ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 4/8 ಪು. 31
  • ನೀರು ಮತ್ತು ನಿಮ್ಮ ಆರೋಗ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೀರು ಮತ್ತು ನಿಮ್ಮ ಆರೋಗ್ಯ
  • ಎಚ್ಚರ!—1998
  • ಅನುರೂಪ ಮಾಹಿತಿ
  • ಶುದ್ಧ ನೀರು
    ಎಚ್ಚರ!—2023
ಎಚ್ಚರ!—1998
g98 4/8 ಪು. 31

ನೀರು ಮತ್ತು ನಿಮ್ಮ ಆರೋಗ್ಯ

“ನಿಮ್ಮ ದೇಹಕ್ಕೆ ಎಷ್ಟು ನೀರು ಆವಶ್ಯಕವಾಗಿದೆ ಎಂಬುದನ್ನು ನಿರ್ಧರಿಸಲು ನೀವು ನಿಮ್ಮ ಬಾಯಾರಿಕೆಯ ಮೇಲೆ ಅವಲಂಬಿಸಲು ಸಾಧ್ಯವಿಲ್ಲ” ಎಂದು ಆರೋಗ್ಯ (ಇಂಗ್ಲಿಷ್‌) ಎಂಬ ಪತ್ರಿಕೆಯು ಸೂಚಿಸುತ್ತದೆ. ಆದರೆ, ನಮ್ಮ ಶಾರೀರಿಕ ಹಾಗೂ ಭಾವನಾತ್ಮಕ ಒಳಿತಿಗಾಗಿ ಮತ್ತು ನಮ್ಮ ಹೊರತೋರಿಕೆಗಾಗಿಯೂ, ಬಹಳಷ್ಟು ನೀರನ್ನು ಕುಡಿಯುವುದು ಅತ್ಯಗತ್ಯವಾಗಿದೆ. ಬೆವರು, ಕಣ್ಣೀರು, ಹಾಗೂ ಮೂತ್ರದ ಮೂಲಕ ಹಾಗೂ ನಮ್ಮ ಉಸಿರಿನ ಮೂಲಕ ನಮ್ಮ ದೇಹವು ಸತತವಾಗಿ ನೀರನ್ನು ಕಳೆದುಕೊಳ್ಳುತ್ತದೆ. ಕಳೆದುಕೊಂಡ ಈ ದ್ರವಪದಾರ್ಥವನ್ನು ಪುನಃ ಭರ್ತಿಮಾಡಬೇಕು. ಎಷ್ಟು ನೀರು ಅಗತ್ಯವಾಗಿದೆ? ಪ್ರತಿ ದಿನ ಕಡಿಮೆಪಕ್ಷ ಎಂಟು ಲೋಟಗಳಷ್ಟು—ಎರಡು ಲೀಟರ್‌ಗಳು—ನೀರನ್ನು ಕುಡಿಯುವುದನ್ನು ಅನೇಕ ತಜ್ಞರು ಶಿಫಾರಸ್ಸು ಮಾಡುತ್ತಾರೆ.

ಏಕೆ ಅಷ್ಟು ನೀರನ್ನು ಕುಡಿಯಬೇಕು? ನಮ್ಮ ದೇಹಗಳೊಳಗೆ ಪೋಷಕಾಂಶಗಳನ್ನು ಸಾಗಿಸಲು ಹಾಗೂ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೀರು ಅತ್ಯಾವಶ್ಯಕವಾಗಿ ಬೇಕಾಗಿದೆ. ನಮ್ಮ ಉಷ್ಣತೆಯನ್ನು ಕ್ರಮಬದ್ಧಪಡಿಸಲು ಹಾಗೂ ನಮ್ಮ ಕೀಲುಗಳಲ್ಲಿ ಚಲನಸೌಲಭ್ಯವನ್ನುಂಟುಮಾಡಲು ಅದು ಅಗತ್ಯವಾಗಿದೆ. “ನೀರಿನ ಸ್ವಲ್ಪ ಮಟ್ಟಿಗಿನ ಕೊರತೆಯು ಸಹ ನಿಮ್ಮಲ್ಲಿ ಆಯಾಸದ . . . ಅಥವಾ ಅನಾರೋಗ್ಯದ ಅನಿಸಿಕೆಯನ್ನು ಉಂಟುಮಾಡಬಲ್ಲದು” ಎಂದು ಆರೋಗ್ಯ ಎಂಬ ಪತ್ರಿಕೆಯು ಗಮನಿಸುತ್ತದೆ. “ನಿರ್ಜಲೀಕರಣವು, ಬಳಲಿಕೆಯ ಸರ್ವಸಾಮಾನ್ಯವಾಗಿ ಉಪೇಕ್ಷಿಸಲ್ಪಡುವ ಒಂದು ಕಾರಣವಾಗಿದೆ.” ಆ ಪತ್ರಿಕೆಯು ಶಿಫಾರಸ್ಸು ಮಾಡುವುದು: “ಕಾಫಿ ಹಾಗೂ ಚಹಾ, ಕ್ಯಾಫೀನ್‌ ಹಾಕಲ್ಪಟ್ಟ ತಂಪು ಪಾನೀಯಗಳು, ಮತ್ತು ಮದ್ಯಸಾರದ ದ್ರವ ಸ್ಥಿತಿಯಿಂದ ಮೋಸಹೋಗಬೇಡಿರಿ; ವಾಸ್ತವವಾಗಿ ಅವು ನಿರ್ಜಲೀಕರಣವನ್ನು ಹೆಚ್ಚಿಸುತ್ತವೆ.” ಕ್ಯಾಫೀನ್‌ ಹಾಗೂ ಮದ್ಯಸಾರಗಳು ಮೂತ್ರಸ್ರಾವ ಉತ್ತೇಜಕಗಳಾಗಿ ಕಾರ್ಯನಡಿಸಿ, ದೇಹವು ನೀರನ್ನು ಕಳೆದುಕೊಳ್ಳುವಂತೆ ಮಾಡುತ್ತವೆ.

ಇದಕ್ಕೆ ಕೂಡಿಸಿ, “ನಿಮ್ಮ ಚರ್ಮವು ಮೃದುವಾಗಿಯೂ ನಯವಾಗಿಯೂ ಉಳಿಯಲು ನೀರು ಅಗತ್ಯವಾಗಿದೆ.” ಇದಕ್ಕೆ ನೆರವನ್ನೀಯಲಿಕ್ಕಾಗಿ, ಚರ್ಮಕ್ಕೆ ಮಾಯ್‌ಸ್ಚರೈಸರ್‌ಗಳನ್ನು ಸಹ ಲೇಪಿಸಬಹುದು. ಆದರೆ ಅವು ತೇವಾಂಶವನ್ನು ಒದಗಿಸುವುದಿಲ್ಲ. ಬದಲಾಗಿ, ಈಗಾಗಲೇ ಚರ್ಮದಲ್ಲಿ ಇರುವ ತೇವಾಂಶವನ್ನು ಹಾಗೇ ಉಳಿಸಲಿಕ್ಕಾಗಿ ಅವು ಒಂದು ರಕ್ಷಣಾತ್ಮಕ ಹೊದಿಕೆಯನ್ನು ಉಳಿಸುತ್ತವೆ. ವಯಸ್ಸಾದಂತೆ ಈ ತೇವಾಂಶವನ್ನು ತಡೆದಿಡುವುದು ಹೆಚ್ಚು ಪ್ರಾಮುಖ್ಯ, ಏಕೆಂದರೆ ನಮಗೆ ಹೆಚ್ಚೆಚ್ಚು ವಯಸ್ಸಾದಂತೆ, ನಮ್ಮ ಚರ್ಮವು ನೀರಿನಾಂಶವನ್ನು ತಡೆದಿಡುವ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

ವಿಷಾದಕರವಾಗಿ, ಲೋಕದ ಬಹುತೇಕ ಭಾಗಗಳಲ್ಲಿ, ಸಾಕಷ್ಟು ಸ್ವಚ್ಛವಾದ, ಶುದ್ಧ ನೀರನ್ನು ಪಡೆದುಕೊಳ್ಳಲು ಗಮನಾರ್ಹ ಪ್ರಮಾಣದ ಪ್ರಯತ್ನವು ಆವಶ್ಯಕವಾಗಿದೆ. ಆದರೆ ಅದು ಪ್ರಯತ್ನಕ್ಕೆ ಸಾರ್ಥಕವಾದದ್ದು. ನಿಶ್ಚಯವಾಗಿಯೂ ತುಂಬ ನೀರನ್ನು ಕುಡಿಯಿರಿ, ಮತ್ತು ನೀವು ಅತ್ಯುತ್ತಮವಾಗಿ ಕಾಣಲು ಹಾಗೂ ನಿಮಗೆ ಒಳ್ಳೆಯ ಅನಿಸಿಕೆಯಾಗಲು ಈ ಸರಳ ವಿಧಾನದ ಸದುಪಯೋಗವನ್ನು ಮಾಡಿಕೊಳ್ಳಿರಿ!

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ