“ಮಾನವಕುಲಕ್ಕೆ ಒಂದು ಮಹಾ ಉಪಕಾರ”
“ಈ ಪುಸ್ತಕವನ್ನು ಪ್ರಕಾಶಿಸುವುದರಿಂದ ನೀವು ಮಾನವಕುಲಕ್ಕೆ ಒಂದು ಮಹಾ ಉಪಕಾರವನ್ನು ಮಾಡಿದ್ದೀರಿ. ಅದೊಂದು ಅದ್ಭುತ. ಅತ್ಯುತ್ಕೃಷ್ಟವಾದ ಸಂಕಲನ. ಗಣ್ಯತೆಗೆ ಅರ್ಹ.
“ಈ ಪುಸ್ತಕದ ಸೊಬಗು ಏನೆಂದರೆ, ಅದು ಧರ್ಮದ ಪ್ರತಿಯೊಂದು ಅಂಶದೊಂದಿಗೆ ವ್ಯವಹರಿಸುತ್ತದೆ ಮತ್ತು ಹಾಗೆ ಮಾಡುವಾಗ, ಟೀಕೆಮಾಡದಂತೆ ಜಾಗ್ರತೆ ವಹಿಸಲಾಗಿದೆ. ಒಂದು ಅತಿ ಒಳ್ಳೆಯ ಪುಸ್ತಕವನ್ನು ಸಂಕಲಿಸಿದ್ದೀರಿ. ನಿಜವಾಗಿಯೂ ಅಸಾಧಾರಣವಾದೊಂದು ಪುಸ್ತಕ.”
ಈ ಪತ್ರವನ್ನು ಬರೆದಂತಹ, ಭಾರತದ ತಿರುಚಿರಾಪಳ್ಳಿಯ ಡಾಕ್ಟರರು ಯಾವ ಪುಸ್ತಕವನ್ನು ಸೂಚಿಸಿ ಮಾತಾಡುತ್ತಿದ್ದರು? ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಪುಸ್ತಕದ ಕುರಿತಾಗಿಯೇ. ಇದು ಜಗತ್ತಿನ ಪ್ರಧಾನ ಧರ್ಮಗಳ—ಹಿಂದೂಮತ, ಬೌದ್ಧಮತ, ಟಾವೊಮತ, ಕನ್ಫ್ಯೂಷಿಯಸ್ಮತ, ಶಿಂಟೋಮತ, ಯೆಹೂದ್ಯಮತ, ಕ್ರೈಸ್ತಮತ, ಮತ್ತು ಇಸ್ಲಾಮ್ಮತ—ಮೂಲಗಳು ಮತ್ತು ಬೋಧನೆಗಳ ಕುರಿತಾದ 384 ಪುಟದ ಒಂದು ಸಂಕಲನ. ಕೊನೆಯ ಅಧ್ಯಾಯಗಳು, ಆಧುನಿಕ ಅಪನಂಬಿಕೆ ಮತ್ತು ಸತ್ಯ ದೇವರ ಕಡೆಗೆ ಒಂದು ಹಿಂದಿರುಗುವಿಕೆಯನ್ನು ವಿವರಿಸುತ್ತವೆ. ಈ ಪುಸ್ತಕದ 1.6 ಕೋಟಿಗಿಂತಲೂ ಹೆಚ್ಚು ಪ್ರತಿಗಳು, 37 ಭಾಷೆಗಳಲ್ಲಿ ಮುದ್ರಿಸಲ್ಪಟ್ಟಿವೆ.
ಆ ಡಾಕ್ಟರರು ಎರವಲು ಪಡೆದಿದ್ದಂತಹ ಒಂದು ಪ್ರತಿಯನ್ನು ಓದಿದ್ದರು. ಅವರು ತಮಗಾಗಿ ಒಂದು ಪ್ರತಿಯನ್ನು ಬಯಸಿದರು. ಈ ಸಚಿತ್ರ ಪುಸ್ತಕವನ್ನು ನೀವು ಪರೀಕ್ಷಿಸಿ ನೋಡಲು ಇಷ್ಟಪಡುವಲ್ಲಿ, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ದಯವಿಟ್ಟು ಸಂಪರ್ಕಿಸಿರಿ ಅಥವಾ ಈ ಪತ್ರಿಕೆಯ ಪುಟ 5ರಲ್ಲಿರುವ ಅತಿ ಹತ್ತಿರದ ವಿಳಾಸಕ್ಕೆ ಬರೆಯಿರಿ.