“ನನಗೆ ಎಚ್ಚರ! ಪತ್ರಿಕೆಯನ್ನು ಓದಲು ಒಲವೇ ಇದ್ದಿರಲಿಲ್ಲ”
ಅವು ಕ್ಯಾಲಿಫೋರ್ನಿಯದ ಸಾನೋಸಾ ರಾಜ್ಯ ವಿಶ್ವವಿದ್ಯಾನಿಲಯದಲ್ಲಿ ಪರಿಸರೀಯ ಅಧ್ಯಯನಗಳ ಕೋರ್ಸ್ನಲ್ಲಿ ಹೆಸರನ್ನು ನಮೂದಿಸಿಕೊಂಡಿರುವ ಒಬ್ಬ ವಿದ್ಯಾರ್ಥಿನಿಯ ಮಾತುಗಳಾಗಿವೆ. ಅವಳು ಮುಂದುವರಿಸುವುದು: “ಪತ್ರಿಕೆಯು ನನಗೆ—‘ಚರ್ಚಿಗೆ ಹೋಗು’ ಅಥವಾ ‘ಒಬ್ಬ ಯೆಹೋವನ ಸಾಕ್ಷಿಯಾಗು’ ಎಂಬ ಉಪನ್ಯಾಸವನ್ನು ಕೊಡಲಿದೆಯೆಂಬ ಭಾವನೆಯು ನನಗಿತ್ತು. ಆದರೂ ಈ ಸಂಚಿಕೆಯನ್ನು (ಫೆಬ್ರವರಿ 8, 1996, ‘ಅಪಾಯಕ್ಕೊಳಗಾಗಿರುವ ನಮ್ಮ ಭೂಗ್ರಹ—ಅದನ್ನು ಸಂರಕ್ಷಿಸಸಾಧ್ಯವಿದೆಯೊ?’) ಓದಿದಾಗ ನನ್ನ ಆಶ್ಚರ್ಯಕ್ಕೆ ಅದು ತುಂಬ ವಾಸ್ತವಿಕ ಸಂಗತಿಯಾಗಿತ್ತು! ಆ ಲೇಖನಗಳು, ಅರಣ್ಯನಾಶ, ವಿಷಕರ ಹಿಪ್ಪೆಗಳು, ವಾಯುಮಂಡಲದ ಮಾಲಿನ್ಯ, ನೀರಿನ ಅಭಾವ, ಅಪಾಯಕ್ಕೊಳಗಾಗಿರುವ ಜಾತಿಗಳು ಹಾಗೂ ಜಮೀನು ಪ್ರದೇಶದ ಕ್ಷಯಿಸುವಿಕೆಯಿಂದ ಬಾಧಿತವಾದ ಸ್ಥಳಗಳನ್ನು ನಿರೂಪಿಸುವ, ‘ಲೋಕದ ಪ್ರಮುಖ ಪರಿಸರೀಯ ಸಮಸ್ಯೆಗಳಲ್ಲಿ ಕೆಲವು’ ಎಂಬ ಬೋಧಪ್ರದ ಚಿತ್ರವನ್ನು ಒಳಗೊಂಡವು.
“ಈ ವರೆಗೂ ನನಗೆ ಮಕ್ಕಳಿಲ್ಲ, ಆದರೆ ಮುಂದೆ ನನಗೆ ಮಕ್ಕಳಾಗುವಲ್ಲಿ, ಅವರಿಗೆ ಉಸಿರಾಡಲು ಶುದ್ಧ ಗಾಳಿ, ಆಟವಾಡಲು ಉದ್ಯಾನವನಗಳು, ಅಥವಾ ಬದುಕಿ ಉಳಿಯಲು ನೀರು ಇರುವವೋ ಎಂಬುದರ ಕುರಿತು ನಾನು ಚಿಂತಿಸುತ್ತೇನೆ. . . . ಈ ಲೇಖನಗಳಿಗಾಗಿ ನಾನು ನಿಮ್ಮನ್ನು ಶ್ಲಾಘಿಸುತ್ತೇನೆ.”
ಈಗ ಎಚ್ಚರ! ಪತ್ರಿಕೆಯ ಪ್ರತಿಯೊಂದು ಸಂಚಿಕೆಯು 80 ಭಾಷೆಗಳಲ್ಲಿ—ಇದರಲ್ಲಿ 56 ಭಾಷೆಗಳು ಏಕಕಾಲವಾಗಿ ಪ್ರಕಾಶಿಸಲ್ಪಡುತ್ತವೆ—1,83,00,000 ವಿತರಣೆಯನ್ನು ಹೊಂದಿದೆ. ಈ ಪತ್ರಿಕೆಯನ್ನು ನೀವು ಕ್ರಮವಾಗಿ ಓದಲು ಇಷ್ಟಪಡುವಲ್ಲಿ, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಫೋನ್ ಮೂಲಕ ಇಲ್ಲವೇ ಸ್ಥಳಿಕ ರಾಜ್ಯ ಸಭಾಗೃಹಕ್ಕೆ ದಯವಿಟ್ಟು ಸಂಪರ್ಕಿಸಿರಿ, ಅಥವಾ ಪುಟ 5ರಲ್ಲಿ ಪಟ್ಟಿಮಾಡಲ್ಪಟ್ಟಿರುವ ಅತಿ ಹತ್ತಿರದ ವಿಳಾಸಕ್ಕೆ ಬರೆಯಿರಿ.