ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • hf ಭಾಗ 9 ಪು. 29-31
  • ನಿಮ್ಮ ಕುಟುಂಬ ಆರಾಧನೆಯನ್ನು ಆನಂದಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಕುಟುಂಬ ಆರಾಧನೆಯನ್ನು ಆನಂದಿಸಿ
  • ಸುಖೀ ಸಂಸಾರ ಸಾಧ್ಯ!
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • 1 ಯೆಹೋವನೊಂದಿಗಿನ ನಿಮ್ಮ ಬಂಧವನ್ನು ಬಲಗೊಳಿಸಿ
  • 2 ನಿಮ್ಮ ಕುಟುಂಬ ಆರಾಧನೆಯನ್ನು ಆನಂದಿಸಿ
  • ಕುಟುಂಬಗಳಿಗಾಗಿ ಸಹಾಯ
    2011 ನಮ್ಮ ರಾಜ್ಯದ ಸೇವೆ
  • ಕುಟುಂಬ ಆರಾಧನೆ ಅಂದರೇನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
  • ಕುಟುಂಬ ಆರಾಧನೆ​—⁠ಇನ್ನಷ್ಟು ಆನಂದದಾಯಕವಾಗಿ ಮಾಡಬಲ್ಲಿರೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”
    ಯೆಹೋವನ ಸಮೀಪಕ್ಕೆ ಬನ್ನಿರಿ
ಇನ್ನಷ್ಟು
ಸುಖೀ ಸಂಸಾರ ಸಾಧ್ಯ!
hf ಭಾಗ 9 ಪು. 29-31
ಜೊತೆಯಾಗಿ ಬೈಬಲನ್ನು ಓದಿ ಚರ್ಚಿಸುತ್ತಿರುವ ದಂಪತಿ

ಭಾಗ 9

ಯೆಹೋವನನ್ನು ಕುಟುಂಬವಾಗಿ ಆರಾಧಿಸಿ

“ಸ್ವರ್ಗವನ್ನೂ ಭೂಮಿಯನ್ನೂ . . . ಉಂಟುಮಾಡಿದಾತನನ್ನು ಆರಾಧಿಸಿರಿ.”—ಪ್ರಕಟನೆ 14:7

ನೀವು ಈಗಾಗಲೇ ಈ ಕಿರುಹೊತ್ತಗೆಯಲ್ಲಿ ಕಲಿತಂತೆ, ನಿಮಗೂ ನಿಮ್ಮ ಕುಟುಂಬಕ್ಕೂ ನೆರವಾಗುವ ಅನೇಕ ತತ್ವಗಳು ಬೈಬಲಿನಲ್ಲಿವೆ. ನೀವು ಸಂತೋಷದಿಂದ ಇರಬೇಕೆಂದು ಯೆಹೋವನು ಬಯಸುತ್ತಾನೆ. ಆತನ ಆರಾಧನೆಗೆ ನೀವು ಪ್ರಥಮ ಸ್ಥಾನ ಕೊಡುವುದಾದರೆ “ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು” ಎಂದು ಮಾತು ಕೊಟ್ಟಿದ್ದಾನೆ. (ಮತ್ತಾಯ 6:33) ನೀವು ಆತನ ಸ್ನೇಹಿತರಾಗಬೇಕೆಂದೂ ಬಯಸುತ್ತಾನೆ. ಆದ್ದರಿಂದ ಆತನಿಗೆ ಸ್ನೇಹಿತರಾಗಲು ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸಿಕೊಳ್ಳಿ. ಏಕೆಂದರೆ, ಈ ಸ್ನೇಹ ಮಾನವರಿಗೆ ಇರುವುದರಲ್ಲೇ ಅತಿ ದೊಡ್ಡ ಸೌಭಾಗ್ಯವಾಗಿದೆ.—ಮತ್ತಾಯ 22:37, 38.

1 ಯೆಹೋವನೊಂದಿಗಿನ ನಿಮ್ಮ ಬಂಧವನ್ನು ಬಲಗೊಳಿಸಿ

ಜೊತೆಯಾಗಿ ಸೇವೆ ಮಾಡುತ್ತಿರುವ ದಂಪತಿ

ಬೈಬಲಿನ ಹಿತವಚನ: “‘ನಾನು ನಿಮಗೆ ತಂದೆಯಾಗಿರುವೆನು ಮತ್ತು ನೀವು ನನಗೆ ಪುತ್ರಪುತ್ರಿಯರು ಆಗಿರುವಿರಿ’ ಎಂದು ಸರ್ವಶಕ್ತನಾದ ಯೆಹೋವನು ಹೇಳುತ್ತಾನೆ.” (2 ಕೊರಿಂಥ 6:18) ನೀವು ಆತನ ಆಪ್ತ ಸ್ನೇಹಿತರಾಗಬೇಕೆಂದು ಬಯಸುತ್ತಾನೆ. ಇದಕ್ಕೆ ಪ್ರಾರ್ಥನೆ ಸಹಾಯಕರ. “ಎಡೆಬಿಡದೆ ಪ್ರಾರ್ಥನೆಮಾಡಿರಿ” ಎಂದು ಯೆಹೋವನೇ ಹೇಳಿದ್ದಾನೆ. (1 ಥೆಸಲೊನೀಕ 5:17) ನಿಮ್ಮ ಮನದಾಳದ ಅನಿಸಿಕೆಗಳನ್ನು, ಚಿಂತೆಗಳನ್ನು ಕೇಳಲು ಆತನು ಕಾತುರದಿಂದಿದ್ದಾನೆ. (ಫಿಲಿಪ್ಪಿ 4:6) ನೀವು ಕುಟುಂಬದೊಂದಿಗೆ ಪ್ರಾರ್ಥಿಸುವಾಗ, ನಿಮಗೆ ದೇವರು ಎಷ್ಟು ನೈಜ ವ್ಯಕ್ತಿಯಾಗಿದ್ದಾನೆಂದು ಕುಟುಂಬದವರೆಲ್ಲರೂ ತಿಳಿದುಕೊಳ್ಳುವರು.

ದೇವರೊಂದಿಗೆ ಮಾತಾಡುವುದರ ಜೊತೆಗೆ ಆತನ ಮಾತುಗಳಿಗೂ ಕಿವಿಗೊಡಬೇಕು. ಆತನ ವಾಕ್ಯವಾದ ಬೈಬಲ್‌ ಮತ್ತು ಬೈಬಲಾಧಾರಿತ ಪ್ರಕಾಶನಗಳ ಅಧ್ಯಯನದ ಮೂಲಕ ಇದನ್ನು ಮಾಡಬಲ್ಲಿರಿ. (ಕೀರ್ತನೆ 1:1, 2) ಅಧ್ಯಯನದ ಮೂಲಕ ಕಲಿತ ವಿಷಯಗಳ ಕುರಿತು ಧ್ಯಾನಿಸಿ. (ಕೀರ್ತನೆ 77:1, 12) ದೇವರ ಮಾತಿಗೆ ಕಿವಿಗೊಡುವುದರಲ್ಲಿ ಕ್ರೈಸ್ತ ಕೂಟಗಳಿಗೆ ತಪ್ಪದೆ ಹಾಜರಾಗುವುದೂ ಸೇರಿದೆ.—ಕೀರ್ತನೆ 122:1-4.

ಯೆಹೋವನೊಂದಿಗಿನ ನಿಮ್ಮ ಬಂಧವನ್ನು ಬಲಗೊಳಿಸುವ ಇನ್ನೊಂದು ಮುಖ್ಯ ವಿಧ, ಆತನ ಕುರಿತು ಇತರರೊಂದಿಗೆ ಮಾತಾಡುವುದೇ ಆಗಿದೆ. ಆತನ ಬಗ್ಗೆ ಎಷ್ಟು ಹೆಚ್ಚು ಮಾತಾಡುತ್ತೀರೋ ನೀವಾತನಿಗೆ ಅಷ್ಟೇ ಹೆಚ್ಚು ಆಪ್ತರಾಗುತ್ತೀರಿ.—ಮತ್ತಾಯ 28:19, 20.

ಹೀಗೆ ಮಾಡಿ:

  • ಪ್ರತಿದಿನ ಬೈಬಲನ್ನು ಓದಲು ಮತ್ತು ಪ್ರಾರ್ಥಿಸಲು ನಿರ್ದಿಷ್ಟ ಸಮಯವನ್ನು ಬದಿಗಿರಿಸಿ

  • ಮನರಂಜನೆ ಮತ್ತು ವಿನೋದ ವಿಹಾರಗಳಿಗಿಂತ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಕುಟುಂಬವಾಗಿ ಮೊದಲ ಸ್ಥಾನ ಕೊಡಿ

2 ನಿಮ್ಮ ಕುಟುಂಬ ಆರಾಧನೆಯನ್ನು ಆನಂದಿಸಿ

ಒಬ್ಬ ತಂದೆ ತನ್ನ ಕುಟುಂಬದೊಟ್ಟಿಗೆ ಆರಾಧನೆ ಮಾಡಲು ತಯಾರಿಸಿ, ನಂತರ ಎಲ್ಲರ ಕುಟುಂಬ ಆರಾಧನೆಯನ್ನು ಆನಂದಿಸುತ್ತಿರುವುದು

ಬೈಬಲಿನ ಹಿತವಚನ: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಕುಟುಂಬ ಆರಾಧನೆಗಾಗಿ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಯಾವ್ಯಾವ ವಿಷಯಗಳನ್ನು ಚರ್ಚಿಸುತ್ತೀರೆಂದು ಮೊದಲೇ ನಿರ್ಣಯಿಸಿರಿ. ಅವುಗಳನ್ನು ಚಾಚೂತಪ್ಪದೆ ಅನುಸರಿಸಿರಿ. (ಆದಿಕಾಂಡ 18:19) ಅಷ್ಟು ಮಾತ್ರ ಸಾಲದು, ನಿಮ್ಮ ಜೀವನದ ಪ್ರತಿಯೊಂದು ವಿಷಯದಲ್ಲೂ ದೇವರಿಗೆ ಪ್ರಥಮ ಸ್ಥಾನ ಕೊಡುವುದು ಸಹ ಪ್ರಾಮುಖ್ಯ. “ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ” ದೇವರ ಕುರಿತು ಮಾತಾಡುವ ಮೂಲಕ ನಿಮ್ಮ ಕುಟುಂಬ ಆತನಿಗೆ ಆಪ್ತರಾಗಲು ನೆರವಾಗಿ. (ಧರ್ಮೋಪದೇಶಕಾಂಡ 6:6, 7) “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು” ಎಂದು ಹೇಳಿದ ಯೆಹೋಶುವನಂತಿರಲು ಪ್ರಯತ್ನಿಸಿ.—ಯೆಹೋಶುವ 24:15.

ಹೀಗೆ ಮಾಡಿ:

  • ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯನ ಅವಶ್ಯಕತೆಗಳಿಗೆ ತಕ್ಕಂತೆ ತರಬೇತಿ ನೀಡಲು ಯೋಜಿಸಿ

ತನ್ನ ಚಿಕ್ಕ ಮಗನಿಗೆ ಓದಿ ಹೇಳುತ್ತಿರುವ ತಾಯಿ, ಬೈಬಲ್‌ ವೃತ್ತಾಂತವೊಂದನ್ನು ನಟಿಸುತ್ತಿರುವ ಕುಟುಂಬ, ತನ್ನ ಮಗಳೊಂದಿಗೆ ಅಧ್ಯಯನ ಮಾಡುತ್ತಿರುವ ತಂದೆ

ಯೆಹೋವನ ಸಂತೋಷಿತ ಸೇವಕರು

ಯೆಹೋವ ದೇವರನ್ನು ಆರಾಧಿಸುವುದಕ್ಕಿಂತ ಸಂತೋಷ ತರುವ ವಿಷಯ ಬೇರೊಂದಿಲ್ಲ. ನೀವು ಕುಟುಂಬವಾಗಿ ತನಗೆ ಯಥಾರ್ಥ ಸೇವೆ ಸಲ್ಲಿಸುವುದನ್ನು ಯೆಹೋವನು ನೋಡಿ ಸಂತೋಷಿಸುತ್ತಾನೆ. ಹೀಗೆ ನೀವು ಯೆಹೋವನಿಗೆ ಸೇವೆ ಸಲ್ಲಿಸುತ್ತಾ ಇರುವಾಗ ಆತನನ್ನು ಹೆಚ್ಚೆಚ್ಚು ಪ್ರೀತಿಸುತ್ತೀರಿ ಮತ್ತು ಅನುಕರಿಸುತ್ತೀರಿ. (ಮಾರ್ಕ 12:30; ಎಫೆಸ 5:1) ವಿವಾಹದಲ್ಲಿ ದೇವರಿಗೆ ಪ್ರಥಮ ಸ್ಥಾನ ಕೊಡುವ ಮೂಲಕ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಬಂಧ ಬಲಗೊಳ್ಳುವುದು. (ಪ್ರಸಂಗಿ 4:12; ಯೆಶಾಯ 48:17) ‘ಯೆಹೋವನು ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡುವುದರಿಂದ’ ನೀವೂ ನಿಮ್ಮ ಕುಟುಂಬದವರೆಲ್ಲರೂ ಸದಾ ಸಂತೋಷದಿಂದಿರಬಲ್ಲಿರಿ.—ಧರ್ಮೋಪದೇಶಕಾಂಡ 12:7.

ನಿಮ್ಮನ್ನೇ ಕೇಳಿಕೊಳ್ಳಿ:

  • ನಾವಿಬ್ಬರೂ ಜೊತೆಯಾಗಿ ಪ್ರಾರ್ಥಿಸಿದ್ದು ಯಾವಾಗ?

  • ಯೆಹೋವನ ಮೇಲಿನ ನಮ್ಮ ನಂಬಿಕೆಯನ್ನು ಬಲಪಡಿಸಲು ನಾನು ನನ್ನ ಕುಟುಂಬದೊಂದಿಗೆ ಯಾವ ವಿಷಯಗಳನ್ನು ಚರ್ಚಿಸಬಹುದು?

ಕುಟುಂಬದ ತಲೆಗಳಿಗೆ ಕಿವಿಮಾತು

  • ನಿಮ್ಮ ಕುಟುಂಬ ಆರಾಧನೆಗೆ ಯಾವುದೂ ಅಡ್ಡಬರದಂತೆ ನೋಡಿಕೊಳ್ಳಿ

  • ಯಾವ ವಿಷಯದ ಕುರಿತು ಚರ್ಚಿಸುತ್ತೀರೆಂದು ಮುಂಚಿತವಾಗಿಯೇ ತಿಳಿಸಿ. ಆಗ ನಿಮ್ಮ ಇಡೀ ಕುಟುಂಬ ತಯಾರಾಗಿರಲು ಸಾಧ್ಯವಾಗುತ್ತದೆ

  • ಕುಟುಂಬ ಆರಾಧನೆಯನ್ನು ಯಾರೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ

  • ಎಲ್ಲರೂ ಆನಂದಿಸುವಂತೆ ಕುಟುಂಬ ಆರಾಧನಾ ಸಮಯವು ಹಿತಕರವಾಗಿರಲಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ