ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 7/8 ಪು. 8-9
  • ಇಂದಿನ ವಾರ್ತೆಗಳ ಅರ್ಥ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇಂದಿನ ವಾರ್ತೆಗಳ ಅರ್ಥ
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅತಿ ಅರ್ಥಗರ್ಭಿತ ವಾರ್ತೆಯು
  • ದೇವರ ಉದ್ದೇಶವು ಬೇಗನೆ ಕೈಗೂಡಲಿದೆ
    ಜೀವಿತದ ಉದ್ದೇಶವೇನು?—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?
  • ನಾವು “ಕಡೇ ದಿವಸಗಳಲ್ಲಿ” ಇದ್ದೇವೆ ಎಂದು ನಮಗೆ ತಿಳಿದಿರುವ ವಿಧ
    ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?
  • ನೂತನ ಲೋಕ—ಅತಿ ಹತ್ತಿರ!
    ಕಾವಲಿನಬುರುಜು—1990
  • ನಡೆಯುತ್ತಿರುವ ಘಟನೆಗಳೆಲ್ಲಾ ಏನನ್ನು ಅರ್ಥೈಸುತ್ತವೆ?
    ಎಚ್ಚರಿಕೆಯಿಂದಿರಿ!
ಇನ್ನಷ್ಟು
ಎಚ್ಚರ!—1991
g91 7/8 ಪು. 8-9

ಇಂದಿನ ವಾರ್ತೆಗಳ ಅರ್ಥ

ವಾರ್ತಾ ಪತ್ರಗಳನ್ನು ನೋಡಿರಿ ಅಥವಾ ಟೆಲಿವಿಶನ್‌ನನ್ನು ಆರಂಭಿಸಿರಿ. ನೀವು ಏನನ್ನು ಓದುತ್ತೀರಿ, ಕೇಳುತ್ತೀರಿ ಅಥವಾ ನೋಡುತ್ತೀರಿ? ಕೊಲೆ, ಬಲಾತ್ಕಾರ ಸಂಭೋಗ, ಮಾದಕೌಷಧಗಳು, ಕುಟುಂಬದ ಒಡೆತ, ರಾಜ್ಯಬದಲಾವಣೆಯ ದಂಗೆಗಳು, ಕ್ರಾಂತಿಗಳು, ಚಾರಿತ್ರ್ಯಹರಣ, ಮರೆ ಮಾಡುವಿಕೆ, ಏಯ್ಡ್ಸ್‌ನಂಥ ರೋಗಗಳು, ಭೂಕಂಪಗಳು, ಹಸಿವೆ, ದಾರಿತ್ರ್ಯತನದ ಮರಣಗಳ ಕುರಿತು ಕಥೆಗಳು, ಇದು ದಿನದ ಏಕಪ್ರಕಾರದ ವಾರ್ತೆಗಳು ಆಗಿರುತ್ತವೆ. ಆದಾಗ್ಯೂ, ವಾರ್ತೆಯ ಅತಿ ಮಹತ್ವದ, ಪ್ರಾಮುಖ್ಯ ರೂಪವು ಸಾಮಾನ್ಯವಾಗಿ ತಿರಸ್ಕರಿಸಲ್ಪಟ್ಟಿದೆ ಮತ್ತು ಅದನ್ನು ಒಂದು ವೇಳೆ ತಿಳಿಸಿದರೂ ಕೂಡಾ, ಅದನ್ನು ತಕ್ಷಣವೇ ತಳ್ಳಿ ಹಾಕಲಾಗುತ್ತದೆ.

ಉದಾಹರಣೆಗಾಗಿ, ಅಮೆರಿಕದ ಅಧ್ಯಕ್ಷರಾಗಿ ತನ್ನ ಪ್ರಥಮ ಕಾಲಾವಧಿಯ ಸಮಯದಲ್ಲಿ, ರೊನಾಲ್ಡ್‌ ರೇಗನ್‌ರು “ಅರ್ಮಗೆದ್ದೋನಿನ” ಕುರಿತು ಮಾತಾಡಿ, ಹೇಳುವದು: “ಅದನ್ನು ನೋಡಲಿರುವ ಸಂತತಿಯು ನಾವಾಗಿರುವವೋ ಎಂಬ ವಿಷಯದಲ್ಲಿ ನಾನು ನನ್ನಷ್ಟಕ್ಕೆ ಆಶ್ಚರ್ಯಚಕಿತನಾಗುವದನ್ನು ಕಂಡುಕೊಳ್ಳುತ್ತೇನೆ.” ತದನಂತರ, ಹೇಗೂ, ಅವರು ವಿಷಯವನ್ನು ಕಡೆಗೆಣಿಸಿ, “ನಾವು ಅರ್ಮಗೆದೋನಿಗೆ ಅನುಸಾರವಾಗಿ ಯೋಜಿಸಬೇಕಾಗಿದೆ” ಎಂದು ತಾನೆಂದೂ ಹೇಳಲಿಲ್ಲ ಎಂದು ಪ್ರತಿಪಾದಿಸಿದರು.

ಆದರೂ, ಬೈಬಲಿನ ಪುಸ್ತಕವಾದ ಪ್ರಕಟನೆಯು ಬರಲಿರುವ ಅರ್ಮಗೆದೋನಿನ ಕುರಿತು ತಿಳಿಸಿ, ಅದನ್ನು ವಿವರಿಸುವದು: “ಭೂಮಿಯ ಮತ್ತು ಲೋಕದ ರಾಜರು” “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧಕ್ಕೆ” ಅವರನ್ನು ಕೂಡಿಸುವವು. ಮುಂದುವರಿಸುತ್ತಾ ಬೈಬಲು ಹೇಳುವದು: “ಹಿಬ್ರಿಯ ಭಾಷೆಯಲ್ಲಿ ಅರ್ಮಗೆದೋನ್‌ ಎಂಬ ಹೆಸರುಳ್ಳ ಸ್ಥಳಕ್ಕೆ” ಜನಾಂಗಗಳು ಕೂಡಿಸಲ್ಪಡುವವು.—ಪ್ರಕಟನೆ 16:14, 16, ಕಿಂಗ್‌ ಜೇಮ್ಸ್‌ ವರ್ಶನ್‌.

ಸರ್ವಶಕ್ತನಾದ ದೇವರ, ಭೂಮಿಯನ್ನು ಕಂಪಿಸುವ ಆ ಮಹಾದಿನದ ಯುದ್ಧವು ಯಾವಾಗ ಸಂಭವಿಸುವದು? ಅದು ನಮ್ಮೀ ದಿನಗಳಲ್ಲಿ ಸಾಧ್ಯವೋ? ರೊನಾಲ್ಡ್‌ ರೇಗನರು ಕೂಡಾ ಹೇಳಿಕೆ ನೀಡುವಂತೆ ನಡಿಸಲ್ಪಟ್ಟರು: “ಇತ್ತೀಚೆಗೆ ಅದರಲ್ಲಿನ ಯಾವುದೇ ಪ್ರವಾದನೆಗಳನ್ನು ನೀವು ಒಂದು ವೇಳೆ ಗಮನಿಸಿದ್ದೀರೋ, ನನಗೆ ಗೊತ್ತಿಲ್ಲ, ಆದರೆ, ನನ್ನನ್ನು ನಂಬಿರಿ, ಅವುಗಳು ನಿಶ್ಚಯವಾಗಿಯೂ ನಾವು ಹಾದುಹೋಗುವ ಸಮಯವನ್ನು ವಿವರಿಸುತ್ತವೆ.”

ಅತಿ ಅರ್ಥಗರ್ಭಿತ ವಾರ್ತೆಯು

ಮುಂದಿನ ಬೈಬಲ್‌ ಪ್ರವಾದನೆಯನ್ನು ನೀವೇ ಗಮನಿಸಿರಿ: “ಆದರೆ ಕಡೇ ದಿವಸಗಳಲ್ಲಿ [ಈ ವಿಷಯಗಳ ವ್ಯವಸ್ಥೆಯಲ್ಲಿ] ಕಠಿಣಕಾಲಗಳು ಬರುವವೆಂಬುದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ, ಹಣದಾಸೆಯವರೂ, ಬಡಾಯಿ ಕೊಚ್ಚುವವರೂ, ಅಹಂಕಾರಿಗಳೂ, ದೂಷಕರೂ, ತಂದೆತಾಯಿಗಳಿಗೆ ಅವಿಧೇಯರೂ, ಉಪಕಾರ ನೆನಸದವರೂ, ದೇವಭಯವಿಲ್ಲದವರೂ, ಮಮತೆಯಿಲ್ಲದವರೂ, ದಮೆಯಿಲ್ಲದವರೂ, ಉಗ್ರತೆಯುಳ್ಳವರೂ, ಒಳ್ಳೇದನ್ನು ಪ್ರೀತಿಸದವರೂ, ದ್ರೋಹಿಗಳೂ, ದುಡುಕಿನವರೂ, ಉಬ್ಬಿಕೊಂಡವರೂ, ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ, ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು.” (2 ತಿಮೊಥಿ 3:1-5) ಈ ಪ್ರವಾದನೆಯು ಈ ನೆರವೇರುತ್ತಾ ಇದೆ ಎಂದು ನೀವು ಹೇಳುತ್ತೀರೋ?

ಅದಲ್ಲದೆ, ತನ್ನ ಭಾವೀ ಸಾನ್ನಿಧ್ಯತೆ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯನ್ನು ತಿಳಿಸುವಾಗ, ಯೇಸುವು ಪ್ರವಾದಿಸಿದ್ದು: “ಇದಲ್ಲದೇ ಯುದ್ಧಗಳಾಗುವದನ್ನೂ, ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳಬೇಕಾಗಿರುವದು. . . . ಜನಕ್ಕೆ ವಿರೋಧವಾಗಿ ಜನವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು, ಮತ್ತು ಅಲ್ಲಲ್ಲಿ ಬರಗಳು ಬರುವವು. ಭೂಕಂಪಗಳು ಆಗುವವು. ಇದಲ್ಲದೆ, ಅಧರ್ಮವು ಹೆಚ್ಚಾಗುವದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿ ಹೋಗುವದು.” (ಮತ್ತಾಯ 24:3-12) ಈ ಪ್ರವಾದನೆಯೂ ನೆರವೇರಿಕೆಯನ್ನು ಹೊಂದುತ್ತಿದೆ ಎಂದು ನೀವು ಒಪ್ಪುವದಿಲ್ಲವೇ?

ಆದುದರಿಂದ ಈ ಪ್ರವಾದನೆಗಳ ನೆರವೇರಿಕೆಯ ಸಮಯದಲ್ಲಿ ಜೀವಿಸುತ್ತಿರುವ ಅವನ ಹಿಂಬಾಲಕರು ಅವುಗಳ ನಿಜವಾದ ಅರ್ಥವೇನು ಎಂದು ಗಣ್ಯಮಾಡುವಂತೆ ಯೇಸುವು ಈ ಸಾಮ್ಯವನ್ನು ಕೊಟ್ಟನು: “ಅಂಜೂರ ಮುಂತಾದ ಮರಗಳನ್ನು ನೋಡಿರಿ: ಅವು ಚಿಗುರಿದ ಕೂಡಲೇ ನೀವು ಅದನ್ನು ಕಂಡು ಈಗ ಬೇಸಿಗೆಯು ಹತ್ತರವಾಯಿತೆಂದು ನೀವಾಗಿಯೇ ತಿಳುಕೊಳ್ಳುತ್ತಿರಲ್ಲಾ. ಹಾಗೆಯೇ, ನೀವು ಸಹ ಇವುಗಳಾಗುವದನ್ನು ನೋಡುವಾಗ, [ನಿಜವಾಗಿ ಇಂದು ಅವೇ ಸಂಗತಿಗಳನ್ನು ನಾವು ನೋಡುತ್ತಿದ್ದೇವೆ] ದೇವರ ರಾಜ್ಯವು ಹತ್ತರವದೆ ಎಂದು ತಿಳುಕೊಳ್ಳಿರಿ.”—ಲೂಕ 21:29-31.

ನಿಶ್ಚಯವಾಗಿಯೂ, ಬರಲಿರುವ ದೇವರ ರಾಜ್ಯ ಮತ್ತು ಆತನ ಯುದ್ಧವಾದ ಅರ್ಮಗೆದ್ದೋನ್‌ನ ಅತಿ ಸಮೀಪದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬದನ್ನು ರುಜುವಾತುಗಳು ಪುಷ್ಟೀಕರಿಸುತ್ತವೆ. ಇದೇ ಸಮಯದಲ್ಲಿ ಈ ಅತಿ ಮಹತ್ವದ ವಾರ್ತೆಯು ಹೆಚ್ಚು ಕಡಿಮೆ ಪೂರ್ಣವಾಗಿ ಜಗತ್ತಿನ ವಾರ್ತಾವಾಹಕಗಳಿಂದ ತಿರಸ್ಕರಿಸಲ್ಪಡುತ್ತಿರುವಾಗ, ಯೆಹೋವನ ಸಾಕ್ಷಿಗಳು ಅದನ್ನು ಜಗವ್ಯಾಪಕವಾಗಿ ಹಬ್ಬಿಸುವದರಲ್ಲಿ ಭಾಗ ವಹಿಸುತ್ತಿದ್ದಾರೆ. ಈ ಸುವಾರ್ತೆಯು, ದೇವರು ಈ ಭೂಮಿಯ ಎಲ್ಲಾ ಭ್ರಷ್ಟಾಚಾರವನ್ನು ಶುದ್ಧೀಕರಿಸುವನೆಂದು ಮಾತ್ರವೇ ಅಲ್ಲ, ಅವನ ರಾಜ್ಯ ಸರಕಾರದ ಆಳಿಕ್ವೆಯ ಕೆಳಗೆ, ಇಡೀ ಭೂಮಿಯು ಒಂದು ಆನಂದಭರಿತ, ಉದ್ಯಾನದಂಥ ಪ್ರಮೋದವನ ಆಗಲಿರುವದು ಎಂದೂ ಅವರು ಹೇಳುತ್ತಾರೆ.

ಈ ವಿಷಯಗಳ ಕುರಿತಾಗಿ ಬೈಬಲ್‌ ಭರವಸವನ್ನೀಯುವದು: “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು” ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” ಮತ್ತು ಮುಂದರಿಸಿ: “ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾ ಸೌಖ್ಯದಿಂದ ಆನಂದಿಸುವರು. ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಜ್ಞಾನೋಕ್ತಿ 2: 21, 22; ಕೀರ್ತನೆ 37:11, 29.

ಈ ಮಹಾ ಪ್ರವಾದನೆಗಳ ನೆರವೇರಿಕೆಯು ಅತಿ ಸಮೀಪದಲ್ಲಿದೆ ಎಂಬ ಪುರಾವೆಯ ಕುರಿತು ಉತ್ತಮವಾದ ತಿಳುವಳಿಕೆಯನ್ನು ಪಡೆಯಲು ನೀವು ಬಯಸುತ್ತೀರೋ? ಹಾಗಾದರೆ, ಇದನ್ನು ಯೆಹೋವನ ಸಾಕ್ಷಿಗಳಿಗೆ ತಿಳಿಯಪಡಿಸಿರಿ. ಇಂದಿನ ವಾರ್ತೆಯು ನಿಶ್ಚಯವಾಗಿಯೂ ದೇವರ ರಾಜ್ಯವು ಹತ್ತಿರದಲ್ಲಿದೆ, ಹೌದು ಒಂದು ನೀತಿಭರಿತ ಹೊಸ ಭೂಮಿಯು ಸಮೀಪದಲ್ಲಿದೆ ಎಂದು ನೀವು ಗ್ರಹಿಸುವಂತೆ ಅವರು ನಿಮಗೆ ಸಹಾಯ ಮಾಡಲು ಸಂತೋಷಿಸುತ್ತಾರೆ. (g90 8/22)

[ಪುಟ 9 ರಲ್ಲಿರುವ ಚಿತ್ರ ಕೃಪೆ]

Nordhausen/slave camp: USAF Official Photo; Starving child: WHO photo by W. Cutting; Industrial plant: WHO photo by P.Almasy

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ