ನೀವು ಸದಾಕಾಲ ಜೀವಿಸಸಾಧ್ಯವಿರುವ ವಿಧ
ಇಂದು ಮಾನವರು ಅನುಭವಿಸುವುದಕ್ಕಿಂತ ಹೆಚ್ಚು ದೀರ್ಘವಾದ ಜೀವನದ ಸಾಮರ್ಥ್ಯವು ಮಾನವ ದೇಹಕ್ಕೆ ಇದೆಯೆಂಬುದು ಸ್ಪಷ್ಟವಾಗಿಗಿರುವುದರಿಂದ, ನಾವು ಸದಾಕಾಲ ಜೀವಿಸಸಾಧ್ಯವಿರುವ ವಿಧವನ್ನು ಕಂಡುಹಿಡಿಯಲಿಕ್ಕಾಗಿ ಕೆಲವರು ವಿಜ್ಞಾನದಲ್ಲಿ ತಮ್ಮ ಭರವಸೆಯನ್ನು ಇಡುತ್ತಾರೆ. “ದೇಹದ ರಾಸಾಯನಿಕಗಳ ಕುರಿತು ಮತ್ತು ಅವು ಹೇಗೆ ಪರಸ್ಪರವಾಗಿ ಕಾರ್ಯಮಾಡುತ್ತವೆ ಎಂಬುದರ ಕುರಿತು ಹೆಚ್ಚು ಸಮಗ್ರ ಜ್ಞಾನವನ್ನು ನಾವು ಪಡೆದುಕೊಂಡಂತೆ, ನಾವು ಜೀವನದ ಆವಶ್ಯಕವಾದ ಅಂಶವನ್ನು ಪ್ರಕಟಿಸುವೆವು. ಒಬ್ಬ ವ್ಯಕ್ತಿಯು ಹೇಗೆ ವೃದ್ಧನಾಗುತ್ತಾನೆ . . . ಎಂಬುದನ್ನು ನಾವು ಅರ್ಥಮಾಡಿಕೊಳ್ಳುವೆವು,” ಎಂದು ಡಾ. ಆಲ್ವಿನ್ ಸಿಲ್ವರ್ಸ್ಟೈನ್ ಬರೆದರು.
ಯಾವ ಪರಿಣಾಮದೊಂದಿಗೆ? ಅದು “ಮಾನವ ಇತಿಹಾಸದಲ್ಲಿ ಒಂದು ಹೊಸ ಶಕಕ್ಕೆ” ನಡೆಸುವುದು ಎಂದು ಸಿಲ್ವರ್ಸ್ಟೈನ್ ಹೇಳಿದರು. “ಇನ್ನುಮುಂದೆ ‘ವೃದ್ಧ’ ಜನರು ಇರುವುದಿಲ್ಲ, ಏಕೆಂದರೆ ಮರಣದ ಜಯವನ್ನು ಅನುಮತಿಸುವ ತಿಳಿವಳಿಕೆಯು ನಿತ್ಯವಾದ ಯೌವನಾವಸ್ಥೆಯನ್ನು ಸಹ ತರುವುದು.”
ಮಾನವರು ಇದನ್ನು ಪೂರೈಸುವರೊ? “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ” ಎಂದು ಬೈಬಲು ಪ್ರೋತ್ಸಾಹಿಸುತ್ತದೆ. “ಅವನ ಉಸಿರು ಹೋಗಲು ಮಣ್ಣಿಗೆ ಸೇರುತ್ತಾನೆ; ಅವನ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವವು.” (ಕೀರ್ತನೆ 146:3, 4) ನಾವು ನೋಡಿರುವಂತೆಯೇ, ಮಾನವರು ವೃದ್ಧಾಪ್ಯ ಮತ್ತು ಮರಣದಲ್ಲಿ ಪರಿಣಮಿಸುವ ಸಹಜ ದೋಷವನ್ನು ಸರಿಪಡಿಸುವುದಂತೂ ಇರಲಿ, ಪ್ರತ್ಯೇಕಿಸಿ ಗುರುತಿಸಲೂ ಅಸಮರ್ಥರಾಗಿದ್ದಾರೆ. ನಮ್ಮ ಸೃಷ್ಟಿಕರ್ತನು ಮಾತ್ರ ಅದನ್ನು ಮಾಡಬಲ್ಲನು.
ಆದರೂ, ಮಾನವರು ಭೂಮಿಯ ಮೇಲೆ ಸದಾಕಾಲ ಜೀವಿಸಬೇಕೆಂಬುದು ನಿಜವಾಗಿಯೂ ದೇವರ ಉದ್ದೇಶವಾಗಿದೆಯೊ?
ದೇವರ ಉದ್ದೇಶ
ದೇವರು ಪ್ರಥಮ ಮಾನವ ದಂಪತಿಗಳನ್ನು ಜೀವಿಸಲಿಕ್ಕಾಗಿ ಎಲ್ಲಟ್ಟನು? ಒಂದು ಭೂಪ್ರಮೋದವನದಲ್ಲಿ. ಮತ್ತು “ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂಬುದಾಗಿ ಅವರಿಗೆ ಉಪದೇಶವು ಕೊಡಲ್ಪಟ್ಟಿತ್ತು. (ಆದಿಕಾಂಡ 1:28) ಹೌದು, ಕ್ರಮೇಣವಾಗಿ ಇದೇ ಭೂಮಿಯು, ಶಾಂತಿ ಮತ್ತು ಸಂತೋಷದಲ್ಲಿ ಒಟ್ಟಿಗೆ ಜೀವಿಸುವ ನೀತಿವಂತ ಮಾನವ ಕುಟುಂಬದಿಂದ ನಿವಾಸಿಸಲ್ಪಡುವುದು ದೇವರ ಉದ್ದೇಶವಾಗಿತ್ತು.—ಯೆಶಾಯ 45:18.
ಆದಾಮನ ಅವಿಧೇಯತೆಯ ಕಾರಣದಿಂದ ಅವನ ಮೇಲೆ ಮರಣ ದಂಡನೆಯು ವಿಧಿಸಲ್ಪಟ್ಟರೂ, ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವ, ಮಾನವರಿಗಾಗಿರುವ ದೇವರ ಮೂಲ ಉದ್ದೇಶವು ಬದಲಾಗಲಿಲ್ಲ. (ಆದಿಕಾಂಡ 3:17-19) “ನಾನು ನುಡಿದಿದ್ದೇನೆ, ಈಡೇರಿಸುವೆನು” ಎಂದು ದೇವರು ಹೇಳುತ್ತಾನೆ. (ಯೆಶಾಯ 46:11; 55:11) “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ದೇವರು ಹೇಳಿದಾಗ, ಭೂಮಿಯ ಕಡೆಗಿನ ತನ್ನ ಉದ್ದೇಶವು ಬದಲಾಗಿರಲಿಲ್ಲ ಎಂದು ಆತನು ತೋರಿಸಿದನು.—ಕೀರ್ತನೆ 37:29.
ನಮ್ಮ ಸೃಷ್ಟಿಕರ್ತನೋಪಾದಿ ದೇವರು, ಮಾನವರು ವೃದ್ಧರಾಗಿ ಸಾಯುವಂತೆ ಮಾಡುವ ದೋಷವನ್ನು ಸರಿಪಡಿಸುವ ಒಂದು ಸ್ಥಾನದಲ್ಲಿದ್ದಾನೆ. ಆತನು ಇದನ್ನು ಯಾವ ಆಧಾರದ ಮೇಲೆ ಮಾಡುತ್ತಾನೆ? ಆ ದೋಷವು ಪ್ರಥಮ ಮಾನವನಾದ ಆದಾಮನಿಂದ ಬಾಧ್ಯವಾಗಿ ಬಂದಿರುವುದರಿಂದ, “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು” ದೇವರು ತನ್ನ ಮಗನಾದ ಯೇಸು ಕ್ರಿಸ್ತನ ಪರಿಪೂರ್ಣ ಮಾನವ ಜೀವವನ್ನು ಒಂದು ವಿಮೋಚನಾ ಯಜ್ಞವಾಗಿ ಒದಗಿಸಿದ್ದಾನೆ.—ಯೋಹಾನ 3:16; ಮತ್ತಾಯ 20:28.
ಕಾರ್ಯತಃ, ಹೀಗೆ ನಮ್ಮ ತಂದೆಯೋಪಾದಿ ಅಥವಾ ಜೀವದಾತನೋಪಾದಿ ಮೂಲ ಆದಾಮನ ಸ್ಥಾನವನ್ನು ಯೇಸು ಕ್ರಿಸ್ತನು ಸ್ಥಾನಭರ್ತಿಮಾಡುತ್ತಾನೆ. ಆದುದರಿಂದಲೇ ಬೈಬಲಿನಲ್ಲಿ ಯೇಸುವು “ಕಡೇ ಆದಾಮ”ನೆಂಬುದಾಗಿ ಕರೆಯಲ್ಪಟ್ಟಿದ್ದಾನೆ. (1 ಕೊರಿಂಥ 15:45) ಆದುದರಿಂದ ಪಾಪಿಯಾದ ಆದಾಮನ ಮಕ್ಕಳೋಪಾದಿ ಸಾಯುವಂತೆ ದಂಡನೆ ವಿಧಿಸಲ್ಪಡುವುದಕ್ಕೆ ಬದಲಾಗಿ, ವಿಧೇಯ ಮಾನವರು ತಮ್ಮ “ನಿತ್ಯನಾದ ತಂದೆ”ಯಾದ ಯೇಸು ಕ್ರಿಸ್ತನ ಮಕ್ಕಳೋಪಾದಿ ನಿತ್ಯ ಜೀವವನ್ನು ಪಡೆಯಲು ಅರ್ಹರೆಂದು ಪರಿಗಣಿಸಲ್ಪಡಬಹುದು.—ಯೆಶಾಯ 9:6.
“ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆ”ಯೂ “ಸರ್ವಯುಗಗಳ ಅರಸನೂ” ಆದಾತನು ಯೆಹೋವ ದೇವರಾಗಿದ್ದಾನೆ ಎಂಬುದು ನಿಶ್ಚಯ. (1 ತಿಮೊಥೆಯ 1:17; ಪ್ರಕಟನೆ 15:3; ಕೊಲೊಸ್ಸೆ 1:3) ಆದರೂ ಯೇಸು ಕ್ರಿಸ್ತನು ನಮ್ಮ “ನಿತ್ಯನಾದ ತಂದೆ” ಮತ್ತು “ರಕ್ಷಕ”ನೋಪಾದಿ ಒದಗಿಸಲ್ಪಟ್ಟಿರುವುದಲ್ಲದೆ, ಆತನು “ಸಮಾಧಾನದ ಪ್ರಭು”ವೂ ಆಗಿದ್ದಾನೆ. (ಲೂಕ 2:11) ತನ್ನ ತಂದೆಯ ಪ್ರತಿನಿಧಿಯೋಪಾದಿ, ಭೂಮಿಗೆ ಶಾಂತಿಯನ್ನು ತರಲಿಕ್ಕಾಗಿ ಕ್ರಿಸ್ತನು ರಾಜಯೋಗ್ಯ ಅಧಿಕಾರವನ್ನು ನಡೆಸುವನು.—ಕೀರ್ತನೆ 72:1-8; 110:1, 2; ಇಬ್ರಿಯ 1:3, 4.
ಯೇಸು ಕ್ರಿಸ್ತನ ಆಳಿಕೆಯ ಕೆಳಗೆ, ಕಳೆದುಕೊಂಡ ಭೂಪ್ರಮೋದವನವು ಪುನಃ ಸ್ವಾಧೀನಪಡಿಸಿಕೊಳ್ಳಲ್ಪಡುವುದು. ಯೇಸು ಹೇಳಿದ್ದು, “ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ” ಇದು ಸಂಭವಿಸುವುದು. (ಮತ್ತಾಯ 19:28) ಕ್ರಿಸ್ತನ ನಂಬಿಗಸ್ತ ಹಿಂಬಾಲಕ—ಅವರಲ್ಲಿ ಒಟ್ಟಿಗೆ 1,44,000 ಮಂದಿ—ರು, ಪ್ರಮೋದವನ ಭೂಮಿಯ ಮೇಲೆ ಆತನೊಂದಿಗೆ ಆಳಿಕೆ ನಡಿಸುವರು. (2 ತಿಮೊಥೆಯ 2:11, 12; ಪ್ರಕಟನೆ 5:10; 14:1, 3) ಭೂಮಿಯ ಮೇಲೆ ಪ್ರಮೋದವನದಲ್ಲಿ ಜೀವನವನ್ನು ಅನುಭವಿಸುವ ಮೂಲಕ, ಆ ನೀತಿಯ ಆಳಿಕೆಯಿಂದ ಲಕ್ಷಾಂತರ ಮಂದಿ ಪ್ರಯೋಜನ ಪಡೆಯುವರು. “ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ” ಎಂದು ಯೇಸು ಯಾರಿಗೆ ವಾಗ್ದಾನಿಸಿದನೊ, ಮತ್ತು ಯಾರು ಯೇಸುವಿನ ಪಕ್ಕದಲ್ಲಿ ಸತ್ತನೊ, ಆ ಪಾತಕಿಯು ಅವರ ನಡುವೆ ಸೇರಿರುವನು.—ಲೂಕ 23:43, NW.
ಹೀಗೆ, ಅನೀತಿವಂತ ಮೃತರು ಸಹ ಪುನರುತ್ಥಾನಗೊಳಿಸಲ್ಪಡುವರು ಮತ್ತು ಭೂಮಿಯ ಮೇಲೆ ನಿತ್ಯ ಜೀವಕ್ಕಾಗಿ ಅರ್ಹರಾಗಲು ಅವರಿಗೆ ಅವಕಾಶವು ಒದಗಿಸಲ್ಪಡುವುದು. (ಅ. ಕೃತ್ಯಗಳು 24:15) “ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು” ಎಂದು ಹೇಳುತ್ತಾ, ಬೈಬಲು ಅಸ್ವಸ್ಥತೆ, ವೃದ್ಧಾಪ್ಯ ಮತ್ತು ಮರಣದ ನಿರ್ಮೂಲನವನ್ನು ಮನೋಹರವಾಗಿ ವಿವರಿಸುತ್ತದೆ.—ಪ್ರಕಟನೆ 21:3, 4.
ಸದಾಕಾಲ ಜೀವಿಸುವ ವಿಧ
ಖಂಡಿತವಾಗಿ, ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದರಲ್ಲಿ ಸದಾಕಾಲ ವಾಸಿಸುವವರ ನಡುವೆ ನೀವಿರಲು ಬಯಸುತ್ತೀರಿ. ಹಾಗಿರುವಲ್ಲಿ, ಪ್ರಮೋದವನದಲ್ಲಿ ಸದಾಕಾಲ ಜೀವಿಸಲಿಕ್ಕಾಗಿ ನೀವು ಅಗತ್ಯಗಳನ್ನು ಮುಟ್ಟಬೇಕು. ತನ್ನ ಸ್ವರ್ಗೀಯ ತಂದೆಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಕ್ರಿಸ್ತನು ಒಂದು ಮೂಲಭೂತ ಅಗತ್ಯವನ್ನು ಹೀಗೆ ಹೇಳುವ ಮೂಲಕ ತಿಳಿಯಪಡಿಸಿದನು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.
ಜೀವವನ್ನು ಕೊಡುವ ಈ ಜ್ಞಾನವನ್ನು ಪಡೆದುಕೊಳ್ಳುವಂತೆ ನಿಮಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು. ಸುಮ್ಮನೆ ಅವರನ್ನು ಕೇಳಿರಿ, ಮತ್ತು ಅವರು ವಂತಿಗೆಯಿಲ್ಲದೆ, ಅನುಕೂಲಕರವಾದ ಒಂದು ಸಮಯದಲ್ಲಿ ಸಂದರ್ಶಿಸುವರು ಮತ್ತು ಮಾನವ ಕುಲವನ್ನು ಆತ್ಮಿಕ ಹಾಗೂ ದೈಹಿಕ ಪರಿಪೂರ್ಣತೆಗೆ ಏರಿಸಲಿಕ್ಕಾಗಿ ದೇವರು ಹೇಗೆ ಉದ್ದೇಶಿಸುತ್ತಾನೆಂಬುದನ್ನು ಚರ್ಚಿಸುವರು. ಸರ್ವಶಕ್ತನಾದ ನಮ್ಮ ಸೃಷ್ಟಿಕರ್ತನು, ವೃದ್ಧಾಪ್ಯ ಮತ್ತು ಮರಣವನ್ನುಂಟುಮಾಡುವ ಸಹಜ ದೋಷವನ್ನು ಸರಿಪಡಿಸಲು ಸಂಪೂರ್ಣ ಸಮರ್ಥನಾಗಿದ್ದಾನೆಂದು ಭರವಸೆಯಿಂದಿರ್ರಿ. ಇನ್ನುಮುಂದೆ ಜೀವನವು ಇಷ್ಟು ಅಲ್ಪಕಾಲದ್ದಾಗಿರದ ಸಮಯವು ಬರುತ್ತಿದೆ, ಮತ್ತು ಅದು ಸಮೀಪವಿದೆ. ಯೆಹೋವನು ತನ್ನ ಜನರನ್ನು “ಅನಿರ್ದಿಷ್ಟ ಕಾಲದ ವರೆಗೆ ಜೀವಿಸು”ವಂತೆ ಆಶೀರ್ವದಿಸುವನು.—ಕೀರ್ತನೆ 133:3, NW.
[ಪುಟ 21 ರಲ್ಲಿರುವ ಚಿತ್ರ]
ಕ್ರಿಸ್ತನ ರಾಜಯೋಗ್ಯ ಆಳಿಕೆಯ ಕೆಳಗೆ, ವೃದ್ಧಾಪ್ಯ ಮತ್ತು ಮರಣವು ಜಯಿಸಲ್ಪಡುವವು