ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g94 5/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1994
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ರಕ್ತ ಪೂರಣದ ಹಗರಣ
  • ದುರುಪಯೋಗಿಸಲ್ಪಟ್ಟ ಮಕ್ಕಳು
  • ಖಾರ ಕರಿಮೆಣಸಿನ ಅತ್ಯುತ್ಸಾಹಿಗಳು
  • ಆತ್ಮಹತ್ಯೆಯನ್ನು ತಡೆಗಟ್ಟುವುದು
  • ಸುಸಂಘಟಿತ ಅಪರಾಧ
  • ಮಿಡತೆಗಳು ಹಿಂದಿರುಗುತ್ತಿವೆ
  • ಬೇಕಾಗಿದ್ದಾರೆ: ಬೌದ್ಧ ಸಂನ್ಯಾಸಿಗಳು
  • ಋತುಬಂಧದ ಅನಂತರ ಗರ್ಭಧಾರಣೆ?
  • ಬೊಜ್ಜು ಮೈಯ ಸಮಸ್ಯೆ
  • ಯುವ ಸಮಸ್ಯಾತ್ಮಕ ಕುಡಿಕರು
  • ಇದು ನ್ಯಾಯವೊ?
  • ವಿಶ್ವಾಸಕ್ಕೆ ವೈಜ್ಞಾನಿಕ ಆಧಾರ
  • ಜಗತ್ತನ್ನು ಗಮನಿಸುವುದು
    ಎಚ್ಚರ!—2004
  • ಜಗತ್ತನ್ನು ಗಮನಿಸುವುದು
    ಎಚ್ಚರ!—1993
  • ಜಗತ್ತನ್ನು ಗಮನಿಸುವುದು
    ಎಚ್ಚರ!—1997
  • ಜಗತ್ತನ್ನು ಗಮನಿಸುವುದು
    ಎಚ್ಚರ!—1993
ಇನ್ನಷ್ಟು
ಎಚ್ಚರ!—1994
g94 5/8 ಪು. 28-29

ಜಗತ್ತನ್ನು ಗಮನಿಸುವುದು

ರಕ್ತ ಪೂರಣದ ಹಗರಣ

ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಾದ ರಕ್ತ ಉತ್ಪಾದನೆಗಳನ್ನು ಪ್ರತಿ ವ್ಯಕ್ತಿಗೆ ಬಳಸುವ ಜರ್ಮನಿ ದೇಶವು, “ಲೋಕದ ಅತ್ಯಂತ ವಿಶ್ವಾಸಪಾತ್ರ ಔಷಧದ ಶಾಖೆಗಳನ್ನು ಠೀಕೆಯ ಗುರಿಹಲಗೆಯಾಗಿ ತಿರುಗಿಸಿದ” ಹಗರಣದಿಂದ ತಟ್ಟಲ್ಪಟ್ಟಿದೆ, ಎಂಬುದಾಗಿ ವಾರ್ತಾಪತ್ರಿಕೆ ಸ್ಯೂಟ್‌ಡೈಚ ಸೈಟುಂಗ್‌ ವರದಿಸುತ್ತದೆ. ಹಗರಣವು, ಕೆಲವೊಂದು ವರ್ಷಗಳ ಕಾಲ, ಅತಿ ಹೆಚ್ಚು ಪ್ರಮಾಣದ ಸರಿಯಾಗಿ ಪರೀಕ್ಷಿಸಲಾಗದ ರಕ್ತ ಉತ್ಪಾದನೆಗಳನ್ನು ಆಸ್ಪತ್ರೆಗಳಿಗೆ ಮಾರಿದ, ರಕ್ತ ಸಂಸ್ಕರಿಸುವ ಕಂಪನಿಯೊಂದನ್ನು ಒಳಗೊಂಡಿದೆ. ಆದಕಾರಣ, ಈ ಉತ್ಪಾದನೆಗಳನ್ನು ಉಪಯೋಗಿಸಿದ ಆಸ್ಪತ್ರೆಯ ಸಾವಿರಾರು ರೋಗಿಗಳು ಏಚ್‌ಐವಿ ಸೋಂಕಿನ ಗಂಡಾಂತರಕ್ಕೆ ಗುರಿಯಾಗಿದ್ದಾರೆ. “ಶಸ್ತ್ರಕ್ರಿಯೆಯ ಸಮಯದಲ್ಲಿ ಕಲುಷಿತ ರಕ್ತ ಯಾ ರಕ್ತರಸ ಉತ್ಪಾದನೆಗಳ ಮೂಲಕ ಏಚ್‌ಐವಿಯನ್ನು ತಗಲಿಸಿಕೊಂಡಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಬಯಸುವವರೆಲ್ಲರು” ಒಂದು ಪರೀಕೆಗ್ಷೊಳಗಾಗಬೇಕೆಂದು ಸಂಯುಕ್ತ ಆರೋಗ್ಯ ಸಚಿವ, ಹೋರ್ಸ್ಟ್‌ ಸೀಹೊಫರ್‌ ಸಲಹೆ ನೀಡಿದ್ದಾರೆ. “ರಕ್ತ ಪೂರಣದ ಮುಖಾಂತರ ಏಯ್ಡ್ಸ್‌ ರೋಗವನ್ನು ಪಡೆಯುವುದರ ಕುರಿತು ಜನಸಂಖ್ಯೆಯ 71 ಪ್ರತಿಶತ ಜನರು ಈಗ ಭಯಗ್ರಸ್ತರಾಗಿದ್ದಾರೆಂದು” ಡೈ ಜಿಟ್‌ ವರದಿಸುತ್ತದೆ. (g94 4/22)

ದುರುಪಯೋಗಿಸಲ್ಪಟ್ಟ ಮಕ್ಕಳು

“ಮಕ್ಕಳ ವಿರುದ್ಧ ಬಲಾತ್ಕಾರವು ಅತ್ಯುಚ್ಛ ಮಟ್ಟಗಳನ್ನು ತಲಪುತ್ತಾ ಇದೆ,” ಎಂದು ಬ್ರೆಜಿಲ್‌ನ ವಾರ್ತಾಪತ್ರಿಕೆಯಾದ ಉ ಎಸ್ಟಾಡೊ ಡ ಸಾನ್‌ ಪೌಲೊ ವರದಿಸುತ್ತದೆ. ಅದು ಅಲೈಂಗಿಕ ಆಕ್ರಮಣಶೀಲತೆಗೆ ಬರುವಾಗ, ಆಹುತಿಯಾದ ಹುಡುಗರ ಸೇಕಡ ಪ್ರಮಾಣವು, ಆಹುತಿಯಾದ ಹುಡುಗಿಯರ ಪ್ರಮಾಣಕ್ಕೆ ಸುಮವಾಗಿದೆ. ಆದರೆ ಲೈಂಗಿಕ ದುರುಪಯೋಗದೊಂದಿಗೆ ವಿಷಯವು ಹಾಗಿರುವುದಿಲ್ಲ. ಲೈಂಗಿಕ ಬಲಾತ್ಕಾರಕ್ಕೆ ಆಹುತಿಯಾದ ಯುವಜನರ ನಡುವೆ, ಸುಮಾರು 23 ಸೇಕಡ ಗಂಡುಗಳು ಮತ್ತು 77 ಸೇಕಡ ಹೆಣ್ಣುಗಳು ಇದ್ದಾರೆ. ಸ್ಥಳೀಯ ಬಲಾತ್ಕಾರವನ್ನು ಸಣ್ಣ ಮಕ್ಕಳು ಕೂಡ ತಪ್ಪಿಸಿಕೊಳ್ಳುವುದಿಲ್ಲ. ಸಾನ್‌ ಪೌಲೊನ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಮಿರಿಯಂ ಮೆಸ್ಕಟಳಿಗನುಸಾರ, “ಹತ್ತು ವರ್ಷಗಳಿಗಿಂತಲೂ ಕಡಿಮೆ ಪ್ರಾಯದ ನರ ಹತ್ಯೆಯ ಬಲಿಪಶುಗಳಲ್ಲಿ 30 ಸೇಕಡಕ್ಕಿಂತಲೂ ಹೆಚ್ಚು ಮಂದಿ ಕುಟುಂಬ ಸದಸ್ಯರ ಮೂಲಕ ಕೊಲ್ಲಲ್ಪಡುತ್ತಾರೆ.” ಸುಮಾರು 29 ಸೇಕಡದಷ್ಟು ಮಕ್ಕಳು ಒಬ್ಬ ತಂದೆ, ಚಿಕ್ಕಪ್ಪ, ಒಬ್ಬ ಸಹೋದರ, ಅಥವಾ ಮಲತಾಯಿಯೊಬ್ಬಳಿಂದ ಕೊಲ್ಲಲ್ಪಡುತ್ತಾರೆ. ಬ್ರೆಜಿಲ್‌ನಲ್ಲಿ ಮಕ್ಕಳ ವಿರುದ್ಧವಾದ ಸ್ಥಳೀಯ ಬಲಾತ್ಕಾರದ ಎಲ್ಲಾ ಕೇಸುಗಳಲ್ಲಿ ಸುಮಾರು 90 ಪ್ರತಿಶತದಷ್ಟು ವರದಿಮಾಡಲ್ಪಡದೇ ಹೋಗುತ್ತವೆ ಎಂದು ಉ ಎಸ್ಟಾಡೊ ಡ ಸಾನ್‌ ಪೌಲೊ ವರದಿಸುತ್ತದೆ. (g94 5/8)

ಖಾರ ಕರಿಮೆಣಸಿನ ಅತ್ಯುತ್ಸಾಹಿಗಳು

ಹೆಚ್ಚು ಹೆಚ್ಚಾಗಿ ಜನರು ಖಾರ ಕರಿಮೆಣಸನ್ನು ತಿನ್ನುತ್ತಿದ್ದಾರೆ. ಖಾರ ಕರಿಮೆಣಸು ಆಹಾರದ ನೈಜವಾದ ಸ್ವಾದಗಳನ್ನು ನಾಶ ಮಾಡುತ್ತದೆಂದು, ಅದನ್ನು ಇಷ್ಟಪಡದ ಅನೇಕರು ನಂಬುತ್ತಾರೆ. ಆದರೆ ಇದಕ್ಕಿಂತ ಬೇರೆ ಯಾವುದೂ ಸತ್ಯದಿಂದ ದೂರವಾಗಿರದೆಂದು, ಖಾರ ಕರಿಮೆಣಸಿನ ಅತ್ಯುತ್ಸಾಹಿಗಳು ವಾದಿಸುತ್ತಾರೆ. ರೀಡರ್ಸ್‌ ಡೈಜೆಸ್ಟ್‌ ಪತ್ರಿಕೆಗನುಸಾರ, ಬಾಯಲ್ಲಿರುವ ಸಂವೇದನಾ ಕಣಗಳೊಂದಿಗೆ ಬೆರೆಯುವ ಮತ್ತು ಆಹಾರದ ಪರಿಮಳಕ್ಕೆ ಅವುಗಳನ್ನು ಸೂಕ್ಷ್ಮ ಮಾಡುವ ಒಂದು ವಾಸನೆಯಿಲ್ಲದ ರಾಸಾಯನಿಕ ಪದಾರ್ಥವನ್ನು ಖಾರ ಕರಿಮೆಣಸು ಹೊಂದಿದೆಯೆಂದು, ಕರಿಮೆಣಸುಗಳ ಮೇಲೊಂದು ಇತ್ತೀಚೆಗಿನ ಪುಸ್ತಕವು ವಿವರಿಸುತ್ತದೆ. ಖಾರ ಕರಿಮೆಣಸುಗಳು ನಿಮ್ಮ ಆರೋಗ್ಯಕ್ಕೂ ಸಹ ಒಳ್ಳೆಯದೆಂದು ಕೆಲವರು ವಾದಿಸುತ್ತಾರೆ. ಒಂದು ಕಿತ್ತಳೆ ಹಣ್ಣಿಗಿಂತಲೂ ಹೆಚ್ಚಿನ ಸಿ ಜೀವಸ್ವತವನ್ನು (C ವಿಟಮಿನ್‌) ಹಸಿಯಾದ ಒಂದು ಕರಿಮೆಣಸು ಹೊಂದಿದೆ. ಮೆಕ್ಸಿಕೊದ ಯುಕಾಟನ್‌ನಿಂದ ದೊರೆಯುವ ಆಬಾನಿರೊ ಕರಿಮೆಣಸು ಅತೀ ಖಾರ ಕರಿಮೆಣಸಾಗಿದೆ. ಆಬಾನಿರೊಗಳ ತಿನ್ನುವಿಕೆ, ನಿಮ್ಮ ದೇಹದ ಉಳಿದ ಭಾಗದಿಂದ ನಿಮ್ಮ ತಲೆಯನ್ನು ಬೇರ್ಪಡಿಸಿದ ಅನಿಸಿಕೆಯನ್ನು ಉಂಟುಮಾಡುತ್ತದೆಂದು ಹೇಳಲಾಗಿದೆ. ಆದರೆ ಅದನ್ನು ಬೇರೆ ಯಾವುದೇ ರೀತಿಯಲ್ಲಿ ತಿನ್ನಲು ಕೆಲವರು ಇಷ್ಟಪಡರು. (g94 5/8)

ಆತ್ಮಹತ್ಯೆಯನ್ನು ತಡೆಗಟ್ಟುವುದು

“ಯುವಜನರ ಆತ್ಮಹತ್ಯೆಗಳ ಹೆಚ್ಚಿಕೆ,” ಎಂದು ಬ್ರೆಜಿಲ್‌ನ ವಾರ್ತಾಪತ್ರಿಕೆಯಾದ ಉ ಎಸ್ಟಾಡೊ ಡ ಸಾನ್‌ ಪೌಲೊ ವರದಿಸುತ್ತದೆ. “ಪ್ರೀತಿಯಲ್ಲಿ ಆಶಾಭಂಗ, ಮದ್ಯವ್ಯಸನ, ಮತ್ತು ಆರ್ಥಿಕ ತೊಂದರೆಗಳನ್ನು ಹಿಂಬಾಲಿಸಿ ಅಸ್ವಸ್ಥತೆಯು ಆತ್ಮಹತ್ಯೆಯ ಮುಖ್ಯ ಕಾರಣವಾಗಿದೆ” ಎಂದು ಬ್ರೆಜಿಲ್‌ನ ನ್ಯಾಯ ಖಾತೆಯು ತೋರಿಸುತ್ತದೆ. ಆತ್ಮಹತ್ಯೆಯನ್ನು ತಡೆಗಟ್ಟುವುದರಲ್ಲಿ ಕುಟುಂಬದ ಸದಸ್ಯರ ಮತ್ತು ಸ್ನೇಹಿತರ ಸಹಾಯವು ಅಗತ್ಯವಾಗಿರುವುದರಿಂದ, ಮನೋರೋಗ ಚಿಕಿತ್ಸಕರಾದ ಕ್ರಿಶ್ಚನ್‌ ಗೊಡರರ್‌ ಸಲಹೆ ನೀಡುವುದು: ಆತ್ಮಹತ್ಯೆಯೊಂದರ “ಸಂಭವನೀಯತೆಯನ್ನು ಅಸಡ್ಡೆ ಮಾಡಬೇಡಿರಿ.” ಮತ್ತು ಸಂಸರ್ಗವು ಉದ್ವೇಗವನ್ನು ಪರಿಹರಿಸುವುದರಿಂದ, “ಖಿನ್ನತೆಯ ಕಾರಣಗಳಿಗಾಗಿ—ಯಾಕೆ ಈ ವ್ಯಕ್ತಿಯು ತನ್ನನ್ನು ಕೊಂದುಕೊಳ್ಳುವ ಕುರಿತು ಯೋಚಿಸುತ್ತಿದ್ದಾನೆ, ಅದನ್ನು ಮಾಡಲು ಅವನು ಹೇಗೆ ಸಂಕಲ್ಪಿಸುತ್ತಾನೆ—ಕೇಳಿರಿ.” (g94 4/22)

ಸುಸಂಘಟಿತ ಅಪರಾಧ

“ಸುಸಂಘಟಿತ ಅಪರಾಧವು ಅದರ ಪ್ರಭಾವವನ್ನು ಎಂತಹ ಗಾಬರಿಪಡಿಸುವಂಥ ರೀತಿಯಲ್ಲಿ ವಿಸ್ತರಿಸಿದೆ ಎಂದರೆ, ಲೋಕದ ಎಲ್ಲ ಕಡೆಗಳಲ್ಲಿಯೂ ಅಪರಾಧ ಸಂಸ್ಥೆಗಳ ವ್ಯಾಪಕವಾದ ಜಾಲಬಂಧವು ಅಸ್ತಿತ್ವದಲ್ಲಿದೆ,” ಎಂದು ಇಟ್ಯಾಲಿಯನ್‌ ಸರಕಾರದ ಮಾಫಿಯಾ ವಿರುದ್ಧ ಚಟುವಟಿಕೆಗಳ ನಿರ್ದೇಶಕರಾದ, ಜಾನಿ ಡಾ ಜೆನೆರೊ ವಾದಿಸುತ್ತಾರೆ. ಇಟ್ಯಾಲಿಯನ್‌ ಮಾಫಿಯ, ಚೈನೀಸ್‌ ಟ್ರೈಯಾಡ್ಸ್‌, ಉತ್ತರ ಅಮೆರಿಕದ ಮೋಟರ್‌ಸೈಕಲ್‌ ಗ್ಯಾಂಗ್‌ಗಳು, ಮತ್ತು ಹಿಂದಿನ ಕಮ್ಯೂನಿಸ್ಟ್‌ ದೇಶಗಳ ಪಾತಕ ವರ್ಗಗಳಂತಹ ಪಾತಕ ಗುಂಪುಗಳ ವಿಸ್ತರಣೆಯು ಸಮಾಜಕ್ಕೆ ನಿಜವಾದ ಚಿಂತೆಯ ವಿಷಯವಾಗಿದೆ. ಅನ್ಯಾಯದ ಲಾಭಗಳು ಅತ್ಯುತ್ತಮ ತಂತ್ರಜ್ಞಾನ ಮತ್ತು ಪ್ರಾವೀನ್ಯವನ್ನು ಪಾತಕಿಗಳು ಪಡೆಯುವಂತೆ ಅನುಮತಿಸುತ್ತವೆ, ಮತ್ತು ಅದು ಸಮಸ್ಯೆಯೊಂದಿಗೆ ನಿಭಾಯಿಸಲು ನಿಯಮವನ್ನು ಜಾರಿಗೆ ತರುವ ನಿಯೋಗಗಳಿಗೆ ಕಷ್ಟಕರವಾಗಿ ಮಾಡುತ್ತದೆ. (g94 5/8)

ಮಿಡತೆಗಳು ಹಿಂದಿರುಗುತ್ತಿವೆ

ಐಗುಪ್ತದ ಎಂಟನೆಯ ಬಾಧೆಯಾದ ಮಿಡತೆಗಳು, “ಆಫ್ರಿಕವನ್ನು ದೋಚಲು ಮತ್ತೆ ಸಿದ್ಧವಾಗಿವೆ,” ಎಂಬುದಾಗಿ ದ ವೀಕ್‌ಲಿ ಮೇಲ್‌ ಆ್ಯಂಡ್‌ ಗಾರ್ಡಿಯನ್‌ ವಾರ್ತಾಪತ್ರಿಕೆಯು ವರದಿಸುತ್ತದೆ. ಯೇಮೆನ್‌ನಲ್ಲಿ ಈಗಾಗಲೇ 2,00,000 ಎಕ್ರೆಗಳನ್ನು (80,000 ಹೆಕ್ಟ್‌ರ್‌ಗಳನ್ನು) ಲೂಟಿ ಮಾಡಲಾಗಿದೆ, ಮತ್ತು ಹಿಂಡುಗಳು ಚಾಡ್‌, ನೈಜರ್‌, ಮತ್ತು ಮಾಲಿಗೆ ತಲಪಿವೆ. ಉತ್ತರ ಆಫ್ರಿಕದಲ್ಲಿ 28 ದೇಶಗಳನ್ನು ನಾಶಮಾಡಿದ 1986-87ರ ಉಗ್ರವಾದ ಪೀಡೆಗಿಂತ ಅತಿ ಹೆಚ್ಚಾಗಿರುವ ಬೆದರಿಕೆಯ ನಷ್ಟವು ನೀಡುತ್ತದೆ, ಎಂಬುದಾಗಿ ಒಂದು ಕೃಷಿ ಸಂಶೋಧನಾ ಕೇಂದ್ರದ ಪ್ರತಿನಿಧಿಯೊಬ್ಬರು ಹೇಳಿದರು. ಅವರು ಕೂಡಿಸಿದ್ದು: “ಜೀವ ಪರಿಸ್ಥಿತಿಯು ಮಿಡತೆಗಳಿಗೆ ಅನುಕೂಲಕರವಾಗಿ ಉಳಿಯುವುದಾದರೆ, ಹಿಂಡುಗಳು ಒಂದೇ ಸಂತತಿಯಲ್ಲಿ (45 ದಿನಗಳಲ್ಲಿ) ಹತ್ತು ಪಟ್ಟು ವಿಸ್ತಾರಗೊಳ್ಳಬಹುದು.” ಮಿಡತೆಗಳು 1994ರಲ್ಲಿ ಸಾಹೇಲ್‌ನ ಎಲ್ಲ ಆಹಾರ ಬೆಳೆಗಳನ್ನು ಆಕ್ರಮಿಸಬಲ್ಲವು. (g94 4/22)

ಬೇಕಾಗಿದ್ದಾರೆ: ಬೌದ್ಧ ಸಂನ್ಯಾಸಿಗಳು

ಜಪಾನಿನ ಧಾರ್ಮಿಕ ಇತಿಹಾಸದಲ್ಲಿ ಪ್ರಥಮ ಬಾರಿಗೆ, ಸಂನ್ಯಾಸಿಗಳನ್ನು ಸಾರ್ವಜನಿಕವಾಗಿ ಸೇರಿಸಿಕೊಳ್ಳಲಾಗುವುದು. “ಧರ್ಮಶ್ರದ್ಧೆ ಇರುವ ಮತ್ತು ಲೌಕಿಕ ಒಲವು ಇರದ ಯಾವ ವ್ಯಕ್ತಿಯಾದರೂ ಮುಖ್ಯ ಪುರೋಹಿತನಾಗಬಲ್ಲನು,” ಎಂಬುದಾಗಿ ಬೌದ್ಧ ಟೆಂಡಿ ಪಂಗಡದ ಉನ್ನತ ಶ್ರೇಣಿಯ ಒಬ್ಬ ಸಂನ್ಯಾಸಿ ಹೇಳಿದನು. ಇಸವಿ 1995ರಲ್ಲಿ ಆರಂಭಿಸಿ, ಅರ್ಜಿದಾರರಿಗೆ “ಪ್ರವೇಶ ಪರೀಕ್ಷೆಗಳನ್ನು” ನಡೆಸಲು ಪಂಗಡವು ಯೋಜಿಸುತ್ತದೆ. ಪಂಗಡದ ಒಬ್ಬ ಅಧಿಕಾರಿಗನುಸಾರ, ಪರೀಕ್ಷೆಯನ್ನು ಪಾಸು ಮಾಡಲು ಧರ್ಮದ ಸ್ವಲ್ಪ ಜ್ಞಾನವು ಅಗತ್ಯ. ಸಾಂಪ್ರದಾಯಿಕವಾಗಿ, ಪುರೋಹಿತರ ಗಂಡು ಮಕ್ಕಳು, ದೇವಾಲಯದ ಪುರೋಹಿತರಂತೆ ತಮ್ಮ ತಂದೆಗಳ ಸ್ಥಾನವನ್ನು ತೆಗೆದುಕೊಳ್ಳುತ್ತಿದ್ದರು. “ಆದರೆ ಇತ್ತೀಚೆಗೆ, ಎಲ್ಲ ಪಂಗಡಗಳಲ್ಲಿರುವ ಪುರೋಹಿತರ ಗಂಡು ಮಕ್ಕಳು ಸಂನ್ಯಾಸಿಗಳಾಗುವುದರ ಬಗ್ಗೆ ಮನಸ್ಸಿಲ್ಲದವರಾಗಿದ್ದಾರೆಂದು,” ಮಿನಿಚಿ ಡೇಲಿ ನ್ಯೂಜ್‌ ವರದಿಸುತ್ತದೆ. ಈ ಪ್ರವೃತ್ತಿಯ ಕುರಿತು ಹೇಳಿಕೆಯನ್ನು ನೀಡುತ್ತಾ, ಧರ್ಮದ ಪರಿಣಿತರಾದ ಹಿರೊ ಟೆಕಾಗಿ, ಹೇಳಿದ್ದು: “ವಂಶ ಪಾರಂಪರ್ಯದ ವ್ಯವಸ್ಥೆಯ ಈಗ ಅವನತಿ ಹೊಂದುತ್ತಿರುವುದರಿಂದ, ಪುರೋಹಿತರಾಗಲು ಇಚ್ಛಿಸುವ ಯುವಕರ ಕೊರತೆಯ ಬಗ್ಗೆ ಬೌದ್ಧ ಪಂಗಡಗಳು ಆತಂಕಗೊಂಡಿವೆ.” (g94 4/22)

ಋತುಬಂಧದ ಅನಂತರ ಗರ್ಭಧಾರಣೆ?

ಋತುಬಂಧದ ಅನಂತರ ಗರ್ಭಧಾರಣೆಯು ಶಕ್ಯವೊ? ಪ್ಯಾರಿಸ್‌ನ ವಾರ್ತಾಪತ್ರಿಕೆ ಲೆ ಫಿಗಾರೊನಲ್ಲಿನ ಒಂದು ವೈದ್ಯಕೀಯ ವರದಿಗನುಸಾರ, ಉತ್ತರವು ಹೌದೆಂದು ತೋರುತ್ತದೆ. “ಸ್ಪಷ್ಟವಾಗಿಗಿ ಹೆಚ್ಚಾಗುತ್ತಿರುವ ಸಂಖ್ಯೆಯ ಸ್ತ್ರೀಯರು ಋತುಬಂಧ ಆದವರೆಂದು ದೃಢಪಡಿಸಿದ ಬಳಿಕ ತಾವು ಗರ್ಭಿಣಿಯರೆಂದು ಕಂಡುಕೊಳ್ಳುತ್ತಿದ್ದಾರೆಂದು,” ವರದಿಯು ಹೇಳುತ್ತದೆ. ಹೆಂಗಸೊಬ್ಬಳು ಏಚ್‌ಆರ್‌ಟಿ (ಚೋದಕಸ್ರಾವ ಪುನಃಭರ್ತಿಮಾಡುವ ಚಿಕಿತ್ಸೆ)ಯನ್ನು ಪಡೆಯುತ್ತಿದ್ದರೆ, ಋತುಬಂಧ ಅನಂತರದ ಗರ್ಭಧಾರಣೆಗೆ ಗಮನಾರ್ಹವಾಗಿ ಹೆಚ್ಚಾದ ಸಂಭಾವನೆಯಿದೆ ಎಂದು, ಆರು ಸಾವಿರ ಸ್ತ್ರೀರೋಗದ ತಜ್ಞರನ್ನು ಮತ್ತು ಪ್ರಸವ ಶಾಸ್ತ್ರದ ತಜ್ಞರನ್ನು ಒಳಗೊಂಡ ಫ್ರೆಂಚ್‌ ಅಧ್ಯಯನವು ಪ್ರಕಟಿಸಿತು. ಅಂಕೆಸಂಖ್ಯೆಗಳನುಸಾರ, ಸರಾಸರಿಯಾಗಿ ಈ ಹೆಂಗಸರು ಎರಡು ವರ್ಷಗಳ ಕಾಲ ಮುಟ್ಟಾಗುವದನ್ನು ನಿಲ್ಲಿಸಿದ್ದರು, ಹೆಚ್ಚಿನವರು ಋತುಬಂಧವನ್ನು ಸಂಬಂಧಸೂಚಕವಾಗಿ ಬೇಗನೆ ಅನುಭವಿಸಿದ್ದರು, ಮತ್ತು 71 ಪ್ರತಿಶತ ಹೆಂಗಸರು ಏಚ್‌ಆರ್‌ಟಿಯನ್ನು ಪಡೆಯುತ್ತಿದ್ದರು. ಋತುಬಂಧದ ಅನಂತರವೂ ಒಂದು ಮಗುವನ್ನು ಪಡೆಯುವ ಸಂಭಾವನೆ ಪ್ರತಿಯೊಬ್ಬ ಹೆಂಗಸಿಗೆ ಇದೆ, ಎಂದು ಅಧ್ಯಯನದ ಮುಂದಾಳುತನವನ್ನು ವಹಿಸಿದ ಡಾ. ಕ್ರಿಸ್ಟೀಯನ್‌ ಜಾಮಿನ್‌ ಹೇಳಿದರು. (g94 4/22)

ಬೊಜ್ಜು ಮೈಯ ಸಮಸ್ಯೆ

“ಲೋಕದಲ್ಲಿ ಅತಿ ಹೆಚ್ಚು ಬೊಜ್ಜು ಮೈಯ ಜನಸಂಖ್ಯೆ ಹೊಂದಿರುವ ದೇಶ ಅಮೆರಿಕವಾಗಿದೆ,” ಎಂಬುದಾಗಿ ಚಿಕಾಗೊವಿನ ಪೋಷಣೆ ಮತ್ತು ತೂಕ ನಿಯಂತ್ರಣ ಕಿನ್ಲಿಕ್‌ ವಿಶ್ವವಿದ್ಯಾಲಯದ ನಿರ್ದೇಶಕರಾದ, ಡಾ. ರಾಬರ್ಟ್‌ ಕೂಶ್‌ನರ್‌ ವಾದಿಸುತ್ತಾರೆ. “17ಕ್ಕಿಂತ ಹೆಚ್ಚು ಪ್ರಾಯದ ಬೊಜ್ಜು ಮೈಯ ಅಮೆರಿಕನರ ಸಂಖ್ಯೆಯು, 1985ರಲ್ಲಿ 24 ಪ್ರತಿಶತದಿಂದ 1990ರಲ್ಲಿ ಜನಸಂಖ್ಯೆಯ 28 ಪ್ರತಿಶತಕ್ಕೆ ಏರಿತೆಂದು,” ದ ಟೊರಾಂಟೊ ಸ್ಟಾರ್‌ ವರದಿಸುತ್ತದೆ. ಕಾರಣವು ಏನಾಗಿದೆ? ಮಿತಿಮೀರಿ ತಿನ್ನುವುದನ್ನು, ವ್ಯಾಯಾಮದ ಕೊರತೆಯನ್ನು, ಮತ್ತು ಆನುವಂಶಿಕತೆಯನ್ನು—ಮೂಲ ಕಾರಣಗಳೆಂದು ಹೊಸ ಸಂಶೋಧನೆಯು ಸೂಚಿಸುತ್ತದೆ. “ಜನರು ಹೆಚ್ಚು ತೂಕವುಳ್ಳವರಾಗುತ್ತಿದ್ದಾರೆ, ಮತ್ತು ಅದು ಗಮಾನಾರ್ಹವಾದ ಚಿಂತೆಯ ವಿಷಯವಾಗಿದೆ,” ಎಂದು ಆರೋಗ್ಯ ಅಂಕಿಅಂಶಗಳಿಗಾಗಿ ರಾಷ್ಟ್ರೀಯ ಕೇಂದ್ರದ ಶಾರ್ಲೆಟ್‌ ಸ್ಕೋನ್‌ಬಾರ್ನ್‌ ಹೇಳುತ್ತಾರೆ. ಹೆಚ್ಚು ರಕ್ತದ ಒತ್ತಡವನ್ನು, ಮಧುಮೇಹ ರೋಗವನ್ನು, ಮತ್ತು ಇತರ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಬೊಜ್ಜು ಹೆಚ್ಚಿಸಬಲ್ಲದು. ಉತ್ತರಗಳನ್ನು ಕಂಡುಹಿಡಿಯುವುದು ಸುಲಭವಾಗಿಲ್ಲ. ಜೀವನ ಶೈಲಿಯಲ್ಲಿ ಬದಲಾವಣೆಯನ್ನು ವೈದ್ಯರು ಸೂಚಿಸುತ್ತಾರೆ. “ಕಡಿಮೆ ಸೇವಿಸಿ ಮತ್ತು ಹೆಚ್ಚು ವ್ಯಾಯಾಮ ಮಾಡಿರಿ. ತೂಕವನ್ನು ಒಮ್ಮೆ ಕಳೆದುಕೊಂಡರೆ ಅದನ್ನು ದೂರದಲ್ಲಿಡಲು ನಿಜವಾಗಿಯೂ ಸಹಾಯಮಾಡುವ ಏಕೈಕ ಸಂಗತಿಯು ಶಾರೀರಿಕ ಚಟುವಟಿಕೆಯಾಗಿದೆ,” ಎಂಬುದಾಗಿ ಸ್ಟಾರ್‌ ಕೂಡಿಸುತ್ತದೆ. (g94 5/8)

ಯುವ ಸಮಸ್ಯಾತ್ಮಕ ಕುಡಿಕರು

ಜಪಾನಿನಲ್ಲಿ ನಡೆಸಲಾದ ಸುಮಾರು 14,000 ಪ್ರೌಢ ಶಾಲಾ ವಿದ್ಯಾರ್ಥಿಗಳ ಒಂದು ಸಮೀಕ್ಷೆಯಲ್ಲಿ, 17.3 ಪ್ರತಿಶತ ವಿದ್ಯಾರ್ಥಿಗಳನ್ನು ಸಮಸ್ಯಾತ್ಮಕ ಕುಡಿಕರು ಎಂಬುದಾಗಿ ಪರಿಗಣಿಸಲಾಯಿತೆಂದು, ಆಸಾಹಿ ಈವ್ನಿಂಗ್‌ ನ್ಯೂಸ್‌ ವರದಿಸುತ್ತದೆ. ಮಾನಸಿಕ, ಶಾರೀರಿಕ, ಮತ್ತು ಸಾಮಾಜಿಕ ಸಮಸ್ಯೆಗಳನ್ನು ಉಂಟುಮಾಡುವ ಕುಡಿಯುವ ಹವ್ಯಾಸಗಳನ್ನು 24.8 ಪ್ರತಿಶತ ಹುಡುಗರು ಹೊಂದಿರುವುದರಿಂದ, ಹುಡುಗರಲ್ಲಿ ಪ್ರಮಾಣವು ಹೆಚ್ಚಾಗಿತ್ತು. ಅದರ ಸ್ವಾದವನ್ನು ಇಷ್ಟಪಡುವುದರಿಂದ ಅವರು ಕುಡಿಯುತ್ತಾರೆಂದು, ಈ ಯುವ ಸಮಸ್ಯಾತ್ಮಕ ಕುಡಿಕರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನವರು ಹೇಳಿದರು. ಅವನು ಖಿನ್ನ ಅಥವಾ ಒಬ್ಬಂಟಿಗನಾಗಿರುವುದರಿಂದ ಕುಡಿಯುತ್ತಾನೆಂದು ನಾಲ್ವರಲ್ಲಿ ಒಬ್ಬನು ಹೇಳಿದನು. “ವಿದ್ಯಾರ್ಥಿಗಳೊಂದಿಗೆ ಒಳಗೊಂಡಿರುವ ವ್ಯಕ್ತಿಗಳು ಸಮಸ್ಯೆಗೆ ಗಂಭೀರವಾಗಿ ಲಕ್ಷ್ಯಕೊಡುವ ಸಮಯವು ಬಂದಿದೆ,” ಎಂಬುದಾಗಿ ಸಮೀಕ್ಷೆಯನ್ನು ನಡೆಸಿದ ಡಾ. ಕೆಂಜಿ ಸುಜುಕಿ ಹೇಳುತ್ತಾರೆ. “ಶಾಲೆಯಲ್ಲಿ ಮತ್ತು ಮನೆಯಲ್ಲಿ ವಿದ್ಯಾರ್ಥಿಗಳು ಸರಿಯಾಗಿ ಕಲಿಸಲ್ಪಡಬೇಕು,” ಎಂಬುದಾಗಿ ಅವರು ಕೂಡಿಸಿದರು. ಜಪಾನಿನಲ್ಲಿ 20ರ ವಯೋಮಿತಿಯ ಕೆಳಗಿರುವವರು ಕುಡಿಯುವುದನ್ನು ನಿಯಮವು ನಿಷೇಧಿಸುತ್ತದೆ. (g94 5/8)

ಇದು ನ್ಯಾಯವೊ?

“ಉತ್ತರ ಕ್ಯಾರೊಲಿನದ ಗುಂಡುಹಾರಿಸುವ ಉಗ್ರವರ್ತನೆಯಲ್ಲಿ ಮೈಕಲ್‌ ಚಾರ್ಲ್ಸ್‌ ಹೇಜ್‌ ನಾಲ್ಕು ಜನರನ್ನು ಕೊಂದನು—ಮತ್ತು ಈಗ, ತೆರಿಗೆಕೊಡುವವರ ವೆಚ್ಚದಲ್ಲಿ, ಹಿಂದೆಂದಿಗಿಂತಲೂ ಅವನ ಜೀವನದ ಪರಿಸ್ಥಿತಿಗಳು ಉತ್ತಮವಾಗಿವೆ ಎಂದು ಅವನು ಕೊಂದ ವ್ಯಕ್ತಿಗಳ ಕುಟುಂಬದವರು ದೂರು ನೀಡಿದ್ದಾರೆಂದು,” ಅಸೊಸಿಯೆಟೆಡ್‌ ಪ್ರೆಸ್‌ ವರದಿಯು ಹೇಳುತ್ತದೆ. ಹುಚ್ಚನೆಂದು ತೀರ್ಮಾನಿಸಲ್ಪಟ್ಟ ಮತ್ತು ರಾಜ್ಯದ ಮಾನಸಿಕ ಸಂಘಟನೆಗೆ ಒಪ್ಪಿಸಲ್ಪಟ್ಟ ಹೇಜ್‌, ಸಾಮಾಜಿಕ ಭದ್ರತಾ ಅಶಕ್ತರ ಪ್ರಯೋಜನಗಳಿಗೆ ಅರ್ಹನಾದನು ಮತ್ತು ಪ್ರತಿ ತಿಂಗಳು 536 ಡಾಲರುಗಳನ್ನು ಪಡೆಯುತ್ತಾನೆ. ಅಶಕ್ತರ ಪ್ರಯೋಜನಗಳು ಆವರಿಸಬೇಕಾದ ಆಶ್ರಯ ಮತ್ತು ಆಹಾರದಿಂದ ಅವನು ಈಗಾಗಲೇ ಒದಗಿಸಲ್ಪಟ್ಟ ಕಾರಣ, ಒಂದು ಮೋಟರ್‌ಸೈಕಲ್‌, ಒಂದು ದೊಡ್ಡ ಉಡುಪಿನ ಬೀರು, ಮತ್ತು ಒಂದು ಕೋಣೆಯ ತುಂಬ ದುಬಾರಿಯಾದ ಸ್ಟೀರಿಯೊ ಮತ್ತು ವಿಡಿಯೊ ಸಲಕರಣೆಗಳನ್ನು ಖರೀದಿಸುವಂತೆ ಈ ಹಣವು ಅವನನ್ನು ಅನುಮತಿಸಿದೆ. ಪಾತಕತನದ ಹುಚ್ಚರಿಗೆ ಸರಕಾರವು ಸುಮಾರು 48 ಮಿಲಿಯನ್‌ ಡಾಲರುಗಳನ್ನು ಪ್ರತಿ ವರ್ಷ ಕೊಡುತ್ತದೆ. ನ್ಯಾಯ ಅಧಿಕಾರಿಯಾದ ವಿನ್‌ಸೆಂಟ್‌ ರಾಬಿಲ್‌ ಅದನ್ನು “ವಿಕೃತಗೊಳಿಸಲ್ಪಟ್ಟ ನ್ಯಾಯ”ವೆಂದು ಕರೆಯುತ್ತಾರೆ ಮತ್ತು ಕೂಡಿಸುವುದು: “ತೆರಿಗೆ ಕೊಡುವವರು ಕೊಲೆಗಾರನಿಗೆ ಹಣವನ್ನು ಸಲ್ಲಿಸುತ್ತಿದ್ದಾರೆ. ಇದು ಮೂರ್ಖತನವಾಗಿದೆ.” (g94 4/22)

ವಿಶ್ವಾಸಕ್ಕೆ ವೈಜ್ಞಾನಿಕ ಆಧಾರ

“ಒಬ್ಬ ವಿಜ್ಞಾನಿಯಾಗಿದ್ದು, ದೇವರೊಬ್ಬನು ಇದ್ದಾನೆಂದು ನಂಬುವುದು ಶಕ್ಯವೆಂದು,” ದಕ್ಷಿಣ ಆಫ್ರಿಕದ ವಾರ್ತಾಪತ್ರಿಕೆ ದ ಸ್ಟಾರ್‌ ಹೇಳುತ್ತದೆ. ಜೊಹೆನಸ್‌ಬರ್ಗ್‌ನ ವಿಟ್‌ವಾಟರ್‌ಸ್ರಾಂಡ್‌ ವಿಶ್ವವಿದ್ಯಾಲಯದಲ್ಲಿ ಒಬ್ಬ ಖಗೋಲಶಾಸ್ತ್ರಜ್ಞರಾದ, ಪ್ರೋಫೆಸರ್‌ ಡೇವಿಡ್‌ ಬ್ಲಾಕ್‌ರ ಮೂಲಕ ಕೊಡಲಾದ 90 ನಿಮಿಷದ ಉಪನ್ಯಾಸದ ಕುರಿತು ಲೇಖನವು ವರದಿಸಿತು. ವಿಶ್ವವು ಹೇಗೆ “ಉತ್ತಮವಾಗಿ ಹೊಂದಿಕೊಂಡಿದೆ ಮತ್ತು ಸಮತೂಕದಲ್ಲಿದೆ” ಎಂಬುದನ್ನು ವಿಜ್ಞಾನವು ದೃಢಪಡಿಸುತ್ತದೆಂದು ಬ್ಲಾಕ್‌ ವಿವರಿಸಿದರು. ಬ್ಲಾಕ್‌ ಮತ್ತು ಅನೇಕ ಇತರ ವಿಜ್ಞಾನಿಗಳಿಗೆ, ಇದು ಸ್ಪಷ್ಟವಾಗಿಗಿ ಉದ್ದೇಶಪೂರ್ವಕ ರಚನೆಯನ್ನು ಸೂಚಿಸುತ್ತದೆ, ಮತ್ತು ಫಲಿತಾಂಶವಾಗಿ ಅದು, ಒಬ್ಬ ವಿನ್ಯಾಸಕಾರನನ್ನು ಬಲವಾಗಿ ಸೂಚಿಸುತ್ತದೆ. ದ ಸ್ಟಾರ್‌ಗನುಸಾರ, ದೇವರ ಅಸ್ತಿತ್ವಕ್ಕೆ ಎಂತಹ ಅಧಿಕ ಮೊತ್ತದ ಪ್ರಮಾಣವಿದೆಯೆಂದರೆ, “ಒಬ್ಬ ಸೃಷ್ಟಿಕರ್ತನಲ್ಲಿ ನಂಬಿಕೆಯನ್ನಿಡದ ಮನುಷ್ಯನಿಗೆ [ಸೃಷ್ಟಿಕರ್ತನಲ್ಲಿ ನಂಬಿಕೆ] ಇಡುವವನಿಗಿಂತ ಹೆಚ್ಚು ವಿಶ್ವಾಸದ ಅಗತ್ಯವಿದೆ,” ಎಂದು ಬ್ಲಾಕರು ಕೊನೆಗೊಳಿಸುತ್ತಾರೆ. (g94 4/22)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ