ಹರೆಯದಲ್ಲೇ ದಾರುಣ ಅಂತ್ಯ
“ನಮ್ಮ ಸಂತತಿಯು ನಾಶವಾಗುತ್ತಾ ಇದೆ ಎಂಬ ಅನಿಸಿಕೆ ನನಗಿದೆ.”—ಜೋಹಾನ ಪಿ., ಅಮೆರಿಕದ ಕನೆಕ್ಟಿಕಟ್‌ನ ವಿಶ್ವವಿದ್ಯಾನಿಲಯದ, 18 ವರ್ಷ ಪ್ರಾಯದ ಹೊಸ ವಿದ್ಯಾರ್ಥಿನಿ.
ಟಾಸ್ಮೇನಿಯವು, ಆಸ್ಟ್ರೇಲಿಯದ ಒಂದು ದ್ವೀಪವಾಗಿದೆ. ಆ ದ್ವೀಪದ ರಾಜಧಾನಿಯಾದ ಹೋಬಾರ್ಟ್‌ನಿಂದ ಸ್ವಲ್ಪ ದೂರದಲ್ಲಿರುವ ಒಂದು ಹೊಲಮನೆಯಲ್ಲಿ, ಒಂದು ಘೋರ ದೃಶ್ಯವು ಪೋಲಿಸ್ ಅಧಿಕಾರಿಗಳ ಕಣ್ಣಿಗೆ ಬಿತ್ತು. ಆ ಮನೆಯಲ್ಲಿ 10ರಿಂದ 18 ವರ್ಷ ಪ್ರಾಯದ ನಾಲ್ಕು ಮಂದಿ ಹುಡುಗಿಯರಿದ್ದರು. ಅವರೆಲ್ಲರೂ ಸತ್ತುಹೋಗಿದ್ದರು. ಅವರ ತಂದೆಯೇ ಅವರನ್ನು ಕೊಂದಿದ್ದನು. ಮತ್ತು ತದನಂತರ ಅವನು ತನ್ನ ತಲೆಗೆ ಗುಂಡನ್ನು ಹಾರಿಸಿಕೊಂಡು ಸಮೀಪದಲ್ಲೇ ಸತ್ತುಬಿದ್ದಿದ್ದನು. ಅವನು ತನ್ನ ಬಲಗೈಯನ್ನು ಕೊಡಲಿಯಿಂದ ಕಡಿದುಕೊಂಡಿದ್ದನು. ಈ ಕೊಲೆ-ಆತ್ಮಹತ್ಯೆಯು, ಟಾಸ್ಮೇನಿಯಾದ ಇಡೀ ಜನತೆಯನ್ನೇ ಕ್ಷೋಭೆಗೊಳಿಸಿತ್ತು. ಮತ್ತು ಈ ಪ್ರಕರಣವು ಜನರ ಮನಸ್ಸುಗಳಲ್ಲಿ ಗೊಂದಲವನ್ನು ಉಂಟುಮಾಡುವ ಪ್ರಶ್ನೆಯನ್ನು ಬಿಟ್ಟುಹೋಗಿತ್ತು; ಆ ನಾಲ್ಕು ಮುಗ್ಧ ಹುಡುಗಿಯರು ಏಕೆ ಸಾಯಬೇಕಾಗಿತ್ತು?
ತಾತ್ಕಾಲಿಕವಾಗಿ ಸೆರೆಯಿಂದ ಹೊರಗೆ ಬಿಡಲ್ಪಟ್ಟಿದ್ದ ಒಬ್ಬ ಬಲಾತ್ಕಾರಿಯು ಆರು ಮಂದಿಯನ್ನು ಬಲಾತ್ಕರಿಸಿ, ತದನಂತರ ಅವರಲ್ಲಿ ನಾಲ್ಕು ಮಂದಿಯನ್ನು ಕೊಲೆಮಾಡಿದ್ದರ ಆಘಾತದಿಂದ, ಬೆಲ್ಜಿಯಮ್ ಇನ್ನೂ ಚೇತರಿಸಿಕೊಳ್ಳುತ್ತಿದೆ. ಪುನಃ ಅದೇ ಪ್ರಶ್ನೆ ಕಾಡುತ್ತಿದೆ—ಈ ಹುಡುಗಿಯರು ಏಕೆ ಸಾಯಬೇಕಾಗಿತ್ತು? ಆರ್ಜೆಂಟೀನದಲ್ಲಿ, ಯಾವುದು ಅಶ್ಲೀಲ ಯುದ್ಧ (ಡರ್ಟಿ ವಾರ್) ಎಂದು ಪ್ರಸಿದ್ಧವಾಗಿತ್ತೋ ಆ ಯುದ್ಧದಲ್ಲಿ, 30,000 ಮಂದಿ ಕಾಣೆಯಾದರು. ಅವರಲ್ಲಿ ಹೆಚ್ಚಿನವರು ತಮ್ಮ ಪುತ್ರರು ಹಾಗೂ ಪುತ್ರಿಯರು ಎಂದು ಕೆಲವು ತಾಯಂದಿರು ನಂಬುತ್ತಾರೆ.a ಈ ನಿರ್ಭಾಗ್ಯರಲ್ಲಿ ಕೆಲವರು, ಚಿತ್ರಹಿಂಸೆ ನೀಡಲ್ಪಟ್ಟರು, ಮಾದಕೌಷಧಗಳಿಂದ ಅಮಲೇರಿಸಲ್ಪಟ್ಟರು, ಅನಂತರ ಅವರನ್ನು ವಿಮಾನದಲ್ಲಿ ಒಯ್ದು ಸಮುದ್ರಕ್ಕೆಸೆಯಲಾಯಿತು. ಅವರಲ್ಲಿ ಅನೇಕರನ್ನು ಸಜೀವವಾಗಿಯೇ ಎಸೆಯಲಾಯಿತು. ಅವರೇಕೆ ಸಾಯಬೇಕಾಗಿತ್ತು? ಈ ಪ್ರಶ್ನೆಗೆ ಅವರ ತಾಯಂದಿರು ಈಗಲೂ ಉತ್ತರಗಳಿಗಾಗಿ ಕಾಯುತ್ತಿದ್ದಾರೆ.
1955ರಲ್ಲಿ ವರ್ಲ್ಡ್ ಕಾಂಗ್ರೆಸ್ ಆಫ್ ಮದರ್ಸ್ ಎಂಬ ಅಧಿವೇಶನವು, ಯುದ್ಧದ ವ್ಯರ್ಥತೆಯನ್ನು ದೂಷಿಸಿತು ಮತ್ತು ಈ ಅಧಿವೇಶನವು “ಎಲ್ಲಕ್ಕಿಂತಲೂ ಮಿಗಿಲಾಗಿ ಒಂದು ಆಕ್ರಂದನವಾಗಿದೆ, ಯುದ್ಧ ಹಾಗೂ ಯುದ್ಧದ ಸಿದ್ಧತೆಗಳು ತಂದೊಡ್ಡಿರುವ ಹಾನಿಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಲಿಕ್ಕಾಗಿ ಹೋರಾಡುತ್ತಿರುವ ಎಲ್ಲ ಸ್ತ್ರೀಯರಿಂದ ಬಂದ ಎಚ್ಚರಿಕೆಯ ಒಂದು ಆಕ್ರಂದನವಾಗಿದೆ ಎಂದು ಘೋಷಿಸಿತು.” ವ್ಯಂಗ್ಯವಾಗಿ, ಆ ಅಧಿವೇಶನವು ನಡೆದಂದಿನಿಂದ, ರಕ್ತಮಯ ಹೋರಾಟಗಳಲ್ಲಿ ಸಾವನ್ನಪ್ಪಿರುವ ಯುವ ಜನರ ಸಂಖ್ಯೆಯು ಲೋಕವ್ಯಾಪಕವಾಗಿ ಏರುತ್ತಲೇ ಇದೆ. ಅಂದರೆ, ನಾನಾ ವಿಧದ ಕೌಶಲಗಳು ಹಾಗೂ ಸಾಮರ್ಥ್ಯಗಳಿರುವ ಪೀಳಿಗೆಗೆ ಜನ್ಮನೀಡಬಹುದಾಗಿದ್ದ ಆ ಯುವ ಜನರ ಸಂತತಿಯು ನಾಶಗೊಳಿಸಲ್ಪಡುತ್ತಿದೆ.
ಹರೆಯದ ಮರಣಗಳ ದೀರ್ಘ ಇತಿಹಾಸ
ಇತಿಹಾಸದಾದ್ಯಂತ ಅಸಂಖ್ಯಾತ ಯುವ ಜನರು ವಧಿಸಲ್ಪಟ್ಟಿದ್ದಾರೆ. ಆಧುನಿಕತೆಯ ಕಡೆಗೆ ಮುನ್ನುಗ್ಗುತ್ತಿರುವ 20ನೆಯ ಶತಮಾನವೆಂದು ಕರೆಯಲ್ಪಡುವ ನಮ್ಮ ಶತಮಾನದಲ್ಲಿಯೂ, ಜಾತಿವಾದಿ ಹಾಗೂ ಕೋಮುವಾದಿ ಕಲಹಗಳು, ಯುವ ಜನರನ್ನು ಸಂಹಾರದ ಮುಖ್ಯ ಗುರಿಯನ್ನಾಗಿ ಮಾಡಿವೆ. ತಮ್ಮ ಹಿರಿಯರ ತಪ್ಪುಗಳು ಹಾಗೂ ಮಹತ್ವಾಕಾಂಕ್ಷೆಗಳಿಗಾಗಿ ಈ ಯುವ ಜನರು ತಮ್ಮ ಜೀವಗಳನ್ನು ಬಲಿಕೊಡಬೇಕಾಗಿದೆಯೋ ಎಂಬಂತೆ ಕಾಣುತ್ತದೆ.
ಆಫ್ರಿಕದ ಒಂದು ದೇಶದಲ್ಲಿ, ಧಾರ್ಮಿಕ ಹದಿವಯಸ್ಕ ಸೈನಿಕರ ಒಂದು ಸಂಸ್ಥೆಯಿದೆ. ಅವರು ತಮ್ಮನ್ನು ಲಾರ್ಡ್ಸ್ ರೆಸಿಸ್ಟೆನ್ಸ್ ಆರ್ಮಿ ಎಂದು ಹೇಳಿಕೊಳ್ಳುತ್ತಾರೆ. ಅವರು ಬಂದೂಕಿನ ಗುಂಡುಗಳಿಗೆ ಅಭೇದ್ಯರಾಗಿದ್ದಾರೆಂದು ನಂಬುವಂತೆ ಅವರಿಗೆ ಬೋಧಿಸಲಾಗಿದೆ ಎಂದು, ದ ನ್ಯೂ ರಿಪಬ್ಲಿಕ್ ಎಂಬ ಪತ್ರಿಕೆಯು ವರದಿಸುತ್ತದೆ. “ಹದಿವಯಸ್ಕರ ವ್ಯರ್ಥ ಜೀವನ” ಎಂಬುದು ಅದರ ಶೀರ್ಷಿಕೆಯಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ! ಆದುದರಿಂದ, ಪುತ್ರರು ಹಾಗೂ ಪುತ್ರಿಯರನ್ನು—ಎಷ್ಟೆಂದರೂ ಇವರು ಗುಂಡುಗಳಿಗೆ ಅಭೇದ್ಯರಾಗಿಲ್ಲ—ಕಳೆದುಕೊಂಡಿರುವ ಕುಟುಂಬಗಳು, ಯುಕ್ತವಾಗಿಯೇ ಹೀಗೆ ಪ್ರಶ್ನಿಸುತ್ತವೆ: ನಮ್ಮ ಯೌವನಸ್ಥರು ಏಕೆ ಸಾಯಬೇಕಾಗಿತ್ತು? ಈ ಅನಾಹುತಗಳಿಗೆ ಕಾರಣವೇನು?
ಈ ಎಲ್ಲ ದುರವಸ್ಥೆ ಹಾಗೂ ಕಷ್ಟಾನುಭವವಲ್ಲದೆ, ಯುವ ಜನರ ನಡುವಿನ ಆತ್ಮಹತ್ಯೆಯಿಂದ ಉಂಟಾಗುವ ಮರಣವು ಸಹ ಹೆಚ್ಚಾಗುತ್ತಿದೆ
[ಅಧ್ಯಯನ ಪ್ರಶ್ನೆಗಳು]
a ಡರ್ಟಿ ವಾರ್ ಎಂದು ಕರೆಯಲ್ಪಟ್ಟಿರುವ ಯುದ್ಧವು, ಮಿಲಿಟರಿ ಆಳ್ವಿಕೆಯ ಸಮಯದಲ್ಲಿ (1976-83) ಸಂಭವಿಸಿತು. ಆ ಸಮಯದಲ್ಲಿ ಅವರ ಆಳ್ವಿಕೆಯನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆಂಬ ಸಂದೇಹಕ್ಕೆ ಒಳಗಾದ ಸಾವಿರಾರು ಮಂದಿ ಕೊಲ್ಲಲ್ಪಟ್ಟರು. ಅದಕ್ಕೆ ಬಲಿಯಾದ ಜನರ ಸಂಖ್ಯೆಯು ಸುಮಾರು 10,000ದಿಂದ 15,000ವೆಂದು ಇತರ ಅಂದಾಜುಗಳು ತಿಳಿಸುತ್ತವೆ.