“ಅವನು ವಾರ್ತಾಪತ್ರಿಕೆಯಲ್ಲಿ ಹಾಕಿಸಿದನು”
ಹೀಗೆ ಕೆನಡದ ಒಬ್ಬ ಗುಣಗ್ರಾಹಿ ಹುಡುಗಿಯು ವಾಚ್ ಟವರ್ ಸೊಸೈಟಿಗೆ ಬರೆದ ಕೃತಜ್ಞತಾ ಪತ್ರವೊಂದರಲ್ಲಿ ಹೇಳಿದಳು. ಅವಳು ಶಾಲೆಯಲ್ಲಿ ಸಾರ್ವಜನಿಕ ವಾಕ್ಚರ್ಚೆಯಲ್ಲಿ ಭಾಗವಹಿಸಿದ್ದಳು, ಮತ್ತು ಅವಳ ಸಾದರಪಡಿಸುವಿಕೆಯು ಉಪಸ್ಥಿತರಿದ್ದ ತೀರ್ಪುಗಾರರಲ್ಲಿ ಒಬ್ಬನನ್ನು ಎಷ್ಟೊಂದು ಸಂತೋಷಗೊಳಿಸಿತೆಂದರೆ, ಅವನು ಅದನ್ನು ಸ್ಥಳಿಕ ವಾರ್ತಾಪತ್ರಿಕೆಯಲ್ಲಿ ಮುದ್ರಿಸಲಿಕ್ಕೆ ಅನುಮತಿಯನ್ನು ಕೇಳಿದನು.
ಆ ಹುಡುಗಿ ತನ್ನ ವಿಷಯವನ್ನು ಹೇಗೆ ಆರಿಸಿಕೊಂಡಳು? “ನನ್ನ ತರಗತಿಗೆ, ವಿಶೇಷವಾಗಿ ಹುಡುಗಿಯರಿಗೆ, ಹರಟೆಮಾತಿನ ಒಂದು ಸಮಸ್ಯೆಯಿತ್ತು” ಎಂದು ಅವಳು ವಿವರಿಸಿದಳು. ಆದುದರಿಂದ ಅವಳು ತನ್ನ ಸಾದರಪಡಿಸುವಿಕೆಯನ್ನು ತಾನು ಅವೇಕ್! ಪತ್ರಿಕೆಯಲ್ಲಿ ಓದಿದ ಮಾಹಿತಿಯ ಮೇಲೆ ಆಧಾರಿಸಿದಳು. ಅವಳ ಭಾಷಣದ ಕೆಲವು ಭಾಗಗಳು, “ಹರಟೆಮಾತು ಘಾಸಿಗೊಳಿಸುವಂಥದ್ದಾಗಿರಬಲ್ಲದು; ನಿಮಗೆ ಹೇಗೆ ಅನಿಸುವುದು?” ಎಂಬ ಶೀರ್ಷಿಕೆಯ ಕೆಳಗೆ, ಆಂಟೆರಿಯೋ, ನಯಾಗರ ಫಾಲ್ಸ್ನ ಒಂದು ಸ್ಥಳಿಕ ವಾರ್ತಾಪತ್ರಿಕೆಯಾದ ದ ರಿವ್ಯೂದಲ್ಲಿ ಪ್ರಕಟಗೊಂಡವು.
ಉಪಸ್ಥಿತನಿದ್ದ ಆ ತೀರ್ಪುಗಾರನಿಗೆ ಅಷ್ಟೊಂದು ಪ್ರಭಾವಿಸಿದ್ದ ವಿಷಯವು ಯಾವುದಾಗಿತ್ತು? ಆ ಹುಡುಗಿಯ ಭಾಷಣದ ಕೆಲವು ಆಯ್ದಭಾಗಗಳನ್ನು ಗಮನಿಸಿರಿ: “ಇಂದು ಸಮಾಜದಲ್ಲಿ ಹರಟೆಮಾತು ಸರ್ವಸಾಮಾನ್ಯವಾಗಿದೆ. ಅದು ತುಂಬ ತಲೆನೋವು, ನಿದ್ರಾರಹಿತ ರಾತ್ರಿ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಘಾಸಿಗೊಂಡ ಭಾವನೆಗಳನ್ನು . . . ಉಂಟುಮಾಡಬಲ್ಲದು.
“ಹರಟೆಮಾತನ್ನು ನಿಲ್ಲಿಸುವುದು ಅಸಾಧ್ಯವಾದ ವಿಷಯ, ಏಕೆಂದರೆ ಮಾತನಾಡುವುದು ಮಾನವನ ಸ್ವಾಭಾವಿಕ ಗುಣ. ನಾವು ಮಾಡಬಲ್ಲ ಒಂದು ವಿಷಯವು ಯಾವುದೆಂದರೆ, ಅದನ್ನು ನಿಯಂತ್ರಣದಲ್ಲಿಡುವುದೇ. ಇದನ್ನು ಹೇಗೆ ಮಾಡಬೇಕೆಂಬುದರ ಕುರಿತಾದ ಕೆಲವೊಂದು ಸೂಕ್ಷ್ಮಸೂಚನೆಗಳು ಯಾವುವೆಂದರೆ: 1. ಬೆಂಕಿಗೆ ತುಪ್ಪವನ್ನು ಸುರಿಯದಿರಿ. 2. ಹರಟೆಮಾತಿಗೆ ಕಿವಿಗೊಡದಿರಿ. . . . ಹರಟೆಮಾತಿಗೆ ಕಿವಿಗೊಡುವುದರಿಂದ, ಯಾವ ವಿಷಯವು ಹೇಳಲ್ಪಡುತ್ತಿದೆಯೋ ಅದನ್ನು ನೀವು ಒಪ್ಪುವಂತೆ ತೋರಬಹುದು. 3. ಹಾನಿಗೊಳಿಸುವ ಹರಟೆಮಾತು ನಿಮ್ಮನ್ನು ಒಬ್ಬ ಸುಳ್ಳುಗಾರನನ್ನಾಗಿ ಸಹ ಮಾಡಬಲ್ಲದು. 4. ಎಲ್ಲಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ಸಲಹೆಯು, ನೀವು ಮಾತನಾಡುವುದಕ್ಕಿಂತ ಮುಂಚೆ ಯೋಚಿಸಿರಿ! ‘ಇದೇ ವಿಷಯವನ್ನು ನನ್ನ ಕುರಿತಾಗಿ ಹೇಳುತ್ತಿದ್ದಲ್ಲಿ ಆಗ ನನಗೆ ಹೇಗನಿಸುತ್ತಿತ್ತು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿರಿ.”
“ಆ ನಾಲ್ಕು ಹೆಜ್ಜೆಗಳನ್ನು ಕಾರ್ಯರೂಪಕ್ಕೆ ಹಾಕಿರಿ, ಆಗ ನೀವು ಒಬ್ಬ ಉತ್ತಮ ವ್ಯಕ್ತಿಯಾಗಿ ಪರಿಣಮಿಸುವುದು ಹೆಚ್ಚು ಸಂಭಾವ್ಯ” ಎಂದು ಆ ಹುಡುಗಿಯು ಸಮಾಪ್ತಿಗೊಳಿಸಿದಳು.
ಶಾಲೆಯಲ್ಲಿರುವ ಯೌವನಸ್ಥರಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಎಂಥ ಪ್ರಾಯೋಗಿಕ ಸಲಹೆ! ಎಚ್ಚರ! ಪತ್ರಿಕೆಯು ವಿಷಯಗಳ ಒಂದು ವ್ಯಾಪಕ ವೈವಿಧ್ಯತೆಯ ಕುರಿತು ಸಮಯೋಚಿತವೂ ಪ್ರಸಕ್ತವೂ ಆದ ಮಾಹಿತಿಯನ್ನು ಸಾದರಪಡಿಸಲು ಪ್ರಯತ್ನಿಸುತ್ತದೆ. ಈ ಪತ್ರಿಕೆಯನ್ನು ಕ್ರಮವಾಗಿ ಪಡೆದುಕೊಳ್ಳಲು ನೀವು ಇಚ್ಛಿಸುವಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನು, ಅವರು ಮತ್ತೊಂದು ಸಲ ಭೇಟಿಮಾಡುವಾಗ ಕೇಳಿರಿ, ಅಥವಾ ಪುಟ 5ರಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಬರೆಯಿರಿ.