ಒಬ್ಬ ನಿರಾಶ್ರಿತನಾಗಿ, ನಾನು ನಿಜ ನ್ಯಾಯವನ್ನು ಕಂಡುಕೊಂಡೆ
ಇನ್ನೂ ಚಳಿ, ಮತ್ತು ನೆಲದ ಮೇಲೆ ಹಿಮ ಇದ್ದ ಕಾರಣ, ಒಂದು ದಪ್ಪದ ಕೋಟನ್ನು ನಾನು ಧರಿಸಿಕೊಂಡೆ. ಅನಂತರ ಶುಚಿಮಾಡುವ ದ್ರವ (ಕಾರ್ಬನ್ ಟೆಟ್ರಾಕ್ಲೋರೈಡ್)ವನ್ನು ಸೇರಿಸಿ, ನನ್ನ ಕಪಾಟಿನಲ್ಲಿ ಕಂಡುಕೊಳ್ಳಬಹುದಾದ ಎಲ್ಲಾ ವಿಷಕಾರಿ ದ್ರವ್ಯಗಳ ಒಂದು ಮಿಶ್ರಣವನ್ನು ನಾನು ನುಂಗಿದೆ. ಮ್ಯಾಸಚೂಸೆಟ್ಸ್ನ ಕೇಂಬ್ರಿಡ್ಜ್ನಲ್ಲಿರುವ ಚಾರ್ಲ್ಸ್ ನದಿಯ ಕಡೆಗೆ, ಅಲ್ಲಿ ನಾನು ಸಾಯುವೆ ಎಂದು ನಿರೀಕ್ಷಿಸುತ್ತಾ ಹೋದೆ. ಮೃತ್ಯುವಿನ ಬದಲಿಗೆ, ನನ್ನ ಹತಾಶೆಗಾಗಿ ನನಗೆ ಸಿಕ್ಕಿದ್ದು ಕೇವಲ ಒಂದು ಆಸ್ಪತ್ರೆಯ ಇಂಟೆನ್ಸಿವ್ ಕೇರ್ ಯುನಿಟ್ನಲ್ಲಿ ಐದು ದಿನಗಳು. ಇಂತಹ ಹತಾಶೆಯ ಸ್ಥಿತಿಗೆ ನನ್ನನ್ನು ಯಾವುದು ನಡೆಸಿತ್ತು? ನನ್ನ ಆರಂಭಕ್ಕೆ ನಾವು ಹಿಂತೆರಳೋಣ.
ಪ್ಯಾಲೆಸ್ತೀನ್ನ ಜಾಫಾದಲ್ಲಿ, 1932ರಲ್ಲಿ ಹುಟ್ಟಿದ ಒಬ್ಬ ಗ್ರೀಕ್ ಪ್ಯಾಲೆಸ್ತೀನ್ಯನು ನಾನಾಗಿದ್ದೆ. ಗ್ರೀಕ್ ಆರ್ತೊಡಾಕ್ಸ್ ಧರ್ಮದಲ್ಲಿ ನಾನು ಬೆಳೆಸಲ್ಪಟ್ಟೆ, ಅದರ ಅರ್ಥವು ಚರ್ಚಿಗೆ ವಾರದ ಭೇಟಿಗಳು ಮತ್ತು ಆವಶ್ಯವಾದಾಗ ಉಪವಾಸಗಳು. ಆದರೆ ಅದು ನನಗೆ ಒಂದು ಅರ್ಥರಹಿತವಾದ ನಿಯತಕ್ರಮವಾಗಿತ್ತು.
ಒಂದು ಆಹಾರ ಮತ್ತು ಸಾರಾಯಿಯನ್ನು ವಿಸ್ತಾರವಾಗಿ ಹಂಚುವ ಕಂಪೆನಿಯು ನಮ್ಮ ಕುಟುಂಬಕ್ಕಿದ್ದುದರಿಂದ, ನನ್ನ ಹೆತ್ತವರು ಸಾಧಾರಣ ಶ್ರೀಮಂತರಾಗಿದ್ದರು. ಹತ್ತರ ಪ್ರಾಯದಲ್ಲಿ, ರಾಮಾಲಾದಲ್ಲಿರುವ ಫ್ರೆಂಡ್ಸ್ ಬೋರ್ಡಿಂಗ್ ಶಾಲೆಗೆ ಮತ್ತು ಅನಂತರ ಜೆರೂಸಲೇಮಿನಲ್ಲಿರುವ ಸೆಂಟ್ ಜಾರ್ಜ್ಸ್ ಆ್ಯಂಗ್ಲಿಕನ್ ಶಾಲೆಗೆ ನನ್ನನ್ನು ಕಳುಹಿಸಲಾಯಿತು. ಎರಡನೆಯದು ನನ್ನ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಿತು—ಅಲ್ಲಿ ಕ್ರೈಸ್ತ, ಅರಬ್ಬಿ, ಮತ್ತು ಯೆಹೂದಿ ಹಿನ್ನೆಲೆಗಳ ಎಲ್ಲಾ ವಿದ್ಯಾರ್ಥಿಗಳು ಜೊತೆಯಾಗಿ ಸಂಬಂಧ ಸೂಚಕವಾದ ಶಾಂತಿಯಲ್ಲಿ ಅಭ್ಯಾಸಿಸುತ್ತಿದ್ದರು. ಶಾಲೆಯು ಸಮನ್ವಯ, ಒಳ್ಳೆಯ ನಡತೆ, ಮತ್ತು ದಯಾಪರತೆಯನ್ನು ಕಲಿಸಿತು. ಆದರೆ ಶಾಲೆ ಮತ್ತು ವಾಸ್ತವಿಕತೆ ಎರಡು ಭಿನ್ನ ವಿಷಯಗಳಾಗಿದ್ದವು.
ನನ್ನ ಬಾಲ್ಯಾವಸ್ಥೆಯ ಸಮಯದಲ್ಲಿ, ಯೆಹೂದ್ಯರು, ಅರಬರು, ಮತ್ತು ಬ್ರಿಟಿಷರು ಯಾವಾಗಲೂ ಹೋರಾಟ ಮಾಡುವುದರೊಂದಿಗೆ, ಆಂತರಿಕ ಕಲಹವು ಸರ್ವಸಾಮಾನ್ಯವಾಗಿತ್ತು. ಚಿಕ್ಕ ಮಗುವಾಗಿದ್ದಾಗ, ನಮ್ಮ ಮನೆಯ ಹೊರಗೆ ಒಬ್ಬ ಮನುಷ್ಯನ ಕೊಲೆಯನ್ನು ನಾನು ನೋಡಿದೆ. ಅನೇಕ ಬಾರಿ ನನ್ನ ಹೆತ್ತವರು ಅಡಗ್ಡುಂಡಿನಿಂದ ಸ್ವಲ್ಪದರಲ್ಲಿ ಪಾರಾಗಿದ್ದರು. ಆಮೇಲೆ IIನೆಯ ಲೋಕ ಯುದ್ಧವು, ಪ್ರಾಮುಖ್ಯ ರೇವು ಪಟ್ಟಣವಾದ ಹೈಫಾವನ್ನು, ಜರ್ಮನ್ ಗುಂಡಿನ ಮಳೆ ಸುರಿತಕ್ಕೆ ಒಂದು ಗುರಿಹಲಗೆಯನ್ನಾಗಿ ಮಾಡಿತು—ಅಧಿಕ ಮರಣ ಮತ್ತು ನಾಶನ.
ಪ್ಯಾಲೆಸ್ತೀನ್ನ ಮೇಲೆ ಬ್ರಿಟಿಷ್ ಆಡಳಿತ ನಿಯೋಗದ ಅಂತ್ಯ ಮೇ 1948ರಲ್ಲಿ ಬರುವುದರೊಂದಿಗೆ, ಆಂತರಿಕ ಕಲಹವು ತೀಕ್ಷೈಗೊಂಡಿತು. ಜುಲೈ 1946ರಲ್ಲಿ, ಜೆರೂಸಲೇಮಿನ ಅತ್ಯಂತ ಪ್ರತಿಷ್ಠಿತವಾದ ಕಿಂಗ್ ಡೇವಿಡ್ ಹೋಟೆಲನ್ನು ಸಿಡಿಗುಂಡಿನಿಂದ ಹಾರಿಸಲಾಯಿತು. ಮರಣದ ಬೆಲೆ ತಾರತಮ್ಯವಿಲ್ಲದ್ದಾಗಿತ್ತು—41 ಅರಬರು, 28 ಬ್ರಿಟಿಷರು, 17 ಯೆಹೂದ್ಯರು, ಮತ್ತು 5 ಇತರರು. ಅರಾಜಕತೆಯಿಂದ ಪಲಾಯನಗೈಯಲು ನಮ್ಮ ಕುಟುಂಬವು ನಿರ್ಣಯಿಸಿತು. ಎಲ್ಲಿ ತಾಯಿಗೆ ಸಂಬಂಧಿಕರಿದ್ದರೊ ಆ ಸೈಪ್ರಸ್ಗೆ ನಾವು ಒಂದೇ ರಾತ್ರಿಯಲ್ಲಿ ಸ್ಥಳ ಬದಲಾಯಿಸಿದೆವು. ತಂದೆ ಅವರ ವ್ಯಾಪಾರ ಮತ್ತು ಅವರ ವಿಭಿನ್ನ ಆಸ್ತಿಪಾಸ್ತಿಗಳನ್ನು ಹಿಂದೆ ಬಿಟ್ಟುಬಂದರು.
ಈ ಘಟನೆಗಳು ನನ್ನ ಪೂರ್ವ ಮನೋಭಾವಗಳನ್ನು ರೂಪಿಸಿದವು. ಹದಿನಾರು ವರ್ಷಗಳ ಪ್ರಾಯದಲ್ಲಿ, ನಾನು ರಾಜಕೀಯದಲ್ಲಿ ಆಸಕ್ತನಾಗಿದ್ದೆ ಮತ್ತು ಘಟನೆಗಳೊಂದಿಗೆ ಏಕ ರೀತಿಯಾಗಿರಲು ದಿನಾಲೂ ವಾರ್ತಾಪತ್ರಿಕೆಗಳನ್ನು ಓದುತ್ತಿದ್ದೆ. ಈಜಿಪ್ಟಿನ ನಾಯಕ, ಗಮಾಲ್ ಅಬ್ದಲ್ ನಾಸರ್, ನನ್ನ ಆದರ್ಶ ಮೂರ್ತಿಯಾಗಿದ್ದನು. ತನ್ನ ದೇಶದಲ್ಲಿ ಅವನು ವಿದೇಶೀ ಪ್ರಭಾವವನ್ನು ದುರ್ಬಲಗೊಳಿಸಿದನು.
ಇಸವಿ 1950ರಲ್ಲಿ ನಮ್ಮ ಕುಟುಂಬವು ಅಮೆರಿಕಕ್ಕೆ ಸ್ಥಳ ಬದಲಾಯಿಸಿತು. ಕೊರಿಯನ್ ಯುದ್ಧವು ಮುಂದುವರಿಯುತ್ತಾ ಇತ್ತು, ಮತ್ತು ನನ್ನ ಕುಟುಂಬವನ್ನು ಒಂದು ಪೀಡನೆಯ ಸನ್ನಿವೇಶದಿಂದ ರಕ್ಷಿಸಿದ್ದ ದೇಶಕ್ಕಾಗಿ ನನ್ನ ಪಾತ್ರವನ್ನು ವಹಿಸಲು ನಾನು ಬಯಸಿದೆ. ನಾನು ಸ್ವಯಂಸೇವಕನಾಗಿ ವಾಯು ಸೇನೆಯನ್ನು ಸೇರಿ, ಅಲ್ಲಿ ಸಹಾಯಾಧಿಕಾರಿ ವರ್ಗದ ಸಾರ್ಜೆಂಟಿನ ದರ್ಜೆಗೆ ನಾನು ಏರಿದೆ. ಹಾಗಿದ್ದರೂ, ನಾನು ಕೊರಿಯವನ್ನು ತಲಪಲೇ ಇಲ್ಲ—ಕೇವಲ ನೆಬ್ರಾಸ್ಕದ ಓಮಹಾದಲ್ಲಿರುವ ವಾಯು ಸೇನೆಯ ನೆಲೆಯಷ್ಟು ದೂರ ಮಾತ್ರ ನಾನು ಹೋಗ ಸಾಧ್ಯವಾಯಿತು.
ದೇವತಾ ಶಾಸ್ತ್ರದ ಒಂದು ಶಾಲೆಯಲ್ಲಿ ಸುಧಾರಣೆಯ ಒಬ್ಬ ಮುಂದಾಳು
ವಾಯು ಸೇನೆಯಿಂದ ನನ್ನ ಬಿಡುಗಡೆಯ ಅನಂತರ, ನಾನು ಟೆಕ್ಸಸ್ನ ವಿಶ್ವವಿದ್ಯಾನಿಲಯಕ್ಕೆ ಮತ್ತು ಆಮೇಲೆ ಓಹೈಓ ವಿಶ್ವವಿದ್ಯಾನಿಲಯಕ್ಕೆ ಹೋದೆ, ಮತ್ತು ಅಲ್ಲಿ ನಾನು ಅರ್ಥಶಾಸ್ತ್ರದಲ್ಲಿ ಡಿಗ್ರಿಯನ್ನು ಸಂಪಾದಿಸಿದೆ. ಮಧ್ಯ ಪೂರ್ವದಲ್ಲಿನ ಅನ್ಯಾಯಗಳ ಕುರಿತು ನಾನು ಮುಚ್ಚು ಮರೆಯಿಲ್ಲದೆ ಮಾತಾಡುತ್ತಿದ್ದೆ ಮತ್ತು ಆ ವಿಷಯದ ಮೇಲೆ ಉಪನ್ಯಾಸವನ್ನು ಮಾಡಲು ಕೂಡ ನನ್ನನ್ನು ಆಮಂತ್ರಿಸಲಾಯಿತು. ನಾನು ಮಾತಾಡಿದ್ದನ್ನು ಕೇಳಿದ ಒಬ್ಬ ಇಪಿಸ್ಕೊಪಲ್ ಪ್ರೊಫೆಸರ್, ಡಾ. ಡೇವಿಡ್ ಆ್ಯಂಡರ್ಸನ್, ಒಂದು ಸ್ನಾತಕೋತ್ತರ ಪದವಿಗಾಗಿ ಬಾಜ್ಟನ್ನಲ್ಲಿರುವ ಇಪಿಸ್ಕೊಪಲ್ ದೇವತಾ ಶಾಸ್ತ್ರದ ಶಾಲೆಗೆ ಒಂದು ವಿದ್ಯಾರ್ಥಿವೇತನವನ್ನು ನಾನು ಸ್ವೀಕರಿಸುವಂತೆ ಸಲಹೆ ನೀಡಿದರು. ಸಂಬಳ ಪಡೆಯುವಂಥ ಪಾದ್ರಿ ವ್ಯವಸ್ಥೆಯೊಂದಿಗೆ ನಾನು ಸಮ್ಮತಿಸುತ್ತಿರಲಿಲ್ಲವಾದ್ದರಿಂದ, ಒಬ್ಬ ಪಾದ್ರಿಯಾಗುವ ಉದ್ದೇಶ ನನಗಿರಲಿಲ್ಲ. ಆದರೂ, 1958ರಲ್ಲಿ, ನನ್ನನ್ನು ಶಾಲೆಯಲ್ಲಿ ಸ್ವೀಕರಿಸಲಾಯಿತು.
ಅಭ್ಯಾಸ ಕ್ರಮವು ಪಾದ್ರಿಗಳೊಂದಿಗೆ ಮನೋ ದೌರ್ಬಲ್ಯವುಳ್ಳವರಿಗಾಗಿರುವ ಸಂಸ್ಥೆಗಳಲ್ಲಿ ಕೆಲಸಮಾಡುವುದನ್ನು ಒಳಗೊಂಡಿತ್ತು. ಶಾಲೆಯ ತಾತ್ವಿಕ ಮತ್ತು ಶೈಕ್ಷಣಿಕ ಪಕ್ಕವು ಬಹಳ ಅಭಿರುಚಿಯುಳ್ಳದ್ದಾಗಿತ್ತು, ಆದರೆ ನಾನು ಲೋಕದಲ್ಲಿ ಅಧಿಕ ಕ್ರಿಯೆ ಮತ್ತು ನ್ಯಾಯವನ್ನು ನೋಡಲು ಬಯಸಿದೆ. “ಎಲ್ಲಾ ಜನಾಂಗಗಳ ನಡುವೆ ಪ್ರಕಟಿಸಲ್ಪಟ್ಟ ಆತನ ನಾಮವು” ಎಂಬುದಾಗಿ ಕರೆಯಲ್ಪಟ್ಟ ಒಂದು ಸುಧಾರಣೆಯ ಸಂಘಟನಾ ಗುಂಪನ್ನು ನಾನು ಸ್ಥಾಪಿಸಿದೆ. ಶಾಲೆಯು ಕಾರ್ಯಾಭಿಮುಖವಾಗಿರಬೇಕೆಂದು ನಾನು ಬಯಸಿದೆ. ನಾನು ಯೇಸುವನ್ನು ಪುಸ್ತಕಾಲಯದಲ್ಲಿ ಅಲ್ಲ, ಲೋಕದಲ್ಲಿ ಅನುಸರಿಸಲು ಬಯಸಿದೆ.
ಆದರೂ, ಸೂಚಿಸಲಾದ ನನ್ನ ಸುಧಾರಣೆಗಳು ಕಾರ್ಯರೂಪಕ್ಕೆ ಹಾಕಲ್ಪಡುವುದಿಲ್ಲ ಎಂಬುದಾಗಿ ನನಗೆ ಬೇಗನೆ ಅರಿವಾಯಿತು. ಕಟ್ಟಕಡೆಗೆ, ಶಾಲೆಯನ್ನು ಬಿಡುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ಸುಮಾರು ಈ ಸಮಯಕ್ಕೆ, ನನ್ನ ಭವಿಷ್ಯವನ್ನು ಹಂಚಿಕೊಳ್ಳಬಹುದಾದ ಒಬ್ಬ ವ್ಯಕ್ತಿಗಾಗಿ ನನ್ನ ತಲಾಷಿನ ತುತ್ತತುದಿಯಾಗಿದ್ದ ಒಬ್ಬ ಯುವತಿಯನ್ನು ನಾನು ಪ್ರೀತಿಸತೊಡಗಿದೆ. ನಾವು ಒಬ್ಬರು ಇನ್ನೊಬ್ಬರಿಗಾಗಿ ತಕ್ಕವರೆಂದು ನನಗೆ ಅನಿಸಿತು. ಅವಳು ನನ್ನ ಭಾವನೆಗಳನ್ನು ಪ್ರತಿಯಾಗಿ ತೋರಿಸುತ್ತಿರಲಿಲ್ಲವೆಂದು ಅನಂತರ ನನಗೆ ತಿಳಿದುಬಂತು. ತಿರಸ್ಕಾರದ ಅನಿರೀಕ್ಷಿತ ಕುಲುಕಾಟವು ತಡೆಯಲಸಾಧ್ಯವಾಗಿತ್ತು. ಆತ್ಮಹತ್ಯೆಯ ಪ್ರಯತ್ನಕ್ಕೆ ನಡೆಸಿದ ಅಂತಿಮ ಅಂಶವು ಅದಾಗಿತ್ತು.
ಒಬ್ಬ ಶಿಕ್ಷಕನಂತೆ ಒಂದು ಜೀವನೋಪಾಯ
ಪುನಃ ಸ್ಥಾಪನೆಯ ಒಂದು ಅವಧಿಯ ಬಳಿಕ, ಭೂಗೋಳ ಮತ್ತು ಇತಿಹಾಸವನ್ನು ಕಲಿಸಲಿಕ್ಕಾಗಿ ಶಿಕ್ಷಕನ ಕಾರ್ಯಕ್ರಮವನ್ನು ಬೆನ್ನಟಲ್ಟು ನ್ಯೂ ಯಾರ್ಕ್ನ ಕೊಲಂಬಿಯ ವಿಶ್ವವಿದ್ಯಾನಿಲಯವನ್ನು ನಾನು ಹಾಜರಾದೆ. ಈ ಎಲ್ಲಾ ಸಮಯದಲ್ಲಿ, ಕ್ರಿಯೆಯಲ್ಲಿ ನಿಜ ಕ್ರೈಸ್ತತ್ವವೆಂದು ನಾನು ಕರೆದ ವಿಷಯಕ್ಕಾಗಿ ನಾನು ಇನ್ನೂ ಹುಡುಕುತ್ತಾ ಇದ್ದೆ. ನನ್ನ ಶಿಕ್ಷಣ ವೃತ್ತಿಯು, ನನ್ನನ್ನು ನ್ಯೂ ಯಾರ್ಕ್ನ ಸೌತ್ ಗ್ಲೆನ್ಸ್ ಫಾಲ್ಸ್ಗೆ ಕೊಂಡೊಯ್ಯಿತು. ಅಲ್ಲಿ ನನ್ನ ಜೀವಿತದಲ್ಲಿ ಒಂದು ದೊಡ್ಡ ಬದಲಾವಣೆ ನಡೆಯಿತು. ಇಸವಿ 1964ರಲ್ಲಿ ನನ್ನ ಹೆಂಡತಿಯೂ ಜೊತೆಗಾತಿಯೂ ಆದ ಜಾರ್ಜಳೆಂಬ ಶಿಕ್ಷಕಿಯನ್ನು ನಾನು ಭೇಟಿಯಾದೆ.
ನಾನು ಇನ್ನೂ ಬಹಳ ರಾಜಕೀಯ ಮನೋಭಾವದವನಾಗಿದ್ದೆ ಮತ್ತು ವಿಯೆಟ್ನಾಮ್ನಲ್ಲಿನ ಯುದ್ಧದ ವಿರುದ್ಧ ಮಾತಾಡುತ್ತಿದ್ದ ಶಾಸಕ ಸಭೆಯ ಸದಸ್ಯರಾದ ಜೇಮ್ಸ್ ಫುಲ್ಬ್ರೈಟ್ರ ಭಾಷಣಗಳನ್ನು ಅನುಸರಿಸುತ್ತಿದ್ದೆ. ನಾನು ಕೂಡ ಆ ಯುದ್ಧದ ವಿರುದ್ಧವಾಗಿದ್ದೆ. ನವಂಬರ 1963ರಲ್ಲಿ ಅಧ್ಯಕ್ಷ ಜಾನ್ ಎಫ್. ಕೆನಡಿಯ ಮರಣದಿಂದ ನಾನು ಅತಿಯಾಗಿ ತಲ್ಲಣಗೊಂಡೆ. ನಾನು ಎಷ್ಟು ಪ್ರಭಾವಿಸಲ್ಪಟ್ಟೆ ಎಂದರೆ ವಾಷಿಂಗ್ಟನ್ನಲ್ಲಿ ಅವರ ಶವಸಂಸ್ಕಾರಕ್ಕೆ ನಾನು ಹಾಜರಾದೆ.
ಕ್ರೈಸ್ತತ್ವಕ್ಕಾಗಿ ನನ್ನ ತಲಾಷು
ಇಸವಿ 1966ರಲ್ಲಿ ನಾವು ನ್ಯೂ ಯಾರ್ಕ್ನ ಲಾಂಗ್ ಐಲೆಂಡ್ಗೆ ಸ್ಥಳ ಬದಲಾಯಿಸಿದೆವು, ಅಲ್ಲಿ ನಾರ್ತ್ಪೊರ್ಟ್ ಹೈಸ್ಕೂಲ್ನಲ್ಲಿ ನಾನು ಶಿಕ್ಷಕ ಹುದ್ದೆಯನ್ನು ತೆಗೆದುಕೊಂಡೆ. ಲೋಕ ಘಟನೆಗಳ ಕುರಿತು ನಾನು ಆಳವಾಗಿ ಚಿಂತಿತನಾಗಿದ್ದೆ—ಅಮಲೌಷಧಗಳ ಸೇವನೆ, ಹಿಪ್ಪಿಗಳು, ಮತ್ತು ಜೀಜಸ್ ಫ್ರೀಕ್ಸ್ ಜನಪ್ರಿಯವಾಗುತ್ತಿರುವ ಸಮಯ ಅದಾಗಿತ್ತು. ಕ್ಯಾರಿಸ್ಮ್ಯಾಟಿಕ್ ಗುಂಪೊಂದನ್ನು ನಾನು ಹಾಜರಾದೆ ಮತ್ತು ಕ್ರಿಯೆಗಿಂತ ಭಾವನೆಗಳ ಮೇಲೆ ಅಧಿಕ ಭಾರದೊಂದಿಗೆ, ಅವರು ಕೂಡ ನಿಜ ಕ್ರೈಸ್ತ ಸಂದೇಶದ ವಿಷಯದಲ್ಲಿ ಗುರಿಮುಟದ್ಟಿರುವುದನ್ನು ನಾನು ಕಂಡೆ. ಇನ್ನೊಂದು ಸಂದರ್ಭದಲ್ಲಿ, ಒಬ್ಬ ಇಪಿಸ್ಕೊಪಲ್ ಪಾದ್ರಿಯು ವಿಯೆಟ್ನಾಮ್ನಲ್ಲಿ ನಡೆಯುತ್ತಿದ್ದ ಯುದ್ಧವನ್ನು ಸಮರ್ಥಿಸುವುದನ್ನು ಕೂಡ ನಾನು ಕೇಳಿದೆ. ಕೆಲವು ನಾಸ್ತಿಕರು ಚರ್ಚ್ ಜನರಿಗಿಂತ ಹೆಚ್ಚು ದಯಾಪರರಾಗಿದ್ದಾರೆಂದು ಯೋಚಿಸಲು ನಾನು ತೊಡಗಿದೆ.
ದೇವರಲ್ಲಿ ನನ್ನ ನಂಬಿಕೆಯನ್ನು ನಾನು ಕಳೆದುಕೊಂಡೆ ಆದರೆ, ಯೇಸುವಿನ ಪರ್ವತ ಪ್ರಸಂಗದ ರಾಜಕೀಯ ಮೌಲ್ಯದಲ್ಲಿ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ನನ್ನ ವಿಷಯದಲ್ಲಿ ಅವನು, ತನ್ನ ಬೋಧನೆಯಿಂದ ದ್ವೇಷದ ಚಕ್ರವನ್ನು ಮುರಿದನು, ಮತ್ತು ಅದನ್ನು ನಾನು ಮಧ್ಯ ಪೂರ್ವದ ಸಮಸ್ಯೆಗೆ ಪರಿಹಾರವೆಂದು ಕಂಡೆ. ನಾನು ಎಷ್ಟೊಂದು ಧರ್ಮಗಳನ್ನು ಪ್ರಯತ್ನಿಸಿದೆ—ಕ್ಯಾತೊಲಿಕ್, ಸ್ಯಾಲೇಷ್ವನ್ ಆರ್ಮಿ, ಬ್ಯಾಪ್ಟಿಸ್ಟ್, ಪೆಂಟೆಕೋಸ್ಟ್ಲ್—ಆದರೆ ಅವರು ಆದಿ ಕ್ರೈಸ್ತರ ಕ್ರೈಸ್ತತ್ವವನ್ನು ಆಚರಿಸುತ್ತಿಲ್ಲ ಎಂಬ ಬರಿದಾದ ಅನಿಸಿಕೆಯೊಂದಿಗೆ ಯಾವಾಗಲೂ ಬರುತ್ತಿದ್ದೆ. ತದನಂತರ 1974ರಲ್ಲಿ, ನನ್ನ ಜೀವಿತವನ್ನು ಬದಲಾಯಿಸಿದ ಒಬ್ಬ ಸ್ಥಿರಾಸ್ತಿ ನಿಯೋಗಿಯನ್ನು ನಾನು ಭೇಟಿಯಾದೆ.
ಅವನ ಹೆಸರು ಫ್ರಾಂಕ್ ಬಾರ್ನ್ ಆಗಿತ್ತು. ಯಾವುದೊ ಆಸ್ತಿಯ ವಿಷಯವಾಗಿ ನಾನು ಅವನನ್ನು ವಿಚಾರಿಸುತ್ತಾ ಇದ್ದೆ. ಸಂಭಾಷಣೆಯು ನಡೆಯುತ್ತಿರುವಾಗ, ಅವನೊಂದು ಬೈಬಲನ್ನು ಹೊರತೆಗೆದ. ನಾನು ಕೂಡಲೇ ಅದನ್ನು ನಿರಾಕರಿಸಿ “ಆ ತತ್ವಗಳ ಅನುಸಾರವಾಗಿ ಜೀವಿಸುವ ಯಾವ ವ್ಯಕ್ತಿಯನ್ನೂ ನೀನು ಕಂಡುಕೊಳ್ಳಸಾಧ್ಯವಿಲ್ಲ” ಎಂದು ಹೇಳಿದೆ. ಅವನು ಪ್ರತಿಕ್ರಿಯಿಸಿದ್ದು: “ನನ್ನೊಂದಿಗೆ ಬಂದು, ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನೀನೇ ನೋಡು.” ಆದರೆ ಅವನ ರಾಜ್ಯ ಸಭಾಗೃಹವನ್ನು ನಾನು ಸಂದರ್ಶಿಸುವ ಮುಂಚೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಅವನು ಉತ್ತರಿಸಬೇಕೆಂದು ನಾನು ಬಯಸಿದೆ.
ಮೊದಲನೆಯದು: “ಸಂಬಳವನ್ನು ಪಡೆಯುವ ಒಬ್ಬ ಪಾದ್ರಿ ನಿಮ್ಮಲ್ಲಿ ಇದ್ದಾನೊ?” ಅವನ ಉತ್ತರ: “ಇಲ್ಲ. ನಮ್ಮ ಎಲ್ಲಾ ಹಿರಿಯರು ತಮ್ಮನ್ನೂ ತಮ್ಮ ಕುಟುಂಬಗಳನ್ನೂ ಅವರ ಐಹಿಕ ಕೆಲಸದ ಮೂಲಕ ಬೆಂಬಲಿಸುವ ಸ್ವಯಂಸೇವಕರಾಗಿದ್ದಾರೆ.” ನನ್ನ ಮುಂದಿನ ಪ್ರಶ್ನೆಯು ಹೀಗಿತ್ತು: “ಬೈಬಲನ್ನು ಅಭ್ಯಾಸಿಸಲು ಆದಿ ಕ್ರೈಸ್ತರು ಮಾಡಿದಂತೆ ನೀವು ಖಾಸಗಿ ಮನೆಗಳಲ್ಲಿ ಕೂಡಿ ಬರುತ್ತೀರೊ?” ಉತ್ತರವು: “ಹೌದು. ನೆರೆಹೊರೆಯ ವಿಭಿನ್ನ ಭಾಗಗಳಲ್ಲಿನ ಖಾಸಗಿ ಮನೆಗಳಲ್ಲಿ ನಾವು ವಾರದ ಒಂದು ಕೂಟವನ್ನು ನಡೆಸುತ್ತೇವೆ.” ನನ್ನ ಮೂರನೆಯ ಪ್ರಶ್ನೆಯು ಅವನಿಗೆ ಅಸಾಮಾನ್ಯವಾಗಿ ತೋರಿರಬೇಕು. “ಅಧ್ಯಕ್ಷನ ಪ್ರಾರಂಭೋತ್ಸವ ಆಚರಣೆಗಳಿಗೆ ಅಧ್ಯಕ್ಷನಿಗಾಗಿ ಪ್ರಾರ್ಥಿಸಲು, ನಿಮ್ಮ ಚರ್ಚು ಒಬ್ಬ ಪಾದ್ರಿಯನ್ನು ಕಳುಹಿಸುತ್ತದೊ?” ಫ್ರಾಂಕ್ ಪ್ರತಿಕ್ರಿಯಿಸಿದ್ದು: “ನಾವು ಎಲ್ಲಾ ರಾಜಕೀಯ ವಿಷಯಗಳಲ್ಲಿ ತಟಸ್ಥರಾಗಿದ್ದೇವೆ ಮತ್ತು ಯಾವ ಭಾಗವನ್ನೂ ವಹಿಸುವುದಿಲ್ಲ. ಇಂದು ಮಾನವಕುಲವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಏಕಮಾತ್ರ ಪರಿಹಾರದಂತೆ, ನಮ್ಮ ನಿಷ್ಠೆಯು ದೇವರ ರಾಜ್ಯಕ್ಕೆ ಇದೆ.”
ನಾನು ಕೇಳುತ್ತಿದ್ದ ವಿಷಯಗಳನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ. ಈ ಕ್ರೈಸ್ತರು ಎಲ್ಲಿ ಕೂಡಿ ಬರುತ್ತಿದ್ದರು ಎಂಬುದನ್ನು ನೋಡಲು ನನ್ನಿಂದ ಕಾಯಲಾಗಲಿಲ್ಲ. ನಾನು ಏನನ್ನು ಕಂಡುಕೊಂಡೆ? ಭಾವನಾತ್ಮಕತೆಯಲ್ಲ ಆದರೆ ಬೈಬಲಿನ ಕಡೆಗೆ ಒಂದು ಯುಕ್ತವಾದ ಪ್ರಸ್ತಾವ. ಅವರ ಕೂಟಗಳು ಶೈಕ್ಷಣಿಕವಾಗಿದ್ದು, ಅವರ ಕ್ರೈಸ್ತ ನಂಬಿಕೆಯನ್ನು ವಿವರಿಸಲು ಮತ್ತು ಕಾಪಾಡಲು ಜನರನ್ನು ಅರ್ಹರನ್ನಾಗಿ ಮಾಡುತ್ತಿದ್ದವು. ದೇವರ ನ್ಯಾಯವಾದ ಆಳಿಕೆಗಾಗಿ ಹಂಬಲಿಸುವವರನ್ನು ಕಂಡುಹಿಡಿಯಲು ಜನರ ಮಧ್ಯದೊಳಗೆ ಹೋಗುತ್ತಿರುವ, ಕ್ರಿಯೆಯ ಒಂದು ಗುಂಪು ಅವರಾಗಿದ್ದರು. ಮಧ್ಯ ಪೂರ್ವದ ಸಮಸ್ಯೆಗೆ ನನ್ನ ಉತ್ತರವು ಇಲ್ಲಿತ್ತು—ಎಲ್ಲಾ ಕುಲಗಳ, ಭಾಷೆಗಳ, ಮತ್ತು ಸಂಸ್ಕೃತಿಗಳ ಜನರು, ವಿಶ್ವದ ಸಾರ್ವಭೌಮ ಕರ್ತನಾದ ಯೆಹೋವ ದೇವರ ಶಾಂತಿಭರಿತ ಆರಾಧನೆಯಲ್ಲಿ ಒಟ್ಟುಗೂಡಿದ್ದರು. ಮತ್ತು ಇದೆಲ್ಲವು ಕ್ರಿಸ್ತನ ಉದಾಹರಣೆ ಮತ್ತು ಬೋಧನೆಗೆ ಅನುಸಾರವಾಗಿತ್ತು. ಇಲ್ಲಿ ದ್ವೇಷ ಮತ್ತು ಕಲಹ ಇರಲಿಲ್ಲ. ಕೇವಲ ಶಾಂತಿ ಮತ್ತು ಐಕ್ಯ.
ಇಸವಿ 1975ರಲ್ಲಿ ನಾನು ದೀಕ್ಷಾಸ್ನಾನ ಪಡೆದ ಸಾಕ್ಷಿಯಾದೆ, ಮತ್ತು ಐದು ವರ್ಷಗಳಾನಂತರ, ಜಾರ್ಜ ನನ್ನನ್ನು ಆ ಹೆಜ್ಜೆಯಲ್ಲಿ ಹಿಂಬಾಲಿಸಿದಳು. ದೇವರ ರಾಜ್ಯದ ಸುವಾರ್ತೆಯನ್ನು ಸಕ್ರಿಯವಾಗಿ ಘೋಷಿಸುತ್ತಿರುವ ರಾಬರ್ಟ್ ಮತ್ತು ಜಾನ್ ಎಂಬ ಇಬ್ಬರು ಗಂಡು ಮಕ್ಕಳು ನಮಗಿದ್ದಾರೆ.
ಬದಲಾದ ಮನೋಭಾವಗಳು
ವರ್ಷಗಳು ದಾಟಿಹೋದಂತೆ ನನ್ನ ಮನೋಭಾವಗಳು ಮೃದುವಾಗಿವೆ. ಹಿಂದೆ, ಇತರರ ಆದರ್ಶಗಳಿಗಾಗಿ ಬಹಳ ಕಡಿಮೆ ಸಹಾನುಭೂತಿಯಿರುವ ಅಪಘರ್ಷಕ ಕಾದಾಟಗಾರ ನಾನಾಗಿದ್ದೆ. ಅನೇಕ ಲಕ್ಷಂತರ ಜನರಂತೆ, ಸುಳ್ಳು ಧರ್ಮ ಮತ್ತು ರಾಜಕೀಯದಿಂದ ನನ್ನ ಯೋಚನೆಯು ಜಾಣ್ಮೆಯಿಂದ ನಡೆಸಲ್ಪಟ್ಟಿತ್ತು. ದೇವರು ಪಕ್ಷಪಾತಿಯಲ್ಲ ಮತ್ತು ಎಲ್ಲಾ ಕುಲಗಳ ಯಥಾರ್ಥ ಹೃದಯದ ಜನರು ಆತನನ್ನು ಶಾಂತಿ ಮತ್ತು ಐಕ್ಯದಲ್ಲಿ ಸೇವಿಸಬಲ್ಲರೆಂಬುದನ್ನು ನಾನು ಈಗ ಗ್ರಹಿಸುತ್ತೇನೆ.
ಯೆಹೋವನ ಸಾಕ್ಷಿಗಳ ಪಂಕ್ತಿಗಳಲ್ಲಿ, ಕಲ್ಪಿಸಲಾಗುವ ಪ್ರತಿಯೊಂದು ಹಿನ್ನೆಲೆಯ ಜನರನ್ನು—ಇತರರನ್ನು ಮುಂಚೆ ದ್ವೇಷಿಸುತ್ತಿದ್ದ ಜನರನ್ನು ನಾನು ಕಂಡಿದ್ದೇನೆ. ದೇವರು ನಿಜವಾಗಿಯೂ ಪ್ರೀತಿಸ್ವರೂಪಿಯಾಗಿದ್ದಾನೆ, ಮತ್ತು ಯೇಸು ನಮಗೆ ಕಲಿಸಲು ಬಂದ ವಿಷಯಗಳಲ್ಲಿ ಅದೂ ಒಂದಾಗಿದೆ ಎಂಬುದನ್ನು, ಈಗ ನನ್ನಂತೆ ಅವರು ಗ್ರಹಿಸಿದ್ದಾರೆ. ಅವನಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:34, 35)—ಕಾನ್ಸ್ಟೆಂಟೀನ್ ಲೂಸೀಡೀಸ್ ಹೇಳಿದಂತೆ. (g93 11/08)
[ಪುಟ 21 ರಲ್ಲಿರುವ ಚಿತ್ರ]
ಫ್ರೆಂಡ್ಸ್ ಗಂಡು ಮಕ್ಕಳ ಶಾಲೆಯನ್ನು ಹಾಜರಾಗುತ್ತಿರುವ ಹತ್ತು ವರ್ಷ ಪ್ರಾಯದ ಕಾನ್ಸ್ಟೆಂಟೀನ್ ಲೂಸೀಡೀಸ್
[ಪುಟ 22 ರಲ್ಲಿರುವ ಚಿತ್ರ]
ಅಧ್ಯಕ್ಷ ಜಾನ್ ಎಫ್. ಕೆನಡಿಯ ಮರಣದಿಂದ ಒಂದು ದೊಡ್ಡ ಹೊಡೆತ ಬಂದಿತು