“ಹರ್ಷಭರಿತ ಸುತ್ತಿಗಾರರು” ಎಂಬ ಜಿಲ್ಲಾ ಅಧಿವೇಶನವನ್ನು ತಪ್ಪದಿರ್ರಿ
ಬೈಬಲ್ ಬೋಧನೆಯ ಮೂರು ಪ್ರತಿಫಲದಾಯಕ ದಿನಗಳು ನಿಮಗೆ ಕಾದಿವೆ. ಶುಕ್ರವಾರ ಬೆಳಗ್ಗೆ 9:40ಕ್ಕೆ ಕಾರ್ಯಕ್ರಮವು ಸಂಗೀತದೊಂದಿಗೆ ಪ್ರಾರಂಭವಾಗುವಾಗ ಉಪಸ್ಥಿತರಾಗಿರ್ರಿ. “ಯೆಹೋವನ ಹರ್ಷಭರಿತ ಸುತ್ತಿಗಾರರೇ, ನಿಮಗೆ ಸುಸ್ವಾಗತ!” ಎಂಬ ಆರಂಭದ ಭಾಷಣವನ್ನು, ಅಂತೆಯೇ, “ಹರ್ಷಭರಿತ ಸುತ್ತಿಗಾರರೋಪಾದಿ ಲೋಕವ್ಯಾಪಕವಾಗಿ ಮೀಸಲಾಗಿಡಲ್ಪಡುವುದು” ಎಂಬ ಮುಖ್ಯ ಭಾಷಣವನ್ನು ಆನಂದಿಸಿರಿ.
ಶುಕ್ರವಾರ ಮಧ್ಯಾಹ್ನದ ಕಾರ್ಯಕ್ರಮವು ಯುವಜನರ, ಅವರ ಹೆತ್ತವರ, ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸಲಿರುವುದು. “ನಾನು ವಿವಾಹವಾಗಲು ಸಿದ್ಧವಾಗಿದ್ದೇನೋ?” ಎಂಬ ಭಾಷಣವನ್ನು ಅನೇಕರು ಕೇಳಬಯಸುವರು. “ತಮ್ಮ ಮಕ್ಕಳಲ್ಲಿ ಆಹ್ಲಾದವನ್ನು ಕಂಡುಕೊಳ್ಳುವ ಹೆತ್ತವರು” ಎಂಬ ಚರ್ಚೆಯನ್ನು ಹೆತ್ತವರು ಜಾಗರೂಕರಾಗಿ ಆಲಿಸಬೇಕು. “ಶಿಕ್ಷಣ—ಯೆಹೋವನನ್ನು ಸುತ್ತಿಸಲಿಕ್ಕೆ ಅದನ್ನು ಉಪಯೋಗಿಸಿರಿ” ಎಂಬ ಭಾಷಣದೊಂದಿಗೆ ಮಧ್ಯಾಹ್ನದ ಕಾರ್ಯಕ್ರಮವು ಮುಕ್ತಾಯಗೊಳ್ಳುವುದು. ಏನು ಒದಗಿಸಲ್ಪಟ್ಟಿದೆಯೋ, ಅದು ಶಾಲೆಯಲ್ಲಿ ಯಶಸ್ವಿಕರವಾಗಿ ಮುನ್ನಡೆಯುವಂತೆ ಯುವಜನರಿಗೆ ಸಹಾಯವನ್ನೀಯಬೇಕು.
“ಯೆಹೋವನನ್ನು ಸುತ್ತಿಸಲಿಕ್ಕಿರುವ ಆಮಂತ್ರಣಕ್ಕೆ ಉತ್ತರಿಸುವುದು,” ಎಂಬ ಶನಿವಾರದ ಬೆಳಗ್ಗಿನ ಭಾಷಣಮಾಲೆಯು ಅನೇಕರನ್ನು ಉತ್ತೇಜಿಸುವಂತಿರಬೇಕು. ಬೆಳಗ್ಗಿನ ಕಾರ್ಯಕ್ರಮವು ದೀಕ್ಷಾಸ್ನಾನದ ಭಾಷಣದೊಂದಿಗೆ ಮುಕ್ತಾಯಗೊಳ್ಳುವುದು. ಮಧ್ಯಾಹ್ನದಲ್ಲಿ, ಆದಿಕಾಲದಿಂದ ಸೈತಾನನು ಜನರನ್ನು ಬಲೆಯಲ್ಲಿ ಕೆಡವಲು ಲೈಂಗಿಕ ಕಾಮನೆಯನ್ನು ಹೇಗೆ ಬಳಸಿದ್ದಾನೆಂಬುದರ ಕುರಿತಾದ ಅಕೃತ್ರಿಮ ಚರ್ಚೆಯೊಂದಿರುವುದು. ತಮ್ಮ ಶುಶ್ರೂಷೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ದೇವ ಜನರನ್ನು ಸಿದ್ಧಪಡಿಸುವ ಮಾಹಿತಿಯ ಸಾದರಪಡಿಸುವಿಕೆಯೊಂದಿಗೆ ದಿನದ ಕಾರ್ಯಕ್ರಮವು ಮುಕ್ತಾಯಗೊಳ್ಳುವುದು.
ಭಾನುವಾರದ ಬೆಳಗ್ಗಿನ ಕಾರ್ಯಕ್ರಮವು, “ಮಹಾ ಸಂಕಟ”ಕ್ಕೆ ಮೊದಲು, ತಾಮಸವಿಲ್ಲದೆ ಸುರಕ್ಷಣೆಗೆ ಓಡಿ ಹೋಗುವ ಜರೂರಿಯ ಆವಶ್ಯಕತೆಯ ಕುರಿತಾಗಿ ಗಮನವನ್ನು ಕೇಂದ್ರೀಕರಿಸುತ್ತಾ, ಹುರಿದುಂಬಿಸುವ ಮಾಹಿತಿಯನ್ನು ಕೊಡುವುದು. (ಮತ್ತಾಯ 24:21) “ಅವರ ಮುಪ್ಪಿನ ವರ್ಷಗಳಲ್ಲಿ ಅರ್ಹ ವ್ಯಕ್ತಿಗಳನ್ನು ಸನ್ಮಾನಿಸುವುದು,” ಎಂಬ ಪ್ರಮುಖವಾದ ಡ್ರಾಮದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಳ್ಳುವುದು. ಮಧ್ಯಾಹ್ನದಲ್ಲಿ, “ನಿತ್ಯತೆಯ ಅರಸನನ್ನು ಸುತ್ತಿಸಿರಿ!” ಎಂಬ ಸಾರ್ವಜನಿಕ ಭಾಷಣವು ಅಧಿವೇಶನದ ಮತ್ತೊಂದು ಅತ್ಯುಜಲ್ವ ಭಾಗವಾಗಿರುವುದು.
ಅಮೆರಿಕವೊಂದರಲ್ಲೇ 180 ಅಧಿವೇಶನಗಳು ಪಟ್ಟಿ ಮಾಡಲ್ಪಟ್ಟಿರುವ ಕಾರಣ, ನಿಮ್ಮ ಮನೆಯ ಹತ್ತಿರವೇ ಅಧಿವೇಶನವೊಂದಿರುವುದು. ನಿಮಗೆ ಅತಿ ಸಮೀಪವಿರುವ ಅಧಿವೇಶನವೊಂದರ ವೇಳೆ ಮತ್ತು ಸ್ಥಳಕ್ಕಾಗಿ, ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ವಿಚಾರಿಸಿರಿ.