ಯೆಹೋವನ ಸಾಕ್ಷಿಗಳ “ಹರ್ಷಭರಿತ ಸುತ್ತಿಗಾರರು” ಜಿಲ್ಲಾ ಅಧಿವೇಶನ
ಬೈಬಲ್ ಉಪದೇಶದ ಮೂರು ಪ್ರತಿಫಲದಾಯಕ ದಿನಗಳು ನಿಮಗೆ ಕಾದಿವೆ. ಭಾರತವೊಂದರಲ್ಲೇ 16 ಅಧಿವೇಶನಗಳು ಗೊತ್ತುಮಾಡಲ್ಪಟ್ಟಿರುವದರಿಂದ, ನೀವು ಎಲ್ಲಿ ಜೀವಿಸುತ್ತಿದ್ದೀರೋ ಅಲ್ಲಿಯೇ ಸಮೀಪದಲ್ಲಿ ಒಂದು ಅಧಿವೇಶನವು ಜರುಗಲಿರುವ ಸಂಭಾವ್ಯತೆ ಇದೆ. ಶುಕ್ರವಾರ ಬೆಳಗ್ಗೆ 9:40ಕ್ಕೆ ಕಾರ್ಯಕ್ರಮವು ಸಂಗೀತದೊಂದಿಗೆ ಆರಂಭಗೊಳ್ಳುವಾಗ ಉಪಸ್ಥಿತರಿರ್ರಿ.
ಶುಕ್ರವಾರ ಬೆಳಗ್ಗಿನ ಕಾರ್ಯಕ್ರಮವು ಸ್ವಾಗತಿಸುವ ಹೇಳಿಕೆಗಳನ್ನು ಹಾಗೂ “ಹರ್ಷಭರಿತ ಸುತ್ತಿಗಾರರಾಗಿ ಲೋಕವ್ಯಾಪಕವಾಗಿ ಮೀಸಲಾಗಿಡಲ್ಪಡುವುದು” ಎಂಬ ಮುಖ್ಯ ಭಾಷಣವನ್ನು ಪ್ರಮುಖವಾಗಿ ಪ್ರದರ್ಶಿಸುವುದು. ಮಧ್ಯಾಹ್ನದಲ್ಲಿ ಕಾರ್ಯಕ್ರಮವು ಯುವಕರು, ಹೆತ್ತವರು ಮತ್ತು ಶಿಕ್ಷಣದ ಮೇಲೆ ಕೇಂದ್ರೀಕರಿಸುವುದು. “ನಾನು ವಿವಾಹವಾಗಲು ಸಿದ್ಧವಾಗಿದ್ದೇನೋ?” ಎಂಬ ಭಾಷಣವನ್ನು ಯುವ ಜನರು ತಪ್ಪಿಸಲು ಬಯಸರು. “ತಮ್ಮ ಮಕ್ಕಳಲ್ಲಿ ಆಹ್ಲಾದವನ್ನು ಪಡೆಯುವ ಹೆತ್ತವರು” ಎಂಬ ಭಾಷಣವನ್ನು ಹೆತ್ತವರು ಜಾಗರೂಕತೆಯಿಂದ ಆಲಿಸಬೇಕು. “ಶಿಕ್ಷಣ—ಯೆಹೋವನನ್ನು ಸುತ್ತಿಸಲಿಕ್ಕಾಗಿ ಅದನ್ನು ಉಪಯೋಗಿಸಿರಿ” ಎಂಬ ಭಾಷಣದೊಂದಿಗೆ ಮಧ್ಯಾಹ್ನದ ಕಾರ್ಯಕ್ರಮವು ಸಮಾಪ್ತಿಗೊಳ್ಳುವುದು. ಚರ್ಚಿಸಲ್ಪಡುವ ವಿಷಯವು ಯುವಕರನ್ನು ಶಾಲೆಯಲ್ಲಿ ಯಶಸ್ವಿಯಾಗಿ ಮುಂದುವರಿಯುವಂತೆ ಸಹಾಯ ಮಾಡಬೇಕು.
ಶನಿವಾರ ಬೆಳಗ್ಗಿನ ಕಾರ್ಯಕ್ರಮವು ದೀಕ್ಷಾಸ್ನಾನವನ್ನು ಪ್ರಮುಖವಾಗಿ ಪ್ರದರ್ಶಿಸುವುದು, ಮತ್ತು ಅರ್ಹರಾದವರಿಗೆ ದೀಕ್ಷಾಸ್ನಾನ ಹೊಂದಲು ಅವಕಾಶವನ್ನು ಒದಗಿಸಲಾಗುವುದು. ಮಧ್ಯಾಹ್ನದಲ್ಲಿ, ಸೈತಾನನು ಆರಂಭದ ಸಮಯದಿಂದಲೂ ಜನರನ್ನು ಬಲೆಯಲ್ಲಿ ಸಿಕ್ಕಿಸಿಕೊಳ್ಳಲು ಲೈಂಗಿಕ ಆಶೆಯನ್ನು ಉಪಯೋಗಿಸಿರುವ ವಿಧದ ಕುರಿತಾಗಿ ಒಂದು ಮುಚ್ಚುಮರೆಯಿಲ್ಲದ ಚರ್ಚೆಯಿರುವುದು. “ಸೈತಾನನ ಪಾಶಗಳನ್ನು ಹೋಗಲಾಡಿಸಿರಿ” ಎಂಬ ಪ್ರಭಾವಯುತ ಭಾಷಣವೂ ಇರುವುದು. “ಮಾನವಕುಲಕ್ಕೆ ದೇವರ ಜ್ಞಾನದ ಅಗತ್ಯವಿರುವ ಕಾರಣ” ಎಂಬ ಪ್ರಾಮುಖ್ಯ ಭಾಷಣದೊಂದಿಗೆ ದಿನದ ಕಾರ್ಯಕ್ರಮವು ಸಮಾಪ್ತಿಗೊಳ್ಳುವುದು.
ಆದಿತ್ಯವಾರ ಬೆಳಗ್ಗೆ, “ಈ ವ್ಯವಸ್ಥೆಯ ಸಮಾಪ್ತಿಯ ಸಮಯದಲ್ಲಿ ಹರ್ಷಭರಿತ ಸುತ್ತಿಗಾರರು” ಎಂಬ ಶೀರ್ಷಿಕೆಯುಳ್ಳ ಭಾಷಣಮಾಲೆಯು, ಬೇಗನೇ ನಮ್ಮನ್ನು ಎದುರಿಸಲಿರುವ ಲೋಕವನ್ನು ನಡುಗಿಸುವ ಘಟನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು. ಮತ್ತಾಯ 24:21 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು ಕ್ರಿಸ್ತನು ಯಾವುದರ ಕುರಿತಾಗಿ ಮಾತಾಡಿದನೋ ಆ “ಮಹಾ ಸಂಕಟ”ದ ಆರಂಭದ ಮುಂಚೆ ಸುರಕ್ಷೆಗೆ ಓಡಿಹೋಗುವ ತುರ್ತನ್ನು ಅದು ಒತ್ತಿ ಹೇಳಲಿದೆ.
“ಅವರ ಮುಪ್ಪಿನ ವರ್ಷಗಳಲ್ಲಿ ಅರ್ಹ ವ್ಯಕ್ತಿಗಳನ್ನು ಸನ್ಮಾನಿಸುವುದು” ಎಂಬ ಪ್ರಾಮುಖ್ಯ ನಾಟಕದೊಂದಿಗೆ ಆದಿತ್ಯವಾರದ ಬೆಳಗ್ಗಿನ ಕಾರ್ಯಕ್ರಮವು ಸಮಾಪ್ತಿಗೊಳ್ಳುವುದು. ಅನಂತರ, ಮಧ್ಯಾಹ್ನದಂದು, “ನಿತ್ಯತೆಯ ಅರಸನನ್ನು ಸುತ್ತಿಸಿರಿ!” ಎಂಬ ಬಹಿರಂಗ ಭಾಷಣವು ಕೊಡಲ್ಪಡುವುದು. ಅದು ಅಧಿವೇಶನದ ಒಂದು ಪ್ರಮುಖ ಅತ್ಯುಜಲ್ವ ಭಾಗವಾಗಿರುವುದು.
ಹಾಜರಾಗಲು ಈಗಲೇ ಯೋಜನೆಗಳನ್ನು ಮಾಡಿರಿ. ನಿಮ್ಮ ಮನೆಗೆ ಅತಿ ಸಮೀಪದಲ್ಲಿರುವ ಸ್ಥಳವನ್ನು ಕಂಡುಹಿಡಿಯಲು, ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿರಿ, ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ.