“ಅದು ಗುರಿಬಿಟ್ಟು ಬಳಸು ಮಾತಾಡುವುದಿಲ್ಲ”
ಈ ಸಂಕಷ್ಟದ ಸಮಯದಲ್ಲಿ ಬೆಳೆದು ದೊಡ್ಡವರಾಗುವದೇನೂ ಸುಲಭವಲ್ಲ. ಯುವಕರು ಅನೇಕ ಹೊಸ ಪರಿಸ್ಥಿತಿಗಳನ್ನು ಎದುರಿಸುತ್ತಾರೆ ಮತ್ತು ಗಂಭೀರ ನಿರ್ಣಯಗಳನ್ನು ಅವರು ಮಾಡಲೇಬೇಕು. ನಾನು ಕುಡಿಯಲೋ? ಮಾದಕೌಷಧಿ ಸ್ವೀಕರಿಸಲೋ? ವಿರುದ್ಧಲಿಂಗದ ವ್ಯಕ್ತಿಯೊಂದಿಗೆ ಯಾವ ನಡವಳಿಕೆ ಯೋಗ್ಯವು? ಈ ಕುರಿತು ಗುರಿತಪ್ಪಿದ ಬಳಸು ಮಾತುಗಳಲ್ಲ, ಕಾರ್ಯಸಾಧಕ ಉತ್ತರಗಳು ಯುವಕರಿಗೆ ಬೇಕು. ಕ್ವೆಶ್ಚನ್ಸ್ ಯಂಗ್ ಪೀಪಲ್ಸ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್ ಎಂಬ ಪುಸ್ತಕವನ್ನು ಓದಿದ ನಂತರ, ಗ್ರೀನ್ಸ್ಬರೋ, ಉತ್ತರ ಕೆರೊಲಿನಾದ ಹುಡುಗಿಯೊಬ್ಬಳು ಬರೆದದ್ದು:
“ಈ ಪುಸ್ತಕವನ್ನು ಓದಿ ನಾನು ಬಹು ಸಂತೋಷಿಸಿದ್ದೇನೆ. ಅದರಲ್ಲಿರುವ ನಿಜಸಂಗತಿಗಳು ಮತ್ತು ಸೂಚನೆಗಳು ಯುವಜನರಿಗೆ ಯೋಗ್ಯವಾದ ಮಾರ್ಗದರ್ಶಕಗಳನ್ನಿಡಲು ಸಹಾಯ ಮಾಡುವುದು. ಇದು ಗ್ರಾಹ್ಯಶಕ್ತ ಪುಸ್ತಕವು ಮತ್ತು ಪ್ರತಿಯೊಂದು ಸಮಸ್ಯೆಯ ಉತ್ತಮ ಉದಾಹರಣೆಗಳು ಅದರಲ್ಲಿವೆ. ಒಮ್ಮೆ ನೀವದನ್ನು ಓದಲಾರಂಭಿಸಿದರೆ, ನೀವದನ್ನು ಕೆಳಗಿಡಲಾರಿರಿ ಯಾಕಂದರೆ ಅಧ್ಯಾಯಗಳು ಅಷ್ಟು ಅಭಿರುಚಿಯವುಗಳು. ಹಾಗೆ ಹೇಳಬಹುದಾದರೆ, ಅದು ಗುರಿತಪ್ಪಿ ಬಳಸುಮಾತಾಡುವದಿಲ್ಲ, ಬದಲಿಗೆ ಸಮಸ್ಯೆಗಳಿಗೆ ನೇರವಾದ ಉತ್ತರಗಳನ್ನು ಕೊಡುತ್ತದೆ.
“ಒಟ್ಟಿಗೆ ಈ ಪುಸ್ತಕವು ಅಪರಿಹಾರ್ಯವಾಗಿ ಆಶ್ಚರ್ಯಕರವೂ, ಸತ್ಯವೂ, ವಿಸ್ಮಯಕರವೂ ಆಗಿದೆ. . . . ಈ ಪುಸ್ತಕದ ಮಹತ್ತೆಷ್ಟೆಂಬದನ್ನು ಮಾತುಗಳು ವರ್ಣಿಸಲಾರವು. ನಾನೀ ಪುಸ್ತಕವನ್ನು ಎಲ್ಲರಿಗೂ, ವಿಶೇಷವಾಗಿ ಯುವಕರಿಗೆ ಬಹಳವಾಗಿ ಶಿಫಾರಸು ಮಾಡುತ್ತೇನೆ.”
ಆಕರ್ಷಕ ಚಿತ್ರಗಳುಳ್ಳ ಈ 320-ಪುಟಗಳ ಪುಸ್ತಕದಿಂದ ನೀವು ಯಾ ನಿಮ್ಮ ಮಕ್ಕಳು ಬಹಳಷ್ಟು ಪ್ರಯೋಜನ ಪಡೆಯುವಿರೆಂದು ನಮ್ಮ ಅನಿಸಿಕೆಯಾಗಿದೆ. ಕೆಳಗಿನ ಕೂಪನ್ ತುಂಬಿಸಿ, ಟಪ್ಪಾಲು ದ್ವಾರ ಕಳುಹಿಸುವ ಮೂಲಕ ಒಂದು ಪ್ರತಿಯನ್ನು ಪಡಕೊಳ್ಳಿರಿ.
ನನಗೆ 320-ಪುಟದ ಪುಸ್ತಕ ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್ ಪಡೆಯಲು ಇಷ್ಟವಿದೆ.