ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w91 11/1 ಪು. 8-9
  • ಕ್ಷಮೆಯಲ್ಲಿ ಒಂದು ಪಾಠ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ಷಮೆಯಲ್ಲಿ ಒಂದು ಪಾಠ
  • ಕಾವಲಿನಬುರುಜು—1991
  • ಅನುರೂಪ ಮಾಹಿತಿ
  • ಕ್ಷೇಮೆಯ ಒಂದು ಪಾಠ
    ಅತ್ಯಂತ ಮಹಾನ್‌ ಪುರುಷ
  • ನಾವು ಏಕೆ ಕ್ಷಮಿಸಬೇಕು?
    ಮಹಾ ಬೋಧಕನಿಂದ ಕಲಿಯೋಣ
  • “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಅವರು ‘ಕುರಿಯಾದಾತನ ಹಿಂದೆ ಹೋಗುವರು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಕಾವಲಿನಬುರುಜು—1991
w91 11/1 ಪು. 8-9

ಯೇಸುವಿನ ಜೀವನ ಮತ್ತು ಶುಶ್ರೂಷೆ

ಕ್ಷಮೆಯಲ್ಲಿ ಒಂದು ಪಾಠ

ಯೇಸು ಇನ್ನೂ ಕಪೆರ್ನೌಮಿನ ಮನೆಯಲ್ಲಿ ತನ್ನ ಶಿಷ್ಯರೊಂದಿಗೆ ಇದ್ದನೆಂದು ತೋರುತ್ತದೆ. ಸಹೋದರರ ನಡುವಣ ತೊಂದರೆಗಳನ್ನು ಹೇಗೆ ನಿರ್ವಹಿಸುವದೆಂದು ಅವನು ಅವರೊಂದಿಗೆ ಚರ್ಚಿಸುತ್ತಿದ್ದನು, ಆಗ ಪೇತ್ರನು ಕೇಳುವದು: “ಸ್ವಾಮೀ, ನನ್ನ ಸಹೋದರನು ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು?” ಯೆಹೂದಿ ಧಾರ್ಮಿಕ ಬೋಧನೆಯು ಮೂರು ಸಾರಿಯ ತನಕ ಕ್ಷಮಿಸುವದನ್ನು ಅನುಮತಿಸಿತ್ತಾದ್ದರಿಂದ, “ಏಳುಸಾರಿಯೋ?” ಎಂದು ಸೂಚಿಸುವದನ್ನು ಪೇತ್ರನು ಅತ್ಯಂತ ಔದಾರ್ಯದೆಂದು ಪರಿಗಣಿಸಿರಬೇಕು.

ಆದರೆ ಅಂಥ ಒಂದು ದಾಖಲೆಯನ್ನಿಡುವ ಇಡೀ ವಿಚಾರವೇ ತಪ್ಪಾದದ್ದು. ಯೇಸು ಪೇತ್ರನನ್ನು ತಿದ್ದುತ್ತಾನೆ: “ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.” ಪೇತ್ರನು ತನ್ನ ಸಹೋದರನನ್ನು ಕ್ಷಮಿಸುವ ಸಂಖ್ಯೆಯ ಮೇಲೆ ಯಾವ ಸೀಮಿತವನ್ನೂ ಹಾಕಬಾರದು ಎಂದು ಆತನು ತೋರಿಸುತ್ತಿದ್ದನು.

ಶಿಷ್ಯರಿಗೆ ಅವರ ಕ್ಷಮಿಸುವ ಹಂಗನ್ನು ಅಚ್ಚೊತ್ತಲಿಕ್ಕಾಗಿ ಯೇಸು ಅವರಿಗೊಂದು ಸಾಮ್ಯವನ್ನು ತಿಳಿಸುತ್ತಾನೆ. ಅದು ತನ್ನ ಸೇವಕರಿಂದ ಲೆಕ್ಕ ತೆಗೆದುಕೊಳ್ಳಲು ಬಯಸಿದ್ದ ಒಬ್ಬ ಅರಸನ ಕುರಿತಾಗಿದೆ. ಅತಿ ದೊಡ್ಡ ಮೊತ್ತದ ಸಾಲವಾದ 60,000,000 ದಿನಾರಿಗಳನ್ನು (ಸುಮಾರು 50,000,000 ಡಾಲರುಗಳು) ಕೊಡಲಿಕ್ಕಿದ್ದ ಒಬ್ಬ ಆಳನ್ನು ಅವನ ಬಳಿಗೆ ಹಿಡಿತಂದರು. ಆದರೆ ಅದನ್ನು ಸಲ್ಲಿಸಲು ಅವನಲ್ಲಿ ಏನೂ ಇರಲಿಲ್ಲ. ಆದದರಿಂದ, ಯೇಸು ವಿವರಿಸುವದು, ಅರಸನು ಅವನನ್ನೂ ಅವನ ಹೆಂಡತಿ ಮತ್ತು ಮಕ್ಕಳನ್ನೂ ಮಾರಿ ಆ ಸಾಲವನ್ನು ತೀರಿಸಬೇಕೆಂದು ಆಜ್ಞಾಪಿಸುತ್ತಾನೆ.

ಆಗ ಆ ಸೇವಕನು ಅವನ ಒಡೆಯನ ಕಾಲಿಗೆ ಬಿದ್ದು, ಬೇಡುತ್ತಾನೆ: “ಸ್ವಲ್ಪ ತಾಳಿಕೋ, ನಿನ್ನದೆಲ್ಲಾ ನಾನು ಕೊಟ್ಟು ತೀರಿಸುತ್ತೇನೆ.”

ಆಗ ಒಡೆಯನು ಕನಿಕರಪಟ್ಟು ಆ ಸೇವಕನ ದೊಡ್ಡ ಸಾಲವನ್ನೆಲ್ಲಾ ಬಿಟ್ಟುಬಿಡುತ್ತಾನೆ. ಆದರೆ ತರುವಾಯ ಸ್ವಲ್ಪ ಸಮಯದೊಳಗೇ, ಯೇಸು ಮುಂದರಿಸಿದ್ದು, ಈ ಸೇವಕನು ಹೋಗಿ ತನಗೆ ಕೇವಲ ನೂರು ದಿನಾರಿಗಳ (ಸುಮಾರು 90 ಡಾಲರು) ಸಾಲ ಸಲ್ಲಿಸಬೇಕಾಗಿದ್ದ ಜೊತೆ ಸೇವಕನನ್ನು ಕಾಣುತ್ತಾನೆ. ಅವನನ್ನು ಹಿಡಿದು, “ಎಲಾ, ನನ್ನ ಸಾಲ ತೀರಿಸು” ಎಂದು ಹೇಳಿ ಅವನ ಕುತ್ತಿಗೆ ಹಿಸುಕುತ್ತಾನೆ.

ಆದರೆ ಆ ಜೊತೇ ಸೇವಕನ ಹತ್ತಿರ ಹಣವಿಲ್ಲ. ಆದ್ದರಿಂದ ಅವನು ಸಾಲ ಕೊಟ್ಟಿದ್ದ ಆ ಸೇವಕನ ಕಾಲಿಗೆ ಬಿದ್ದು, ಬೇಡುತ್ತಾನೆ: “ಸ್ವಲ್ಪ ತಾಳಿಕೋ, ತೀರಿಸುತ್ತೇನೆ.” ಆದರೆ ಈ ಆಳು ತನ್ನ ಒಡೆಯನಂತೆ ಕನಿಕರ ತೋರಿಸಲಿಲ್ಲ, ಹೋಗಿ ತನ್ನ ಜೊತೇ ಸೇವಕನನ್ನು ಸೆರೆಮನೆಗೆ ಹಾಕಿಸುತ್ತಾನೆ.

ಯೇಸು ಮುಂದುವರಿಸುವದು, ಬೇರೆ ಸೇವಕರು ನಡೆದ ಸಂಗತಿಯನ್ನು ನೋಡಿ ಒಡೆಯನ ಬಳಿಗೆ ಹೋಗಿ ಅದನ್ನು ತಿಳಿಸುತ್ತಾರೆ. ಆಗ ಅವನ ಒಡೆಯನು ಕೋಪದಿಂದ ಆ ಆಳನ್ನು ಕರೆಸುತ್ತಾನೆ. “ಎಲಾ, ನೀಚನೇ,” ಅವನನ್ನುವದು, “ನೀನು ನನ್ನನ್ನು ಬೇಡಿಕೊಂಡದರ್ದಿಂದ ಆ ಸಾಲವನ್ನೆಲ್ಲಾ ನಾನು ಬಿಟ್ಟುಬಿಟ್ಟೆನಲ್ಲಾ. ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹಾ ನಿನ್ನ ಜೊತೆ ಸೇವಕನನ್ನು ಕರುಣಿಸಬಾರದಿತ್ತೇ?” ಸಿಟ್ಟುಗೊಂಡವನಾಗಿ ಒಡೆಯನು ಆ ಕನಿಕರವಿಲ್ಲದ ಸೇವಕನನ್ನು ಅವನು ತನ್ನ ಸಾಲವನ್ನೆಲ್ಲಾ ತೀರಿಸುವ ತನಕ ಅವನನ್ನು ಜೈಲರುಗಳ ಕೈಗೆ ಒಪ್ಪಿಸಿಕೊಟ್ಟನು.

ಅನಂತರ ಯೇಸು ಕೊನೆಗೊಳಿಸುವದು: “ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷಮಿಸದೆ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು.”

ಕ್ಷಮೆಯಲ್ಲಿ ಎಂಥ ಉತ್ತಮ ಪಾಠ! ದೇವರು ನಮಗೆ ಕ್ಷಮಿಸಿರುವ ಪಾಪವೆಂಬ ದೊಡ್ಡ ಸಾಲಕ್ಕೆ ತುಲನೆಯಲ್ಲಿ, ನಮ್ಮ ಕ್ರೈಸ್ತ ಸಹೋದರನಿಂದ ನಮ್ಮ ವಿರುದ್ಧವಾಗಿ ಮಾಡಲ್ಪಡುವ ಯಾವುದೇ ತಪ್ಪು ಖಂಡಿತವಾಗಿಯೂ ಅಲ್ಪವೇ. ಅಷ್ಟಲ್ಲದೆ, ಯೆಹೋವ ದೇವರು ನಮಗೆ ಸಾವಿರಾರು ಸಾರಿ ಕ್ಷಮಿಸಿರುತ್ತಾನೆ. ಆಗಿಂದಾಗ್ಯೆ, ನಾವು ಆತನ ವಿರುದ್ಧವಾಗಿ ಮಾಡುವ ಪಾಪದ ಅರುಹು ಕೂಡ ನಮಗಿರುವದಿಲ್ಲ. ಆದುದರಿಂದ, ಆಕ್ಷೇಪಿಸಲು ನ್ಯಾಯವಾದ ಕಾರಣಗಳಿದ್ದಾಗ್ಯೂ, ನಾವು ನಮ್ಮ ಸಹೋದರರನ್ನು ಹಲವಾರು ಸಾರಿ ಕ್ಷಮಿಸಬಾರದೇ? ನೆನಪಿಡಿರಿ, ಯೇಸು ಪರ್ವತ ಪ್ರಸಂಗದಲ್ಲಿ ಕಲಿಸಿದಂತೆ, “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ನಮಗೆ ಕ್ಷಮಿಸು.” ಮತ್ತಾಯ 18:21-35; 6:12; ಕೊಲೊಸ್ಸೆ 3:13.

◆ ತನ್ನ ಸಹೋದರನನ್ನು ಕ್ಷಮಿಸುವ ಕುರಿತಾದ ಪೇತ್ರನ ಪ್ರಶ್ನೆಯನ್ನು ಪ್ರೇರಿಸಿದ್ದು ಯಾವುದು, ಮತ್ತು ಏಳುಸಾರಿಯ ತನ್ನ ಸಲಹೆಯನ್ನು ಬಹು ಔದಾರ್ಯದೆಂದು ಅವನು ಪರಿಗಣಿಸಿದ್ದೇಕೆ?

◆ ತನ್ನ ಸೇವಕನ ಬೇಡಿಕೆಗೆ ಅರಸನ ಪ್ರತಿಕ್ರಿಯೆಯು ಜೊತೇ ಸೇವಕನ ಬೇಡಿಕೆಗೆ ಸೇವಕನ ಪ್ರತಿಕ್ರಿಯೆಗಿಂತ ಹೇಗೆ ಬೇರೆಯಾಗಿತ್ತು?

◆ ಯೇಸುವಿನ ಸಾಮ್ಯದಿಂದ ನಾವೇನನ್ನು ಕಲಿಯುತ್ತೇವೆ? (w88 3/1)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ