ಬೈಬಲಿನ ದೃಷ್ಟಿಕೋನ
ಬಹಿಷ್ಕರಿಸುವಿಕೆಯು ಒಂದು ಪ್ರೀತಿಪರ ಏರ್ಪಾಡಾಗಿರುವುದಕ್ಕೆ ಕಾರಣ
ಜಾತಿಯಿಂದ ಹೊರಹಾಕುವುದು—ಈ ಕಲ್ಪನೆಯೇ ಅನೇಕ ಧಾರ್ಮಿಕ ಜನರ ನಡುವೆ ಅಸಂಗತ ಭಾವನೆಗಳನ್ನು ಎಬ್ಬಿಸುತ್ತದೆ.a ಧರ್ಮಗಳಿಗೆ ಯಾವುದೋ ಒಂದು ತೆರನಾದ ಶಿಸ್ತಿನ ಅಗತ್ಯವಿದೆ ಎಂಬುದನ್ನು ಅಧಿಕಾಂಶ ಜನರು ಸಮ್ಮತಿಸುತ್ತಾರೆ. ಆದರೆ ಅನೇಕರು ಜಾತಿಯಿಂದ ಹೊರಹಾಕುವುದನ್ನು, ತಮಗೆ ಮಾಟಗಾತಿಯ ಬೆನ್ನಟ್ಟುವಿಕೆಗಳನ್ನು ಮತ್ತು ತನಿಖೆಗಳನ್ನು ಜ್ಞಾಪಿಸುವ ಗತಕಾಲದ ಒಂದು ಉಳಿಕೆ—ಶಿಸ್ತಿನ ಒಂದು ನಿರ್ದಯವಾದ ಶೈಲಿ—ಯೋಪಾದಿ ವೀಕ್ಷಿಸುತ್ತಾರೆ.
ಸಮಸ್ಯೆಗೆ ಹೆಚ್ಚನ್ನು ಕೂಡಿಸುವುದು, ಐಹಿಕ ಲೋಕದ ಪೂರ್ತಿ ಆಕ್ರಮಣಕಾರಕ ಪ್ರಭಾವವಾಗಿದೆ. ಹೀಗೆ, ಕ್ರೈಸ್ತಪ್ರಪಂಚದ ಧರ್ಮಗಳಲ್ಲಿ ಹೆಚ್ಚಿನವು ಪಾಪದ ವಿಷಯವಾಗಿ ಒಂದು ಹೆಚ್ಚು ಸಹಿಷ್ಣು ನೋಟವನ್ನು ಅಂಗೀಕರಿಸಿವೆ. ಹಾಗಾದರೆ, ಒಬ್ಬ ಬಿಷಪ್ ಆಡಳಿತದ ಮಂತ್ರಿಯು ಹೀಗೆ ಹೇಳಿದ್ದು ಆಶ್ಚರ್ಯಕರವಾದದ್ದೇನೂ ಆಗಿರುವುದಿಲ್ಲ: “ಜಾತಿಯಿಂದ ಹೊರಹಾಕುವುದು ನಮ್ಮ ಸಂಪ್ರದಾಯದ ಒಂದು ಭಾಗವಾಗಿದೆಯಾದರೂ, ಅದು ಈ ಶತಮಾನದಲ್ಲಿ ನಡೆಸಲ್ಪಡುತ್ತಿದೆಯೆಂದು ನಾನು ನೆನಸುವುದಿಲ್ಲ.”
ಹಾಗಿದ್ದರೂ, ಯೆಹೋವನ ಸಾಕ್ಷಿಗಳ ನಡುವೆ ಬಹಿಷ್ಕರಿಸುವಿಕೆಯು (ಜಾತಿಯಿಂದ ಹೊರಹಾಕುವುದಕ್ಕೆ ಸಮಾನ) ಗಂಭೀರವಾಗಿ ಪರಿಗಣಿಸಲ್ಪಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಅನೇಕ ಜನರು ಆಶ್ಚರ್ಯಪಡಬಹುದು. ಇದು ತೆಗೆದುಕೊಳ್ಳಲು ಒಂದು ಸುಲಭವಾದ ಕಾರ್ಯವಾಗಿರುವುದಿಲ್ಲವೆಂಬುದು ನಿಜವಾದರೂ, ಇದು ಒಂದು ಪ್ರೀತಿಪೂರ್ವಕ ಏರ್ಪಾಡಾಗಿದೆ. ಅದು ಹೇಗೆ?
ಅದು ದೇವರ ಹೆಸರನ್ನು ಎತ್ತಿಹಿಡಿಯುತ್ತದೆ
ಯೆಹೋವನು ಒಬ್ಬ ಪವಿತ್ರ ದೇವರಾಗಿದ್ದಾನೆ. ತನ್ನನ್ನು ಆರಾಧಿಸುತ್ತಿದ್ದೇವೆಂದು ಪ್ರತಿಪಾದಿಸಿಕೊಳ್ಳುವವರ ವತಿಯಿಂದ ಉದ್ದೇಶಪೂರ್ವಕವಾದ ಪಾಪವನ್ನು ಆತನು ಸಹಿಸಿಕೊಳ್ಳುವುದಿಲ್ಲ. ಅಪೊಸ್ತಲ ಪೇತ್ರನು ಕ್ರೈಸ್ತರಿಗೆ ಬರೆದುದು: “ನಿಮ್ಮ ಎಲ್ಲಾ ನಡವಳಿಕೆಯಲ್ಲಿ ನೀವೂ ಪವಿತ್ರರಾಗಿರಿ, ಏಕೆಂದರೆ ‘ನಾನು ಪವಿತ್ರನಾಗಿರುವುದರಿಂದ ನೀವೂ ಪವಿತ್ರರಾಗಿರಬೇಕು’ ಎಂದು ಬರೆಯಲ್ಪಟ್ಟಿದೆ.” (1 ಪೇತ್ರ 1:15, 16, NW) ಆದುದರಿಂದ ಪಶ್ಚಾತ್ತಾಪರಹಿತ ಪಾಪಿಗಳನ್ನು ಬಹಿಷ್ಕರಿಸುವುದು, ದೇವರ ಪವಿತ್ರ ಹೆಸರನ್ನು ಎತ್ತಿಹಿಡಿಯುತ್ತದೆ; ಇದು ಆ ಹೆಸರಿಗಾಗಿ ಪ್ರೀತಿಯನ್ನು ತೋರಿಸುತ್ತದೆ.—ಹೋಲಿಸಿ ಇಬ್ರಿಯ 6:10.
ಇದು, ಒಬ್ಬ ಕ್ರೈಸ್ತನು ಬಲಹೀನತೆಗೆ ಬಲಿಬೀಳುವುದಾದರೆ ಅಥವಾ ಗಂಭೀರವಾದ ಪಾಪದೊಳಕ್ಕೆ ಎಡವಿ ಬೀಳುವುದಾದರೆ ಅವನು ಸಭೆಯಿಂದ ಅವಿವೇಚಿತವಾಗಿ ಹೊರಹಾಕಲ್ಪಡುವುದನ್ನು ಅರ್ಥೈಸುತ್ತದೋ? ನಿಶ್ಚಯವಾಗಿಯೂ ಇಲ್ಲ! ಯೆಹೋವನು ಒಬ್ಬ ಕಲ್ಲೆದೆಯ ನಿರಂಕುಶಾಧಿಕಾರಿ ಆಗಿರುವುದಿಲ್ಲ. ಆತನು ಕರುಣಾಭರಿತನೂ ಅರ್ಥಮಾಡಿಕೊಳ್ಳುವವನೂ ಆಗಿದ್ದಾನೆ. ನಾವು ಅಪರಿಪೂರ್ಣರಾಗಿದ್ದೇವೆ ಎಂಬುದನ್ನು ಆತನು ಜ್ಞಾಪಿಸಿಕೊಳ್ಳುತ್ತಾನೆ. (ಕೀರ್ತನೆ 103:14) “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ” ಎಂಬುದನ್ನು ಯೆಹೋವನು ಗ್ರಹಿಸುತ್ತಾನೆ. (ರೋಮಾಪುರ 3:23) ಸಭೆಯೊಳಗೇ ಆತ್ಮಿಕ ಸಹಾಯಕ್ಕಾಗಿ ಏರ್ಪಾಡನ್ನು ದೇವರು ಮಾಡಿದ್ದಾನೆ, ಹೀಗೆ, ಒಬ್ಬ ಕ್ರೈಸ್ತನು “ತಪ್ಪು ಹೆಜ್ಜೆ”ಯನ್ನು (NW) ತೆಗೆದುಕೊಳ್ಳುವಲ್ಲಿ ಅಥವಾ ಒಂದು ಗಂಭೀರವಾದ ಪಾಪವನ್ನು ಮಾಡುವಲ್ಲಿಯೂ, ಅವನು ಸೌಮ್ಯಭಾವದ ಮನೋವೃತ್ತಿಯಲ್ಲಿ ಪ್ರೀತಿಪೂರ್ವಕವಾಗಿ ‘ಪುನರ್ಹೊಂದಿ’ಸಲ್ಪಡಬಹುದು. (ಗಲಾತ್ಯ 6:1) ದೇವರ ವಾಕ್ಯದಿಂದ ಬರುವ ಸಲಹೆಯನ್ನು ಸ್ವೀಕರಿಸುವ ಮೂಲಕ ಮತ್ತು ಹೃತ್ಪೂರ್ವಕ ವಿಷಾದವನ್ನು ಹಾಗೂ ಯಥಾರ್ಥವಾದ ಪಶ್ಚಾತ್ತಾಪವನ್ನು ತೋರಿಸುವ ಮೂಲಕ, ನೀತಿಯುಕ್ತವಾದ ಪಥದಿಂದ ದಾರಿತಪ್ಪಿರುವವನೊಬ್ಬನು ಆತ್ಮಿಕವಾಗಿ “ಸ್ವಸ್ಥವಾಗ”ಬಲ್ಲನು.—ಯಾಕೋಬ 5:13-16.
ಆದರೂ, ದೀಕ್ಷಾಸ್ನಾನಿತ ಕ್ರೈಸ್ತನೊಬ್ಬನು ಗುರುತರವಾಗಿ ಪಾಪವನ್ನು ಮಾಡಿರುವಲ್ಲಿ ಮತ್ತು ಅವನನ್ನು ಪುನಃಸ್ಥಾಪಿಸಲಿಕ್ಕಾಗಿ ಮಾಡಿದ ಎಲ್ಲ ಪ್ರಯತ್ನಗಳು ಅಸಫಲಗೊಂಡಿರುವಲ್ಲಿ ಆಗೇನು? ಬೇರೆ ಮಾತುಗಳಲ್ಲಿ, ತನ್ನ ಪಾಪಭರಿತ ಮಾರ್ಗವನ್ನು ಸರಿಪಡಿಸಿಕೊಳ್ಳಲು ಅವನು ಹಟಮಾರಿತನದಿಂದ ನಿರಾಕರಿಸುವುದಾದರೆ ಆಗೇನು?
ಅದು ಸಭೆಯನ್ನು ಸುರಕ್ಷಿತವಾಗಿಡುತ್ತದೆ
ಬೈಬಲ್ ಕ್ರೈಸ್ತರಿಗೆ ಹೀಗೆ ಆಜ್ಞಾಪಿಸುತ್ತದೆ: “ಕ್ರೈಸ್ತಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಬೈಯುವವನಾದರೂ ಕುಡುಕನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟಮಾಡಲೂ ಬಾರದು.”—1 ಕೊರಿಂಥ 5:11.
ಈ ಬೈಬಲ್ ನಿಯಮವು ಕಟುವಾದದ್ದೂ ಹೀನೈಸುವಂಥದ್ದೂ ಆಗಿದೆಯೋ? ಇದನ್ನು ಸ್ವಲ್ಪ ಪರಿಗಣಿಸಿರಿ: ನಿಯಮವನ್ನು ಮುರಿದದ್ದಕ್ಕಾಗಿ ಒಬ್ಬ ನಿಷ್ಕರುಣ ಅಪರಾಧಿಯು ಸೆರೆಮನೆಗೆ ಕಳುಹಿಸಲ್ಪಡುವಾಗ, ಅದು ನಿರ್ದಯ ಅಥವಾ ಕಲ್ಲೆದೆಯೋಪಾದಿ ವೀಕ್ಷಿಸಲ್ಪಡುತ್ತದೋ? ಇಲ್ಲ, ಏಕೆಂದರೆ ಜನತೆಗೆ ಸಮುದಾಯದ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ಹಕ್ಕಿದೆ. ಕಾರ್ಯತಃ, ಆ ಅಪರಾಧಿಯು ತನ್ನ ಸೆರೆಮನೆವಾಸದ ಅವಧಿಯಲ್ಲಿ ಕಾನೂನುಬದ್ಧ ಸಮಾಜದಿಂದ ಬಹಿಷ್ಕರಿಸಲ್ಪಟ್ಟಿದ್ದಾನೆ.
ತದ್ರೀತಿಯಲ್ಲಿ, ಕ್ರೈಸ್ತ ಸಭೆಯು ತಮ್ಮ ಮಧ್ಯದಿಂದ ಪಶ್ಚಾತ್ತಾಪರಹಿತ ತಪ್ಪಿತಸ್ಥರನ್ನು ಹೊರಹಾಕುವುದರಲ್ಲಿ ಸಮರ್ಥಿಸಲ್ಪಡುತ್ತದೆ. ಏಕೆ? ಏಕೆಂದರೆ ಸಭೆಯು, ಅನೈತಿಕ ವ್ಯಕ್ತಿಗಳು ಮತ್ತು ಪಾಪದ ಇತರ ಉದ್ದೇಶಪೂರ್ವಕ ಆಚರಣೆಗಾರರಿಂದ ಮುಕ್ತವಾದ ಒಂದು ಸ್ಥಳವಾಗಿರತಕ್ಕದ್ದು.
“ಒಬ್ಬ ಪಾಪಿಯು ಬಹು ಶುಭವನ್ನು ಹಾಳುಮಾಡುವನು” ಎಂಬುದನ್ನು ಗ್ರಹಿಸುತ್ತಾ, ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳಿಗೆ ಆಜ್ಞಾಪಿಸಿದ್ದು: “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” (ಪ್ರಸಂಗಿ 9:18; 1 ಕೊರಿಂಥ 5:13) ಈ ಕ್ರಿಯೆಯು, ಸಭೆಯಲ್ಲಿ ಭ್ರಷ್ಟತೆಯನ್ನು ಹರಡಿಸುವುದರಿಂದ ಪಾಪಿಯನ್ನು ತಡೆಗಟ್ಟುತ್ತದೆ ಮತ್ತು ಇದು ಸಭೆಯ ಒಳ್ಳೆಯ ಹೆಸರನ್ನು ಕಾಪಾಡುತ್ತದೆ.—ಹೋಲಿಸಿ 1 ತಿಮೊಥೆಯ 3:15.
ವ್ಯಕ್ತಿಗಳಿಗಾಗಿ ಸುರಕ್ಷೆ
ಬಹಿಷ್ಕರಿಸುವಿಕೆಯು ಸಭೆಯಲ್ಲಿನ ವ್ಯಕ್ತಿಪರ ಸದಸ್ಯರನ್ನು ರಕ್ಷಿಸುತ್ತದೆ ಕೂಡ. ನಾವು ಹೀಗೆ ದೃಷ್ಟಾಂತಿಸೋಣ: ಕಾರೊಂದರ ಹಾರ್ನ್ ಅಥವಾ ಅಪಾಯ ಸೂಚಕ ಧ್ವನಿಯಿಂದಾಗಿ ನಿದ್ರೆಯಿಂದ ಎಬ್ಬಿಸಲ್ಪಡುವುದನ್ನು ಕಲ್ಪಿಸಿಕೊಳ್ಳಿರಿ. ಆ ಭೇದಿಸುವ ಶಬ್ದವನ್ನು ಅಲಕ್ಷಿಸುವುದು ಕಷ್ಟಕರ; ನಿಜವಾಗಿಯೂ ಅದು ನಿಮ್ಮನ್ನು ಬೆಚ್ಚಿಬೀಳಿಸುತ್ತದೆ! ಅದೇ ರೀತಿಯಲ್ಲಿ, ಯಾರಾದರೊಬ್ಬರು ಸಭೆಯಿಂದ ಹೊರಹಾಕಲ್ಪಡುವಾಗ, ಕೈಕೊಳ್ಳಲ್ಪಡುವ ಕ್ರಿಯೆಯು ಆಶಾಪೂರ್ವಕವಾಗಿ ಹಿಂಡಿನ ಪ್ರತಿಯೊಬ್ಬ ಸದಸ್ಯನ ಗಮನವನ್ನು ಸೆಳೆದುಕೊಳ್ಳುತ್ತದೆ. ಅದು ಅವರ ಚಿತ್ತಸ್ವಾಸ್ಥ್ಯವನ್ನು ಕ್ಷೋಭೆಗೊಳಿಸುತ್ತದೆ. ಅದು ಅಲಕ್ಷಿಸಲ್ಪಡಸಾಧ್ಯವಿಲ್ಲ. ಇದು ಹೇಗೆ ಒಂದು ಸಂರಕ್ಷಣೆಯಾಗಿರಬಹುದು?
“ಯಾರೋ ಒಬ್ಬರು ಬಹಿಷ್ಕರಿಸಲ್ಪಟ್ಟಿದ್ದರೆಂಬುದನ್ನು ನಾನು ರಾಜ್ಯ ಸಭಾಗೃಹದಲ್ಲಿ ಪ್ರಥಮವಾಗಿ ಕೇಳಿಸಿಕೊಂಡಾಗ, ನನ್ನ ಆರಂಭದ ಪ್ರತಿಕ್ರಿಯೆಯು ಆಘಾತವಾಗಿತ್ತು,” ಎಂದು ಒಬ್ಬ ಸಾಕ್ಷಿಯು ಹೇಳುತ್ತಾಳೆ. “ನಂತರ ಅದು ನನ್ನನ್ನು ದೈನ್ಯಗೊಳಿಸಿತು. ಅದು ನಾನೂ ಮುಗ್ಗರಿಸಸಾಧ್ಯವೆಂಬುದನ್ನು ನನಗೆ ಮನಗಾಣಿಸಿತು.” ಆಕೆಯ ಮಾತುಗಳು ಸೂಚಿಸುವಂತೆ, ಬಹಿಷ್ಕರಿಸುವಿಕೆಯು ಇತರರಿಗೆ ತಮ್ಮ ನಡವಳಿಕೆಯ ಕುರಿತಾಗಿ ಬೆಲೆಕಟ್ಟಲು ಪ್ರಚೋದಿಸಬಲ್ಲದು.—1 ಕೊರಿಂಥ 10:12.
‘ನಾನು ಆತ್ಮಿಕವಾಗಿ ಭೇದ್ಯವಾಗಿರುವ ಯಾವುದಾದರೂ ಕ್ಷೇತ್ರಗಳು ನನ್ನ ಜೀವನದಲ್ಲಿವೆಯೋ?’ ಎಂಬಂಥ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳುವ ಮೂಲಕ, ದೇವರೊಂದಿಗಿನ ನಮ್ಮ ಸ್ವಂತ ನಿಲುವನ್ನು ಪರೀಕ್ಷಿಸಿಕೊಳ್ಳಲು ನಾವು ಸಹಾಯ ಮಾಡಲ್ಪಡಸಾಧ್ಯವಿದೆ. ಈ ರೀತಿಯಲ್ಲಿ ನಾವು ‘ಮನೋಭೀತಿಯಿಂದ ನಡುಗುವವರಾಗಿ ನಮ್ಮ ರಕ್ಷಣೆಯನ್ನು ಸಾಧಿಸಿಕೊ’ಳ್ಳುತ್ತಾ ಮುಂದುವರಿಯಬಲ್ಲೆವು.—ಫಿಲಿಪ್ಪಿ 2:12.
ದೇವರೆಡೆಗೆ ಹಿಂದಿರುಗಿರಿ
ಸ್ವಲ್ಪ ಸಮಯಕ್ಕಾಗಿ ಹೊರಹಾಕಲ್ಪಟ್ಟಿದ್ದ ಒಬ್ಬ ಕ್ರೈಸ್ತಳು ಹೇಳಿದ್ದು, “ಆ ಶಿಸ್ತು ಎಷ್ಟು ಕಷ್ಟಕರವಾಗಿತ್ತೋ ಅದು ಅಷ್ಟೇ ಆವಶ್ಯಕವೂ ಹೆಚ್ಚು ಅಗತ್ಯವೂ ಆಗಿತ್ತು, ಹಾಗೂ ಅದು ಜೀವರಕ್ಷಕವಾಗಿ ಪರಿಣಮಿಸಿತು.” ಇದು ಬಹಿಷ್ಕರಿಸುವಿಕೆಯ ಮತ್ತೊಂದು ಅತಿ ಪ್ರಾಮುಖ್ಯವಾದ ಅಂಶವನ್ನು ಎತ್ತಿತೋರಿಸುತ್ತದೆ. ಅದು ಹಿಂದೆ ಪಶ್ಚಾತ್ತಾಪರಹಿತ ಪಾಪಿಗಳಾಗಿದ್ದವರು ಪುನಃ ದೇವರೆಡೆಗೆ ತಮ್ಮ ಪ್ರಥಮ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಪ್ರಚೋದಿಸಬಲ್ಲದು.
ಅಪೊಸ್ತಲ ಪೌಲನು ಹೇಳಿದ್ದು: “ತಾನು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಯೆಹೋವನು ಶಿಸ್ತಿಗೊಳಪಡಿಸುತ್ತಾನೆ.” (ಇಬ್ರಿಯ 12:6, NW) ಮತ್ತು “ಯಾವ ಶಿಕ್ಷೆ [“ಶಿಸ್ತು,” NW]ಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ [“ಶಿಸ್ತು,” NW]ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ” ಎಂಬುದು ಸತ್ಯವಾಗಿದೆ.—ಇಬ್ರಿಯ 12:11.
ಇದು ತಾನೇ ರಿಚರ್ಡ್ ಎಂಬವನಿಗೆ ಸಂಭವಿಸಿತು. ಬಹುಮಟ್ಟಿಗೆ ಎರಡು ವರ್ಷಗಳ ವರೆಗೆ ಬಹಿಷ್ಕರಿಸಲ್ಪಟ್ಟ ಅನಂತರ, ಅವನು ಪಶ್ಚಾತ್ತಾಪಪಟ್ಟನು, ದೇವರಿಗೆ ಅಗೌರವ ತೋರಿಸುವ ತನ್ನ ನಡವಳಿಕೆಯನ್ನು ಸರಿಪಡಿಸಿಕೊಂಡನು ಮತ್ತು ಕ್ರೈಸ್ತ ಸಭೆಯೊಳಗೆ ಪುನಃ ಅಂಗೀಕರಿಸಲ್ಪಟ್ಟನು. ಹಿಂದಿರುಗಿ ನೋಡುವಾಗ, ಅವನು ಅನುಭವದ ಕುರಿತಾಗಿ ಹೇಳುವುದು: “ನಾನು ಬಹಿಷ್ಕರಿಸಲ್ಪಡಲೇಬೇಕಾಗಿತ್ತು ಎಂಬುದನ್ನು ನಾನು ಗ್ರಹಿಸುತ್ತೇನೆ ಮತ್ತು ನಾನು ಏನನ್ನು ಪಡೆದುಕೊಂಡೆನೋ ಅದಕ್ಕೆ ನಾನು ಸಂಪೂರ್ಣವಾಗಿ ಅರ್ಹನಾಗಿದ್ದೆನು. ಅದು ನಿಜವಾಗಿಯೂ ಅತ್ಯಾವಶ್ಯಕವಾಗಿತ್ತು ಮತ್ತು ನನ್ನ ಕೃತ್ಯವು ಎಷ್ಟೊಂದು ಗಂಭೀರವಾಗಿತ್ತೆಂಬುದನ್ನು ಮತ್ತು ಯೆಹೋವನ ಕ್ಷಮಾಪಣೆಯನ್ನು ಕೋರುವ ಅಗತ್ಯವಿತ್ತೆಂಬುದನ್ನು ಕಾಣಲು ನನಗೆ ಸಹಾಯಮಾಡಿತು.”
ಶಿಸ್ತು ಸಹಿಸಿಕೊಳ್ಳಲು ಸುಲಭವಾಗಿರದಿರಬಹುದು. ಅದನ್ನು ಅಂಗೀಕರಿಸುವುದು ದೈನ್ಯಭಾವವನ್ನು ಕೇಳಿಕೊಳ್ಳುತ್ತದಾದರೂ, ಅದರಿಂದ ಕಲಿತುಕೊಳ್ಳುವವರು ಸಮೃದ್ಧವಾದ ಫಲವನ್ನು ಕೊಯ್ಯುತ್ತಾರೆ.
ಆದುದರಿಂದ, ಬಹಿಷ್ಕರಿಸುವಿಕೆಯು ಒಂದು ಪ್ರೀತಿಪರ ಏರ್ಪಾಡಾಗಿದೆ ಏಕೆಂದರೆ, ಅದು ದೇವರ ಪವಿತ್ರ ಹೆಸರನ್ನು ಎತ್ತಿಹಿಡಿಯುತ್ತದೆ ಮತ್ತು ಪಾಪದ ಭ್ರಷ್ಟಗೊಳಿಸುವ ಪ್ರಭಾವದಿಂದ ಸಭೆಯನ್ನು ರಕ್ಷಿಸುತ್ತದೆ. ಹಾಗೂ, ಪಶ್ಚಾತ್ತಾಪಪಡಲು ಮತ್ತು “ಆತನ ಕಡೆಗೆ ತಿರುಗಿಕೊಳ್ಳಿರಿ. ತಿರುಗಿದರೆ ದೇವರ ಸನ್ನಿಧಾನದಿಂದ ವಿಶ್ರಾಂತಿಕಾಲಗಳು ಒದಗಿ”ಬರುವವೆಂದು ಪ್ರೋತ್ಸಾಹಿಸುವ ಮೂಲಕ ಅದು ತಪ್ಪಿತಸ್ಥನಿಗಾಗಿ ಪ್ರೀತಿಯನ್ನು ಪ್ರದರ್ಶಿಸುತ್ತದೆ.—ಅ. ಕೃತ್ಯಗಳು 3:19.
[ಪಾದಟಿಪ್ಪಣಿ]
a ಜಾತಿಯಿಂದ ಹೊರಹಾಕುವುದು, ಧರ್ಮವೊಂದರಲ್ಲಿನ ಸದಸ್ಯತ್ವದಿಂದ ಹೊರಹಾಕುವುದರಲ್ಲಿ ಫಲಿಸುವ ಒಂದು ಶಿಸ್ತು ಪಾಲನೆಯ ಕ್ರಿಯೆಯಾಗಿದೆ.
[ಪುಟ 36 ರಲ್ಲಿರುವ ಚಿತ್ರ ಕೃಪೆ]
The New Testament: A Pictorial Archive from Nineteenth-Century Sources, by Don Rice/Dover Publications, Inc.