ಕುಸಿದುಬೀಳುತ್ತಿರುವ ಒಂದು ವಿವಾಹಕ್ಕಾಗಿ ಸಹಾಯ
ನ್ಯೂ ಸೀಲೆಂಡ್ನ ನಾರ್ತ್ ಐಲೆಂಡಿನ ಸ್ತ್ರೀಯೊಬ್ಬಳು, ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದ ಕುರಿತಾಗಿ ಬರೆದುದು: “ಪ್ರಥಮ ಬಾರಿ ನಾನು ಆ ಪ್ರಕಾಶನವನ್ನು ಅಭ್ಯಾಸಿಸಲು ತೊಡಗಿದಾಗ, ನನ್ನ ವಿವಾಹವು ‘ಯಶಸ್ವಿಗೊಳ್ಳುವಂತಹ ಅಥವಾ ಕೊನೆಗೊಳ್ಳುವಂತಹ’ ಒಂದು ಹಂತದಲ್ಲಿ ಇತ್ತೋ ಎಂಬಂತಹ ಅನಿಸಿಕೆ ನನಗಾಯಿತು.”
ಅವಳು ತನ್ನ ಹಿನ್ನೆಲೆಯನ್ನು ವಿವರಿಸಿದಳು. “ನನ್ನ ತಾಯಿಯವರು ಎರಡು ನಿಂದಾತ್ಮಕ ವಿವಾಹಗಳಲ್ಲಿ ತುಂಬ ಕಷ್ಟವನ್ನು ಅನುಭವಿಸಿದ್ದರು. ಫಲಿತಾಂಶವಾಗಿ, ಪುರುಷರು ಪ್ರಯೋಜನಕ್ಕೆ ಬಾರದವರು ಹಾಗೂ ಸ್ತ್ರೀಯರನ್ನು ದಬ್ಬಾಳಿಕೆಗೊಳಪಡಿಸಲಿಕ್ಕಾಗಿ ಮಾತ್ರ ಅವರಿದ್ದಾರೆ ಎಂದು ನಮಗೆ ಯಾವಾಗಲೂ ಕಲಿಸಲಾಯಿತು. ಆದುದರಿಂದ, ನಾನು ಯಾವುದೇ ವಾಗ್ವಾದದಿಂದ ಹಿಮ್ಮೆಟ್ಟದಿರುವಂತಹ ಒಬ್ಬ ಮೊಂಡು, ಹಟಮಾರಿ ಸ್ತ್ರೀಯಾಗಿ ಬೆಳೆದೆ.”
ಬದಲಾವಣೆಗಾಗಿರುವ ಆವಶ್ಯಕತೆಯನ್ನು ಆ ಸ್ತ್ರೀಯು ಗ್ರಹಿಸಿದಳು. “ನನ್ನ ಗಂಡನಿಗೆ ಅಧೀನತೆಯಲ್ಲಿರದ ಕಾರಣದಿಂದ ಹಾಗೂ ನಾನು ತೀರ ದುರಹಂಕಾರಿಯಾಗಿದ್ದುದರಿಂದ, ಕುಟುಂಬ ಸಂತೋಷಕ್ಕಾಗಿರುವ ಸಂಭವನೀಯತೆಯನ್ನು ನಾನು ಬಿಟ್ಟುಕೊಡುತ್ತಿದ್ದೇನೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ.” ಆದುದರಿಂದ ಅವಳು ಅತ್ಯಗತ್ಯವಾದ ಹೊಂದಾಣಿಕೆಗಳನ್ನು ಮಾಡಿದಳು. ಅದನ್ನು ಅವಳು ಹೀಗೆ ವಿವರಿಸುತ್ತಾಳೆ: “ನನ್ನ ಗಂಡನೂ ನಾನೂ ಈಗ ಕುಟುಂಬವಾಗಿ ಆ ಪುಸ್ತಕವನ್ನು ಅಭ್ಯಾಸಿಸುತ್ತಿದ್ದೇವೆ, ಮತ್ತು ಒಬ್ಬ ಕ್ರೈಸ್ತ ಹೆಂಡತಿಯಾಗಿರುವುದು ಹೇಗೆ ಎಂಬುದನ್ನು ನಾನು ಇನ್ನೂ ಕಲಿಯುತ್ತಿದ್ದೇನೆ. ನಮ್ಮ ಈಗಿನ ಸಂಬಂಧದಿಂದ ನಾವು ತುಂಬ ಸಂತೋಷಿತರಾಗಿದ್ದೇವಾದರೂ, ನಾವು ಇನ್ನೂ ಹೆಚ್ಚು ಪ್ರಗತಿಯನ್ನು ಮಾಡಬೇಕಾಗಿದೆ.
“ನಮ್ಮ ಮನೆಯು ಇಂದು ಎಷ್ಟು ಪ್ರೀತಿಯಿಂದ ಹಾಗೂ ಶಾಂತಿಯಿಂದ ತುಂಬಿದೆಯೆಂದರೆ ಹಿಂದೆಂದೂ ಹೀಗಿರಲಿಲ್ಲ.”
ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ 32 ಪುಟದ ಬ್ರೋಷರಿನ—ಅದರ ಪಾಠ 8, “ದೇವರನ್ನು ಮೆಚ್ಚಿಸುವ ಕುಟುಂಬ ಜೀವನ” ಎಂಬ ವಿಷಯದೊಂದಿಗೆ ವ್ಯವಹರಿಸುತ್ತದೆ—ಒಂದು ಪ್ರತಿಯನ್ನು ಪಡೆದುಕೊಳ್ಳಲು ನೀವು ಬಯಸುವಲ್ಲಿ, Watch Tower, H-58, Old Khandala Road, Lonavla 410 401., India, ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದ್ದಾದ ವಿಳಾಸಕ್ಕೆ ಪತ್ರವನ್ನು ಬರೆಯಿರಿ. ಯಾರಾದರೊಬ್ಬರು ನಿಮ್ಮೊಂದಿಗೆ ಒಂದು ಉಚಿತವಾಗಿ ಗೃಹ ಬೈಬಲ್ ಅಭ್ಯಾಸವನ್ನು ಮಾಡಲೂ ಇಷ್ಟಪಡುವಲ್ಲಿ, ಅದನ್ನು ದಯವಿಟ್ಟು ತಿಳಿಸಿರಿ.