ಬೈಬಲ್ ಜ್ಞಾನಕ್ಕಾಗಿ ನೀವು ದಾಹಪಡುತ್ತೀರೊ?
ಕಮ್ಯೂನಿಸ್ಟ್ ದೇಶಗಳಲ್ಲಿ, ಅನೇಕ ದಶಕಗಳ ವರೆಗೆ ಬೈಬಲಿನ ಸ್ವತಂತ್ರ ಚರ್ಚೆಯು ನಿಷೇಧಿಸಲ್ಪಟ್ಟಿತ್ತು. ಆದರೆ ಶೀತಲ ಯುದ್ಧದ ಅಂತ್ಯದೊಂದಿಗೆ, ಅಲ್ಲಿನ ನೂರಾರುಸಾವಿರ ಜನರು ಬೈಬಲ್ ಜ್ಞಾನವನ್ನು ಹುಡುಕಲು ಆರಂಭಿಸಿದ್ದಾರೆ. ಇದು ವಿಶೇಷವಾಗಿ ಹಿಂದಣ ಸೋವಿಯತ್ ಒಕ್ಕೂಟದ ಪ್ರಜಾಧಿಪತ್ಯಗಳಲ್ಲಿ ಸಂಭವಿಸುತ್ತಿರುವುದರಿಂದ, ಪ್ರಾಚ್ಯ ಯೂರೋಪಿನ ದೇಶಗಳಲ್ಲಿಯೂ ಪರಿಸ್ಥಿತಿಯು ತದ್ರೀತಿಯದ್ದಾಗಿದೆ.
ಉದಾಹರಣೆಗಾಗಿ, ಹಂಗೇರಿಯ ಪೆಕ್ಸ್ನಲ್ಲಿನ 45 ವರ್ಷ ಪ್ರಾಯದ, ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರದ ಶಿಕ್ಷಕಿಯೊಬ್ಬಳಿಗೆ, ಬೈಬಲಿನ ಚರ್ಚೆಯು ಮಹತ್ತರವಾದ ಆನಂದವನ್ನು ತಂದಿತು. “ನಾನು ಬುಡಾಪೆಸ್ಟನ್ನು ಸಂದರ್ಶಿಸಿದಾಗ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೊಂದಿಗೆ ಮಾತಾಡುವುದು ಒಂದು ರೋಮಾಂಚಕರವಾದ ಹಾಗೂ ಆನಂದಭರಿತ ಅನುಭವವಾಗಿತ್ತು” ಎಂಬುದಾಗಿ ಆ ಶಿಕ್ಷಕಿಯು ಬರೆದಳು. “ಶಾಸ್ತ್ರಗಳನ್ನು ಓದಲು ನಾನು ಇಷ್ಟಪಡುತ್ತೇನೆ, ಹಾಗೂ ಒಂದು ಬೈಬಲ್ ಅಭ್ಯಾಸದಲ್ಲಿ ಪಾಲುತೆಗೆದುಕೊಳ್ಳುವುದನ್ನು ನಾನು ಗಣ್ಯಮಾಡುವೆನು. ನಾನು ನಿಮ್ಮ ಸಹಾಯವನ್ನು ಕೃತಜ್ಞತಾಪೂರ್ವಕವಾಗಿ ಅಂಗೀಕರಿಸುವೆನು.”
ಎಲ್ಲೆಡೆಯಲ್ಲೂ ಇರುವ ಜನರಿಗೆ ಇಂತಹ ಸಹಾಯವನ್ನು ಒದಗಿಸಲು ಯೆಹೋವನ ಸಾಕ್ಷಿಗಳು ಹರ್ಷಿತರಾಗಿದ್ದಾರೆ. ನಿಮ್ಮೊಂದಿಗೆ ಬೈಬಲನ್ನು ಚರ್ಚಿಸಲಿಕ್ಕಾಗಿ, ನಿಮ್ಮ ಮನೆಗೆ ಯಾರಾದರೊಬ್ಬರು ಭೇಟಿನೀಡುವುದನ್ನು ನೀವು ಇಷ್ಟಪಡುವುದಾದರೆ, ದಯವಿಟ್ಟು Watch Tower, H-58 Old Khandala Road, Lonavla 410 401, Mah., India, ಇವರಿಗೆ ಅಥವಾ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದ್ದಾದ ವಿಳಾಸಕ್ಕೆ ಬರೆಯಿರಿ.