ಅದು ಆಕೆ ಉತ್ತಮ ಮನಃಸ್ಥಿತಿಯನ್ನು ಹೊಂದುವಂತೆ ಮಾಡಿತು
ಭಾರತದ ಮುಂಬಯಿಯಲ್ಲಿ ಪ್ರಕಾಶಿಸಲಾಗುವ, ದ ಡೇಲಿ ಎಂಬ ವಾರ್ತಾಪತ್ರಿಕೆಯೊಂದರಲ್ಲಿ “ಆನ್ ಮೈ ಓನ್” ಎಂಬ ಶೀರ್ಷಿಕೆಯುಳ್ಳ ಅಂಕಣವೊಂದನ್ನು ತಾರಾ ಪಟೇಲ್ ಬರೆಯುತ್ತಾರೆ. ಫೆಬ್ರವರಿ 8, 1995ರ ಎಚ್ಚರ!ದಲ್ಲಿ ತೋರಿಬಂದ (ಇಂಗ್ಲಿಷ್ನಲ್ಲಿ, ಜನವರಿ 22, 1995) “ನಿಮ್ಮ ಜೀವನವು ಬೇಸರಕರವಾಗಿರುತ್ತದೊ? ನೀವದನ್ನು ಮಾರ್ಪಡಿಸಬಲ್ಲಿರಿ!,” ಎಂಬ ಲೇಖನದ ಕುರಿತು ಜನವರಿಯಲ್ಲಿ ಅವರು ಬರೆದರು. “ಅದನ್ನು ಲೋಕದ ತೋರ್ಕೆಯ ಸದ್ಗುಣಶೀಲದ ಪತ್ರಿಕೆಗಳಲ್ಲಿ ಒಂದೆಂದು ಉಪೇಕ್ಷಿಸಲು ನನಗೆ ಒಲವಿರುವುದಾದರೂ, ಅದರ ಚಂದಾವೊಂದನ್ನು ಪಡೆದಿದ್ದೇನೆ,” ಎಂದು ಅವರು ಎಚ್ಚರ! ಪತ್ರಿಕೆಯ ಕುರಿತಾಗಿ ಹೇಳಿದರು.
ಹಾಗಿರುವುದಾದರೂ, ಅವರು ಕೂಡಿಸಿದ್ದು: “ಲೇಖನದೊಂದಿಗೆ ಹೆಚ್ಚೆಚ್ಚಿಗೆ ಒಳಗೂಡಿದ ಹಾಗೇ, ನಿಶ್ಚಯವಾಗಿಯೂ ನನ್ನ ಜೀವನವು ಬೇಸರಕರವಾದದ್ದಾಗಿದೆ, ಅಸಾಧ್ಯವಾಗಿ ಬೇಸರಕರವಾದದ್ದಾಗಿದೆ. ಅದೆಷ್ಟು ಬೇಸರಕರವಾಗಿದೆ ಎಂದು ಕೂಡ ಕೇಳದಿರಿ! ಹಾಗಾದರೆ, ಪರಿಹಾರವೇನು? ಎಂಬುದಾಗಿ ನನ್ನಷ್ಟಕ್ಕೆ ನಾನು ಗೊಣಗಿದೆ.” ಅನಂತರ ಆಕೆ ಎಚ್ಚರ!ವನ್ನು ವಿವರವಾಗಿ ಉದ್ಧರಿಸಿಸುತ್ತಾ, ಸಮಾಪ್ತಿಗೊಳಿಸಿದ್ದು: “ಕಲಿಯುತ್ತಾ ಇರ್ರಿ. ವೈಯಕ್ತಿಕ ಗುರಿಗಳನ್ನಿಡಿರಿ. ರಚನಾತ್ಮಕ ಗುಣವುಳ್ಳವರಾಗಿರಿ. ನಿಮ್ಮ ಕೈಗಳಿಂದ ಏನನ್ನಾದರೂ ಮಾಡಿರಿ. ಜೀವನದಲ್ಲಿ ಒಂದು ಉದ್ದೇಶವುಳ್ಳವರಾಗಿರಿ. ದೇವರನ್ನು ಪರಿಗಣನೆಗೆ ತೆಗೆದುಕೊಳ್ಳಿರಿ.
“ಎಲ್ಲ ಬುದ್ಧಿವಾದ. ಅತಿ ನೀತಿಯುಕ್ತ ಸಲಹೆಯಾಗಿರಲಿ ಇಲ್ಲದಿರಲಿ, ನೀವು ಅದರ ಕುರಿತು ಆಲೋಚಿಸುವಾಗ, ಅದು ಸಮಂಜಸವಾದ ಸಲಹೆಯಾಗಿದೆ. ಈ ಎಚ್ಚರ ಪತ್ರಿಕೆಯು ಹೇಗೋ ನಾನು ಉತ್ತಮ ಮನಃಸ್ಥಿತಿಯನ್ನು ಹೊಂದುವಂತೆ ಮಾಡುತ್ತದೆ. ನೀವು ಇಷ್ಟಪಡುವುದಾದರೆ ಅದಕ್ಕೆ ಚಂದಾ ಮಾಡಿರಿ.” ಅನಂತರ ಅಧಿಕ ಮಾಹಿತಿಯನ್ನು ಪಡೆಯಲಿಕ್ಕಾಗಿ ಭಾರತದಲ್ಲಿನ ವಿಳಾಸವನ್ನು ತಾರಾ ಪಟೇಲ್ ಒದಗಿಸಿದರು.
ಎಚ್ಚರ! ಪತ್ರಿಕೆಯ ಒಂದು ಪ್ರತಿಯನ್ನು ಹಾಗೂ ಅದರ ಸಂಗಾತಿ ಪತ್ರಿಕೆಯಾದ ಕಾವಲಿನಬುರುಜು ಅನ್ನು ನೀವು ಪಡೆದುಕೊಳ್ಳಲು ಬಯಸುವುದಾದರೆ, Praharidurg Prakashan Society, Plot A/35, Nr Industrial Estate, Nangargaon, Lonavla, 410 401, Mah., ಅಥವಾ ಪುಟ 5ರಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದಾದ ವಿಳಾಸಕ್ಕೆ ದಯವಿಟ್ಟು ಬರೆಯಿರಿ.