ಕ್ಷಯರೋಗವು ಪುನರಾಕ್ರಮಿಸುತ್ತದೆ!
1950ಗಳಂದಿನಿಂದ, ಅಮೆರಿಕದಲ್ಲಿನ ಕ್ಷಯರೋಗ (ಟಿಬಿ)ದ ರೋಗಿಗಳ ಸಂಖ್ಯೆಯು, ಒಂದು ವರ್ಷಕ್ಕೆ 5 ಪ್ರತಶತದಷ್ಟು ಪ್ರಮಾಣದಲ್ಲಿ ಇಳಿತಗೊಂಡಿತು. ಹಾಗಿದ್ದರೂ, 1985ರಂದಿನಿಂದ ವರದಿಮಾಡಲ್ಪಟ್ಟ ಟಿಬಿ ರೋಗಿಗಳಲ್ಲಿ 18 ಪ್ರತಿಶತ ಹೆಚ್ಚಳವಿದೆ. ಔಷಧ ಚಿಕಿತ್ಸೆಗೆ ಪ್ರತಿಕ್ರಿಯಿಸದಂತಹ ಹೊಸ ರೀತಿಯ ಒಂದು ರೋಗದ ಪ್ರತ್ಯಕ್ಷತೆಯು ಇನ್ನೂ ಹೆಚ್ಚು ಕ್ಷೋಭೆಗೊಳಿಸುವಂತಹದ್ದಾಗಿದೆ. ಈಗ ಟಿಬಿಯು ಪ್ರತಿ ವರ್ಷ, ಅಂದಾಜುಮಾಡಲ್ಪಟ್ಟ 30 ಲಕ್ಷ ಜನರನ್ನು ಕೊಲ್ಲುತ್ತದೆ. ಟಿಬಿಯ ವಿರುದ್ಧವಾದ ಹೋರಾಟವು ಪರಿಣಾಮಕಾರಿಯಾಗಿರುವುದರಲ್ಲಿ ವೈಫಲ್ಯವನ್ನು ಹೊಂದುತ್ತಿದೆ ಏಕೆ?
ಒಂದು ಕಾರಣವೇನಂದರೆ, ಅನೇಕ ರೋಗಿಗಳು ತಮ್ಮ ಔಷಧದ್ರವ್ಯವನ್ನು ಅಗತ್ಯಪಡಿಸಲ್ಪಟ್ಟ ಕಾಲಾವಧಿಯ—ಅನೇಕವೇಳೆ ಆರರಿಂದ ಒಂಬತ್ತು ತಿಂಗಳುಗಳು—ತನಕ ತೆಗೆದುಕೊಳ್ಳಲು ವಿಫಲರಾಗುವುದೇ. ಉದಾಹರಣೆಗಾಗಿ, ಶೀಘ್ರವ್ಯಾಪಕ ಟಿಬಿಯಿದ್ದ ಸುಮಾರು 200 ರೋಗಿಗಳ ಒಂದು ಗುಂಪಿನ 89 ಪ್ರತಿಶತ ಮಂದಿ, ತಮ್ಮ ಚಿಕಿತ್ಸೆಯನ್ನು ಪೂರ್ಣಗೊಳಿಸಲಿಲ್ಲ ಎಂದು ನ್ಯೂ ಯಾರ್ಕ್ ನಗರದಲ್ಲಿನ ಒಂದು ಅಧ್ಯಯನದ ವರದಿಯು ಪ್ರಕಟಿಸಿತು. “ಅದು ಅತ್ಯಂತ ಭೀಕರ ಸಂಗತಿಯಾಗಿದೆ” ಎಂದು ಅಮೆರಿಕನ್ ಲಂಗ್ ಅಸೋಸಿಯೇಷನ್ನ ಡಾ. ಲೀ ರಿಕ್ಮನ್ ಹೇಳುತ್ತಾರೆ. “ಏಕೆಂದರೆ ಆ ಜನರು (ಎ) ಗುಣಪಡಿಸಲ್ಪಡುವುದಿಲ್ಲ, ಮತ್ತು (ಬಿ) ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಔಷಧಗಳಿಗೆ ಪ್ರತಿರೋಧಕವಾಗಿರುವ ಟಿಬಿಯನ್ನು ಅವರು ಬಹುಶಃ ವಿಕಸಿಸಿಕೊಳ್ಳಲಿರುವರು.” ಆದರೆ ಈ ರೋಗವಾಹಕರು, ತಮ್ಮ ಸ್ವಂತ ಆರೋಗ್ಯಕ್ಕಿಂತಲೂ ಹೆಚ್ಚು ಜನರನ್ನು ಬಾಧಿಸಬಲ್ಲರು. “ತಮ್ಮ ಔಷಧದ್ರವ್ಯವನ್ನು ತೆಗೆದುಕೊಳ್ಳದಿರುವ ಮೂಲಕ, ಅವರು ಬೇರೆ ಜನರಿಗೆ ಸೋಂಕನ್ನುಂಟುಮಾಡಬಲ್ಲರು” ಎಂದು ಡಾ. ರಿಕ್ಮನ್ ಕೂಡಿಸುತ್ತಾರೆ. ಇದು ಪ್ರತಿ ವರ್ಷ ಲೋಕವ್ಯಾಪಕವಾಗಿ ರೋಗನಿರ್ಣಯಿಸಲ್ಪಡುವ, ಅಂದಾಜುಮಾಡಲ್ಪಟ್ಟ ಎಂಬತ್ತು ಲಕ್ಷ ಹೊಸ ರೋಗಿಗಳಲ್ಲಿ ರೋಗಕ್ಕೆ ನೆರವನ್ನೀಯುತ್ತಿರುವ ಒಂದು ಅಂಶವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.
‘ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಸಂಭವಿಸುವ ಉಪದ್ರವಗಳು,’ ನಾವು ಈ ವಿಷಯಗಳ ವ್ಯವಸ್ಥೆಯ “ಕಡೇ ದಿವಸಗಳ”ಲ್ಲಿ ಜೀವಿಸುತ್ತಿದ್ದೇವೆಂಬ ಸೂಚನೆಯ ಒಂದು ಭಾಗವಾಗಿವೆ ಎಂಬುದನ್ನು ಬೈಬಲ್ ವಿದ್ಯಾರ್ಥಿಗಳು ಗ್ರಹಿಸುತ್ತಾರೆ. (ಲೂಕ 21:11; 2 ತಿಮೊಥೆಯ 3:1) ಇದರ ನಂತರ ಏನು ಹಿಂಬಾಲಿಸುವುದು? ಒಂದು ಹೊಸ ಭೂಮಿಯು ಹಿಂಬಾಲಿಸುವುದು, ಅದರಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24) ಹೌದು, ಅಸ್ವಸ್ಥತೆ ಹಾಗೂ ಮರಣದಿಂದ ತಾತ್ಕಾಲಿಕ ಉಪಶಮನವನ್ನಲ್ಲ, ಬದಲಾಗಿ ಶಾಶ್ವತವಾದ ಬಿಡುಗಡೆಯನ್ನು ಯೆಹೋವ ದೇವರು ವಾಗ್ದಾನಿಸುತ್ತಾನೆ.—ಪ್ರಕಟನೆ 21:1-4.