ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 12/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಾರಕ ಶಾಂತಿ ನಿಯೋಗಗಳು
  • ಧರ್ಮ ಮತ್ತು ಗುಣಪಡಿಸುವಿಕೆ
  • ಮಧ್ಯವರ್ತಿ ಪ್ರಾಣಿರೂಪದ ಮಿಥ್ಯೆ
  • ದೀಪಗಳನ್ನು ಅಲಕ್ಷಿಸುವುದು
  • ಹಾಂಗ್‌ ಕಾಂಗ್‌ನಲ್ಲಿ ಒತ್ತಡ
  • ಪ್ರಾಚೀನ ಶೋಧನದ ಪತ್ತೆ
  • ವಿದ್ಯುತ್‌ ಸಾಧನಗಳು ಸಂದೇಹಕ್ಕೆಡೆ
  • ಯುದ್ಧ ಮತ್ತು ಅಶಾಂತಿಯ ಯುಗ
  • ಜಾಗತಿಕ ಆರೋಗ್ಯ ಸಮೀಕ್ಷೆ
  • ಜಗತ್ತನ್ನು ಗಮನಿಸುವುದು
    ಎಚ್ಚರ!—1996
  • ಜಗತ್ತನ್ನು ಗಮನಿಸುವುದು
    ಎಚ್ಚರ!—1993
  • ಜಗತ್ತನ್ನು ಗಮನಿಸುವುದು
    ಎಚ್ಚರ!—1990
ಎಚ್ಚರ!—1995
g95 12/8 ಪು. 28-29

ಜಗತ್ತನ್ನು ಗಮನಿಸುವುದು

ಮಾರಕ ಶಾಂತಿ ನಿಯೋಗಗಳು

ವಿಶ್ವ ಸಂಸ್ಥೆಯ ಶಾಂತಿ ರಕ್ಷಣೆಯ ನಿಯೋಗಗಳಲ್ಲಿ ತೊಡಗಿರುವಾಗ, ಇಷ್ಟರ ತನಕ ಒಂದು ಸಾವಿರಕ್ಕಿಂತಲೂ ಹೆಚ್ಚು ಜನರು ಸತ್ತಿದ್ದಾರೆಂದು ಜರ್ಮನ್‌ ವಾರ್ತಾಪತ್ರಿಕೆ ಫ್ರ್ಯಾಂಕ್‌ಫುರ್ಟರ್‌ ಆಲೆಮ್ಜೈನ್‌ ಟ್ಸೈಟುಂಗ್‌ ವರದಿಸುತ್ತದೆ. ಖಾರಿ ಯುದ್ಧದಂತಹ ಯುಎನ್‌ ಯುದ್ಧ ನಿಯೋಗಗಳಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡವರ ಸಂಖ್ಯೆಯು ಇದರಲ್ಲಿ ಸೇರಿರುವುದಿಲ್ಲ. ಈ 1,000 ಮರಣಗಳಲ್ಲಿ, 200ಕ್ಕಿಂತಲೂ ಹೆಚ್ಚು 1993 ವರ್ಷ ಒಂದರಲ್ಲಿಯೇ ಸಂಭವಿಸಿದವು. ಅಷ್ಟು ಮಂದಿ ಯಾಕೆ? ವಿಶ್ವ ಸಂಸ್ಥೆಯು ಈಗ ಒಂದು ವಿಭಿನ್ನ ರೀತಿಯ ಯುದ್ಧದಲ್ಲಿ ಒಳಗೂಡುತ್ತಿದೆಯೆಂದು ವಾರ್ತಾಪತ್ರವು ವಿವರಿಸಿತು. ಹಿಂದೆ ವಿಶ್ವ ಸಂಸ್ಥೆಯು ದೇಶಗಳ ನಡುವಣ ಹೋರಾಟಗಳಲ್ಲಿ ಮಧ್ಯಸಿಕ್ಥೆ ಮಾಡಿ ಇತ್ಯರ್ಥಗಳ ಉಸ್ತುವಾರಿ ನೋಡುತ್ತಿತ್ತು, ಈಗಲಾದರೋ ಈ ಸಂಸ್ಥೆಯು, ರಾಜ್ಯ ಸರಕಾರದ ಅಧಿಕಾರವು ಭಿನ್ನ ಭಿನ್ನವಾಗಿ ಒಡೆದುಹೋಗುವ “ಒಳ ಯುದ್ಧಗಳಲ್ಲಿ ಸೇರಿಕೊಳ್ಳುತ್ತದೆ ಮತ್ತು ಯುದ್ಧದಲ್ಲಿ ತೊಡಗಿರುವ ಪಕ್ಷಗಳು ಸಹ ಯುಎನ್‌ ಸಿಬ್ಬಂದಿಗಳನ್ನು ರಕ್ಷಿಸುವುದರಲ್ಲಿ ತಪ್ಪಿಹೋಗಿವೆ.”

ಧರ್ಮ ಮತ್ತು ಗುಣಪಡಿಸುವಿಕೆ

ತೆರೆದ ಹೃದಯ ಶಸ್ತ್ರಕ್ರಿಯೆ ಹೊಂದಿದ 232 ವೃದ್ಧ ರೋಗಿಗಳ ಅಧ್ಯಯನವು, ಆ ರೋಗಿಗಳಲ್ಲಿ “ಯಾರು ತಮ್ಮ ಧಾರ್ಮಿಕ ಹೊರನೋಟದಲ್ಲಿ ಬಲವನ್ನೂ ಆದರಣೆಯನ್ನೂ ಪಡೆಯಶಕ್ತರಾಗಿದ್ದರೋ ಅವರು, ಧಾರ್ಮಿಕ ನಂಬಿಕೆಯಲ್ಲಿ ಯಾವ ಉಪಶಾಮಕವನ್ನೂ ಕಾಣದವರಿಗಿಂತ ಮೂರು ಪಾಲಷ್ಟು ಹೆಚ್ಚು ವಾಸಿಯಾಗುವ ಶಕ್ತಿ ಪಡೆದುದನ್ನು ತೋರಿಸಿದರು,” ಎಂದು ಹೇಳುತ್ತದೆ ಪ್ಯಾರಿಸ್‌ನ ಇಂಟರ್‌ನ್ಯಾಷನಲ್‌ ಹೆರಲ್ಡ್‌ ಟ್ರಿಬ್ಯೂನ್‌. ಮಿತ್ರರ ಮತ್ತು ಕುಟುಂಬಗಳ ಆಪ್ತ ಸಂಬಂಧಗಳು ಮತ್ತು ಬೆಂಬಲಗಳು ಆರೋಗ್ಯ ಲಾಭಗಳನ್ನು ತರುತ್ತವೆಂದು ಹಿಂದಣ ಸಂಶೋಧನೆಯು ತೋರಿಸಿದರೂ, “ಧಾರ್ಮಿಕ ನಂಬಿಕೆಯಿಂದ ಗಂಭೀರ ಕಾಯಿಲೆಯ ರೋಗಿಗಳಿಗೆ ಇಷ್ಟು ಬಲವಾದ ಒಂದು ಆರೋಗ್ಯ ಲಾಭವನ್ನು ತೋರಿಸಲು” ಮಾಡಲ್ಪಟ್ಟ ಮೊದಲನೆಯ ಅಧ್ಯಯನ ಇದಾಗಿತ್ತು ಎಂದು ಹೇಳಿತು ಟ್ರಿಬ್ಯೂನ್‌. ಅಧ್ಯಯನ ಡೈರೆಕ್ಟರ್‌ ಡಾ. ಥಾಮಸ್‌ ಓಕ್ಸ್‌ಮೆನ್‌ ಅವಲೋಕಿಸಿದ್ದು: “ಒಂದು ಅಪಾಯಕರವಾದ ಪ್ರಾಣಾಂತಕ ಸನ್ನಿವೇಶಕ್ಕೆ ಒಂದು ಮಹತ್ವಾರ್ಥವನ್ನು ಕೊಡಲು ಶಕ್ತರಾಗಿರುವುದು—ಹೆಚ್ಚಿನ ಅರ್ಥವಿದೆ ಅಥವಾ ಹೆಚ್ಚು ಮಹತ್ತಾದ ಬಲವು ಕಾರ್ಯನಡಿಸುತ್ತದೆಂಬ ನಂಬಿಕೆಯು—ವೈದ್ಯಕೀಯವಾಗಿ ಸಹಾಯಕರವೆಂದು ತೋರುತ್ತದೆ.”

ಮಧ್ಯವರ್ತಿ ಪ್ರಾಣಿರೂಪದ ಮಿಥ್ಯೆ

ಮನುಷ್ಯನು ಕಪಿಯಿಂದ ಬಂದನು ಎಂಬ ಕಲ್ಪನೆಯನ್ನು ರುಜುಪಡಿಸಲು ವಿಕಾಸವಾದಿಗಳು ಬಹಳ ಕಾಲದಿಂದ ಪಳೆಯುಳಿಕೆಯ ಪುರಾವೆಯನ್ನು ಹುಡುಕಿದ್ದಾರೆ. ಆದರೂ, ಪುರಾತನ ಪಳೆಯುಳಿಕೆ ಶಾಸ್ತ್ರಜ್ಞರು ಯಾವುದನ್ನು ಒಬ್ಬ ಪ್ರೌಢ ಮನುಷ್ಯನ ಅಸ್ತಿಪಂಜರದ ಅವಶೇಷವೆಂದು ನಂಬುತ್ತಾರೋ ಅದನ್ನು ಪ್ರತಿನಿಧಿಸುವ 90 ಎಲುಬುಗಳ ಒಂದು ಸರಣಿಯು ಇಥಿಯೋಪ್ಯದಲ್ಲಿ ಕಂಡುಹಿಡಿಯಲ್ಪಟ್ಟಾಗ, “ಮನುಷ್ಯನ ಆರಂಭದ ಕುರಿತಾದ ಸಿದ್ಧಾಂತಗಳು ಉಡುಗಿಹೋದವು” ಎಂದು ಪ್ಯಾರಿಸ್‌ ವಾರ್ತಾ ಪತ್ರಿಕೆ ಲ ಮಾಂಡ್‌ ಹೇಳುತ್ತದೆ. ಪುರಾತನ ಪಳೆಯುಳಿಕೆ ಶಾಸ್ತ್ರಜ್ಞರಿಗೆ ಅನುಸಾರವಾಗಿ, ಈ ಹೊಸ ಪಳೆಯುಳಿಕೆಯು ಮನುಷ್ಯರ ಮತ್ತು ಕಪಿಗಳ ನಡುವಣ ಒಂದು ಮಧ್ಯವರ್ತಿಯನ್ನು ತೋರಿಸಲು ಪ್ರಯತ್ನಿಸುವ ಯಾವುದೇ ಸಿದ್ಧಾಂತಗಳೊಂದಿಗೆ ಹೊಂದಿಕೆಯಾಗದಿರುವುದೇ ಸಮಸ್ಯೆಯಾಗಿದೆ. ಬದಲಿಗೆ ಈ ಪಳೆಯುಳಿಕೆಗಳು ತಾವು ಉತ್ತರಿಸಿರುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಎಬ್ಬಿಸಿವೆ. ಮನುಷ್ಯ ಮತ್ತು ಮಂಗನ ನಡುವಣ ಪ್ರಾಣಿರೂಪವೆನ್ನುವ ಮಧ್ಯವರ್ತಿಯು “ಮಿಥ್ಯೆಯಲದ್ಲೆ ಮತ್ತೇನೂ ಅಲ್ಲ”ವಾಗಿರಬಹುದು ಎಂದು ಕೆಲವು ಸಂಶೋಧಕರು ತೀರ್ಮಾನಿಸಿದ್ದಾರೆ ಎಂದನ್ನುತ್ತದೆ ಲ ಮಾಂಡ್‌.

ದೀಪಗಳನ್ನು ಅಲಕ್ಷಿಸುವುದು

ಆರ್ಜೆಂಟೀನದಲ್ಲಿ, ಬ್ವೇನಸ್‌ ಆ್ಯರೀಸ್‌ ವಾರ್ತಾಪತ್ರ ಕಾರ್ಲೀನ್‌ಗೆ ಅನುಸಾರವಾಗಿ, 1994ರಲ್ಲಿ 7,700 ವಿಷಮ ವಾಹನ ಅಪಘಾತಗಳು ಸಂಭವಿಸಿದವು. ಈ ಅಪಘಾತಗಳಲ್ಲಿ 13,505 ಜನರು ಗಂಭೀರವಾಗಿ ಗಾಯಗೊಂಡರು ಮತ್ತು 9,120 ಮಂದಿ ಸತ್ತರು. ಡ್ರೈವರ್‌ ಮತ್ತು ಪಾದಚಾರಿಗಳಿಂದ ವಾಹನ ಸಂಚಾರ ನಿಯಮಗಳ ಮುರಿಯುವಿಕೆಯು, ಈ ವಾಹನ ಅಪಘಾತಗಳೆಲ್ಲದರಲ್ಲಿ 90 ಪ್ರತಿಶತವನ್ನು ಆಗಿಸಿತೆಂದು ಸರಕಾರಿ ವಿಭಾಗದಿಂದ ನಡಿಸಲ್ಪಟ್ಟ ಒಂದು ಅಧ್ಯಯನವು ಪ್ರಕಟಿಸಿತು. ನಗರಗಳಲ್ಲಿ ಅತಿ ಹೆಚ್ಚಾಗಿ ಸಂಭವಿಸುವ ಅಪಘಾತಗಳು ವಾಹನ ಸಂಚಾರ ನಿಯಂತ್ರಣದ ಕೆಂಪು ದೀಪವನ್ನು ಅಲಕ್ಷಿಸುವುದರಿಂದ ಉಂಟಾಗುವ ಪಾರ್ಶ್ವಸ್ಥ ಡಿಕ್ಕಿಹೊಡೆಯುವಿಕೆಗಳೇ. ವಾಹನ ನಿಯಂತ್ರಣದ ಕೆಂಪು ದೀಪವನ್ನು ಅಲಕ್ಷಿಸುವುದು ಬೇರೆ ದೇಶಗಳಲ್ಲಿ ಅಚಿಂತ್ಯವಾದರೂ, ಆರ್ಜೆಂಟೀನದಲ್ಲಿ ಮಾತ್ರ “ಅದು ಪದೇ ಪದೇ ಸಂಭವಿಸುತ್ತದೆ ಮಾತ್ರವಲ್ಲ ಅದನ್ನು ಮಾಡುವುದರಲ್ಲಿ ಹೆಮ್ಮೆ ಪಡುವವರು ಸಹ ಇದ್ದಾರೆ,” ಎಂದು ಸರಕಾರಿ ಅಧಿಕಾರಿ ಎಡಾರ್ಡ್ವೋ ಬರ್ಟಾಟೀ ಗಮನಿಸಿದರು.

ಹಾಂಗ್‌ ಕಾಂಗ್‌ನಲ್ಲಿ ಒತ್ತಡ

ಯಾವುದರಲ್ಲಿ 16 ವಿಭಿನ್ನ ದೇಶಗಳ 5,000 ಜನರು ಇಂಟರ್‌ವ್ಯೂ ಮಾಡಲ್ಪಟ್ಟರೋ ಆ ಇತ್ತೀಚಿನ ಸಮೀಕ್ಷೆಯೊಂದರಲ್ಲಿ, ಹಾಂಗ್‌ ಕಾಂಗ್‌ ಇಡೀ ಜಗತ್ತಿನಲ್ಲಿ ಅತ್ಯಂತ ಒತ್ತಡಯುಕ್ತ ದೇಶವಾಗಿ ಪರಿಗಣಿಸಲ್ಪಡುತ್ತದೆಂದು ದ ಮೆಡಿಕಲ್‌ ಪೋಸ್ಟ್‌ ವರದಿಸುತ್ತದೆ. ಹೆಚ್ಚಿನವರಿಗೆ ಅದು ಕೆಲಸಸಂಬಂಧಿತ ಒತ್ತಡವಾಗಿದೆ. ಇಂಗ್ಲೆಂಡಿನ ಯೂನಿವರ್ಸಿಟಿ ಆಫ್‌ ರೀಡಿಂಗ್‌ ಇದರ ಸಂಶೋಧಕ ಡಾ. ಡೇವಿಡ್‌ ವಾರ್‌ಬರ್ಟನ್‌ ಗಮನಿಸುವುದೇನಂದರೆ, “ಲೋಕದಾದ್ಯಂತ 54% ಜನರಿಗೆ ಹೋಲಿಕೆಯಲ್ಲಿ, ಹಾಂಗ್‌ ಕಾಂಗ್‌ನ ಸುಮಾರು 70% ಪುರುಷರು ಮತ್ತು 64% ಸ್ತ್ರೀಯರು ಕೆಲಸದಲ್ಲಿರುವಾಗ ಆಗುವ ಒತ್ತಡದ ಅನುಭವವನ್ನು ಸೂಚಿಸಿದರು.” ಬೇರೆ ದೇಶಗಳ 14 ಪ್ರತಿಶತ ಜನರಿಗೆ ವೈದೃಶ್ಯದಲ್ಲಿ, ಹಾಂಗ್‌ ಕಾಂಗ್‌ನಲ್ಲಿ ಇಂಟರ್‌ವ್ಯೂ ಮಾಡಲ್ಪಟ್ಟ ಸುಮಾರು 41 ಪ್ರತಿಶತ ಜನರು ತಮ್ಮ ಕೆಲಸಗಳು ಬೇಸರ ಹಿಡಿಸುವವುಗಳೆಂದು ಭಾವಿಸಿದರು. “ಕೆಲಸದಲ್ಲಿ ಒತ್ತಡಕ್ಕೆ ಮುಖ್ಯ ಕಾರಣವು ತಮ್ಮ ಧಣಿಯನ್ನು ಇಷ್ಟಪಡದಿರುವುದೇ ಎಂದು (ಲೋಕದಾದ್ಯಂತ 10ರಲ್ಲಿ ಒಬ್ಬನಿಗಿಂತಲೂ ಕಡಿಮೆಗೆ ತುಲನೆಯಲ್ಲಿ) ಹಾಂಗ್‌ ಕಾಂಗ್‌ನ ಐವರಲ್ಲಿ ಒಬ್ಬರು ಹೇಳಿದರು,” ಎಂದು ಪೋಸ್ಟ್‌ ಕೂಡಿಸುತ್ತದೆ.

ಪ್ರಾಚೀನ ಶೋಧನದ ಪತ್ತೆ

ಈಜಿಪ್ಟಿನ ವ್ಯಾಲಿ ಆಫ್‌ ಕಿಂಗ್ಸ್‌ನಲ್ಲಿ 1922ರಲ್ಲಿ ಅರಸ ಟೂಟ್ಯಾನ್‌ಕಾಮನ್‌ನ ನಿಕ್ಷೇಪ ತುಂಬಿದ ಸಮಾಧಿಯನ್ನು ಕಂಡುಹಿಡಿದ ಬಳಿಕ ಬೇರೆ ಯಾವ ದೊಡ್ಡ ಸಂಶೋಧನೆಗಳೂ ಮಾಡಲು ಉಳಿದಿರಲಿಲ್ಲವೆಂದು ಪ್ರಾಚೀನ ಶೋಧನ ಶಾಸ್ತ್ರಜ್ಞರು ದೀರ್ಘಕಾಲದಿಂದ ಪರಿಗಣಿಸಿದ್ದರು. ಆದರೆ ಕಣಿವೆಯಲ್ಲಿ ಅತಿ ದೊಡ್ಡದೂ ಅತ್ಯಂತ ಜಟಿಲವೂ ಆಗಿರಬಹುದಾದ ಒಂದು ಹೊಸ ಸಮಾಧಿಯು ಬೆಳಕಿಗೆ ಬಂದಿದೆ. ಕಡಿಮೆ ಪಕ್ಷ 67 ಕೊಠಡಿಗಳು ಮತ್ತು ಒಟ್ಟಿಗೆ 100ಕ್ಕಿಂತ ಹೆಚ್ಚು ಕೊಠಡಿಗಳನ್ನು ತರಬಲ್ಲ ಒಂದು ಸಂದೇಹಿತ ತಳ ಮಟ್ಟದೊಂದಿಗೆ ಕೂಡಿರುವ ಅದು, lIನೆಯ ರ್ಯಾಮ್‌ಸೀಸ್‌ನಿಂದ ಅವನ ಪುತ್ರರಿಗೆ ಸಮಾಧಿಯಾಗಿ ಕಟ್ಟಲ್ಪಟ್ಟಿತ್ತೆಂದು ವ್ಯಕ್ತವಾಗುತ್ತದೆ. lIನೆಯ ರ್ಯಾಮ್‌ಸೀಸ್‌ ಸಾ.ಶ.ಪೂ. 13ನೆಯ ಶತಮಾನದಲ್ಲಿ 66 ವರ್ಷ ರಾಜ್ಯವಾಳಿದನು ಮತ್ತು ಅವನಿಗೆ 52 ಪುತ್ರರೂ ಸೇರಿ 100ಕ್ಕಿಂತಲೂ ಹೆಚ್ಚು ಮಕ್ಕಳಿದ್ದರು. ಅವನ ಇಬ್ಬರು ಪುತ್ರರ ಸಮಾಧಿಗಳು ಈ ಮೊದಲೇ ಕಂಡುಹಿಡಿಯಲ್ಪಟ್ಟಿವೆ. ಉಳಿದವರು ಈ ಹೊಸತಾಗಿ ಕಂಡುಹಿಡಿಯಲ್ಪಟ್ಟ ಸಮಾಧಿಯಲ್ಲಿ ಹೂಣಲ್ಪಟ್ಟಿದ್ದಾರೆಂದು ನೆನಸಲಾಗಿದೆ, ಅಲ್ಲಿ ನಾಲ್ಕು ಪುತ್ರರ ಹೆಸರುಗಳು ಹಾಗೂ ಜೇಷ್ಠ ಪುತ್ರ ಆಮೆನ್‌_ಹರ್‌_ಕಾಪ್‌ಶೆಫ್‌ನ ಹೆಸರು ಪತ್ತೆಯಾಗಿವೆ. ಇದು ಧಾರ್ಮಿಕ ವಿದ್ವಾಂಸರ ಕುತೂಹಲವನ್ನು ಕೆರಳಿಸಿದೆ, ಯಾಕೆಂದರೆ lIನೆಯ ರ್ಯಾಮ್‌ಸೀಸ್‌, ಇಸ್ರಾಯೇಲ್ಯರು ವಿಮೋಚನೆಯ ಸಮಯದಲ್ಲಿ ಐಗುಪ್ತದ ಫರೋಹನಾಗಿದ್ದನೆಂದು ಕೆಲವರು ಊಹಿಸಿದ್ದರು. ಇತರ ಪಾಂಡಿತ್ಯವಾದರೋ, ಆ ಹೊರಡೋಣದ ಸಮಯವನ್ನು ಸಾ.ಶ.ಪೂ. 1513 ಆಗಿ ಇರಿಸಿದೆ.

ವಿದ್ಯುತ್‌ ಸಾಧನಗಳು ಸಂದೇಹಕ್ಕೆಡೆ

ಅಮೆರಿಕದ ಆಹಾರ ಮತ್ತು ಔಷಧ ಮೇಲ್ವಿಚಾರದ ಒಂದು ಪತ್ರಿಕೆಯಾದ ಎಫ್‌ಡಿಎ ಕನ್ಸ್ಯೂಮರ್‌ಗೆ ಅನುಸಾರವಾಗಿ, ವೈದ್ಯಕೀಯ ಉಪಕರಣಗಳು ವಿದ್ಯುತ್ಕಾಂತದ ಹಸ್ತಕ್ಷೇಪಕ್ಕೆ ಒಡ್ಡಲ್ಪಟ್ಟಾಗ, ಅಂದರೆ ಹತ್ತಿರದಲ್ಲಿ ಸೆಲ್ಯುಲರ್‌ ಫೋನ್‌ನಂತಹ ವಸ್ತುವಿರುವಾಗ, ಸರಿಯಾಗಿ ಕೆಲಸಮಾಡದೆ ಇರಬಲ್ಲವು. “ಕೆಲವು ಯೂರೋಪಿಯನ್‌ ಆಸ್ಪತ್ರೆಗಳು ಸೆಲ್ಯುಲರ್‌ ಫೋನ್‌ಗಳನ್ನು ತಮ್ಮ ಕಟ್ಟಡಗಳಿಂದ ಈವಾಗಲೇ ನಿಷೇಧಿಸಿವೆ, ಮತ್ತು ಆಧಾರವಿದ್ದಲ್ಲಿ ಅಂಥ ಕ್ರಮವನ್ನು ಕೈಕೊಳ್ಳುವಂತೆ ಎಫ್‌ಡಿಎ ಅಮೆರಿಕದ ಆಸ್ಪತ್ರೆಗಳನ್ನು ಪ್ರೋತ್ಸಾಹಿಸಿದೆ,” ಎಂದು ಹೇಳುತ್ತದೆ ಆ ಪತ್ರಿಕೆ. ಹಲವಾರು ಅಪಘಾತಗಳಲ್ಲಿ ಪೇಸ್‌ಮೇಕರ್ಸ್‌ ಮತ್ತು ಶ್ವಾಸ ಬಂಧನ ಮಾನಿಟರ್‌ಗಳಂಥ ಜೀವರಕ್ಷಕ ವೈದ್ಯಕೀಯ ಸಾಧನಗಳ ಹಾಳಾಗುವಿಕೆಗೆ ವಿದ್ಯುತ್ಕಾಂತ ಹಸ್ತಕ್ಷೇಪವು ಕಾರಣವೆಂದು ಸಂಶಯಿಸಲಾಗಿದೆ. ಎಫ್‌ಡಿಎ ಕನ್ಸ್ಯೂಮರ್‌ ಎಚ್ಚರಿಸುವುದು: “ಸೂಕ್ಷ್ಮರೀತಿಯ ವೈದ್ಯಕೀಯ ಸಾಧನಗಳನ್ನು ರೂಢಿಯಾಗಿ ಬಳಸುವ ರೋಗಿಗಳು ಮತ್ತು ಡಾಕ್ಟರರು ಸಮಸ್ಯೆಯ ಅರಿವುಳ್ಳವರಾಗಿರಬೇಕು ಮತ್ತು ಸೆಲ್ಯುಲರ್‌ ಫೋನ್‌ಗಳನ್ನು ತಮ್ಮ ಉಪಕರಣದಿಂದ ದೂರವಿಡುವುದಕ್ಕೆ ಗಮನ ಕೊಡಬೇಕು.” ನಿಸ್ತಂತು ಕಂಪ್ಯೂಟರ್‌ ಲಿಂಕ್ಸ್‌, ಮೈಕ್ರೋವೇವ್‌ ಸಂಜ್ಞೆಗಳು, ರೇಡಿಯೊ ಮತ್ತು ಟೆಲಿವಿಷನ್‌ ವಾಹಕಗಳು, ಪೇಜರ್ಸ್‌, ಮತ್ತು ಇತರ ವಿದ್ಯುತ್‌ ಸಾಧನಗಳಿಂದಲೂ ವಿದ್ಯುತ್ಕಾಂತ ಹಸ್ತಕ್ಷೇಪವು ಉಂಟಾಗಬಲ್ಲದು. ಸಂಶೋಧಕರು ಅಪಾಯವನ್ನು ಕಡಿಮೆ ಮಾಡುವ ವಿಧಗಳನ್ನು ಅನ್ವೇಷಿಸುತ್ತಿದ್ದಾರೆ.

ಯುದ್ಧ ಮತ್ತು ಅಶಾಂತಿಯ ಯುಗ

“ಈ 20ನೆಯ ಶತಮಾನವು ಸರಿಸಾಟಿಯಿಲ್ಲದ ಕ್ರೌರ್ಯದ ಒಂದು ಸಮಯವಾಗಿ ನೋಡಲ್ಪಡುವುದೆಂದು ಕೆಲವು ಇತಿಹಾಸಕಾರರು ನಂಬುತ್ತಾರೆ,” ಎಂದು ಗಮನಿಸುತ್ತದೆ ದ ನ್ಯೂ ಯಾರ್ಕ್‌ ಟೈಮ್ಸ್‌. “ಅಧಿಕಾಧಿಕವಾಗಿ, ಎರಡು ಲೋಕ ಯುದ್ಧಗಳು ಮತ್ತು ಶೀತಲ ಯುದ್ಧವು ಕೂಡಿದ್ದ 1914ರಿಂದ 1989ರ 75_ವರ್ಷ ಅವಧಿಯು, ಇತಿಹಾಸಕಾರರಿಂದ ಒಂದು ಏಕೈಕ, ಅವಿಚ್ಛಿನ್ನವಾದ ಯುಗವಾಗಿ, ಯಾವುದರಲ್ಲಿ ಹೆಚ್ಚಿನ ಜಗತ್ತು ಯುದ್ಧವನ್ನು ನಡಿಸುತ್ತಾ, ಯುದ್ಧದಿಂದ ಚೇತರಿಸಿಕೊಳ್ಳುತ್ತಾ, ಅಥವಾ ಯುದ್ಧಕ್ಕಾಗಿ ಸಿದ್ಧಮಾಡುತ್ತಾ ಇತ್ತೋ ಆ ಪ್ರತ್ಯೇಕಿತವಾದ ಒಂದು ಕಾಲವಾಗಿ ನೋಡಲ್ಪಡುತ್ತದೆ.” ದ ವಾಷಿಂಗ್‌ಟನ್‌ ಪೋಸ್ಟ್‌ನ ಒಂದು ಲೇಖನವು ಇದನ್ನು ಒಪ್ಪುತ್ತದೆ: “ನಮ್ಮ 20ನೆಯ ಶತಮಾನದ ಯುದ್ಧಗಳು ಯೋಧರ ಮತ್ತು ಅಯೋಧರ ವಿರುದ್ಧ ಏಕರೀತಿಯಲ್ಲಿ ನಡಿಸಲ್ಪಟ್ಟ ‘ಸಂಪೂರ್ಣ ಯುದ್ಧಗಳಾಗಿವೆ,’” ಎನ್ನುತ್ತದೆ ಅದು. “ಹತರಾದವರು, ಯೆಹೂದ್ಯರ ಸಮೂಹ ಸಂಹಾರವೂ ಸೇರಿ, ಕೋಟ್ಯಂತರ ಸಂಖ್ಯೆಯಲ್ಲಿ ಎಣಿಸಲ್ಪಡುತ್ತಾರೆ. ಶತಮಾನಗಳ ಹಿಂದಿನ ಅನಾಗರಿಕ ಯುದ್ಧಗಳು ಇದಕ್ಕೆ ತುಲನೆಯಲ್ಲಿ ಕೇವಲ ಓಣಿಯ ಜಗಳಗಳು.” ಪ್ರಜಾ ಬಂಡಾಯಗಳು ರಕ್ತದ ಕೋಡಿಗೆ ಹೆಚ್ಚನ್ನು ಕೂಡಿಸಿವೆ. ಎಷ್ಟು ಮಂದಿ ಸತ್ತಿದ್ದಾರೆ? “ಸುಬೀಗ್ನೆವ್‌ ಬ್ರೇಸಿನ್‌ಸ್ಕಿ ಇವರ ಅಂದಾಜಿಗನುಸಾರ, 1914ರಿಂದ ‘ಮಹಾಮರಣಗಳು’ 19 ಕೋಟಿ 70 ಲಕ್ಷ, ‘1900ರ ಜುಮ್ಲಾ ಲೋಕ ಜನಸಂಖ್ಯೆಯ ಹತ್ತರಲ್ಲಿ ಒಂದಕ್ಕಿಂತಲೂ ಹೆಚ್ಚು ಮಂದಿಗೆ ತುಲ್ಯವಾಗಿದೆ,’” ಎಂದು ಹೇಳುತ್ತದೆ ಪೋಸ್ಟ್‌. “ಈ ಶತಮಾನದ ಸಂಸ್ಕೃತಿಯಲ್ಲಿ ಭಯವಾದ ಮತ್ತು ಸ್ವೇಚ್ಛಾಚಾರದ ಕೊಲೆಪಾತವು ಆಳವಾಗಿ ಬೇರೂರಿದೆಯೆಂಬುದು ನಿರ್ವಿವಾದದ ನಿಜತ್ವ,” ಎಂದು ಕೂಡಿಸುತ್ತದೆ ಅದು, ಮತ್ತು “ಈ ಶತಮಾನದಲ್ಲಿ ಇಷ್ಟರ ತನಕ ಯಾವ ರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಯೂ ಅವಿಶ್ರಾಂತ ಕೋಟಿ ಜನತೆಯನ್ನು ಸಂತೈಸಿದ್ದಿಲ್ಲ ಇಲ್ಲವೇ ಸಂತುಷ್ಠಿಗೊಳಿಸಿದ್ದಿಲ್ಲ.”

ಜಾಗತಿಕ ಆರೋಗ್ಯ ಸಮೀಕ್ಷೆ

ಲೋಕ ಜನಸಂಖ್ಯೆಯ ಸುಮಾರು 40 ಪ್ರತಿಶತ—200 ಕೋಟಿಗಿಂತಲೂ ಹೆಚ್ಚು ಜನರು—ಆಗಿಂದಾಗ್ಯೆ ಕಾಯಿಲೆ ಬೀಳುತ್ತಾರೆ ಎಂದು ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಏಚ್‌ಓ), ಜಾಗತಿಕ ಆರೋಗ್ಯದ ತನ್ನ ಮೊದಲನೆಯ ವಾರ್ಷಿಕ ಸಮೀಕ್ಷೆಯಲ್ಲಿ ವರದಿಸುತ್ತದೆ. ಈ ಕಾಯಿಲೆಗಳಲ್ಲಿ ಹೆಚ್ಚಿನವು ಅನಾವಶ್ಯಕ ಮತ್ತು ನಿವಾರಣೀಯ ಎನ್ನುತ್ತಾರೆ ಅವರು. ಬಡತನವು ಅತ್ಯಂತ ದೊಡ್ಡ ಮೂಲಭೂತ ಕಾರಣ, ಯಾಕೆಂದರೆ ಲೋಕದ 560 ಕೋಟಿ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿಗೆ ಅತ್ಯಾವಶ್ಯಕ ಔಷಧಗಳನ್ನು ಪಡೆಯುವ ಮಾರ್ಗವಿಲ್ಲ, ಲೋಕದ ತೃತೀಯಾಂಶ ಮಕ್ಕಳು ನ್ಯೂನ ಪೋಷಿತರಾಗಿದ್ದಾರೆ, ಮತ್ತು ಲೋಕದ ಜನಸಂಖ್ಯೆಯ ಐದನೆಯ ಒಂದು ಅಂಶಕ್ಕೆ ತಮ್ಮ ರೋಗರಕ್ಷೆಗಾಗಿ ಅಥವಾ ಚಿಕಿತ್ಸೆಗಾಗಿ ಕೊಂಚ ಅಥವಾ ಏನೂ ಸಂಪನ್ಮೂಲಗಳಿಲ್ಲ. ಅತ್ಯಂತ ಮಾರಕ ರೋಗಗಳು—ಹೃದ್ರೋಗ, ಲಕ್ವಾಗಳು, ಶ್ವಾಸಕೋಶದ ರೋಗ, ಕ್ಷಯರೋಗ, ಮಲೇರಿಯಾ, ಮತ್ತು ಉಸಿರಾಟದ ಸೋಂಕುಗಳು ಹಾಗೂ ಐದು ವರ್ಷ ಪ್ರಾಯದ ಕೆಳಗಿನ ಮಕ್ಕಳಲ್ಲಿ ಅತಿಬೇಧಿಯು—ಪ್ರತಿ ವರ್ಷ ಲಕ್ಷಾಂತರ ಮಂದಿಯನ್ನು ಕೊಲ್ಲುತ್ತವೆ. ಆದರೂ, ಕಳೆದ 25 ವರ್ಷಗಳಲ್ಲಿ ಆಯುಷ್ಯಮಾನವು 61ರಿಂದ 65 ವರ್ಷಕ್ಕೇರಿದೆ. “ಯಾರಿಗೆ ಬದುಕು ಒಂದು ದಿನನಿತ್ಯದ ಹೋರಾಟವಾಗಿದೆಯೋ ಅಂತಹ ಅನೇಕ ಕೋಟಿ ಜನರಿಗೆ, ಅಧಿಕ ಆಯುಸ್ಸಿನ ಒಂದು ಪ್ರತೀಕ್ಷೆಯು ಒಂದು ಕೊಡುಗೆಗಿಂತ ಹೆಚ್ಚಾಗಿ ಒಂದು ಶಿಕ್ಷೆಯಂತೆ ತೋರಬಹುದು,” ಎಂದು ಹೇಳಿದರು ಡಬ್ಲ್ಯೂಏಚ್‌ಓನ ಡೈರೆಕ್ಟರ್‌ ಜನರಲ್‌ ಡಾ. ಹೀರೋಶಿ ನಾಕಾಜೀಮ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ