ಜಜ್ಜುವ ದಾರಿದ್ರ್ಯದಲ್ಲಿ ಎಷ್ಟೋ ಜನರು ಬದುಕುತ್ತಾರೆ ಮತ್ತು ಸಾಯುತ್ತಾರೆ!
ಯಾತಿ, ಆಗ್ನೇಯ ಏಷಿಯಾದ ದೇಶವೊಂದರಲ್ಲಿರುವ ತನ್ನ ಜೋಪಡಿಯನ್ನು ಬಿಟ್ಟು, ಎಲ್ಲಿ ಅವಳು ಪಾದರಕ್ಷೆಗಳಿಗೆ ಚರ್ಮದ ಮತ್ತು ಲೇಸಿನ ತುಣುಕುಗಳನ್ನು ಹೊಲಿಯುತ್ತಾಳೋ ಆ ಕಾರ್ಖಾನೆಗೆ ಹೊರಡುತ್ತಾಳೆ. ಒಂದು ತಿಂಗಳಿನ ಕೆಲಸಕ್ಕೆ—ವಾರಕ್ಕೆ 40 ತಾಸುಗಳು ಮತ್ತು 90 ತಾಸುಗಳ ಓವರ್ಟೈಮ್ನಲ್ಲಿ—ಅವಳು 80ಕ್ಕಿಂತಲೂ ಕಡಿಮೆ ಡಾಲರುಗಳನ್ನು ಸಂಪಾದಿಸುತ್ತಾಳೆ. ಅವಳನ್ನು ಕೆಲಸಕ್ಕಿಟುಕ್ಟೊಂಡ ಆ ಶೂ ಕಂಪನಿಯು ತನ್ನನ್ನು, ಕಡಿಮೆ ವಿಕಾಸ ಹೊಂದಿದ ದೇಶಗಳಲ್ಲಿ ಮಾನವ ಹಕ್ಕುಗಳ ಶುದ್ಧಾಂತಃಕರಣದ ಪ್ರವರ್ತಕವಾಗಿ ಜಂಬದಿಂದ ಪ್ರದರ್ಶಿಸಿಕೊಳ್ಳುತ್ತದೆ. ಪಾಶ್ಚಿಮಾತ್ಯ ಜಗತ್ತಿನಲ್ಲಿ, ಈ ಕಂಪನಿಯು ಒಂದು ಜೋಡು ಪಾದರಕ್ಷೆಯನ್ನು 60ಕ್ಕಿಂತ ಹೆಚ್ಚಿನ ಡಾಲರುಗಳಿಗೆ ಮಾರುತ್ತದೆ. ವೇತನವು ಪ್ರಾಯಶಃ ಅದರಲ್ಲಿ 1.40 ಡಾಲರಿನಷ್ಟಾಗುತ್ತದೆ.
ಯಾತಿ “ಆ ಶುಚಿಯಾದ, ಬೆಳಕುತುಂಬಿದ ಕಾರ್ಖಾನೆಯನ್ನು ಬಿಟ್ಟುಬರುವಾಗ,” ಬಾಸ್ಟನ್ ಗ್ಲೋಬ್ ವರದಿಯು ಹೇಳುವುದು, “3 ಮೀಟರ್ ಅಗಲ, 3.6 ಮೀಟರ್ ಉದ್ದದ, ಹಲ್ಲಿಗಳಿಂದ ತುಂಬಿರುವ ಕೊಳಕು ಗೋಡೆಗಳ ಜೋಪಡಿಯನ್ನು ಬಾಡಿಗೆಗೆ ಹಿಡಿಯಲು ಮಾತ್ರ ಅವಳಲ್ಲಿ ಸಾಕಷ್ಟು ಹಣವಿದೆ. ಯಾವ ಪೀಠೋಪಕರಣವೂ ಅಲ್ಲಿಲ್ಲ, ಆದುದರಿಂದ ಯಾತಿ ಮತ್ತು ಅವಳ ಇಬ್ಬರು ಜೊತೆವಾಸಿಗಳು ಮಣ್ಣು ಮತ್ತು ಹಂಚಿನ ನೆಲದ ಮೇಲೆ ಭ್ರೂಣ ಭಂಗಿಯಲ್ಲಿ ಮಲಗುತ್ತಾರೆ.” ಅವಳ ಸನ್ನಿವೇಶವು ಶೋಚನೀಯವಾಗಿ ಸಾಮಾನ್ಯವಾಗಿದೆ.
“ಈ ಜನರು ನನ್ನೊಂದಿಗೆ ಇರುವುದರಿಂದಾಗಿ ಹೆಚ್ಚು ಅನುಕೂಲಸ್ಥರಾಗಿದ್ದರೊ, ನನ್ನೊಂದಿಗೆ ಇಲ್ಲದೆಯೊ?” ಎಂದು ವೃತ್ತಿ ಸಂಘದ ಒಬ್ಬ ಮುಖ್ಯಸ್ಥನು ಆಕ್ಷೇಪಣೆ ಹೇಳುತ್ತಾನೆ. “ಈ ಚಿಕ್ಕ ವೇತನವು ಒಂದು ಸಭ್ಯ ಜೀವನ ಶೈಲಿಯನ್ನು ಅನುಭೋಗಿಸಲು ಅವರನ್ನು ಶಕ್ತರನ್ನಾಗಿ ಮಾಡುತ್ತದೆ. ಅವರು ಸುಖಭೋಗದ ಮಡಿಲಲ್ಲಿ ಜೀವಿಸದಿರಬಹುದು, ಆದರೆ ಅವರು ಹೊಟ್ಟೆಗಿಲ್ಲದೆ ಇಲ್ಲವಲ್ಲಾ.” ಆದರೆ ಅವರು ಅನೇಕಸಲ ನ್ಯೂನ ಪೋಷಿತರಾಗಿರುವುದು ನಿಶ್ಚಯ, ಅವರ ಮಕ್ಕಳು ಅನೇಕಾವರ್ತಿ ಹಸಿದ ಹೊಟ್ಟೆಯಲ್ಲಿ ಮಲಗುತ್ತಾರೆ. ಅಪಾಯಕರ ಕಾರ್ಯಾಗಾರಗಳ ಕೇಡುಗಳನ್ನು ಅವರು ನಿತ್ಯವೂ ಎದುರಿಸುತ್ತಾರೆ. ಮತ್ತು ಅನೇಕರು ವಿಷಗಳನ್ನು ಮತ್ತು ವಿಷಭರಿತ ಹಿಪ್ಪೆಗಳನ್ನು ನಿರ್ವಹಿಸುವ ಮೂಲಕ ನಿಧಾನವಾದ ಸಾವನ್ನು ಸಾಯುತ್ತಿದ್ದಾರೆ. ಇದು “ಸಭ್ಯ ಜೀವನ ಶೈಲಿಯೊ”?
ದಕ್ಷಿಣ ಏಷಿಯಾದ ಹೊಲದ ಕೆಲಸಗಾರನಾದ ಹರಿ, ವಿಷಯಗಳನ್ನು ಬೇರೆ ರೀತಿಯಲ್ಲಿ ನೋಡಿದನು. ತನ್ನ ಸುತ್ತಮುತ್ತಲೆಲ್ಲಾ ಇದ್ದ ಕರಾಳ ಜೀವನ್ಮರಣ ಚಕ್ರವನ್ನು ಅವನು ನುಡಿ ಮತ್ತು ಕಾವ್ಯ ವಾಗ್ವೈಖರಿಯಿಂದ ಚಿತ್ರಿಸಿದನು. “ಕಲ್ಲು ಮತ್ತು ಒನಕೆಯ ನಡುವೆ ಮೆಣಸು ಅಚಳ್ಚಿಯದೆ ನಿಲ್ಲದು. ಬಡವರಾದ ನಾವೋ ಮೆಣಸುಗಳಂತೆ—ಪ್ರತಿ ವರ್ಷ ಅರೆಯಲ್ಪಡುತ್ತೇವೆ, ಮತ್ತು ಬೇಗನೆ ಅಲ್ಲಿ ಏನೂ ಉಳಿಯುವುದಿಲ್ಲ,” ಎಂದನವನು. ಆ “ಸಭ್ಯ ಜೀವನ ಶೈಲಿ”ಯನ್ನು ಹರಿ ಎಂದೂ ಕಾಣಲಿಲ್ಲ, ಇಲ್ಲವೇ ತನ್ನ ಯಜಮಾನರು ಪ್ರಾಯಶಃ ಜೀವಿಸಿದ ಸುಖಭೋಗದ ಮಡಿಲಿನ ಲೇಶ ಮಾತ್ರ ಕಲ್ಪನೆ ಅವನಿಗಿರಲೂ ಇಲ್ಲ. ಕೆಲವು ದಿನಗಳ ಬಳಿಕ ಹರಿ ಸತ್ತನು—ಜಜ್ಜುವ ದಾರಿದ್ರ್ಯದ ಇನ್ನೊಂದು ಬಲಿಪಶು.
ಹರಿಯಂತೆ ಜನಸಮೂಹಗಳು ಜೀವಿಸುತ್ತವೆ ಮತ್ತು ಸಾಯುತ್ತವೆ. ತಮ್ಮ ಜೀವವು ಹೀರಲ್ಪಟ್ಟು ಇಂಗಿಹೋಗುವುದನ್ನು ತಡೆಯಲು ತೀರ ದುರ್ಬಲರಾದ ಅವರು, ಕಡು ಬಡತನದಲ್ಲಿ ಸೊರಗುತ್ತಾರೆ. ಯಾರಿಂದ? ಯಾವ ರೀತಿಯ ಜನರು ಇದನ್ನು ಮಾಡುವರು? ಅವರು ಸಾಕಷ್ಟು ಧರ್ಮಶೀಲರಾಗಿ ಕಾಣುತ್ತಾರೆ. ನಿಮ್ಮ ಮಗುವಿಗೆ ಆಹಾರ ಒದಗಿಸಲು ಬಯಸುತ್ತೇವೆ, ನಿಮ್ಮ ಬೆಳೆ ಬೆಳೆಯುವಂತೆ ಸಹಾಯ ಮಾಡುತ್ತೇವೆ, ನಿಮ್ಮ ಜೀವನವನ್ನು ಪ್ರಗತಿಗೊಳಿಸುತ್ತೇವೆ, ನಿಮ್ಮನ್ನು ಧನಿಕರನ್ನಾಗಿ ಮಾಡುತ್ತೇವೆ ಎನ್ನುತ್ತಾರೆ ಅವರು. ವಾಸ್ತವಿಕವಾಗಿ ಅವರು ಸ್ವತಃ ಧನಿಕರಾಗುವಂತಹ ಗುರಿಯನ್ನಿಡುತ್ತಾರೆ. ಮಾರಲು ಉತ್ಪಾದನೆಗಳಿವೆ, ಗಳಿಸಲು ಲಾಭಗಳಿವೆ. ಅವರ ದುರಾಸೆಯ ಉಪ ಉತ್ಪಾದನೆಗಳು, ನ್ಯೂನ ಪೋಷಣೆಯ ಮಕ್ಕಳು, ವಿಷಹಾಕಲ್ಪಟ್ಟ ಕಾರ್ಮಿಕರು, ಮತ್ತು ಕಲುಷಿತ ವಾತಾವರಣವಾಗಿರುವುದಾದರೆ, ಅದು ಹಾಗೆಯೇ ಆಗಲಿ. ತಮ್ಮ ಲೋಭಕ್ಕಾಗಿ ಕಂಪನಿಗಳು ತೆರಲು ಸಿದ್ಧವಾಗಿರುವ ಬೆಲೆಯದು. ಹೀಗೆ ಲಾಭಗಳು ಮೇಲೇರಿದಂತೆ, ಹೃದಯದ್ರಾವಕ ಅಪಘಾತಗಳ ಸಂಖ್ಯೆಗಳು ಸಹ ಏರುತ್ತವೆ.
[ಪುಟ 4 ರಲ್ಲಿರುವ ಚಿತ್ರ ಕೃಪೆ]
U.N. Photo 156200/John Isaac