ಮುಖಪುಟ ಲೇಖನ
ವಿಪತ್ತು ಬಡಿದಾಗ—ಜೀವ ಉಳಿಸೋ ಹೆಜ್ಜೆಗಳು
“ಬಾಂಬ್ ಸ್ಫೋಟ ಆದಾಗ ನಾನು ಹಾರಿ ದೂರ ಬಿದ್ದೆ. ಕಿಟಕಿಯಿಂದ ಹೊಗೆ ಬಂದು ನಾವಿದ್ದ ಜಾಗ ಪೂರ್ತಿ ತುಂಬ್ಕೊಳ್ತು. ನಮ್ಮ ಆಫೀಸಿದ್ದ ದೊಡ್ಡ ಬಿಲ್ಡಿಂಗಿಗೆ ಬೆಂಕಿ ಹತ್ಕೊಳ್ತು.”—ಜೋಶುವ.
ಭೂಕಂಪ, ಸುನಾಮಿ, ಉಗ್ರರ ಆಕ್ರಮಣ, ಶಾಲೆಯಲ್ಲಿ ಗುಂಡಿನ ದಾಳಿ, ಈ ಎಲ್ಲಾ ವಿಷ್ಯಗಳನ್ನ ನಾವು ಪ್ರತಿದಿನ ನ್ಯೂಸ್ ಪೇಪರ್ ಹೆಡ್ಲೈನ್ಸ್ ಅಲ್ಲಿ ನೋಡ್ತಾ ಇರ್ತೀವಿ. ಇದನ್ನೆಲ್ಲ ಓದಿದಾಗ ನಮಗೆ ಬೇಜಾರಾಗುತ್ತೆ. ಈ ವಿಪತ್ತುಗಳು ನಮಗೆ ಸಂಭವಿಸಿದಾಗ ತಾಳ್ಕೊಳ್ಳೋಕೆ ತುಂಬ ಕಷ್ಟ. ಹಾಗಾದ್ರೆ ಈ ವಿಪತ್ತುಗಳು ಬರೋ ಮುಂಚೆ, ಬಂದಾಗ ಮತ್ತು ಮುಗಿದ್ಮೇಲೆ ನಾವೇನು ಮಾಡಿದ್ರೆ ನಮ್ಮ ಜೀವ ಕಾಪಾಡ್ಕೊಳ್ಳಬಹುದು?
ವಿಪತ್ತು ಬರೋ ಮುಂಚೆ. . .ತಯಾರಾಗಿ!
ವಿಪತ್ತಿಂದ ತಪ್ಪಿಸ್ಕೊಳ್ಳೋಕೆ ಯಾರಿಂದಾನೂ ಆಗಲ್ಲ. ಆದ್ರೆ ನೀವು ಮೊದಲೇ ತಯಾರಾಗಿದ್ರೆ ವಿಪತ್ತು ಬಂದ್ರೂ ನಿಮ್ಮ ಪ್ರಾಣ ಕಾಪಾಡ್ಕೊಬಹುದು. ಹಾಗಾದ್ರೆ ತಯಾರಾಗೋಕೆ ಏನೆಲ್ಲಾ ಮಾಡ್ಬೇಕು?
ಮನಸ್ಸನ್ನ ಸಿದ್ಧ ಮಾಡ್ಕೊಳ್ಳಿ. ವಿಪತ್ತು ಬರದಂತೆ ತಡೆಯೋಕೆ ಯಾರಿಂದನೂ ಆಗಲ್ಲ. ವಿಪತ್ತಾದಾಗ ನಿಮಗೂ, ನಿಮ್ಮ ಮನೆಯವ್ರಿಗೂ ಅಪಾಯ ಬಂದೇ ಬರುತ್ತೆ ಅನ್ನೋದನ್ನ ಒಪ್ಕೊಳ್ಳಿ. ಬೆಂಕಿ ಬಿದ್ದ ಮೇಲೆ ಹೇಗೆ ಬಾವಿ ತೋಡಿದ್ರೆ ಉಪಯೋಗ ಇಲ್ವೋ ಹಾಗೇ ವಿಪತ್ತು ಬಂದ್ಮೇಲೆ ತಯಾರಾಗೋಕೆ ಹೋದ್ರೆ ಏನೂ ಪ್ರಯೋಜನ ಇಲ್ಲ.
ಯಾವೆಲ್ಲ ವಿಪತ್ತಾಗಬಹುದು ಅಂತ ಯೋಚಿಸಿ. ನೀವಿರೋ ಜಾಗದಲ್ಲಿ ಯಾವೆಲ್ಲ ವಿಪತ್ತುಗಳಾಗಬಹುದು, ನೀವು ಸುರಕ್ಷಿತವಾಗಿರಬೇಕು ಅಂದ್ರೆ ಎಲ್ಲಿಗೆ ಹೋಗ್ಬೇಕು ಅಂತ ತಿಳ್ಕೊಳ್ಳಿ. ನಿಮ್ಮ ಮನೆ ಗಟ್ಟಿಮುಟ್ಟಾಗಿದ್ಯಾ? ನೀವಿರೋ ಏರಿಯ ಸುರಕ್ಷಿತವಾಗಿದ್ಯಾ? ಅಂತ ತಿಳ್ಕೊಳ್ಳಿ. ಬೆಂಕಿ ಸುಲಭವಾಗಿ ಹತ್ಕೊಳ್ಳೋ ಸಾಧ್ಯತೆ ಇದ್ಯಾ ಅಂತ ಯೋಚಿಸಿ. ಜೊತೆಗೆ ಸುರಕ್ಷಿತ ಕ್ರಮವನ್ನ ತಗೊಳ್ಳೋಕೆ ಪ್ರಯತ್ನಿಸಿ. ಸ್ಮೋಕ್ ಡಿಟೆಕ್ಟರ್ಗಳನ್ನ ಅಳವಡಿಸಿ, ಅದ್ರ ಬ್ಯಾಟರಿಗಳನ್ನ ಆಗಾಗ ಅಥವಾ ವರ್ಷಕ್ಕೊಂದು ಸಲನಾದ್ರೂ ಬದಲಾಯಿಸಿ.
ಎಮರ್ಜೆನ್ಸಿ ಕಿಟ್ ಇಟ್ಕೊಳ್ಳಿ. ವಿಪತ್ತಾದಾಗ ಕರೆಂಟ್, ನೀರು, ಫೋನ್ ಮತ್ತು ಸಾರಿಗೆ ವ್ಯವಸ್ಥೆ ಕೈ ಕೊಡಬಹುದು. ಒಂದುವೇಳೆ ನಿಮ್ಮ ಹತ್ರ ಕಾರ್ ಇದ್ರೆ, ಅದ್ರಲ್ಲಿ ಯಾವಾಗ್ಲೂ ಅರ್ಧ ಟ್ಯಾಂಕ್ ಆದ್ರೂ ಪೆಟ್ರೋಲ್ ಇರೋ ತರ ನೋಡ್ಕೊಳ್ಳಿ. ಜೊತೆಗೆ, ಮನೆಯಲ್ಲಿ ಸಾಕಾಗುವಷ್ಟು ಊಟ, ನೀರು ಮತ್ತು ಎಮರ್ಜೆನ್ಸಿ ಕಿಟ್ ಇದ್ಯಾ ಅನ್ನೋದನ್ನ ಖಚಿತಪಡಿಸ್ಕೊಳ್ಳಿ. “ನಿಮಗೆ ಬೇಕಾಗಿರೋದು ನಿಮ್ಮತ್ರ ಇದ್ಯಾ?” ಅನ್ನೋ ಚೌಕ ನೋಡಿ.
ತಯಾರಿ ಇದ್ರೆ ವಿಪತ್ತಿಂದ ನಿಮ್ಮ ಪ್ರಾಣ ಕಾಪಾಡ್ಕೊಬಹುದು
ಫೋನ್ ನಂಬರ್ಗಳನ್ನ ಇಟ್ಕೊಳ್ಳಿ. ನಿಮಗೆ ಹತ್ರದಲ್ಲಿರೋ ಮತ್ತು ದೂರದಲ್ಲಿರೋ ನಿಮ್ಮ ಸ್ನೇಹಿತರ ಫೋನ್ ನಂಬರ್ಗಳನ್ನ ಒಂದು ಪೇಪರ್ನಲ್ಲಿ ಇಟ್ಕೊಂಡಿದ್ರೆ ನಿಮಗೆ ಸಹಾಯ ಆಗುತ್ತೆ.
ಆಗ ಏನು ಮಾಡ್ಬೇಕು ಅಂತ ಮೊದಲೇ ಪ್ಲಾನ್ ಮಾಡಿ ಮತ್ತು ಅಭ್ಯಾಸ ಮಾಡಿ. ವಿಪತ್ತಾದಾಗ ಪಾರಾಗೋಕೆ ಏನೆಲ್ಲ ಮಾಡಬೇಕು ಅಂತ ಮೊದಲೇ ಯೋಚ್ನೆ ಮಾಡೋದು ಒಳ್ಳೇದು. ಉದಾಹರಣೆಗೆ, ನಿಮ್ಮ ಮನೆಯಲ್ಲಿ ಮತ್ತು ಮಗುವಿನ ಶಾಲೆಯಲ್ಲಿ ಹೊರ ಹೋಗೋಕೆ ಎಲ್ಲೆಲ್ಲ ಬಾಗಿಲಿದೆ ಮತ್ತು ಯಾವ ಬಾಗಿಲು ಹತ್ರ ಇದೆ ಅಂತ ತಿಳ್ಕೊಳ್ಳಿ. ವಿಪತ್ತಾದಾಗ ಎಲ್ರೂ ಸುರಕ್ಷಿತವಾಗಿ ಎಲ್ಲಿ ಸೇರಿ ಬರಬೇಕು ಅಂತ ಯೋಚ್ನೆ ಮಾಡಿ. ಅದ್ರಲ್ಲಿ ಒಂದು ಸ್ಥಳ ದೂರ ಇರ್ಬೇಕು, ಇನ್ನೊಂದು ಹತ್ರದಲ್ಲಿ ಇರ್ಬೇಕು. ಅದು ಶಾಲೆ ಅಥವಾ ಲೈಬ್ರರಿ ಆಗಿರಬಹುದು. ಇಂಥ ಜಾಗಗಳಿಗೆ ನೀವು ಕುಟುಂಬದ ಜೊತೆ ಆಗಾಗ ಹೋಗ್ತಾ ಇರೋಕೆ ಅಭ್ಯಾಸ ಮಾಡ್ಕೊಳ್ಳಿ. ಈ ತರ ಹೋಗೋದು ಒಳ್ಳೇದು ಅಂತ ಅಧಿಕಾರಿಗಳು ಹೇಳ್ತಾರೆ.
ಬೇರೆಯವ್ರಿಗೆ ಸಹಾಯ ಮಾಡಿ. ವಿಪತ್ತಾದಾಗ, ವಯಸ್ಸಾದವ್ರಿಗೆ ಮತ್ತು ನಡಿಯೋಕೆ ಆಗದೆ ಇರೋರಿಗೆ ನಿಮ್ಮ ಕೈಲಾದ ಸಹಾಯ ಮಾಡಿ.
ವಿಪತ್ತು ಬಂದಾಗ. . .ತಡ ಮಾಡಬೇಡಿ
“ಬೆಂಕಿ ಹೊತ್ಕೊಂಡಾಗ ಅದನ್ನ ನೋಡಿ ತುಂಬ ಜನ ಗಾಬರಿ ಪಡ್ಲಿಲ್ಲ, ಆರಾಮಾಗಿ ಇದ್ರು” ಅಂತ ಜೋಶುವ ಹೇಳ್ತಾರೆ. “ಕೆಲವರು ಅವ್ರ ಕಂಪ್ಯೂಟರ್ ಆಫ್ ಮಾಡ್ತಿದ್ರು, ಇನ್ನು ಕೆಲವರು ಅವ್ರ ಬಾಟಲಲ್ಲಿ ನೀರು ತುಂಬಿಸ್ಕೊತಿದ್ರು. ಅವ್ರಲ್ಲೊಬ್ಬ, ‘ಏನಾಗಲ್ಲ, ಇನ್ನು ಸ್ವಲ್ಪ ಹೊತ್ತಲ್ಲಿ ಎಲ್ಲ ಸರಿ ಆಗುತ್ತೆ’ ಅಂತ ಹೇಳ್ತಿದ್ದ.” ಆದ್ರೆ ಜೋಶುವ, “ಈಗ್ಲೇ ನಾವು ಇಲ್ಲಿಂದ ಓಡಿ ಹೋಗಬೇಕು!” ಅಂತ ಕೂಗಿದ. ಆಗ ಅವನ ಜೊತೆ ಕೆಲಸ ಮಾಡ್ತಿದ್ದವರು ಅವನ ಹಿಂದೆ ಓಡಿ ಬಂದ್ರು. ಅವರು ಮೆಟ್ಟಿಲು ಇಳಿವಾಗ, “ಯಾರಾದ್ರೂ ಬಿದ್ರೆ ಅವ್ರನ್ನ ಎತ್ಕೊಂಡು ಮುಂದೆ ಹೋಗ್ತಾ ಇರಿ. ಇನ್ನೇನು ಬಂದು ಬಿಡ್ತು. ಬನ್ನಿ, ಬನ್ನಿ” ಅಂತ ಜೋಶುವ ಕೂಗ್ತಾನೇ ಇದ್ದ.
ಬೆಂಕಿ ಹೊತ್ಕೊಂಡಾಗ. ಈ ತರ ಆದಾಗ ನೆಲದ ಮೇಲೆನೇ ತೆವಳ್ಕೊಂಡು ಬೇಗ-ಬೇಗ ಹತ್ರದ ಬಾಗಿಲಿಗೆ ಹೋಗಿ. ಹೊಗೆ ತುಂಬ್ಕೊಳ್ಳೋದ್ರಿಂದ ಮುಂದೆ ಏನಿರುತ್ತೆ ಅಂತ ಕಾಣಲ್ಲ. ತುಂಬ ಜನ ಆ ಹೊಗೆನ ಕುಡಿದೇ ಸತ್ತು ಹೋಗಿದ್ದಾರೆ. ಹಾಗಾಗಿ, ನಿಮ್ಮ ವಸ್ತುಗಳನ್ನ ತಗೊಳ್ಳೋಕೆ ವಾಪಾಸ್ ಹೋಗಬೇಡಿ. ಕೆಲವೇ ಸೆಕೆಂಡ್ಸ್ನಲ್ಲಿ ನಿಮ್ಮ ಪ್ರಾಣ ಹೋಗಬಹುದು ಅನ್ನೋದನ್ನ ನೆನಪಿಡಿ.
ಭೂಕಂಪ ಆದಾಗ. ಒಂದು ಗಟ್ಟಿಯಾದ ಟೇಬಲ್ ಕೆಳಗೆ ಅಥವಾ ಮನೆಯ ಒಳ ಗೋಡೆಯ ಪಕ್ಕದಲ್ಲಿ ಇರಿ. ಭೂಮಿ ಆಗಾಗ ನಡುಗಬಹುದು ಮತ್ತು ಅದುರಬಹುದು. ಹಾಗಾಗಿ ಆದಷ್ಟು ಬೇಗ ಬಿಲ್ಡಿಂಗ್ನಿಂದ ಹೊರಗಡೆ ಬಂದು ಬಿಡಿ. ರಕ್ಷಣಾ ಸಿಬ್ಬಂದಿಯವರು ಬರೋಕೆ ಸ್ವಲ್ಪ ತಡ ಆಗಬಹುದು. ಹಾಗಾಗಿ ನಿಮ್ಮ ಕೈಯಲ್ಲಾದ್ರೆ ಬೇರೆಯವ್ರನ್ನ ಕಾಪಾಡಿ.
ಸುನಾಮಿ ಬಂದಾಗ. ಸಮುದ್ರ ತೀರದಿಂದ ಇದ್ದಕ್ಕಿದ್ದಂತೆ ನೀರು ಹಿಂದೆ ಹೋದ್ರೆ, ಯಾವಾಗ ಬೇಕಾದ್ರೂ ದೊಡ್ಡ-ದೊಡ್ಡ ಅಲೆಗಳು ವಾಪಸ್ ಬಂದು ಅಪ್ಪಳಿಸುತ್ತೆ ಅಂತ ನೆನಪಿಡಿ. ಅದಕ್ಕೆ ತಕ್ಷಣ ಅಲ್ಲಿಂದ ಎತ್ತರದ ಜಾಗಕ್ಕೆ ಓಡಿಹೋಗಿ.
ಬಿರುಗಾಳಿ ಅಥವಾ ಚಂಡಮಾರುತ ಬಂದಾಗ. ಆಗ ಸುರಕ್ಷಿತವಾದ ಸ್ಥಳಕ್ಕೆ ಓಡಿಹೋಗಿ.
ಪ್ರಳಯ ಬಂದಾಗ. ನೀರು ತುಂಬ್ಕೊಂಡಿರೋ ಬಿಲ್ಡಿಂಗ್ ಹತ್ರ ಹೋಗಬೇಡಿ. ಆ ಸಮಯದಲ್ಲಿ ನೀರಲ್ಲಿ ನಡಿಬೇಡಿ, ಗಾಡಿ ಓಡಿಸಬೇಡಿ. ಪ್ರಳಯದ ನೀರಲ್ಲಿ ಚರಂಡಿ ಮತ್ತು ಟಾಯ್ಲೆಟ್ ನೀರು, ಪ್ರಾಣಿಗಳ ಶವಗಳು ಸೇರಬಹುದು. ಆ ನೀರಿನೊಳಗೆ ದೊಡ್ಡ-ದೊಡ್ಡ ಗುಂಡಿಗಳಿರಬಹುದು. ಕರೆಂಟಿನ ಕೇಬಲ್ಗಳು ಬಿದ್ದು ಎಲೆಕ್ಟ್ರಿಕ್ ಶಾಕ್ ಹೊಡಿಬಹುದು.
ನಿಮಗೆ ಗೊತ್ತಾ? ಎರಡು ಅಡಿ ಎತ್ತರದಲ್ಲಿ ಹರೀತಿರೋ ನೀರಿಗೆ ಒಂದು ಕಾರನ್ನ ಎಳ್ಕೊಂಡು ಹೋಗೋ ಶಕ್ತಿ ಇರುತ್ತೆ! ತುಂಬ ಜನ ಹರೀತಾ ಇರೋ ನೀರಲ್ಲಿ ಗಾಡಿ ಓಡಿಸೋಕೆ ಹೋಗಿ ಸತ್ತು ಹೋಗಿದ್ದಾರೆ.
ನೀವಿರೋ ಜಾಗ ಖಾಲಿ ಮಾಡ್ಬೇಕು ಅಂತ ಅಧಿಕಾರಿಗಳು ಹೇಳಿದಾಗ, ತಕ್ಷಣ ಆ ಜಾಗ ಖಾಲಿ ಮಾಡಿ. ನೀವು ಎಲ್ಲಿದ್ದೀರಾ ಅಂತ ನಿಮ್ಮ ಸ್ನೇಹಿತರಿಗೆ, ಕುಟುಂಬದವ್ರಿಗೆ ಹೇಳಿ. ಇಲ್ಲಾಂದ್ರೆ ನಿಮ್ಮನ್ನ ಅವರು ಹುಡುಕೋಕೆ ಹೋಗಿ ತಮ್ಮ ಪ್ರಾಣ ಕಳ್ಕೊಬಹುದು.
ನೀವಿರೋ ಜಾಗ ಖಾಲಿ ಮಾಡ್ಬೇಕು ಅಂತ ಅಧಿಕಾರಿಗಳು ಹೇಳಿದಾಗ, ತಕ್ಷಣ ಆ ಜಾಗ ಖಾಲಿ ಮಾಡಿ
ನಿಮಗೆ ಗೊತ್ತಾ? ವಿಪತ್ತಾದಾಗ ಫೋನ್ ಮಾಡೋದಕ್ಕಿಂತ ಮೆಸೇಜ್ ಕಳಿಸೋದ್ರಲ್ಲಿ ತುಂಬ ಪ್ರಯೋಜನ ಇದೆ.
ಮನೆಯಲ್ಲೇ ಇರಿ ಅಂತ ಅಧಿಕಾರಿಗಳು ಹೇಳಿದಾಗ, ಹೊರಗೆ ಹೋಗಬೇಡಿ. ಕೆಲವೊಮ್ಮೆ ವೈರಸ್ಗಳಿಂದ ರೋಗ ಹರಡಬಹುದು, ಕೆಮಿಕಲ್ ಮತ್ತು ನ್ಯೂಕ್ಲಿಯರ್ ಬಾಂಬ್ಗಳಿಂದ ಅಟ್ಯಾಕ್ ಆಗಬಹುದು. ಆಗ ನೀವು ಹೊರಗಡೆ ಹೋಗಬೇಡಿ. ನಿಮ್ಮ ಮನೆಯ ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ. ಒಂದುವೇಳೆ ನ್ಯೂಕ್ಲಿಯರ್ ಸ್ಫೋಟ ಆಗಿದ್ರೆ, ನಿಮ್ಮ ಬಿಲ್ಡಿಂಗ್ನ ಬೇಸ್ಮೆಂಟ್ಗೆ ಹೋಗಿ. ಆಗ ಅದ್ರ ವಿಕಿರಣಗಳು ನಿಮ್ಮ ಮೇಲೆ ಬೀಳಲ್ಲ. ಸ್ಥಳೀಯ ಟಿವಿ ಮತ್ತು ರೇಡಿಯೋ ನ್ಯೂಸ್ಗಳಿಗೆ ಗಮನ ಕೊಡಿ. ಅಧಿಕಾರಿಗಳು ಈಗ ಅಪಾಯ ಇಲ್ಲ ಅಂತ ಹೇಳೋವರೆಗೂ ನೀವು ಹೊರಗಡೆ ಹೋಗಬೇಡಿ.
ವಿಪತ್ತು ಮುಗಿದ್ಮೇಲೆ. . .ಸುರಕ್ಷಿತವಾಗಿರಿ!
ಅಪಾಯ ಮತ್ತು ಕಾಯಿಲೆಗಳನ್ನ ತಪ್ಪಿಸೋಕೆ ಈ ಮುಂದಿನ ಸಲಹೆಗಳನ್ನ ಪಾಲಿಸಿ:
ಸ್ನೇಹಿತರ ಜೊತೆ ಇರಿ. ಯಾವುದೋ ಕ್ಯಾಂಪ್ನಲ್ಲಿ ಇರೋದಕ್ಕಿಂತ ನಿಮಗೆ ಗೊತ್ತಿರೋ ಜನ್ರ ಜೊತೆ, ನಿಮ್ಮ ಸ್ನೇಹಿತರ ಜೊತೆ ಇದ್ರೆ ನಿಮಗೆ ಹೆಚ್ಚು ಸಹಾಯ ಸಿಗುತ್ತೆ.
ನೀವಿರೋ ಜಾಗನ ಕ್ಲೀನ್ ಮಾಡಿ, ಶುದ್ಧವಾಗಿ ಇಟ್ಕೊಳ್ಳಿ.
ಸುರಕ್ಷತೆಯ ವಸ್ತುಗಳನ್ನ ಬಳಸಿ. ಕಸ ಕ್ಲೀನ್ ಮಾಡುವಾಗ ಗ್ಲೌಸ್ ಹಾಕೊಳ್ಳಿ. ಸೇಫ್ಟಿ ಶೂ, ಹೆಲ್ಮೆಟ್ ಮತ್ತು ಮಾಸ್ಕನ್ನ ಹಾಕೊಳ್ಳಿ. ಈ ರೀತಿ ಕ್ಲೀನ್ ಮಾಡುವಾಗ ಅಲ್ಲಲ್ಲಿ ಎಲೆಕ್ಟ್ರಿಕಲ್ ವೈರ್ಗಳಿಂದ ಶಾಕ್ ಹೊಡೆಯೋ ಸಾಧ್ಯತೆ ಇರುತ್ತೆ. ಹಾಗಾಗಿ ಹುಷಾರಾಗಿರಿ.
ನಿಮ್ಮ ಕೆಲಸವನ್ನ ಎಂದಿನಂತೆ ಶುರು ಮಾಡಿ. ನೀವು ಶಾಂತವಾಗಿದ್ರೆ, ಅದನ್ನ ನೋಡಿ ನಿಮ್ಮ ಮಕ್ಕಳು ಕಲಿತಾರೆ. ಅವ್ರಿಗೆ ಶಾಲಾ ಪಾಠಗಳನ್ನ ನೀವೇ ಮಾಡಿ. ಅವ್ರ ಜೊತೆ ಆಟ ಆಡಿ, ಕುಟುಂಬವಾಗಿ ಆರಾಧನೆ ಮಾಡಿ. ಬರೀ ನ್ಯೂಸ್ ನೋಡ್ತಾನೇ ಇರಬೇಡಿ. ಯಾಕಂದ್ರೆ ಅದ್ರಲ್ಲಿ ಬರೋ ವಿಷ್ಯಗಳಿಂದ ನಿಮಗೆ ಚಿಂತೆ ಹೆಚ್ಚಾಗಬಹುದು. ನಿಮಗಿರೋ ಚಿಂತೆ ಮತ್ತು ಕೋಪನ ನಿಮ್ಮ ಕುಟುಂಬದವ್ರ ಮೇಲೆ ತೋರಿಸಬೇಡಿ. ನಿಮಗೇನಾದ್ರೂ ಸಹಾಯ ಬೇಕಿದ್ರೆ ಕೇಳಿ, ನಿಮ್ಮ ಕೈಯಲ್ಲಿ ಆದಾಗ ಬೇರೆಯವ್ರಿಗೂ ಸಹಾಯ ಮಾಡಿ.
ವಿಪತ್ತು ಮುಗಿದ್ಮೇಲೆ ನಿಮ್ಮ ಕೆಲಸವನ್ನ ಎಂದಿನಂತೆ ಶುರು ಮಾಡಿ
ವಿಪತ್ತಿಂದ ನೀವು ತುಂಬ ವಿಷ್ಯಗಳನ್ನ ಕಳ್ಕೊಬೇಕಾಗುತ್ತೆ ಅಂತ ಒಪ್ಕೊಳ್ಳಿ. ಸರ್ಕಾರದವರು ಮತ್ತು ಬೇರೆ ಪರಿಹಾರ ಕೆಲಸದವರು ನಿಮಗೆ ಬದುಕೋಕೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡ್ತಾರೆ. ಆದ್ರೆ ನೀವು ಕಳ್ಕೊಂಡಿರೋ ಎಲ್ಲವನ್ನ ಅವ್ರಿಂದ ಕೊಡೋಕಾಗಲ್ಲ. ಹಾಗಾಗಿ ಕುಡಿಯೋಕೆ ಶುದ್ಧವಾಗಿರೋ ನೀರು, ಆಹಾರ, ಬಟ್ಟೆ ಮತ್ತು ಮನೆ ಇದ್ರೆ ಸಾಕು ಅಂತ ನೆನಪಿಡಿ.—1 ತಿಮೊತಿ 6:7, 8.
ನಿಮ್ಮ ಮನಸ್ಸು ಕುಗ್ಗಿ ಹೋಗಿರುತ್ತೆ, ಸಹಾಯ ಪಡ್ಕೊಳ್ಳಿ. ವಿಪತ್ತು ಬಂದ್ಮೇಲೆ ನಾವು ಕುಗ್ಗಿ ಹೋಗೋದು ಸಹಜ. ಉದಾಹರಣೆಗೆ, ನಿಮ್ಮಲ್ಲಿ ಅತಿಯಾದ ಚಿಂತೆ, ಡಿಪ್ರೆಷನ್ ಮತ್ತು ಭಾವನೆಗಳಲ್ಲಿ ಏರುಪೇರು ಕಾಣಿಸಬಹುದು. ಆಗ ನಿಮಗೆ ಯೋಚ್ನೆ ಮಾಡೋಕೆ, ಕೆಲಸ ಮಾಡೋಕೆ ಮತ್ತು ನಿದ್ದೆ ಮಾಡೋಕೂ ಕಷ್ಟ ಆಗುತ್ತೆ. ಅಂಥ ಸಮಯದಲ್ಲಿ ನಿಮ್ಮ ಸ್ನೇಹಿತರ ಹತ್ರ ಮಾತಾಡಿ.
ಜೋಶುವ ಕೆಲಸ ಮಾಡ್ತಿದ್ದ ಆಫೀಸ್ನಲ್ಲಿ ಬೆಂಕಿ ಬಿದ್ದಾಗ, ಅವನು ಈ ಸಲಹೆ ಪಾಲಿಸಿದ. ಆದ್ರಿಂದ ತನ್ನ ಪ್ರಾಣ ಉಳಿಸ್ಕೊಂಡ, ಆದ್ರೆ ತುಂಬ ಜನ ತೀರಿಹೋದ್ರು. ಅವನಿಗೆ ಕ್ರೈಸ್ತ ಸಭೆಯಲ್ಲಿದ್ದ ಹಿರಿಯರು ಮತ್ತು ಮನೋವೈದ್ಯರು ಸಹಾಯ ಮಾಡಿದ್ರು. ಜೋಶುವ ಹೀಗೆ ಹೇಳ್ತಾನೆ, “ಡಾಕ್ಟರ್ ನನಗೆ, ‘ನಿಮಗೆ ಆಗ್ತಿರೋ ನೋವು-ಬೇಜಾರು ಸಹಜ. ಇದೆಲ್ಲ ಹೋಗ್ತಾ ಹೋಗ್ತಾ ಕಮ್ಮಿ ಆಗುತ್ತೆ, ಪರವಾಗಿಲ್ಲ’ ಅಂತ ಹೇಳಿದ್ರು. ನನಗೆ ಬರ್ತಿದ್ದ ಬೆಚ್ಚಿ ಬೀಳಿಸೋ ಕನಸುಗಳು ಆರು ತಿಂಗಳು ಆದ್ಮೇಲೆ ನಿಂತು ಹೋಯ್ತು. ಆದ್ರೆ ಇನ್ನು ಬೇರೆ ಕೆಲವು ತೊಂದರೆಗಳು ಇನ್ನು ಸ್ವಲ್ಪ ಸಮಯದ ತನಕ ಹಾಗೇ ಇತ್ತು.”
ವಿಪತ್ತು ಬಂದಾಗ ನಮಗೆ ಬೇಜಾರಾಗುತ್ತೆ. ಕೆಲವರು ಆಗ ದೇವರನ್ನ ಬೈತಾರೆ. ಆದ್ರೆ ಬೇರೆಯವ್ರಿಗೆ ದೋಷಿ ಭಾವನೆ ಇರುತ್ತೆ, ಜೋಶುವನಿಗೂ ಇತ್ತು. ಅದಕ್ಕೆ ಅವನು, “ನಾನು ಇನ್ನು ಕೆಲವ್ರನ್ನ ಕಾಪಾಡಬಹುದಿತ್ತಲ್ಲ” ಅಂತ ಕೊರಗ್ತಿದ್ದ. ಅವನು ಹೀಗೆ ಹೇಳ್ತಾನೆ, “ದೇವರು ಅತಿ ಬೇಗನೆ ಭೂಮಿಯಿಂದ ಎಲ್ಲಾ ಸಮಸ್ಯೆಗಳನ್ನ ತೆಗೆದುಹಾಕ್ತಾನೆ ಅಂತ ನನಗೆ ಗೊತ್ತಿದೆ. ಅಲ್ಲಿವರೆಗೂ ನಾನು ಪ್ರತಿದಿನ ಖುಷಿಯಾಗಿ ಇರ್ತೀನಿ. ನನ್ನ ಜೀವ ಕಾಪಾಡ್ಕೊಳ್ಳೋಕೆ ನನ್ನ ಕೈಯಲ್ಲಿ ಆಗಿದ್ದೆಲ್ಲ ಮಾಡ್ತೀನಿ.”—ಪ್ರಕಟನೆ 21:4, 5.a
a ದೇವರು ನಮ್ಮ ಭವಿಷ್ಯದ ಬಗ್ಗೆ ಏನು ಮಾತು ಕೊಟ್ಟಿದ್ದಾನೆ? ಇವತ್ತು ನಮಗೆ ಯಾಕೆ ಕಷ್ಟಗಳಿವೆ? ಈ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ಳೋಕೆ ನಿಮಗೆ ಇಷ್ಟ ಇದ್ಯಾ? ಹಾಗಿದ್ರೆ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅನ್ನೋ ಪುಸ್ತಕವನ್ನ ನೋಡಿ. ಇದನ್ನ ನೀವು www.jw.orgನಿಂದ ಡೌನ್ಲೋಡ್ ಮಾಡ್ಕೊಬಹುದು.