ಎಲ್ಲರಿಗಾಗಿ ಪರಿಪೂರ್ಣ ಆರೋಗ್ಯ
ನಡವಳಿಕೆ, ಪರಿಸರ, ಮತ್ತು ಆರೋಗ್ಯ ಆರೈಕೆಯಂತೆಯೇ, ನಮ್ಮ ಜೀವಶಾಸ್ತ್ರೀಯ ರಚನೆಯು ಸಹ ನಮ್ಮ ಆರೋಗ್ಯವನ್ನು ಬಾಧಿಸುತ್ತದೆ. ಅವುಗಳೆಡೆಗಿರುವ ಒಂದು ತಳಿಶಾಸ್ತ್ರದ ವಿನ್ಯಾಸದ ಕಾರಣದಿಂದ, ನಾವು ಅನಂತರ ವಿಕಸಿಸಿಕೊಳ್ಳಬಹುದಾದ ಅನುವಂಶೀಯತೆ ಮತ್ತು ಕಾಯಿಲೆಗಳಿಂದ ಆ ರಚನೆಯು ಪ್ರಭಾವಿಸಲ್ಪಡುತ್ತದೆ.
“ಯಾವುದರಲ್ಲಿ ನೀವು ಲೋಕಕ್ಕೆ ಆಗಮಿಸುತ್ತೀರೋ ಆ ಜೀವಶಾಸ್ತ್ರೀಯ ಶಾರೀರಿಕ ರಚನೆಯು, ಒಟ್ಟಿನಲ್ಲಿ ನೀವು ಚೆನ್ನಾಗಿ ಜೀವಿಸುವಿರೋ, ದೀರ್ಘಕಾಲ ಜೀವಿಸುವಿರೋ, ಅಥವಾ ಜೀವಿಸುವುದೇ ಇಲ್ಲವೋ ಎಂಬುದನ್ನು ನಿಶ್ಚಯಿಸುತ್ತದೆ” ಎಂದು ಒಬ್ಬ ಆರೋಗ್ಯ ವೃತ್ತಿಕಾರನು ಹೇಳುತ್ತಾನೆ.
ಅವುಗಳನ್ನು ನಾವು ಯಾವ ವಿಧದಲಾದ್ಲರೂ ಪಡೆದಿರಲಿ, ತಲೆನೋವು, ಸ್ನಾಯುಗಳ ಸೆಡೆತ, ಬಳಲಿಹೋದ ನರಗಳು, ಮೃದುವಾಗಿಹೋಗಿರುವ ಮೂಳೆಗಳು, ಹೃದಯಗಳ ದೌರ್ಬಲ್ಯ, ಮತ್ತು ಇತರ ವ್ಯಾಧಿಗಳು, ನಮ್ಮ ಆರೋಗ್ಯವು ಶಿಥಿಲಗೊಂಡ ದೇಹ ಮತ್ತು ಮನಸ್ಸಿನ ಮೂಲಕ ಹಾನಿಕರವಾಗಿ ಬಾಧಿಸಲ್ಪಡುತ್ತದೆ ಎಂಬುದಾಗಿ ನಮಗೆ ದಿನನಿತ್ಯವು ಜ್ಞಾಪಕ ಹುಟ್ಟಿಸುತ್ತದೆ. ಈ ವ್ಯಾಪಿತ ಆರೋಗ್ಯ ಸಮಸ್ಯೆಗಳ ಮೂಲ ಕಾರಣವು ಯಾವುದಾಗಿದೆ?
ಮೂಲ ಕಾರಣ
ಸಾ.ಶ. ಪ್ರಥಮ ಶತಮಾನದಲ್ಲಿ ಜೀವಿಸುತ್ತಿದ್ದ ಲೂಕನೆಂಬ ಹೆಸರಿನ ಒಬ್ಬ ವೈದ್ಯನು, ಯೇಸು ಕ್ರಿಸ್ತನ ಕುರಿತಾಗಿ ತಾನು ಬರೆದ ಪ್ರೇರಿತವಾದೊಂದು ಆತ್ಮಕಥೆಯಲ್ಲಿ ಈ ಪ್ರಶ್ನೆಯನ್ನು ಉತ್ತರಿಸುತ್ತಾನೆ. ಒಂದು ದಿನ, ಅವನು ವಾಸಿಹೊಂದುವನೆಂಬ ನಿರೀಕ್ಷೆಯಲ್ಲಿ ಒಬ್ಬ ಪಾರ್ಶ್ವವಾಯುರೋಗದವನನ್ನು ಯೇಸುವಿನ ಹತ್ತಿರ ತೆಗೆದುಕೊಂಡು ಬರಲಾಯಿತು ಎಂದು ಲೂಕನು ಬರೆಯುತ್ತಾನೆ. ಪಾರ್ಶ್ವವಾಯುರೋಗದವನಿಗೆ ಯೇಸು ಹೇಳಿದ್ದು: “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ.” ಅನಂತರ ಪಾಪಗಳನ್ನು ಕ್ಷಮಿಸಲು ತನಗೆ ನಿಶ್ಚಯವಾಗಿ ಶಕಿಯ್ತಿತ್ತೆಂದು ತೋರಿಸಲು, ಆ ಮನುಷ್ಯನಿಗೆ ಯೇಸು ಆಜ್ಞಾಪಿಸಿದ್ದು: “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು.” ಆ ಮನುಷ್ಯನು ಹಾಗೆಯೇ ಮಾಡಿದನು! ಫಲಿತಾಂಶವಾಗಿ, ವಾಸಿಮಾಡುವಾಗ ಹಾಜರಿದ್ದ “ಎಲ್ಲರು ಬೆರಗಾದರು” ಮತ್ತು “ದೇವರನ್ನು ಕೊಂಡಾಡಲು ಪ್ರಾರಂಭಿಸಿದರು.”—ಲೂಕ 5:17-26, NW.
ಯೇಸು ಯಾವ ಪಾಪವನ್ನು ಸೂಚಿಸಿದನು? ನಾವು ಏಕೆ ಕಾಯಿಲೆ ಹೊಂದುತ್ತೇವೆ, ವೃದ್ಧರಾಗುತ್ತೇವೆ, ಮತ್ತು ಸಾಯುತ್ತೇವೆ ಎಂಬುದನ್ನು ಗ್ರಹಿಸಲು ನಮಗೆ ಉತ್ತರವು ಸಹಾಯವನ್ನೀಯುತ್ತದೆ. ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ,’ ಎಂಬ ಆಶ್ವಾಸನೆಯನ್ನು ಹೊಂದಿರುವವರಾಗಿ, ಆ ಉತ್ತರಕ್ಕಾಗಿ ನಾವು ಬೈಬಲನ್ನು ಅವಲೋಕಿಸುವುದು ಸಾಧ್ಯ. (2 ತಿಮೊಥೆಯ 3:16; 2 ಪೇತ್ರ 1:21) ಇದು ನಮಗೆ ಪ್ರಥಮ ಮಾನವನಾದ ಆದಾಮನು, ಪರಿಪೂರ್ಣ ಆರೋಗ್ಯದಲ್ಲಿ ಸೃಷ್ಟಿಸಲ್ಪಟ್ಟಿದ್ದನು ಎಂಬುದನ್ನು ತಿಳಿಸುತ್ತದೆ. ತನ್ನ ಸೃಷ್ಟಿಕರ್ತನಿಗೆ ಅವನು ವಿಧೇಯನಾಗಿದ್ದ ತನಕ ಮಿಡಿಯುವ ಆರೋಗ್ಯವನ್ನು ಅವನು ಅನುಭವಿಸಿದನು.
ಹಾಗಿದ್ದರೂ, ಆದಾಮನು ದೇವರ ನಿಯಮವನ್ನು ಮುರಿಯಲು ಆರಿಸಿಕೊಂಡನು. ಅವಿಧೇಯನಾಗುವುದರ ಮತ್ತು ತನ್ನ ಸೃಷ್ಟಿಕರ್ತನ ವಿರುದ್ಧ ಉದ್ದೇಶಪೂರ್ವಕವಾಗಿ ದಂಗೆಯೇಳುವುದರ ಮೂಲಕವಾಗಿ, ಅವನು ಪಾಪವನ್ನು ಮಾಡುತ್ತಿದ್ದನು. ಫಲಿತಾಂಶವಾಗಿ, ಅವನು ಅಪರಿಪೂರ್ಣನಾದನು, ಕಾಯಿಲೆಗೆ ಸುಲಭಭೇದ್ಯನಾದನು, ಮತ್ತು ಸಕಾಲದಲ್ಲಿ ಅವನು ಮರಣಹೊಂದಿದನು. ಆದುದರಿಂದ, ಪಾಪವು ಆದಾಮನ ಕಾಯಿಲೆ ಮತ್ತು ಮರಣದ ಕಾರಣವಾಗಿತ್ತು.
ಕೆಲವು ರೋಗಗಳು ಹೇಗೆ ತಳಿಶಾಸ್ತ್ರದ ನಿಯಮಗಳ ಕಾರ್ಯದೋಪಾದಿ ಹೆತ್ತವರಿಂದ ಮಕ್ಕಳಿಗೆ ರವಾನಿತವಾಗುತ್ತವೋ, ಹಾಗೆಯೇ ಅಪರಿಪೂರ್ಣತೆ ಮತ್ತು ಪರಿಣಮಿತ ಕಾಯಿಲೆಗಳು ಆದಾಮನಿಂದ ಮಾನವಕುಲವಾದ ಅವನ ಸಂತತಿಗೆ ಹಾಯಿಸಲ್ಪಟ್ಟಿತು. ಹೀಗೆ, ಸಕಲ ರೋಗಗಳು ಆದಾಮನ ಮೂಲ ಪಾಪದ ಫಲಿತಾಂಶವಾಗಿವೆ. (ಆದಿಕಾಂಡ 2:17; 3:1-19; ರೋಮಾಪುರ 5:12) ತಪ್ಪಿಸಿಕೊಳ್ಳುವ ಮಾರ್ಗವೇನಾದರೂ ಇದೆಯೋ?
ತಪ್ಪಿಸಿಕೊಳ್ಳುವ ಮಾರ್ಗ
ಪರಿಪೂರ್ಣ ಆರೋಗ್ಯದಿಂದ ನ್ಯೂನಾರೋಗ್ಯಕ್ಕೆ ಪರಿವರ್ತನೆಯು ಪಾಪದ, ಅಂದರೆ, ದೇವರ ನಿಯಮದ ವಿರುದ್ಧವಾದ ಆದಾಮನ ದಂಗೆಯ ಕಾರಣವಾಗಿ ಬಂತು. ನ್ಯೂನಾರೋಗ್ಯದಿಂದ ಪರಿಪೂರ್ಣ ಆರೋಗ್ಯಕ್ಕೆ ಪರಿವರ್ತನೆಯ ಏಕಮಾತ್ರ ಸಾಧ್ಯತೆಯು ಪಾಪವನ್ನು ತೆಗೆದುಹಾಕುವ ಮೂಲಕವೇ ಆಗಿದೆ. (ರೋಮಾಪುರ 5:18, 19) ಹೇಗೆ? ಪರಿಪೂರ್ಣನಾಗಿದ್ದಾಗ, ಆದಾಮನ ನಿಖರವಾದ ಪ್ರತಿರೂಪವಾಗಿರುವ ಮತ್ತೊಬ್ಬ ಪರಿಪೂರ್ಣ ಮಾನವನು, ಒಂದು ಪ್ರಾಯಶ್ಚಿತದ್ತೋಪಾದಿ ತನ್ನ ಜೀವವನ್ನು ಅರ್ಪಿಸಬೇಕಾಗುವುದು. ದೇವರ ನಿಯಮವು “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ” ಎಂಬುದಾಗಿದೆ, ಅಂದರೆ ಜೀವಕ್ಕೆ ಪ್ರತಿಯಾಗಿ ಜೀವವು ಎಂಬುದಾಗಿದೆ.—ಧರ್ಮೋಪದೇಶಕಾಂಡ 19:21.
ಹಾಗಿದ್ದರೂ, ಆದಾಮನ ಪಾಪಭರಿತ ವಂಶಸ್ಥರಲ್ಲಿ ಒಬ್ಬನೂ ಅಂಥ ಒಂದು ಪ್ರಾಯಶ್ಚಿತವ್ತನ್ನು ಒದಗಿಸಸಾಧ್ಯವಿರಲಿಲ್ಲ. ಹೀಗೆ, ಯೆಹೋವನು ತಾನೇ ಪ್ರೀತಿಯಿಂದ ತನ್ನ ಮಗನಾದ ಯೇಸುವನ್ನು, “ನಾವು ಆತನ ಮೂಲಕ ಜೀವಿಸುವುದಕ್ಕಾಗಿ” ತನ್ನ ಜೀವವನ್ನು “ಅನೇಕರನ್ನು ಬಿಡಿಸುವುದಕ್ಕೋಸ್ಕರ” ಒಬ್ಬ ಪರಿಪೂರ್ಣ ಮನುಷ್ಯನಾಗಿ ಒದಗಿಸಿದನು. —ಮತ್ತಾಯ 20:28; 1 ಯೋಹಾನ 4:9; ಕೀರ್ತನೆ 49:7.
ಯೇಸು ಭೂಮಿಯಲ್ಲಿರುವಾಗ, ಪಾರ್ಶ್ವವಾಯುರೋಗದವನನ್ನು, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದಾಗ ಮತ್ತು ವಾಸಿಹೊಂದಿದ ಮನುಷ್ಯನು ಮನೆಗೆ ನಡೆದು ಹೋದಾಗ, ಪಾಪಗಳನ್ನು ತೆಗೆದುಹಾಕಲು ತನ್ನ ತಂದೆಯಾದ ಯೆಹೋವನು ತನಗೆ ಶಕ್ತಿಯನ್ನು ಕೊಟ್ಟಿದ್ದನು ಎಂಬುದಾಗಿ ತೋರಿಸಿದನು. ಕುರುಡರನ್ನು, ಕಿವುಡರನ್ನು, ಮತ್ತು ವಿವಿಧ ಕಾಯಿಲೆಗಳಿಂದಿದ್ದ ಇತರ ಅನೇಕರನ್ನು ತತ್‌ಕ್ಷಣವೇ ವಾಸಿಮಾಡುವ ಮೂಲಕ ದೇವರಿಂದ ಬಂದ ಈ ಶಕ್ತಿಯನ್ನು ಯೇಸು ಹಲವು ಸಲ ಉಪಯೋಗಿಸಿದನು.
ಯೇಸುವಿನ ಮೂಲಕವಾದ ಈ ಅದ್ಭುತಕರ ವಾಸಿಹೊಂದುವಿಕೆಗಳ ಸಂಬಂಧದಲ್ಲಿ, ಬೈಬಲ್ ವಿವರಿಸುವುದು: “ಆಗ ಜನರು ಗುಂಪುಗುಂಪಾಗಿ ಆತನ ಬಳಿಗೆ ಬಂದು ಕುಂಟರು ಕುರುಡರು ಮೂಕರು ಕೈಕಾಲಿಲ್ಲದವರು ಈ ಮುಂತಾದ ಅನೇಕರನ್ನು ಕರತಂದು ಅವರನ್ನು ಆತನ ಪಾದಗಳ ಬಳಿಯಲ್ಲಿ ಬಿಟ್ಟರು; ಆತನು ಅವರನ್ನು ವಾಸಿಮಾಡಿದನು. ಮೂಕರಾಗಿದ್ದವರು ಮಾತಾಡಿದ್ದನ್ನೂ ಕೈಕಾಲಿಲ್ಲದವರು ಸ್ವಸ್ಥವಾದದ್ದನ್ನೂ ಕುಂಟರಿಗೆ ಕಾಲುಬಂದದ್ದನ್ನೂ ಕುರುಡರಿಗೆ ಕಣ್ಣುಬಂದದ್ದನ್ನೂ ಜನರು ಕಂಡು ಆಶ್ಚರ್ಯ”ಪಟ್ಟರು. (ಮತ್ತಾಯ 15:30, 31) ಇನ್ನೂ ಹೆಚ್ಚು ಗಮನಾರ್ಹವಾಗಿ, ಸತ್ತ ಜನರನ್ನು ಪುನಃ ಜೀವಕ್ಕೆ ಹಿಂದಿರುಗಿಸಲು ಯೇಸುವು ಸಮರ್ಥನಾಗಿದ್ದನು. ಇಂತಹ ಅನೇಕ ಪುನರುತ್ಥಾನಗಳ ಕುರಿತು ಬೈಬಲ್ ತಿಳಿಸುತ್ತದೆ.—ಲೂಕ 7:11-16; 8:49-56; ಯೋಹಾನ 11:14, 38-44.
ಈ ಅದ್ಭುತಕರವಾದ ವಾಸಿಮಾಡುವಿಕೆಗಳು, ಯಾವ ರೋಗವೂ ಯೇಸುವಿನ ವಾಸಿಮಾಡುವ ಶಕ್ತಿಗೆ ಅತೀತವಾಗಿರುವುದಿಲ್ಲ ಎಂಬುದಾಗಿ ನಮಗೆ ಆಶ್ವಾಸನೆಯನ್ನೀಯುತ್ತದೆ. ಅವನು ಈ ದೇವದತ್ತ ಶಕ್ತಿಯನ್ನು ಪುನಃ ಉಪಯೋಗಿಸುವನೋ? ನಾವು ಪ್ರಯೋಜನವನ್ನು ಪಡೆಯಬಲ್ಲೆವೋ?
ಪರಿಪೂರ್ಣ ಆರೋಗ್ಯ ಒಂದು ಖಾತ್ರಿ
ಯೇಸುವು ಈಗಾಗಲೇ ದೇವರ ಸ್ವರ್ಗೀಯ ರಾಜ್ಯದ ರಾಜನೋಪಾದಿ, ಸ್ವರ್ಗದಲ್ಲಿ ಆಳುತ್ತಿದ್ದಾನೆಂದು ಬೈಬಲ್ ಪ್ರವಾದನೆಗಳು ತೋರಿಸುತ್ತವೆ. ಈಗ ಅಸ್ತಿತ್ವದಲ್ಲಿರುವ ಸಕಲ ಮಾನವ ರಾಜ್ಯಗಳನ್ನು ತೆಗೆದುಹಾಕಲು ಮತ್ತು ಇಡೀ ಭೂಮಿಯ ಮೇಲೆ ಆಳಿಕ್ವೆಯನ್ನು ನಡೆಸಲು ದೇವರು ಅವನಿಗೆ ಅನುಜ್ಞೆಯನ್ನು ಕೊಟ್ಟಿದ್ದಾನೆ. (ಕೀರ್ತನೆ 110:1, 2; ದಾನಿಯೇಲ 2:44) ಯೇಸು ತನ್ನ ಹಿಂಬಾಲಕರಿಗೆ ಕಲಿಸಿದ ಪ್ರಾರ್ಥನೆಯು ನೆರವೇರಲಿರುವುದು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಆ ಸ್ವರ್ಗೀಯ ರಾಜ್ಯದ ಆಳಿಕ್ವೆಯ ಕೆಳಗೆ, ಈ ಭೂಮಿಗಾಗಿರುವ ದೇವರ ಚಿತ್ತದ ಒಂದು ಭಾಗವು, ಮಾನವ ಕುಟುಂಬಕ್ಕಾಗಿ ಆರೋಗ್ಯ ಸ್ಥಿತಿಗಳನ್ನು ಕೌತುಕ ರೀತಿಯಲ್ಲಿ ಉತ್ತಮಪಡಿಸುವುದೇ ಆಗಿದೆ.
ಅನಂತರ, ಅಕ್ಷರಾರ್ಥದಲ್ಲಿ ಹಾಗೂ ಒಂದು ಆತ್ಮಿಕಾರ್ಥದಲ್ಲಿ, “ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು,” ‘ಮತ್ತು ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.’—ಯೆಶಾಯ 33:24; 35:5, 6.
ದೇವರ ಸ್ವರ್ಗೀಯ ರಾಜ್ಯದ ಕೆಳಗೆ, ಪರಿಪೂರ್ಣ ಆರೋಗ್ಯವು, ನಾವೀಗ ಸಾಯುವಂತೆ ಜನರು ಅಲ್ಲಿ ಸಾಯಬೇಕಾಗಿರುವುದಿಲ್ಲ ಎಂಬುದನ್ನು ಅರ್ಥೈಸುವುದು. ದೇವರ ವಾಕ್ಯವು ವಾಗ್ದಾನಿಸುವುದು: “ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು” ಪಡೆಯುವರು. “ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ಯೋಹಾನ 3:16; ರೋಮಾಪುರ 6:23) ಹೌದು, ಬಹು ಹಿಂದೆ ಪ್ರೇರಿತ ಕೀರ್ತನೆಯು ವಾಗ್ದಾನಿಸಿದ್ದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” (ಕೀರ್ತನೆ 37:29) ತಾನು ಭೂಮಿಯಲ್ಲಿರುವಾಗ ಮಾಡಿದಂತೆಯೇ, ಯೇಸು ಆಗ ಸತ್ತವರನ್ನು ಪುನರುತ್ಥಾನಗೊಳಿಸುವನು ಮತ್ತು ಪರಿಪೂರ್ಣ ಆರೋಗ್ಯದಿಂದ ಪ್ರಯೋಜನವನ್ನು ಪಡೆಯಲು ಅವರಿಗೆ ಅವಕಾಶವನ್ನು ನೀಡುವನು. ಬೈಬಲ್ ವಾಗ್ದಾನಿಸುವುದು: “ಇದಲ್ಲದೆ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನ”ವಿರುವುದು.—ಅ. ಕೃತ್ಯಗಳು 24:15.
ರಾಜ್ಯದ ಆಳಿಕ್ವೆಯ ಕೆಳಗೆ ಭೂಮಿಯು ತಾನೇ ಸಮೃದ್ಧಿಗೊಳ್ಳುವುದು, ಈ ಕಾರಣದಿಂದ ದುಃಸ್ಥಿತಿಯ ಆರೋಗ್ಯಕ್ಕೆ ನೆರವಾಗುವ ಹಸಿವು ಇನ್ನೆಂದೂ ಪುನಃ ಅಸ್ತಿತ್ವದಲ್ಲಿರುವುದಿಲ್ಲ. ನಮಗೆ ಬೈಬಲ್ ಪ್ರವಾದನೆಗಳು ಹೇಳುವುದು: “ತೋಟದ ಮರಗಳು ಹಣ್ಣುಬಿಡುವವು; ಹೊಲಗಳು ಒಳ್ಳೆಯ ಬೆಳೆಕೊಡುವವು; ಜನರು ಸ್ವದೇಶದಲ್ಲಿ ನೆಮ್ಮದಿಯಾಗಿರುವರು.” (ಯೆಹೆಜ್ಕೇಲ 34:27) “ಭೂಮಿಯು ಒಳ್ಳೇ ಬೆಳೆಯನ್ನು ಕೊಟ್ಟಿರುತ್ತದೆ. ದೇವರು, ನಮ್ಮ ದೇವರೇ, ನಮ್ಮನ್ನು ಆಶೀರ್ವದಿಸುವನು.” (ಕೀರ್ತನೆ 67:6) “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಯಾಗಲಿ.” (ಕೀರ್ತನೆ 72:16) “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು.”—ಯೆಶಾಯ 35:1.
ದೇವರ ಹೊಸ ಲೋಕದಲ್ಲಿ ಅಸ್ತಿತ್ವದಲ್ಲಿರಲಿರುವ ಪರಿಸ್ಥಿತಿಯನ್ನು ಸಾರಾಂಶಿಸುತ್ತಾ, ಬೈಬಲಿನ ಕೊನೆಯ ಪ್ರವಾದನಾ ಪುಸ್ತಕವು ಘೋಷಿಸುವುದು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:4.
‘ಅದನ್ನು ನಂಬುವುದು ಕ್ಲಿಷ್ಟಕರ’ವೆಂದು ನೀವು ಹೇಳುತ್ತೀರೋ? ಹಾಗಾದರೆ ಇದನ್ನು ಯೋಚಿಸಿ. ಆದಾಮನು ಒಬ್ಬ ಪಾಪಿಯಾಗುವ ಮುಂಚೆ, ಅವನು ಪರಿಪೂರ್ಣ ಆರೋಗ್ಯವನ್ನು ಪಡೆದಿದ್ದನು. ಆವಾಗ ಯಾವನಿಗಾದರೂ ಅವನೊಂದಿಗೆ ಮಾತಾಡುವ ಸಾಧ್ಯತೆ ಇದ್ದು, ಒಂದು ದಿನ ಭೂಮಿಯು ಯಾತನೆ ಪಡುತ್ತಿರುವ, ಕ್ಲೇಶರಾಗಿರುವ, ಮತ್ತು ವೃದ್ಧರಾಗುತ್ತಿರುವ ಜನರಿಂದ ತುಂಬಿರುತ್ತದೆಂದು ಹೇಳುವ ಸಾಧ್ಯತೆಯಿತ್ತೆಂದು ಭಾವಿಸಿರಿ. ಆದಾಮನಿಗೆ ಅದನ್ನು ನಂಬಲು ಕ್ಲಿಷ್ಟಕರವಾಗುತ್ತಿತ್ತು ಎಂದು ನೀವು ಯೋಚಿಸುವುದಿಲ್ಲವೇ? ಆದರೂ, ಈಗ ಅದು ನಿಜತ್ವವಾಗಿದೆ.
ವ್ಯತಿರಿಕ್ತವಾಗಿ, ದೇವರ ರಾಜ್ಯದ ಕೆಳಗೆ ಪರಿಪೂರ್ಣ ಆರೋಗ್ಯವು ಒಂದು ನಿಜತ್ವವಾಗುವುದು. ಯೆಹೋವನ ವಾಕ್ಯವು ನಮಗೆ ಆಶ್ವಾಸನೆಯನ್ನೀಯುವುದು: “ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ.” (ಪ್ರಕಟನೆ 21:5) ದೇವರು ಏನು ಸಂಭವಿಸುವುದೆಂದು ಹೇಳಿದ್ದಾನೋ ಅದು ಸಂಭವಿಸುವುದು ಏಕೆಂದರೆ “ಸುಳ್ಳಾಡಲು ದೇವರಿಗೆ ಅಸಾಧ್ಯ.”—ಇಬ್ರಿಯ 6:18, NW.
ಬರಲಿರುವ ಈ ಆಶೀರ್ವಾದಗಳನ್ನು ಅನುಭವಿಸಲು ಆಶ್ವಾಸನೆಯನ್ನು ಪಡೆಯಲಿಕ್ಕಾಗಿ ಈಗ ನೀವೇನು ಮಾಡಬಲ್ಲಿರಿ? ಯೇಸು ತನ್ನ ತಂದೆಗೆ ಪ್ರಾರ್ಥನೆಯಲ್ಲಿ ಏನು ಹೇಳಿದನೋ ಅದರಿಂದ ಪರಿಪೂರ್ಣ ಆರೋಗ್ಯದ ಮತ್ತು ನಿತ್ಯಜೀವದ ಮಾರ್ಗವು ಸ್ಫುಟಗೊಳಿಸಲ್ಪಟ್ಟಿತು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.
ನಿಮ್ಮ ಮನೆಯಲ್ಲಿ ಒಂದು ಉಚಿತ ಬೈಬಲ್ ಅಧ್ಯಯನಕ್ಕಾಗಿ ಯೆಹೋವನ ಸಾಕ್ಷಿಗಳನ್ನು ಕೇಳಿರಿ. ದೇವರ ಅದ್ಭುತಕರವಾದ ವಾಗ್ದಾನಗಳ ಕುರಿತಾಗಿ ನೀವು ಹೆಚ್ಚನ್ನು ಕಲಿಯುವಂತೆ ಸಹಾಯ ನೀಡಲು ಅವರು ಸಂತೋಷವುಳ್ಳವರಾಗಿರುವರು. ಇದು ಪರಿಪೂರ್ಣ ಆರೋಗ್ಯದ ಪಥದಲ್ಲಿ ನೀವು ತೆಗೆದುಕೊಳ್ಳುವ ಮೊದಲ ಹೆಜ್ಜೆಯಾಗಿರುವುದು!
[ಪುಟ 25 ರಲ್ಲಿರುವ ಚಿತ್ರ]
ದೇವರ ಹೊಸ ಲೋಕದಲ್ಲಿ, ಸಕಲ ಮಾನವರು ಪರಿಪೂರ್ಣ ಆರೋಗ್ಯವನ್ನು ಅನುಭವಿಸುವರು