ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g96 7/8 ಪು. 24-25
  • ಆಸ್ಟ್ರೇಲಿಯದ “ಹಾಡುಗೋಪುರ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಸ್ಟ್ರೇಲಿಯದ “ಹಾಡುಗೋಪುರ”
  • ಎಚ್ಚರ!—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಬೃಹತ್ತಾದ ಉಪಕರಣ
  • ನಿಜವಾಗಿಯೂ ಘನವಾದ ಒಂದು ಯಾಂತ್ರಿಕ ಕೌಶಲ
  • ಕೆಲವು ಅಭಿರುಚಿಯ ನಿಜತ್ವಗಳು
  • ದೇವರಿಗೆ ಮೆಚ್ಚುಗೆಯಾಗುವಂತಹ ಸಂಗೀತ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
ಎಚ್ಚರ!—1996
g96 7/8 ಪು. 24-25

ಆಸ್ಟ್ರೇಲಿಯದ “ಹಾಡುಗೋಪುರ”

ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ

ಕಲೆ, ಯಂತ್ರಕಲಾಶಾಸ್ತ್ರ ಮತ್ತು ವಿಜ್ಞಾನವು ಅನೇಕ ವೇಳೆ ಸಂಗೀತ ಕ್ಷೇತ್ರದಲ್ಲಿ, ಗಮನಾರ್ಹವಾದ ಗುಣಮಟ್ಟದ ವಿವಿಧೋಪಕರಣಗಳನ್ನು ಉತ್ಪಾದಿಸುವಂತೆ ಸಂಯೋಜಿಸಲ್ಪಟ್ಟಿವೆ. ಆ್ಯಂಟೋನಿಯಸ್‌ ಸ್ಟ್ರಾಡಿವಾರೀಯಸ್‌ನ ಪಿಟೀಲುಗಳು ಮತ್ತು ಟೇಒಬಾಲ್ಡ್‌ ಬೋಅಮ್‌ನ ಕೊಳಲುಗಳು ಸುಪ್ರಸಿದ್ಧವಾಗಿರಬಹುದಾದರೂ, ಘನಗಾಂಭೀರ್ಯವುಳ್ಳ ಕ್ಯಾರಿಲಾನ್‌ನ ವಿಷಯದಲ್ಲಾದರೊ ಸಾಮಾನ್ಯವಾಗಿ ಕೊಂಚವೇ ತಿಳಿದದೆ.

ಆದರೆ ಕ್ಯಾರಿಲಾನ್‌ ಎಂದರೇನು, ಮತ್ತು ಅದನ್ನು ಹೇಗೆ ನುಡಿಸಲಾಗುತ್ತದೆ? ಜಗತ್ತಿನ ಪ್ರಧಾನ ಕ್ಯಾರಿಲಾನ್‌ಗಳಲ್ಲಿ ಒಂದಕ್ಕೆ ಭೇಟಿಯು ಜ್ಞಾನೋದಯಗೊಳಿಸುವಂತಹದ್ದು ಆಗಿರುವುದು ಮತ್ತು ಅದರ ಅಪೂರ್ವ ಸಂಗೀತಕ್ಕಾಗಿ ನಮ್ಮ ಗಣ್ಯತೆಯನ್ನು ಪ್ರಾಯಶಃ ಗಾಢಗೊಳಿಸುವುದು.

ಒಂದು ಬೃಹತ್ತಾದ ಉಪಕರಣ

ಕ್ಯಾರಿಲಾನ್‌ ಜಗತ್ತಿನ ಅತಿ ದೊಡ್ಡ ಸಂಗೀತೋಪಕರಣಗಳಲ್ಲಿ ಒಂದಾಗಿದ್ದು, ಪ್ರಾಚೀನ ಮೂಲದ್ದಾಗಿದೆ. ಅದನ್ನು ಸಾಮಾನ್ಯವಾಗಿ ಗಂಟೆಗೋಪುರದಲ್ಲಿ ಇಡಲಾಗುವುದರಿಂದ ಅದಕ್ಕೆ “ಹಾಡುಗೋಪುರ” ಎಂದು ಸಮಂಜಸವಾಗಿಯೇ ಸೂಚಿಸಲಾಗಿದೆ. ಆಸ್ಟ್ರೇಲಿಯದ ರಾಜಧಾನಿಯಾದ ಕ್ಯಾನ್ಬ್ರದಲ್ಲಿರುವ ಕ್ಯಾರಿಲಾನ್‌ ಮತ್ತು ಗಂಟೆಗೋಪುರವು, 1963ರಲ್ಲಿ ಗ್ರೇಟ್‌ ಬ್ರಿಟನ್‌ ಸರಕಾರವು, 50 ವರ್ಷಗಳ ಹಿಂದೆ ಆ ನಗರದ ಸ್ಥಾಪನೆ ಮತ್ತು ನಾಮಕರಣವನ್ನು ಸ್ಮರಿಸಲು ಕೊಟ್ಟ ಸ್ವರ್ಣ ಮಹೋತ್ಸವ ಕೊಡುಗೆಯಾಗಿತ್ತು. ಚಿತ್ರಯೋಗ್ಯ ಬರ್ಲಿ ಗ್ರಿಫಿನ್‌ ಸರೋವರದ ಮಧ್ಯೆ ಇರುವ ಆಸ್ಪನ್‌ ದ್ವೀಪದಲ್ಲಿ ಆ ಕ್ಯಾರಿಲಾನನ್ನು ಸ್ಥಾಪಿಸಲಾಗಿದೆ.

ಈ 50 ಮೀಟರ್‌ಗಳಷ್ಟು ಎತ್ತರದ ಗಂಟೆಗೋಪುರದಲ್ಲಿ, ಒಂದು ಕೇಂದ್ರ ಸಮಭುಜ ತ್ರಿಕೋನದ ಪಕ್ಕದಲ್ಲಿ ಪ್ರತಿಯೊಂದೂ ಸಾಲುಗೂಡಿರುವ ಮೂರು ತ್ರಿಕೋನಾಕಾರದ ದಿಂಡುಗಳ ಗುಂಪಿದೆ. ತೀರ ಮೇಲೆ ಮತ್ತು ಈ ಮೂರು ದಿಂಡುಗಳ ಮಧ್ಯೆ ತೂಗಹಾಕಿರುವ ಮಹಡಿಗಳೇ ಈ ಕ್ಯಾರಿಲಾನ್‌ ಇರುವ ಗೃಹವಾಗಿದೆ.

ಗೋಪುರದಲ್ಲಿರುವ ಎಲಿವೇಟರ್‌ ನಮ್ಮನ್ನು ಒಂದನೆಯ ಜಗಲಿಗೆ ಒಯ್ಯುತ್ತದೆ. ಇಲ್ಲಿ ನಮ್ಮನ್ನು ಆರ್ಗನ್‌ಗಳಲ್ಲಿರುವಂತಹ ಎರಡು ದೊಡ್ಡ ಕ್ಲವಿಅರ್‌ಗಳು, ಅಥವಾ ಕೀಲುಫಲಕ (ಕೀಬೋರ್ಡ್‌)ಗಳು ಎದುರುಗೊಳ್ಳುತ್ತವೆ. ಮೊದಲನೆಯದ್ದು ಕ್ಯಾರಿಲನರ್‌ ಎಂದು ಕರೆಯಲ್ಪಡುವ ನುಡಿಸುವವನು ಅಭ್ಯಾಸ ಮಾಡಲಿಕ್ಕಾಗಿ ಮಾತ್ರ ಇದೆ. ಈ ಕೀಲುಫಲಕದ ಬಡಿಗೆಗಳು (ಹ್ಯಾಮರ್ಸ್‌) ಕೇವಲ ಸ್ವರಪಂಕ್ತಿಗಳ (ಟ್ಯೂನಿಂಗ್‌ ಬಾರ್ಸ್‌)ನ್ನು ಬಡೆಯುತ್ತವೆ ಅಷ್ಟೆ.

ಈ ಅಭ್ಯಾಸ ಕೀಲುಫಲಕದ ಬಹುಮಟ್ಟಿಗೆ ಹಿಂದೆಯೇ ನಿಜವಾದ ಕ್ಯಾರಿಲಾನ್‌ ಕ್ಲವಿಅರ್‌ ಇದೆ. ಆದರೆ ಇದು ಸರ್ವಸಾಮಾನ್ಯವಾದ ಕೀಲುಫಲಕವಲ್ಲ, ಏಕೆಂದರೆ ಇದಕ್ಕೆ ಸುಮಾರು ಎರಡು ಸೆಂಟಿಮೀಟರ್‌ ವ್ಯಾಸವುಳ್ಳ, ದೊಡ್ಡ, ಉರುಟಾದ ಓಕ್‌ ಕೀಲುಗಳಿವೆ. ಕೀಲುಗಳ ಮೇಲ್ಸಾಲು ಪಿಯಾನೊ ಅಥವಾ ಆರ್ಗನ್‌ನ ಪರಿಚಿತವಾದ ಕರಿಯ ಕೀಲುಗಳನ್ನು ಪ್ರತಿನಿಧಿಸುತ್ತದೆ. ಇವು ಸುಮಾರು ಒಂಬತ್ತು ಸೆಂಟಿಮೀಟರ್‌ಗಳಷ್ಟು ಹೊರಚಾಚಿರುವಾಗ ಕೆಳಸಾಲು (ಪಿಯಾನೊದ ಬಿಳಿಯ ಕೀಲುಗಳನ್ನು ಪ್ರತಿನಿಧಿಸುತ್ತವೆ) ಸುಮಾರು 17 ಸೆಂಟಿಮೀಟರ್‌ ಹೊರಚಾಚುತ್ತದೆ. ಆದರೂ, ಒಬ್ಬ ಪಿಯಾನೊ ಅಥವಾ ಆರ್ಗನ್‌ ನುಡಿಸುವವನಿಗೆ ವೈದೃಶ್ಯವಾಗಿ, ಈ ಕ್ಯಾರಿಲನರ್‌ ತನ್ನ ಬೆರಳುಗಳನ್ನು ಉಪಯೋಗಿಸದೆ ಮುಚ್ಚಿದ ಕೈಗಳಿಂದ ನುಡಿಸುತ್ತಾನೆ. ಆದುದರಿಂದಲೇ ಕೀಲುಗಳು, ಬಾಜಿಸುವವನು ಬಾಜಿಸುವಾಗ ಬೇರೆ ಕೀಲುಗಳನ್ನು ಮುಟ್ಟುವುದನ್ನು ತಪ್ಪಿಸುವಂತೆ, ದೂರ ಅಂತರದಲ್ಲಿ ಇಡಲ್ಪಟ್ಟಿವೆ.

ನಿಜವಾಗಿಯೂ ಘನವಾದ ಒಂದು ಯಾಂತ್ರಿಕ ಕೌಶಲ

ಪ್ರಧಾನ ಕೀಲುಫಲಕದ ಮೇಲ್ಭಾಗದಿಂದ ಮೇಲಿನ ನೆಲಗಟ್ಟಿಗೆ ಸರಿಗೆಗಳು ಮೇಲೇರಿಹೋಗುತ್ತವೆ. ಮತ್ತು ನಾಲ್ಕೂವರೆ ಆಕ್ಟೇವ್‌ಗಳ ಪ್ರತಿಯೊಂದು ಕೀಲು, ಯಾವುದರಲ್ಲಿ ಒಂದು ವಿಚಿತ್ರ ಕರ್ಷಣ ಜೋಡಣೆಯಿದೆಯೊ ಅಂತಹ ಪ್ರತ್ಯೇಕ ಉಕ್ಕಿನ ಸರಿಗೆಗೆ ಜೋಡಿಸಲ್ಪಡುತ್ತದೆ. ಈ ಸರಿಗೆಗಳೆಲ್ಲ ಎಲ್ಲಿಗೆ ಹೋಗುತ್ತವೆಂದು ಕಂಡುಹಿಡಿಯಲು ನಾವು ಮುಂದಿನ ಮಹಡಿಗೆ ಹೋಗಲು ಎಲಿವೇಟರ್‌ ಹತ್ತುತ್ತೇವೆ. ಇಲ್ಲಿ, ಪ್ರತಿಯೊಂದು ಸುಮಾರು ಆರು ಟನ್‌ ಭಾರವುಳ್ಳ ಎರಡು ಬೃಹದಾಕಾರದ ಗಂಟೆಗಳು ಭವ್ಯವಾಗಿರುವುವುಗಳಾಗಿ ತೂಗುತ್ತವೆ. ಬಳಿಕ, ಈ ಗಂಟೆಗಳ ನಡುವೆ ನೋಡುವಾಗ, ಅವುಗಳ ಮೇಲೆ ತೂಗಹಾಕಿರುವ ಇನ್ನು 51 ಗಂಟೆಗಳು, ಕ್ರಮೇಣ ಕೇವಲ ಏಳು ಕಿಲೊಗ್ರಾಮ್‌ ಭಾರವಿರುವ ಅತಿ ಸಣ್ಣ ಗಂಟೆಯ ತನಕ ಮೇಲೇರಿ ಹೋಗುವುದನ್ನು ಕಾಣುತ್ತೇವೆ.

ಕೆಲವು ಗಂಟೆಗಳ ಪ್ರಬಲ ಸ್ವರಮೇಳನದ ಕಾರಣ ಕೆಲವೊಮ್ಮೆ ಆಗುವ ಶ್ರಾವಣ ಅಡ್ಡೈಸುವಿಕೆಯನ್ನು ತಪ್ಪಿಸಲು ಎಲ್ಲ ಗಂಟೆಗಳನ್ನು ಉಪಾಯದಿಂದ ಇರಿಸಲಾಗಿದೆ. ಒಳಗಡೆ ಮೃದುಲೋಹದ ನಾಲಗೆಯಿರುವ ಪ್ರತಿಯೊಂದು ಗಂಟೆಯು, ಅದರ ಕೆಳಗಿರುವ ಕ್ಲವಿಅರ್‌ನ ಪ್ರತಿ ಕೀಲಿಗೆ ಜೋಡಿಸಿರುವ ಉಕ್ಕಿನ ಸರಿಗೆಯಿಂದ ಸಕ್ರಿಯೀಕರಿಸಲ್ಪಡುತ್ತದೆ. ಕರ್ಷಣವು ಪ್ರತಿಯೊಬ್ಬ ಕ್ಯಾರಿಲನರ್‌ನ ವೈಯಕ್ತಿಕ ಸ್ಪರ್ಶಕ್ಕೆ ಹಾಗೂ ಚಾಲ್ತಿಯಲ್ಲಿರುವ ಹವಾಮಾನಗಳಿಗೆ ಹೊಂದುವಂತೆ ಸೂಕ್ಷ್ಮವಾಗಿ ಅಳವಡಿಸಲ್ಪಟ್ಟಿದೆ.

ಕೆಲವು ಅಭಿರುಚಿಯ ನಿಜತ್ವಗಳು

ಕ್ಯಾನ್ಬ್ರ ಕ್ಯಾರಿಲಾನ್‌ನಲ್ಲಿರುವ ಗಂಟೆಗಳು ಇಂಗ್ಲೆಂಡ್‌ನ ಜಾನ್‌ ಟೆಯ್ಲರ್‌ ಆ್ಯಂಡ್‌ ಕಂಪನಿಯ ಕಾರ್ಖಾನೆಯಲ್ಲಿ ಎರಕಹೊಯ್ದು ತಯಾರಿಸಲಾದವು. ಮತ್ತು ಇವು ಒಂದು ಪ್ರಾಚೀನ ಕಲೆಯ ಉತ್ತಮವಾದ 20ನೆಯ ಶತಮಾನದ ಮಾದರಿಗಳಾಗಿವೆ. ಈ ಗಂಟೆಗಳು ತಮ್ಮ ಸ್ವರವಿನ್ಯಾಸಗಳನ್ನು ಆ ಸರೋವರದ ನೀರುಗಳ ಮತ್ತು ಮಗ್ಗುಲಿನ ತೋಟ ಮತ್ತು ವನಗಳ ಆಚೆ ಕೇಳಿಸುವಂತೆ ಬಾರಿಸಬಲ್ಲವು.

ಈ ಕ್ಯಾರಿಲಾನ್‌ ಜಗತ್ತಿನಲ್ಲಿ ಅತ್ಯಂತ ದೊಡ್ಡದಾಗಿರುವುದಿಲ್ಲವಾದರೂ, 53 ಗಂಟೆಗಳಿರುವ ಇದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಏಕೆಂದರೆ ಹೆಚ್ಚಿನ ಕ್ಯಾರಿಲಾನ್‌ಗಳಲ್ಲಿ 23ರಿಂದ 48 ಗಂಟೆಗಳಿವೆ. ಆದರೂ, ಅತಿ ದೊಡ್ಡ ಕ್ಯಾರಿಲಾನ್‌ ನ್ಯೂ ಯಾರ್ಕ್‌ ನಗರದಲ್ಲಿದೆ. ಅದರಲ್ಲಿ 74 ಗಂಟೆಗಳಿವೆ. ಅದರಲ್ಲಿ ಜಗತ್ತಿನ ಅತ್ಯಂತ ದೊಡ್ಡ ಶ್ರುತಿಗೂಡಿಸಿದ ಗಂಟೆಯೂ ಇದೆ. ಈ ಗಂಟೆ 18 ಟನ್ನು ತೂಕದ್ದಾಗಿದ್ದು, ಕಡಮೆ ದನಿತೀವ್ರತೆಯ ಎತ್ತರ ಸ್ಥಾಯಿ ‘ಮ’ ಸ್ವರವಿರುವ ಕ್ಯಾನ್ಬ್ರ ಕ್ಯಾರಿಲಾನ್‌ಗೆ ಹೋಲಿಕೆಯಲ್ಲಿ ಕಡಮೆ ದನಿತೀವ್ರತೆಯ ‘ಸ’ವನ್ನು ನುಡಿಸುತ್ತದೆ.

ಹಾಗಾದರೆ ಈಗ ಆ ಕ್ಯಾರಿಲನರ್‌ ಕೊಡುವ ಗಾನಗೋಷ್ಠಿಯನ್ನು ಸುಖಾನುಭವಿಸೋಣ. ಕೆಳಗಣ ಉದ್ಯಾನವನದಲ್ಲಿ ಕುಳಿತುಕೊಳ್ಳೋಣವೆ? ಇಲ್ಲಿ ನಮಗೆ “ಹಾಡುಗೋಪುರ”ದ ಅತ್ಯುತ್ಕೃಷ್ಟವಾದ ಸಂಗೀತವನ್ನು ಕೇಳಸಾಧ್ಯವಾಗುವುದಷ್ಟೇಯಲ್ಲ, ಅದೇ ಸಮಯದಲ್ಲಿ ನಮ್ಮ ಸುತ್ತಲಿರುವ ಸೃಷ್ಟಿಯ ಅದ್ಭುತಗಳನ್ನೂ ಅನುಭವಿಸಲು ಸಾಧ್ಯವಾಗುವುದು. ಸಾಯಂಕಾಲದ ಗಾಳಿಯ ನಿಶ್ಶಬ್ದತೆ ಮತ್ತು ಗಂಟೆಗಳ ಭಾವೋತ್ಪಾದಕ ಔನ್ನತ್ಯವು ಜೊತೆಗೂಡಿ ಅಪಾರ್ಥಿವ ಸಂಗೀತವೊ ಎಂಬಂತಿರುವುದನ್ನು ಉಂಟುಮಾಡಿ, ಸಂಗೀತದ ದೈವಿಕ ಕೊಡುಗೆಗಾಗಿ ನಮ್ಮ ಹೃದಯಗಳನ್ನು ಕೃತಜ್ಞತೆಯಿಂದ ತುಂಬಿಸುತ್ತವೆ.

[ಪುಟ 36 ರಲ್ಲಿರುವ ಚಿತ್ರ]

ಗೋಪುರದಲ್ಲಿರುವ ಗಂಟೆಗಳು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ