ಆಧುನಿಕ ದಿನದ ಒಬ್ಬ ಒಳ್ಳೇ ಸಮಾರ್ಯದವನು
ಕೆನಡದಲ್ಲಿರುವ ಒಬ್ಬಾಕೆ ಸ್ತ್ರೀಯು, ವಾಹನ ಅಪಘಾತಕ್ಕೊಳಗಾದಳು. ಆಧುನಿಕ ದಿನದ ಒಬ್ಬ ಒಳ್ಳೇ ಸಮಾರ್ಯದವನು ಅವಳ ನೆರವಿಗೆ ಬಂದನು. (ಲೂಕ 10:29-37) ಅವನ ದಯೆಯಿಂದ ಪ್ರೇರೇಪಿಸಲ್ಪಟ್ಟ ಆಕೆ, ಈ ಮುಂದಿನ ವಿಷಯವನ್ನು ಜಾರ್ಜ್ಟೌನ್ ಇಂಡಿಪೆಂಡೆಂಟ್ ಎಂಬ ಪತ್ರಿಕೆಗೆ ಬರೆದಳು:
‘ಪ್ರಿಯ ಸಂಪಾದಕರಿಗೆ:
‘ನಾನು ಎರಡು ಕಾರಣಗಳಿಗಾಗಿ ಬರೆಯುತ್ತಿದ್ದೇನೆ. ಮೊದಲನೆಯದಾಗಿ, ಈ ಕಳೆದ ವಾರಾಂತ್ಯ, ನನ್ನ ಕಾರಿನ ನಿಯಂತ್ರಣವನ್ನು ಕಳೆದುಕೊಂಡು ಒಂದು ಹಳ್ಳದೊಳಗೆ ನಾನು ಬಿದ್ದಾಗ, ನನಗೆ ಸಹಾಯ ಮಾಡಿದ ಒಬ್ಬ ಜಾರ್ಜ್ಟೌನಿನ ನಿವಾಸಿಯನ್ನು ಅಭಿನಂದಿಸಲು ನಾನು ಬಯಸುತ್ತೇನೆ.
‘ಮಿಸ್ಟರ್ ಜಾನ್ ಸಾಂಡರ್ಸ್, ಕಾರನ್ನು ನಡೆಸಿಕೊಂಡು ಹೋಗುತ್ತಿದ್ದವರು, ನಿಂತರು. ಅವರು ಪ್ರಥಮ ಚಿಕಿತ್ಸೆಯನ್ನು ಆರಂಭಿಸಿದರು ಮತ್ತು ಅತಿಯಾಗಿ ಭರವಸೆಯನ್ನು ಕೊಡುವವರಾಗಿದ್ದರು. ಆ್ಯಂಬ್ಯುಲನ್ಸ್ ಚಾಲಕರು ಮತ್ತು ಪೊಲೀಸರು ಕಾರ್ಯವನ್ನು ವಹಿಸಿಕೊಳ್ಳುವ ತನಕ ಅವರು ನನ್ನೊಂದಿಗೆ ಉಳಿದರು. ನಿಮ್ಮ ಸಮುದಾಯದಲ್ಲಿ ಮಿ. ಸಾಂಡರ್ಸ್ರಂತಹ ಒಳ್ಳೇ ಸಮಾರ್ಯದವರು ಜೀವಿಸುತ್ತಿರುವುದರಿಂದ ನಿಮ್ಮ ಸಮುದಾಯವು ಆಶೀರ್ವದಿಸಲ್ಪಟ್ಟಿದೆ.
‘ನಾನು ಕ್ಷೇಮದಿಂದಿದೇನ್ದೊ ಇಲ್ಲವೊ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ನನ್ನ ಗಂಡ ಮತ್ತು ನನ್ನನ್ನು ಆಸ್ಪತ್ರೆಯಲ್ಲಿ ಸಂದರ್ಶಿಸಲು ಮಿ. ಸಾಂಡರ್ಸ್ ಬಂದರು. ಜಾರ್ಜ್ಟೌನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಆಫೀಸಿನಲ್ಲಿ ಮಿ. ಸಾಂಡರ್ಸ್ ಕೆಲಸಮಾಡುತ್ತಾರೆಂಬುದನ್ನು ತಿಳಿಯಲು ನಾನು ಅತ್ಯಾಶ್ಚರ್ಯಪಟ್ಟೆ. ಆ ಜನರು ಔಷಧಗಳಲ್ಲಿ ನಂಬಿಕೆಯನ್ನಿಡಲಿಲ್ಲವೆಂದು ನಾನು ಯಾವಾಗಲೂ ನೆನಸಿದ್ದೆ, ಆದರೆ ಇಲ್ಲಿ ಅವರಲ್ಲಿ ಒಬ್ಬರು ನನ್ನ ಪರವಾಗಿ ಪ್ರಥಮ ಚಿಕಿತ್ಸಾ ವೈದ್ಯಕೀಯ ತರಬೇತಿಯನ್ನು ಉಪಯೋಗಿಸಿದ್ದರು. ಬರೆಯುವುದಕ್ಕಾಗಿರುವ ಎರಡನೆಯ ಕಾರಣವನ್ನು ಕೊಡುವಂತೆ ಇದು ಮಾಡುತ್ತದೆ.
‘ಯೆಹೋವನ ಸಾಕ್ಷಿಗಳು ನನ್ನ ಮನೆಗೆ ಬಂದಾಗ ನಾನು ಅವರ ಕಡೆಗೆ ತೋರಿಸಿದ್ದ ಅಸಭ್ಯ ವರ್ತನೆಗಾಗಿ, ಅವರೆಲ್ಲರಿಂದ ಕ್ಷಮೆ ಕೇಳಲು ಬಯಸುತ್ತೇನೆ. ನೀವು ಮತಭ್ರಾಂತರೆಂದು ನಾನು ಯಾವಾಗಲೂ ತಿಳಿದಿದ್ದೆ. ಈ ವಿಪರೀತ ಎಣಿಕೆಯನ್ನು ಮಿ. ಸಾಂಡರ್ಸ್ ತಪ್ಪೆಂದು ರುಜುಪಡಿಸಿದರು. ಸರಿಯೆಂದು ನಿಮಗೆ ತೋರುವ ಸಂಗತಿಗಳನ್ನು ಮಾಡಲು ಪ್ರಯತ್ನಿಸುತ್ತಿರುವ ಸಾಮಾನ್ಯ ಜನರು ನೀವೆಲ್ಲರೂ ಆಗಿದ್ದೀರಿ.
‘ಮಿ. ಸಾಂಡರ್ಸ್ರವರೇ ನಿಮಗೆ ಪುನಃ ಧನ್ಯವಾದಗಳು, ಮತ್ತು ನಂಬಿಕೆಗೆ ಅಂಟಿಕೊಂಡಿರ್ರಿ. ದೇವರು ನಿಮ್ಮನ್ನು ಆಶೀರ್ವದಿಸಲಿ.
‘ಟಿ. ಎಮ್., ಟೊರಾಂಟೊ’
‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರೆ. (ಲೂಕ 10:27) ಯೆಹೋವನ ಸಾಕ್ಷಿಗಳ ಕುರಿತು ಹೆಚ್ಚನ್ನು ಕಲಿಯಲು ನೀವು ಬಯಸುವುದಾದರೆ ಅಥವಾ ಉಚಿತವಾದೊಂದು ಮನೆ ಬೈಬಲ್ ಅಧ್ಯಯನವನ್ನು ಪಡೆಯಲು ಇಚ್ಛಿಸುವುದಾದರೆ, ದಯವಿಟ್ಟು Watchtower, H-58 Old Khandala Road, Lonavla, 410 401 Mah., ಇವರಿಗೆ, ಅಥವಾ 5ನೆಯ ಪುಟದಲ್ಲಿ ಕೊಡಲ್ಪಟ್ಟ ತಕ್ಕದಾದ ವಿಳಾಸಕ್ಕೆ ಬರೆಯಿರಿ.