ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 4/8 ಪು. 30
  • ನಮ್ಮ ವಾಚಕರಿಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಮ್ಮ ವಾಚಕರಿಂದ
  • ಎಚ್ಚರ!—1997
  • ಅನುರೂಪ ಮಾಹಿತಿ
  • ಲೈಮ್‌ ರೋಗ ನೀವು ಅಪಾಯದಲ್ಲಿದ್ದೀರೊ?
    ಎಚ್ಚರ!—1996
  • ಕಾರ್ನಿವಲ್‌ ಆಚರಣೆಗಳು ಸರಿಯೊ ತಪ್ಪೊ?
    ಎಚ್ಚರ!—1996
  • ನಮ್ಮ ವಾಚಕರಿಂದ
    ಎಚ್ಚರ!—1997
  • ನಮ್ಮ ವಾಚಕರಿಂದ
    ಎಚ್ಚರ!—1997
ಇನ್ನಷ್ಟು
ಎಚ್ಚರ!—1997
g97 4/8 ಪು. 30

ನಮ್ಮ ವಾಚಕರಿಂದ

ಟೆಲಿಫೋನ್‌ ಶಿಷ್ಟಾಚಾರಗಳು “ನಿಮ್ಮ ಟೆಲಿಫೋನ್‌ ಶಿಷ್ಟಾಚಾರಗಳು ಹೇಗಿವೆ?” (ಜುಲೈ 8, 1996) ಎಂಬ ಅತ್ಯುತ್ತಮವಾದ ಲೇಖನಕ್ಕಾಗಿ ನಿಮಗೆ ಉಪಕಾರ. ಫೋನಿನ ಮೂಲಕ ಗಿರಾಕಿ ಸರ್ವಿಸ್‌ಗಳನ್ನು ಒದಗಿಸುವ ಒಂದು ಬ್ಯಾಂಕಿನಲ್ಲಿ ನಾನು ಕೆಲಸಮಾಡುತ್ತೇನೆ. ನಾನು ಈ ಲೇಖನವನ್ನು ನನ್ನ ಮೇಲ್ವಿಚಾರಕರಿಗೆ ಕೊಟ್ಟೆ, ಮತ್ತು ಅವರು ಈ ಲೇಖನವನ್ನು ಪ್ರಯೋಜನಕರವೂ, ಕಾಲೋಚಿತವೂ, ಪ್ರಾಯೋಗಿಕವೂ ಆದದ್ದಾಗಿ ಕಂಡುಕೊಂಡರೆಂದು ನನಗೆ ಹೇಳಿದರು. ಆ ಲೇಖನವನ್ನು, ನಮ್ಮ ಎಲ್ಲಾ 32 ಮಂದಿ ಟೆಲಿಫೋನ್‌ ಆಪರೇಟರ್‌ಗಳಿಗೆ ಕಳುಹಿಸಿಕೊಡುವಂತೆ ಅವರು ನನ್ನ ಬಳಿ ಕೇಳಿಕೊಂಡರು.

ಎನ್‌. ಜೆ. ಎಸ್‌., ಬ್ರೆಸಿಲ್‌

ಗತ ಸಮಯಗಳಲ್ಲಿ, ದುಷ್ಕೃತ್ಯದ ಹೇತುಗಳಿದ್ದ, ಅನಪೇಕ್ಷಿತವಾಗಿ ಟೆಲಿಫೋನ್‌ ಕರೆಗಳನ್ನು ಮಾಡುತ್ತಿದ್ದ ಜನರಿಂದ ತೊಂದರೆಗಳನ್ನು ಹೊಂದಿದ್ದು, ನಾವು ಮೂರು ಬಾರಿ ವಿನಯಪೂರ್ವಕವಾಗಿ ಬೇಡಿಕೊಂಡಾಗಲೂ, ಆ ಕರೆಗಳನ್ನು ಮಾಡುವವನು ತನ್ನನ್ನು ಗುರುತಿಸಿಕೊಳ್ಳಲು ನಿರಾಕರಿಸುವಲ್ಲಿ, ಫೋನನ್ನು ಇಟ್ಟುಬಿಡುವಂತೆ ಟೆಲಿಫೋನ್‌ ಕಂಪೆನಿಯಿಂದ ಕೊಡಲ್ಪಟ್ಟ ಸಲಹೆಯನ್ನು ನಾವು ಬಹಳ ಸಮಯದಿಂದಲೂ ಅನುಸರಿಸಿದೆವು. ಸ್ನೇಹಿತನೊಬ್ಬನು ಫೋನ್‌ ಮಾಡಿ, ನಾನು ಯಾರೆಂದು ಊಹಿಸಿ—ಇದು ಆ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿದೆ—ಎಂಬ ಆಟವನ್ನು ಆಡಿರುವಾಗ, ಇದು ಅನೇಕ ಸಲ ನೋವಿನ ಅನಿಸಿಕೆಗಳಲ್ಲಿ ಫಲಿಸಿದೆ. ಈ ರೀತಿಯ ಲೇಖನಗಳು, ಕ್ಷುಲ್ಲಕವೆಂದು ತೋರುವ ಇಂತಹ ಕ್ಷೇತ್ರಗಳಲ್ಲಿಯೂ ದಯಾಪರತೆಯನ್ನೂ ಗ್ರಹಿಸುವಿಕೆಯನ್ನೂ ಪ್ರವರ್ಧಿಸುತ್ತವೆ.

ಜಿ. ಎ., ಅಮೆರಿಕ

ಲೈಮ್‌ ರೋಗ “ಲೈಮ್‌ ರೋಗ—ನೀವು ಅಪಾಯದಲ್ಲಿದ್ದೀರೊ?” (ಜುಲೈ 8, 1996) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ಒಬ್ಬ ವೈದ್ಯನೋಪಾದಿ ನಾನು ಈ ರೋಗವಿರುವ ಅನೇಕ ರೋಗಿಗಳನ್ನು ಇತ್ತೀಚಿಗೆ ನೋಡಿದ್ದೇನೆ ಮತ್ತು ನೀವು ಪ್ರಸ್ತಾಪಿಸಿದ್ದಂತಹ ಮುಂಜಾಗ್ರತೆಗಳನ್ನು ನಾನು ಸಮರ್ಥಿಸಬಲ್ಲೆ. ಹೆಚ್ಚಿನ ವಿದ್ಯಮಾನಗಳಲ್ಲಿ ರೋಗಿಗಳ ರೋಗಲಕ್ಷಣಗಳು ಗಂಭೀರವಾಗಿ ಪರಿಗಣಿಸಲ್ಪಡುವುದಿಲ್ಲ, ಮತ್ತು ಇದರಿಂದಾಗಿ ರೋಗಿಗಳು ದೀರ್ಘ ಸಮಯದ ವರೆಗೆ ನರಳುತ್ತಾರೆ. ಎಚ್ಚರ! ಪತ್ರಿಕೆಯು ಸಂಧಿವಾತ ನಮೂನೆಯ ರೋಗದ ವಿಷಯದಲ್ಲಿ ವಿವರಣೆ ನೀಡಿತು; ಈ ರೋಗವು ಅಮೆರಿಕದಲ್ಲಿ ಪ್ರಚಲಿತವಾಗಿದೆ. ಇನ್ನೆರಡು ರೋಗೋತ್ಪಾದಕಗಳು ಯೂರೋಪಿನಲ್ಲಿ ಕಂಡುಹಿಡಿಯಲ್ಪಟ್ಟಿದ್ದು, ಸಾಂಪ್ರದಾಯಿಕ ಪ್ರಯೋಗಾಲಯ ಪರೀಕ್ಷೆಗಳು ಅವುಗಳನ್ನು ಕಂಡುಹಿಡಿಯಲು ಶಕ್ತವಾಗಿಲ್ಲ. ಲೈಮ್‌ ರೋಗಕ್ಕೆ, ಪ್ರತಿಜೀವಾಣುಗಳು ಆರಂಭದ ಹಂತಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿರುತ್ತವೆ ಮತ್ತು ಅನೇಕವೇಳೆ ತದನಂತರದ ಹಂತಗಳಲ್ಲಿ ನಿಷ್ಫಲವಾಗಿರುತ್ತವೆ.

ಐ. ಎಸ್‌., ಜರ್ಮನಿ

ಲೈಮ್‌ ರೋಗದಿಂದ ನರಳುತ್ತಿರುವವನೋಪಾದಿ, ಈ ಅದ್ಭುತಕರ ಲೇಖನವನ್ನು ನಾನು ತುಂಬ ಉತ್ತೇಜನದಾಯಕವಾಗಿ ಕಂಡುಕೊಂಡೆ. ಇದನ್ನು ಓದುವವರೆಲ್ಲರೂ, ಈ ರೋಗವನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯವಿರುವ ಎಲ್ಲಾ ಮುಂಜಾಗ್ರತೆಗಳನ್ನು ತೆಗೆದುಕೊಳ್ಳುವರೆಂದು ನಾನು ಆಶಿಸುತ್ತೇನೆ.

ಡಿ. ಪಿ., ಅಮೆರಿಕ

ಕಲಿಯುವ ಕ್ರಮರಾಹಿತ್ಯಗಳು “ಯುವ ಜನರು ಪ್ರಶ್ನಿಸುವುದು . . . ನಾನು ಏಕೆ ಕಲಿಯಲಾರೆ?” (ಜುಲೈ 8, 1996) ಎಂಬ ಲೇಖನವನ್ನು ನಾನು ನಿಜವಾಗಿಯೂ ಗಣ್ಯಮಾಡಿದೆ. ಈ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಕೆಲವೊಂದು ಕಾರಣಗಳಿಗಾಗಿ ನಾನು ಶಾಲೆಯಲ್ಲಿ ಹೋರಾಟನಡೆಸುತ್ತಿದ್ದೇನೆ. ನಾನು ನಿಮ್ಮ ಸಲಹೆಗಳನ್ನು ಅನ್ವಯಿಸಲಿದ್ದೇನೆ. ನಿಮಗೆ ತುಂಬ ಉಪಕಾರ.

ಆರ್‌. ಸಿ., ಅಮೆರಿಕ

ನಾನು ಕಲಿಯುವುದರಲ್ಲಿ ಸಂಪೂರ್ಣವಾಗಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದೆ ಹಾಗೂ ಶಾಲೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸುತ್ತಿರಲಿಲ್ಲ. ಈ ಲೇಖನದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಕ್ಕೆ ಹಾಕುವ ಮೂಲಕ, ನಾನು ನನ್ನ ಕಲಿಯುವ ಹವ್ಯಾಸಗಳನ್ನು ಉತ್ತಮಗೊಳಿಸಿಕೊಳ್ಳಲು ಆಶಿಸುತ್ತೇನೆ.

ಎಮ್‌. ಇ. ಓ., ಯುಗಾಂಡ

ನನಗೆ ಯಾವುದೇ ರೀತಿಯ ಕಲಿಯುವ ಕ್ರಮರಾಹಿತ್ಯಗಳಿಲ್ಲವಾದರೂ, ನನಗೆ ಅಭ್ಯಾಸಮಾಡುವುದು ಸ್ವಲ್ಪವೂ ಇಷ್ಟವಿಲ್ಲ. ನನಗೆ ಗಣಿತಸಂಬಂಧವಾದ ಸೂತ್ರ (ಫಾರ್ಮ್ಯುಲ)ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದೂ ಕಷ್ಟಕರವಾಗಿದೆ. ಅಲ್ಪಕಾಲಾವಧಿಯ ಜ್ಞಾಪಕ ಸಮಸ್ಯೆಗಳಿಗೆ, ಪುನರಾವೃತ್ತಿ ಹಾಗೂ ಶಬ್ದಗಳನ್ನು ಬಹಳ ಸ್ಪಷ್ಟವಾಗಿ ಉಚ್ಚರಿಸುವುದು ಒಂದು ಸಹಾಯವಾಗಿದೆಯೆಂದು ಈ ಲೇಖನವು ಉಲ್ಲೇಖಿಸಿತು. ನನ್ನಷ್ಟಕ್ಕೇ ಗಟ್ಟಿಯಾಗಿ ಓದಿಕೊಳ್ಳುವುದು ಅವಿವೇಕತನವಾಗಿರುವುದೆಂದು ನಾನು ಆರಂಭದಲ್ಲಿ ಅಭಿಪ್ರಯಿಸಿದೆನಾದರೂ, ನಾನು ಹಾಗೆ ಮಾಡಿದಾಗ ಅದು ವಿನೋದಕರವಾಗಿತ್ತು!

ಎನ್‌. ಐ., ಜಪಾನ್‌

ಕಾನೂನುಭ್ರಷ್ಟ “ನಾನೊಬ್ಬ ಕಾನೂನುಭ್ರಷ್ಟನಾಗಿದ್ದೆ” (ಜುಲೈ 8, 1996) ಎಂಬ ಶಿರೋನಾಮವಿದ್ದ, ಫ್ರಾಂಕ್‌ ಮಾನಿನೊ ಅವರ ಅನುಭವವನ್ನು ಪ್ರಕಾಶಿಸಿದ್ದಕ್ಕಾಗಿ ಉಪಕಾರ. ಅದು ನನ್ನ ಮೇಲೆ ಪ್ರಭಾವಬೀರಿತು, ಮತ್ತು ನಮ್ಮ ಸೃಷ್ಟಿಕರ್ತನಾದ ಯೆಹೋವನು ಎಷ್ಟು ಪ್ರಬಲನೂ ಪ್ರೀತಿಪೂರ್ಣನೂ ಆಗಿದ್ದಾನೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳುವಂತೆ ಮಾಡಿತು. ನಾನು 30 ವರ್ಷಗಳಿಂದ ಆತನ ಸೇವೆಮಾಡುತ್ತಿದ್ದೇನೆ, ಮತ್ತು ನಾನು ಸಾರುವ ಕೆಲಸವನ್ನು ಮಾಡಲು ಸ್ವತಂತ್ರನಾಗಿರುವಾಗಲೇ ಆ ಕೆಲಸದಲ್ಲಿ ನನ್ನಿಂದ ಆದುದೆಲ್ಲವನ್ನೂ ಮಾಡುವಂತೆ ಈ ಅನುಭವವು ನನ್ನನ್ನು ಪ್ರೋತ್ಸಾಹಿಸಿದೆ.

ಇ. ಬಿ., ಇಟಲಿ

ಈ ಲೇಖನವು ನನಗೆ, ಕ್ರೈಸ್ತ ಕೂಟಗಳಿಗೆ ಹಾಜರಾಗುವ ಸುಯೋಗವನ್ನು ಗಣ್ಯಮಾಡುವಂತೆ ಸಹಾಯ ಮಾಡಿದೆ. ನನ್ನ ವೈಯಕ್ತಿಕ ವ್ಯವಸ್ಥಾಪನೆಯ ಕೊರತೆಯು, ನಾನು ವಾಡಿಕೆಯಾಗಿ ಕೂಟಗಳಿಗೆ ತಡವಾಗಿ ಬರುವಂತೆ ಮಾಡಿದೆ. ಸೆರೆಮನೆಯಲ್ಲಿದ್ದಾಗ ಫ್ರಾಂಕ್‌ ಮಾನಿನೊ ಅವರಿಗೆ ಸ್ವಲ್ಪವೂ ಸ್ವಾತಂತ್ರ್ಯವಿರಲಿಲ್ಲ, ಆದರೆ ಅವರ ಜೀವಿತವು ತುಂಬ ಉತ್ಪನ್ನದಾಯಕವಾಗಿತ್ತು.

ಡಿ. ಡಬ್ಲ್ಯೂ., ಅಮೆರಿಕ

ಫ್ರಾಂಕ್‌ ಮಾನಿನೊ ಅವರು ಸೆರೆಮನೆಯಲ್ಲಿ ಬಂಧಿತರಾಗಿದ್ದಾಗಲೂ, ಅವರಿಂದ ತೋರಿಸಲ್ಪಟ್ಟ ಹುರುಪಿನಿಂದ ನಾನು ಪ್ರಚೋದಿತನಾದೆ. ಅವರ ಜೀವಿತವು ಒಂದು ಕೆಟ್ಟ ರೀತಿಯಲ್ಲಿ ಆರಂಭಿಸಿತಾದರೂ, ಈಗ ಅವರು ಒಬ್ಬ ಅತ್ಯುತ್ತಮ ಮಾದರಿಯಾಗಿದ್ದಾರೆ.

ಕೆ. ಆರ್‌., ಅಮೆರಿಕ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ