ಶತಕದಲ್ಲಿ ಪೂರ್ಣಗೊಂಡ) ಎರಡನೆ ಶತಕದ ಅವಶಿಷ್ಟಗಳಿಂದ ಮತ್ತು ನಾಲ್ಕನೇ ಶತಮಾನದಿಂದ ಸಂಪೂರ್ಣ ಪ್ರತಿಗಳಿಂದ ದೃಢೀಕರಿಸಲ್ಪಟ್ಟಿದೆ. ಕ್ರೋಲ್‌ರವರಿಗನುಸಾರ, 2ರಿಂದ 7ನೇ ಶತಮಾನದ 81 ಪಪೈರಿಗಳು, 4ರಿಂದ 10ನೇ ಶತಕದ 266 ದೊಡ್ಡಕ್ಷರದ ಹಸ್ತಪ್ರತಿಗಳು, 9ರಿಂದ 15ನೇ ಶತಮಾನದ 2,754 ಮೋಡಿ ಬರಹದ ಹಸ್ತಪ್ರತಿಗಳು ಹಾಗೂ 2,135 ಅಂಶಿಕ ಹಸ್ತಪ್ರತಿಗಳೂ ಇವೆ. ಇವೆಲ್ಲವೂ ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳನ್ನು ದೃಢೀಕರಿಸಲು ನಮಗೆ ಸಹಾಯವಾಗಿವೆ. ಹೌದು, ರುಜುವಾತುಗಳಿಂದ ಅದು ಚೆನ್ನಾಗಿ ದೃಢೀಕರಿಸಲ್ಪಟ್ಟಿದೆ ನಿಶ್ಚಯ!

ಯೋಹಾನನ ಸುವಾರ್ತೆಯ ಒಂದು ಪ್ರಧಾನ ಅವಶಿಷ್ಟ

ಕಸದ ಗುಪ್ಪೆಯಲ್ಲಿ ಒಂದು ಅಮೂಲ್ಯ ಬೈಬಲ್‌ ಹಸ್ತಪ್ರತಿಯ ಭಾಗವನ್ನು ಕಂಡುಕೊಳ್ಳಲು ಯಾರು ನಿರೀಕ್ಷಿಸಿಯಾರು? ಆದರೂ, ಯೋಹಾನನ ಸುವಾರ್ತೆಯ 18ನೇ ಅಧ್ಯಾಯದ ಅಮೂಲ್ಯ ಅವಶಿಷ್ಟವು ದೊರೆತದ್ದು ಅಲ್ಲಿಯೇ. ಈಗ ಜೋನ್‌ ರೈಲೆಂಡ್ಸ್‌ ಪಪೈರಸ್‌ 457 (ಪಿ52) ಎಂದು ಕಡೆಯಲ್ಪಡುವ ಅದು ಇಂಗ್ಲೆಂಡಿನ ಮೆಂಚೆಸ್ಟರ್‌ನಲ್ಲಿ ಜೋಪಾಸನದಲ್ಲಿದೆ. ಅದು ದೊರೆತದ್ದು ಹೇಗೆ ಮತ್ತು ಅದು ಏಕೆ ಅಷ್ಟು ಮಹತ್ವವು?

ಶತಮಾನದ ಕೊನೆಯಲ್ಲಿ, ಈಜಿಪ್ಟಿನ ಎಲ್‌ ಫಯ್ಯೂಮ್‌ ಜಿಲ್ಲೆಯ ಓಕ್ಸಿರಿಂಚಸ್‌ ಶಹರದಲ್ಲಿ ಅಗೆತಶಾಸ್ತ್ರಜ್ನರು ಪಪರೈಸ್‌ ಅವಶಿಷ್ಟಗಳ ದೊಡ್ಡ ರಾಶಿಯನ್ನೇ ಅಗೆದು ತೆಗೆದರು, ಅದರಲ್ಲಿ ಪತ್ರಗಳು, ರಶೀದಿಗಳು, ವಿನಂತಿಗಳು, ಖಾನೆಷುಮಾರಿ ದಸ್ತೈವಜುಗಳು ಮತ್ತು ಇತರ ಅನೇಕ ಶಾಸ್ತ್ರವಚನಗಳು ಸೇರಿದ್ದವು. ಹೆಚ್ಚಿನವು ಗ್ರೀಕ್‌ನಲ್ಲಿ ಬರೆಯಲ್ಪಟ್ಟವುಗಳಾಗಿ ಶತಮಾನಗಳಿಂದ ಒಣಮಣ್ಣಿನಲ್ಲಿ ಜೋಪಾಸನೆ ಮಾಡಲ್ಪಟ್ಟವುಗಳಾಗಿದ್ದವು.

1920 ರಲ್ಲಿ ಈ ಪಪೈರಿಗಳ ಒಂದು ಸಂಗ್ರಹಣವು ಮೆಂಚೆಸ್ಟರಿನ ಜೋನ್‌ ರೈಲೆಂಡ್‌ ಲೈಬ್ರೆರಿಯಿಂದ ಸಂಗ್ರಹಿಸಲ್ಪಟ್ಟಿತು. ಹದಿನಾಲ್ಕು ವರ್ಷಗಳ ಅನಂತರ, ಪಂಡಿತ ಸಿ. ಎಚ್‌. ರಾಬರ್ಟ್ಸ್‌ರು ತುಣುಕುಗಳನ್ನು ಪರೀಕ್ಷಿಸುವಾಗ, ಅವರಿಗೆ ಪರಿಚಿತವಾಗಿ ಕಂಡ ಕೆಲವು ಶಬ್ದಗಳು ಸಿಕ್ಕಿದವು. ಅದರಲ್ಲಿ ಯೋಹಾನ 18ನೇ ಅಧ್ಯಾಯದ 31-33ನೇ ವಚನಗಳ ಅಂಶಗಳು ಅವಶಿಷ್ಟದ ಒಂದು ಮೈಯಲ್ಲಿ, ಮತ್ತು 37-38ನೇ ವಚನಗಳ ಅಂಶಗಳು ಇನ್ನೊಂದು ಮಗ್ಗುಲಲ್ಲಿ ಇರುವುದನ್ನು ಅವರು ಮನಗಂಡಾಗ ಅವರಿಗಾದ ಉದ್ರೇಕವನ್ನು ಕಲ್ಪಿಸಿಕೊಳ್ಳಿರಿ. ಈ ಪಪರೈಸ್‌ ಅವಶಿಷ್ಟವು ಈತನಕ ಸಂಶೋಧಿತವಾದ ಕ್ರೈಸ್ತ ಗ್ರೀಕ್‌ ಶಾಸ್ತ್ರದ ಯಾವುದೇ ಜ್ಞಾತ ಹಸ್ತಪ್ರತಿಗಿಂತ ಅತ್ಯಂತ ಹಳೆಯದಾಗಿ ರುಜುವಾಗಿದೆ. ಅಧ್ಯಕ್ಷರವೆಂದು ಕರೆಯಲ್ಪಡುವ ಗ್ರೀಕ್‌ ದೊಡ್ಡಕ್ಷರಗಳಲ್ಲಿ ಬರೆಯಲ್ಪಟ್ಟ ಇವು ನಮ್ಮ ಸಾಮಾನ್ಯ ಶಕದ ಎರಡನೇ ಶತಮಾನದ ಮೊದಲ ಅರ್ಧಭಾಗದ ಮೂಲದ್ದು.

ಈ ಅವಶಿಷ್ಟವು ಅಳತೆಯಲ್ಲಿ ಕೇವಲ 3.5 ಇಂಚು ಉದ್ದ 2.5 ಇಂಚು ಅಗಲದ್ದು. ಈ ಪಪರೈಸ್‌ ತುಣುಕನ್ನು ಅಷ್ಟು ನಿಷ್ಕೃಷ್ಟವಾಗಿ ತಾರೀಕಿಸಲು ಹೇಗೆ ಸಾಧ್ಯ? ಮುಖ್ಯವಾಗಿ ಬರೆವಣಿಗೆಯ ರೀತಿಯನ್ನು ಪರೀಕ್ಷಿಸುವ ಪೇಲ್ಯೋಗ್ರಾಫಿ ಎಂಬ ಒಂದು ಅಧ್ಯಯನದ ಮೂಲಕವೇ. ಎಲ್ಲಾ ಬರೆವಣಿಗೆಗಳು ವರ್ಪಗಳು ದಾಟಿದಷ್ಟಕ್ಕೆ ನಿಧಾನವಾಗಿ ಬದಲಾಗುತ್ತವೆ. ಮತ್ತು ಈ ಬದಲಾವಣೆಗಳು ಹಸ್ತಪ್ರತಿಯ ಕಾಲವನ್ನು ಸೂಚಿಸುತ್ತವೆ, ಎರಡೂ ಕಡೆ ಕೆಲವು ವರ್ಷಗಳ ಅಂತರದೊಂದಿಗೆ. ಪೂರ್ಣ ಹಸ್ತಪ್ರತಿಯ ಈ ಅತಿಚಿಕ್ಕ ಅವಶಿಷ್ಟದ ಭಾಗವು ಯೋಹಾನನಿಂದ ತಾನೇ ಬರೆಯಲ್ಪಟ್ಟ ಸುವಾರ್ತೆಯ ಮೂಲ ವೃತ್ತಾಂತದ ಕಾಲಕ್ಕೆ ಅತಿ ಹತ್ತಿರದ್ದಾಗಿ ನಕಲಾಗಿದೆ. ಅಂತರವು 30 ಅಥವಾ 40 ವರ್ಷಗಳಷ್ಟೇ ಕೊಂಚವಾಗಿತ್ತೆಂಬದು ಸಂಭಾವ್ಯ. ಯೋಹಾನನ ವೃತ್ತಾಂತವು ಅನಂತರದ ನಕಲುಗಾರರಿಂದ ಗಮನಾರ್ಹವಾಗಿ ಬದಲಿಸಲ್ಪಡಲಿಲ್ಲವೆಂಬ ಖಾತ್ರಿಯೂ ನಮಗಿದೆ ಹೇಗಂದರೆ ಈ ಅವಶಿಷ್ಟದ ವಚನಗಳು ಹೆಚ್ಚು ಅನಂತರ ದೊರಕಿದ ಹಸ್ತಪ್ರತಿಗಳೊಂದಿಗೆ ಬಹಳಷ್ಟು ಸರಿಸಮವಾಗಿಯೇ ಇವೆ.

ಈ ಶೋಧಕ್ಕೆ ಮುಂಚೆ, ಯೋಹಾನನ ಸುವಾರ್ತೆಯು ಯೇಸುವಿನ ಅಪೋಸ್ತಲನ ಅಪ್ಪಟ ಬರಹವಲ್ಲವೆಂದೂ, ಎರಡನೆ ಶತಮಾನದ ಕೊನೆಯ ಸುಮಾರಿಗೆ ಬರೆಯಲ್ಪಟ್ಟದ್ದೆಂದೂ ಠೀಕಾಕಾರರು ವಾದಿಸಿದ್ದರು. ಆದರೆ ಈಗ ಈ ಅವಶಿಷ್ಟದಿಂದ ಸ್ಪಷ್ಟವಾಗುತ್ತದ್ದೇನಂದರೆ, ಯೋಹಾನನ ಸುವಾರ್ತೆಯು ಸಾ.ಶ. ಎರಡನೆ ಶತಮಾನದ ಮೊದಲರ್ಧ ಭಾಗದಲ್ಲಿ ಈಜಿಷ್ಟಿನಲ್ಲಿ ಸುತ್ತೋಲೆಯಾಗಿ ಅಲ್ಲ, ಕೊಡೆಕ್ಸ್‌ ಪುಸ್ತಕರೂಪದಲ್ಲಿ ಅಸ್ತಿತ್ವದಲ್ಲಿತ್ತು ಎಂಬದು. ಅಷ್ಟು ಅಲ್ಪವೆಂದು ತೋರಿದ ಪಪೈರಸ್‌ ಅವಶಿಷ್ಟವೂಂದು ಠೀಕಾಕಾರರನ್ನು ಅಷ್ಟು ಪರಿಣಾಮಕಾರಿಯಾಗಿ ಬಾಯಿಮುಚ್ಚಿಸಿರುವುದು ಅದೆಷ್ಟು ಆಶ್ಚರ್ಯ! (w88 11/15)

[ಪುಟ 31 ರಲ್ಲಿರುವ ಚೌಕ]

ಪಪೈರಸ್‌

ಪಪೈರಸ್‌ ಸಸಿಯು ನಿಧಾನವಾಗಿ ಹರಿಯುವ ನೈಲ್‌ನಂಥ ನದೀ ದಡಗಳಲ್ಲಿ ಮತ್ತು ಆಳವಿಲ್ಲದ, ಸದಾ ನೀರು ನಿಂತಿರುವ ಜವುಗು ಭೂಮಿಯಲ್ಲಿ ಹುಲುಸಾಗಿ ಬೆಳೆಯುತ್ತದೆ. (ಯೋಬ 8:11) ಅಬ್ರಹಾಮನ ಕಾಲದಷ್ಟು ಮುಂಚಿನಿಂದಲೂ ಪಪೈರಸ್‌ ಕಾಗ್ದವು ಬರೆವಣಿಗೆಯ ಸಾಧನವಾಗಿ ಉಪಯೋಗಿಸಲ್ಪಟ್ಟಿರಬಹುದು. ಅನಂತರ, ಅದರ ಉತ್ಪಾದನೆಯು ಪುರಾತನ ಈಜಿಷ್ಟಿನವರ ಒಂದು ಮುಖ್ಯ ಕೈಗಾರಿಕೆಯಾಗಿತ್ತು. ಅದನ್ನು ಮಾಡುವುದರಲ್ಲಿ ಸುಲಭ ಕಾರ್ಯ ವಿಧಾನವನ್ನು ಅವರು ಬಳಸಿದ್ದರು. ಒಳಗಿನ ತಾಳನ್ನು ತೆಳ್ಳಗಿನ ಪಟ್ಟಿಗಳಾಗಿ ಉದ್ದಕ್ಕೆ ಸೀಳಿ ಒಂದರಪಕ್ಕದಲ್ಲಿ ಒಂದನ್ನಿಟ್ಟು, ಅದರ ಅಡಲ್ಡಾಗಿ ಇನ್ನೊಂದು ಪದರವನ್ನು ಅಂಟಿಸುತ್ತಿದ್ದರು. ಅನಂತರ ಇದನ್ನು ಒತ್ತಿ ಯಾ ಲಟಿಸ್ಟಿ, ಹಾಳೆಗಳನ್ನಾಗಿ ಮಾಡಿ, ಬಿಸಿಲಲ್ಲಿ ಒಣಗಿಸಿ, ಕಾಚವಸ್ತು, ಚಿಪ್ಪು ಯಾ ದಂತದಿಂದ ತಿಕ್ಕಿ ಹೊಳಪಿಸಲಾಗುತ್ತಿತ್ತು. ಹಾಳೆಗಳನ್ನು ಒಂದು ಸುರುಳಿಯಾಗಿ ಒಂದುಗೂಡಿಸಿ ಸರಾಸರಿ 14 ಮತ್ತು 20 ಅಡಿಗಳಷ್ಟು ಉದ್ದ ಮಾಡಬಹುದಿತ್ತು, ಆದರೂ 133 ಅಡಿ ಉದ್ದದ ಒಂದು ಹಾಳೆಯು ಕೂಡ ಜೋಪಾಸನೆಯಲ್ಲಿದೆ. ಇನ್ನೊಂದು ವಿಧವು, ಎಲೆಗಳನ್ನು ಜೋಡಿಸಿ ಪುಸ್ತಕರೂಪದ ಕೊಡೆಕ್ಸ್‌ ಆಗಿ ಮಾಡುವುದೇ, ಆದಿಕ್ರೈಸ್ತರಲ್ಲಿ ಇಂತಹ ಹಸ್ತಪ್ರತಿ ಬಹಳಷ್ಟು ಜನಪ್ರಿಯವಾಗಿತ್ತು.

[ಪುಟ 31 ರಲ್ಲಿರುವ ಚೌಕ]

ಚರ್ಮಕಾಗದ ಮತ್ತು ವೆಲ್ಲಮ್‌

ಮೂಲದಲ್ಲಿ ಇಡೀ ಬೈಬಲು ಅಡಕವಾಗಿದ್ದ ಐದನೇ ಶತಕದ ಅಲೆಕ್ಸಾಂಡ್ರಿಯನ್‌ ಕೊಡೆಕ್ಸ್‌, ವೆಲ್ಲಮ್‌ ಮೇಲೆ ಬರೆಯಲ್ಪಟ್ಟಿತು. ವೆಲ್ಲಮ್‌ ಎಂದರೇನು ಮತ್ತು ಚರ್ಮಕಾಗದ್ದಿಂದ ಅದು ಹೇಗೆ ಬೇರೆಯಾಗಿದೆ?

ಮುಂಚಿನಿಂದಲೂ ಚರ್ಮ ಕಾಗ್ದವು ಕುರೀಚರ್ಮ, ಆಡುಚರ್ಮ ಯಾ ಕರುಚರ್ಮದಿಂದ ಮಾಡಲ್ಪಡುತ್ತಿತ್ತು. ತೊಳೆದ ಚರ್ಮಗಳಿಂದ ಕೂದಲನ್ನು ಕೆರೆದುಹಾಕಿ, ಅನಂತರ ಅವನ್ನು ಸೆಳೆದು ಚೌಕಟ್ಟಿನಲ್ಲಿ ಒಣಗಿಸಲಾಗುತ್ತಿತ್ತು. (2 ತಿಮೋಥಿ 4:13 ಹೋಲಿಸಿ.) ನಮ್ಮ ಸಾಮಾನ್ಯ ಶಕದ ಮೂರು ಮತ್ತು ನಾಲ್ಕು ಶತಮಾನದೊಳಗೆ, ವಸ್ತುಗಳ ದರ್ಜೆಯ ನಡುವಣ ವ್ಯತ್ಯಾಸಗಳು ಸ್ವೀಕರಿಸಲ್ಪಟ್ಟವು. ಒರಟಾದದ್ದು ಚರ್ಮಕಾಗವ್ದೆಂತಲೂ, ನಯವಾದದ್ದು ವೆಲ್ಲಮ್‌ ಎಂತಲೂ ಜ್ಞಾತವಾಗಿ ಮುಂದರಿಯಿತು. ವೆಲ್ಲಮ್‌ಗಾಗಿ, ಕರು ಯಾ ಆಡುಮರಿಯ ಯಾ ಸತ್ತುಹುಟ್ಟಿದ ಕರು ಯಾ ಕುರಿಮರಿಗಳ ಕೋಮಲ ಚರ್ಮವನ್ನು ಮಾತ್ರ ಬಳಸಲಾಗುತ್ತಿತ್ತು. ಅದರ ತೆಳ್ಳಗಾದ, ನಯವಾದ, ಬಹಳಷ್ಟು ಬೆಳ್ಳಗಾದ ಬರೆವಣಿಗೆಯ ಸಾಧನವನ್ನು ಮಹತ್ವದ ಪುಸ್ತಕಗಳಿಗಾಗಿ, ಅನಂತರ ಅಗವ್ಗೂ ಉತ್ತಮವೂ ಆದ ಕಾಗದ್ದ ಉಪಯೋಗವನ್ನು ಮುದ್ರಣಾ ಸಂಶೋಧನೆಯಲ್ಲಿ ಮಾಡುವ ತನಕ ಪ್ರಯೋಗಿಸಲಾಯಿತು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ