ಗೃಹ ಅಲಂಕಾರ ಒಂದು ಪ್ರತಿಫಲದಾಯಕ ಪಂಥಾಹ್ವಾನ
ನೀವು ನಿಮ್ಮ ಆತಿಥೇಯನ ಸಾಧಾರಣ ರೀತಿಯ ಗೃಹವನ್ನು ಪ್ರವೇಶಿಸುತ್ತೀರಿ. ಪ್ರಥಮ ದೃಷ್ಟಿ, ಅದು ರಸಕರವಾಗಿ ಅಲಂಕರಿಸಲ್ಪಟ್ಟ ಮನೆಯೆಂದು ತೋರಿಸುತ್ತದೆ. ಪೆಯಿಂಟಿನ ಕೆಲಸ ಚೊಕ್ಕವಾಗಿಯೂ ಹಿತಕರವಾಗಿಯೂ ಮಾಡಲ್ಪಟ್ಟಿದೆ.
ತರುವಾಯ, ಈ ಎಲ್ಲ ಕೆಲಸವನ್ನು, ಗೃಹಾಲಂಕಾರದ ಪಂಥಾಹ್ವಾನಕ್ಕೆ ಓಗೊಟ್ಟ ಈ ಕುಟುಂಬದ ಸದಸ್ಯರೆ ಮಾಡಿದ್ದಾರೆಂದು ತಿಳಿದಾಗ ನೀವು ಆಶ್ಚರ್ಯಗೊಳ್ಳುತ್ತೀರಿ. ಆದರೆ ಇಂಥ ಸ್ವತಃ ಮಾಡುವ ಕೆಲಸದಲ್ಲಿ ಬೀಳುಕುಳಿಗಳು ಇರುವುದು ಸಾಧ್ಯ. ಆದುದರಿಂದ, ಯಾವುದೆ ಗೃಹಾಲಂಕಾರವನ್ನು ಆರಂಭಿಸುವ ಮೊದಲು ಈ ಕೆಳಗಣ ವಿಷಯಗಳನ್ನು ಪರಿಗಣಿಸಿ.
ಸಾಮಗ್ರಿಗಳನ್ನು ಜಾಗರೂಕತೆಯಿಂದ ಆರಿಸಿರಿ
ನಿಮ್ಮ ಗೃಹಾಲಂಕಾರದ ಶೈಲಿಯ ಸಂಬಂಧದಲ್ಲಿ, ಈಗ ದೊರೆಯುವ ಸಾಮಗ್ರಿಗಳ ವೈವಿಧ್ಯತೆಯು ನಿಮಗೆ ತುಂಬ ಆಯ್ಕೆಯ ಸಂದರ್ಭವನ್ನು ಒದಗಿಸುತ್ತದೆ. ನಿಮ್ಮ ವಠಾರದಲ್ಲಿ ಯಾವುದು ಪ್ರಾಯೋಗಿಕ? ಅಲಂಕಾರಿಕ ವಾಲ್ಪೇಪರು ಹಿತಕರವಾದ ತೋರಿಕೆ ಕೊಟ್ಟೀತೆ? ಅಥವಾ, ನಯ ಲೇಪದ ಯಾ ನೆಯ್ದ ವಾಲ್ಪೇಪರ್ ನಿಮಗಿಷ್ಟವೆ? ಕೇವಲ ಒಂದು ತೊಡೆತ ಪೆಯಿಂಟು ನಿಮಗೆ ಇಷ್ಟಕರವಾದ ತೋರಿಕೆಯನ್ನು ಕೊಟ್ಟೀತೆಂದು ನೀವು ನಿರ್ಣಯಿಸಬಹುದು. ಕೊನೆಯ ನಿರ್ಣಯವನ್ನು ಮಾಡುವ ಮೊದಲು ಪ್ರಾಯೋಗಿಕ ವಿಷಯಗಳನ್ನು ಲೆಕ್ಕಕ್ಕೆ ತಕ್ಕೊಳ್ಳಿ. ತಗಲುವ ಖರ್ಚು, ಅದರ ಬಾಳಿಕೆ, ಅಳವಡಿಸುವ ಸಲೀಸು ಮತ್ತು ಗೋಡೆಯನ್ನು ದುರಸ್ತಾಗಿಯೂ ಸ್ವಚ್ಛವಾಗಿಯೂ ಇಡಲು ತಗಲಬಹುದಾದ ಸಮಯ ಮತ್ತು ಶ್ರಮ ಇದರಲ್ಲಿ ಸೇರಿವೆ. ಇದೆಲ್ಲವನ್ನು, ಹೊರಗಿನ ಉದ್ಯೋಗಸ್ಥರನ್ನು ಕೆಲಸಕ್ಕೆ ಹಿಡಿದರೆ ತಗಲುವ ವೆಚ್ಚಕ್ಕೆ ಹೋಲಿಸಬೇಕು.
ನೀವು ಆಯ್ಕೆ ಮಾಡಿರುವ ಅಲಂಕಾರಿಕ ಪೆಯಿಂಟಿನ ಬಣ್ಣವೂ ಪ್ರಾಮುಖ್ಯ. ಕೋಣೆಯ ಇತರ ವಸ್ತುಗಳೊಂದಿಗೆ ಅದು ಸಂಮಿಳಿತವಾಗುವುದೊ? ಸಾಮಾನ್ಯವಾಗಿ ನಿಮ್ಮ ಕೋಣೆ ಶೀತಲವಾಗಿರುವಲ್ಲಿ ಬೆಚ್ಚಗೆನ ಬಣ್ಣದ ಪೆಯಿಂಟು ಬೆಚ್ಚಗೆನ ಅನಿಸಿಕೆಯನ್ನು ಉಂಟುಮಾಡುವುದು. ತೆಳು ನೀಲ ಯಾ ಪಚ್ಚೆ ಬಣ್ಣಗಳು ಬೆಚ್ಚಗೆರುವ ಕೋಣೆಗಳನ್ನು ತಣ್ಣಗಿನ ಅನಿಸಿಕೆಯನ್ನು ಕೊಡುವಂತೆ ಮಾಡುವುವು. ಕತ್ತಲಿನ ಯಾ ಬೆಳಕು ಕಡಮೆಯಾಗಿರುವ ಕೊಠಡಿಗಳನ್ನು ಹೊಳಪುಳ್ಳ ಬಣ್ಣಗಳು ಬೆಳಗಿಸಬಲ್ಲವು.
ನಿಮ್ಮ ಕೆಲಸವನ್ನು ಯೋಜಿಸಿ ತಯಾರಿಸಿರಿ
ಅಲಂಕಾರ ಸಾಫಲ್ಯದ ಗುಟ್ಟು ಉತ್ತಮ ತಯಾರಿಯೆ! ಅಲಂಕಾರ ಉದ್ಯೋಗಸ್ಥರು ಬಣ್ಣ ಬಳಿಯುವ ಮೇಲ್ಮೈಯನ್ನು ತಯಾರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆಂದು ನೀವು ಗಮನಿಸಿದ್ದುಂಟೆ? ಇದನ್ನು ನೀವೆ ಮಾಡುವಾಗ, ತಯಾರಿಕೆಯಲ್ಲಿ ಸಮಯ ಮತ್ತು ಶ್ರಮದ ಜಿಪುಣತೆ ತೋರಿಸಬೇಡಿ. ಒಣಗಿದ, ನಯವಾದ ಮತ್ತು ಸ್ವಚ್ಛವಾದ ಮೇಲ್ಮೈಯನ್ನು ನೀವು ತಯಾರಿಸಬೇಕೆಂದು ಪರಿಣತರ ಸೂಚನೆ.
ಬಿರುಕುಗಳನ್ನು ತುಂಬಿಸಿ ಹಾನಿಯಾಗಿರುವ ಸ್ಥಳಗಳನ್ನು ದುರಸ್ತು ಮಾಡಿರಿ. ಮತ್ತು ಅದನ್ನು ನುಣುಪಾಗಿಸಲು ಗ್ಲಾಸ್ಪೇಪರ್ ಯಾ ಸ್ಯಾಂಡ್ಪೇಪರಿನಿಂದ ಉಜಿರ್ಜಿ. ಪೆಯಿಂಟ್ ಬಳಿಯುವ ಮೊದಲು, ಮೆತುಗಾರೆಯ ದೂಳನ್ನು ತೆಗೆಯಲು ಮೇಲ್ಮೈಯನ್ನು ಒದ್ದೆ ಬಟೆಯ್ಟಿಂದ ಒರಸಿ ಅದು ಒಣಗುವಂತೆ ಬಿಡಿರಿ.
ಈಗ ಮುಂದಿನ ಯೋಜನೆ ಏನು? ಇಡಿಯ ಕುಟುಂಬ ಕೆಲಸದಲ್ಲಿ ಸೇರುವುದೊ? ಸೇರುವಲ್ಲಿ, ಪ್ರತಿಯೊಬ್ಬನೂ ಇದರಲ್ಲಿ ಒಳಕೊಳ್ಳುವುದು ಮಾತ್ರವಲ್ಲ, ಎಲ್ಲರೂ ಅಂತಿಮ ಉತ್ಪನ್ನದಲ್ಲಿ ಅಭಿಮಾನ ತಾಳುವರು. ಮತ್ತು ಇದು ನಿಶ್ಚಯವಾಗಿ ಹೆಚ್ಚು ಉತ್ತಮ ಪರಾಮರಿಕೆಯನ್ನು ಪ್ರೋತ್ಸಾಹಿಸುತ್ತದೆ. ಸ್ವತಃ ಗೃಹಾಲಂಕಾರ ಮಾಡುವ ಬದಲಿಗೆ ಸಮೇತ ಮಾಡಿರಿ. ಪ್ರತಿಫಲಗಳು ಅಸಾಧಾರಣ. (g90 6/22)
[Box/Pictures on page ]
ಬ್ರಷ್ ಮತ್ತು ರೋಲರ್ಗಳನ್ನು ಜೋಪಾನ ಮಾಡುವುದು
1. ಹೊಸ ಬ್ರಷಿನ ಬಿರುಗೂದಲಿನಿಂದ ದೂಳನ್ನು ತೆಗೆಯಲು ಅದನ್ನು ಬಗ್ಗಿಸಿ ಪೂರ್ತಿ ಸ್ವಚ್ಛ ಮಾಡಿರಿ.
2. ಬ್ರಷನ್ನು ಪೆಯಿಂಟಿನೊಳಗೆ ಹೆಚ್ಚು ಆಳವಾಗಿ ಮುಳುಗಿಸಬೇಡಿರಿ. (ಹೆಚ್ಚಿಗೆಯ ಪೆಯಿಂಟು ದಿಂಡಿನಲ್ಲಿ ಹೋಗಿ ಸೇರಿಕೊಳ್ಳದಂತೆ ಬಿರುಗೂದಲಿನ ಉದ್ದದ ಮೂರರಲ್ಲಿ ಒಂದು ಭಾಗದಿಂದ ಅರ್ಧಾಂಶವನ್ನು ಮಾತ್ರ ಮುಳುಗಿಸಿರಿ.)
3. ಉಪಯೋಗಿಸಿದ ಬಳಿಕ ಬ್ರಷನ್ನು ಶುಚಿ ಮಾಡಿರಿ. ತೈಲಮೂಲದ ಪೆಯಿಂಟಿಗೆ ಮಿನರಲ್ ಸ್ಪಿರಿಟನ್ನೂ ಲೇಟೆಕ್ಸ್ ಯಾ ಜಲಮೂಲ ಪೆಯಿಂಟಿಗೆ ಬೆಚ್ಚಗೆನ ನೀರನ್ನೂ ಉಪಯೋಗಿಸಿ.
4. ಶುದ್ಧ, ಒಣ ಬ್ರಷನ್ನು, ಅದರ ಉಳಿದ ಪಸೆ ಬತ್ತಿ ಹೋಗುವಂತೆ ಮತ್ತು ಬಿರುಗೂದಲು ಆಕಾರದಲ್ಲಿ ಉಳಿಯುವಂತೆ ಸ್ವಚ್ಛ ಕಾಗದದಲ್ಲಿ ಸುತ್ತಿ ಇಡಿರಿ.
5. ಪೆಯಿಂಟ್ ರೋಲರ್ಗಳಿಗೂ ಇದೇ ವಿಧಾನವನ್ನು ಅನುಸರಿಸಿರಿ. ತುಕ್ಕು ಹಿಡಿದು ಮುಂದಿನ ಬಾರಿ ಉಪಯೋಗಿಸುವಾಗ ಪೆಯಿಂಟಿನ ಬಣ್ಣ ಕೆಡುವುದನ್ನು ತಡೆಯುವಂತೆ ಮಾಡಲು ಅವುಗಳ ಲೋಹದ ಭಾಗಗಳು ಪೂರ್ತಿ ಒಣಗಿರುವಂತೆ ನೋಡಿರಿ.