“ಅವು ಎಷ್ಟು ಉತ್ಕೃಷ್ಟವಾಗಿವೆ”
“ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದುವುದರಲ್ಲಿ ನಾನು ಯಾವಾಗಲೂ ಆನಂದಿಸಿದ್ದೇನೆ, ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಅವು ಎಷ್ಟು ಉತ್ಕೃಷ್ಟವಾಗಿವೆಯೆಂದರೆ, ಅವುಗಳನ್ನು ವರ್ಣಿಸಲಿಕ್ಕಾಗಿ ವಿಶೇಷಣಗಳನ್ನು ಕಂಡುಕೊಳ್ಳುವುದು ಕಷ್ಟಕರ. ನವೆಂಬರ್ 8, 1994 (ಕನ್ನಡ) ಮತ್ತು ನವೆಂಬರ್ 8, 1994 (ಇಂಗ್ಲಿಷ್)ರ ಎಚ್ಚರ! ಸಂಚಿಕೆಗಳ, “ಧರ್ಮವು ಯುದ್ಧದಲ್ಲಿ ಪಕ್ಷವಹಿಸುವಾಗ” ಮತ್ತು “ಸಾರಯೇವೊ—1914ರಿಂದ 1994ರ ವರೆಗೆ” ಎಂಬ ಶಿರೋನಾಮಗಳ ಕೆಳಗೆ ನೀಡಲ್ಪಟ್ಟ ಸಮಾಚಾರಕ್ಕಾಗಿ, ನಾನು ನನ್ನ ಗಣ್ಯತೆಯನ್ನು ವ್ಯಕ್ತಪಡಿಸಲು ಬಯಸಿದೆ. ಬಾಸ್ನಿಯ-ಸರ್ಬಿಯ-ಕ್ರೋಏಷಿಯ ಆಂತರಿಕ ಯುದ್ಧವು ಒಂದು ಜಟಿಲವಾದ ಹಾಗೂ ದುರಂತಮಯವಾದ ಸನ್ನಿವೇಶವಾಗಿದೆ, ಆದರೆ ಒಬ್ಬ ಕ್ರೋಏಷಿಯದವಳೋಪಾದಿ ಅದರ ಕುರಿತಾಗಿ ನನಗೆ ಆಳವಾದ ಅನಿಸಿಕೆಗಳಿವೆ. ಸಂಘರ್ಷದ ಇತಿಹಾಸವನ್ನು ಹಾಗೂ 1054ಕ್ಕೂ ಹಿಂದಿನ ಅದರ ಮೂಲಗಳನ್ನು ನೀವು ಪತ್ತೆಹಚ್ಚಿರುವ ವಿಧವನ್ನು ನಾನು ವಿಶೇಷವಾಗಿ ಗಣ್ಯಮಾಡಿದೆ. ಈ ರಾಷ್ಟ್ರೀಯ ಗುಂಪುಗಳ ನಡುವೆ ಹೆಚ್ಚು ಒಡಕುಗಳು ಹಾಗೂ ದ್ವೇಷಕ್ಕೆ ನಡೆಸಿರುವ ಧರ್ಮದ ಪಾತ್ರವನ್ನು ಮತ್ತು ಅದರ ಅವಿರತ ಪ್ರಯತ್ನಗಳನ್ನು ಇದು ಎತ್ತಿತೋರಿಸಿದೆ. ನಿರ್ಭಾಗ್ಯಕರವಾಗಿ, ಇಂದು ಲೋಕವು ಈ ಅಂತರ್ಗತವಾಗಿ ಒಳ್ಳೆಯವರಾಗಿರುವ ಜನರಲ್ಲಿ ಕೇವಲ ನೀಚವಾದ ವಿಷಯವನ್ನು ಅವಲೋಕಿಸಬಲ್ಲದು. ಅರ್ಥಮಾಡಿಕೊಳ್ಳಲಾಗದ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದ್ದಕ್ಕಾಗಿ ಪುನಃ ನಿಮಗೆ ಉಪಕಾರಗಳು. [ಸಹಿಮಾಡಲ್ಪಟ್ಟಿದೆ] ಎಮ್. ಕೆ.”
ಜಾಗರೂಕವಾದ ಸಂಶೋಧನೆ ಮತ್ತು ವಾಸ್ತವಿಕವಾದ ವರದಿಮಾಡುವಿಕೆಗಾಗಿ ಎಚ್ಚರ! ಪತ್ರಿಕೆಯು ಪ್ರಖ್ಯಾತಿಯನ್ನು ಸ್ಥಾಪಿಸಿದೆ. ಆದರೆ ಅದು ಭೂಮಿಯನ್ನು ತನ್ನ ರಾಜ್ಯಾಳ್ವಿಕೆಯ ಕೆಳಗೆ ತರುವ ದೇವರ ವಾಗ್ದಾನದ ಮೇಲೆ ಆಧಾರಿತವಾಗಿರುವ ಒಂದು ಶಾಂತಿಭರಿತ ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ಕೊಡುವಂತಹದ್ದೂ ಆದ ಒಂದು ಪತ್ರಿಕೆಯಾಗಿದೆ.
ನೀವು ಈ ಪತ್ರಿಕೆಯನ್ನು ಕ್ರಮವಾಗಿ ಓದಲು ಬಯಸುವಲ್ಲಿ, ದಯವಿಟ್ಟು ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ, ಅಥವಾ ಈ ಸಂಚಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದ್ದಾದ ವಿಳಾಸಕ್ಕೆ ಬರೆಯಿರಿ.
[ಪುಟ 43 ರಲ್ಲಿರುವ ಚಿತ್ರ ಕೃಪೆ]
Right: Culver Pictures