ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g91 11/8 ಪು. 21
  • ಆ ಸೀನನ್ನು ತಡೆದು ಹಿಡಿಯಬೇಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆ ಸೀನನ್ನು ತಡೆದು ಹಿಡಿಯಬೇಕೆ?
  • ಎಚ್ಚರ!—1991
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸೀನಿಗೆ ಕಾರಣ
  • ಇತರರ ಪರಿಗಣನೆ
  • ಸೀನನ್ನು ತಡೆಹಿಡಿಯುವುದು ಸಾಧ್ಯವೆ?
  • “ನಿನ್ನನ್ನು ಆಶೀರ್ವದಿಸಲಿ!”
  • ನಿಮ್ಮ ಕರವಸ್ತ್ರ ನೆನಪಿರಲಿ
  • ಶ್ವಾಸಕೋಶಗಳು ರಚನೆಯಲ್ಲಿ ಅದ್ಭುತಕರ
    ಎಚ್ಚರ!—1992
  • ಮೂಢನಂಬಿಕೆಗಳು—ಇಂದು ಎಷ್ಟು ವ್ಯಾಪಕವಾಗಿ ಹಬ್ಬಿವೆ?
    ಎಚ್ಚರ!—1999
  • ‘ಫ್ಲೂ’ ರೋಗದಿಂದ ನಿಮ್ಮ ಕುಟುಂಬವನ್ನು ಕಾಪಾಡಿ
    ಎಚ್ಚರ!—2010
  • ಸ್ವರದ ಗುಣಮಟ್ಟ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
ಎಚ್ಚರ!—1991
g91 11/8 ಪು. 21

ಆ ಸೀನನ್ನು ತಡೆದು ಹಿಡಿಯಬೇಕೆ?

ಕೆಲವು ಬಾರಿ ನಮಗೆಲ್ಲರಿಗೂ ಸೀನನ್ನು ತಡೆದು ಹಿಡಿಯಬೇಕೆಂದು ವಿಪರೀತ ಮನಸ್ಸಾಗುತ್ತದೆ. ನಮ್ಮ ವಿವಾಹ ಸಂಸ್ಕಾರದಲ್ಲಿ ಪ್ರತಿಜ್ಞೆ ಮಾಡಲು ಸಿದ್ಧರಾಗಿ ನಾವು ನಿಂತಿರಬಹುದು. ಸಭೆಯಾಗಿ ಕೂಡುವ ಯಾ ಇತರ ಗಂಭೀರವಾದ ಸಂದರ್ಭ ಯಾ ಶವಸಂಸ್ಕಾರದ ಸಮಯವೂ ಇದಾಗಿರಬಹುದು.

ಹೌದು, ಅನೇಕ ವೇಳೆ, ಹುರುಪಿನ ಸೀನು ಅತ್ಯಾನಂದದಾಯಕ ಮತ್ತು ವಿಶ್ರಾಂತಿಯ ಕ್ಷೇಮಾವಸ್ಥೆ ಅದನ್ನು ಅನುಸರಿಸಿ ಬರುತ್ತದೆ. ಆದರೆ, ಅನಪೇಕ್ಷಿತ ಸೀನನ್ನು ಹೇಗೆ ತಡೆ ಹಿಡಿಯುವುದೆಂಬುದು ಅನೇಕ ಸಾರಿ ಬರುವ ಸಮಸ್ಯೆ.

ಎಲ್ಲ ಸೀನುಗಳು ಸಮಾನವಲ್ಲ. ಸಂತೋಷ ನಾದವೆಂದು ಹೇಳಬಹುದಾದ, ಬಹು ದೂರ ಕೇಳಿಸುವ ಗಟ್ಟಿಯಾದ ಸೀನು ಕೆಲವರದ್ದು. ಇತರರದ್ದು ತುಸು ಇಂಪಾದ ಸೀನು. ಪುನರಾವರ್ತಿಸಿ ಬರುವ, ಸಾಲಾಗಿ, ಮೂರು, ನಾಲ್ಕು, ಐದು ಮತ್ತು ಹೆಚ್ಚು ಬಾರಿ ಬರುವ ಸೀನೂ ಇದೆ. ಅತಿ ವಿರಳ ಸಂದರ್ಭಗಳಲ್ಲಿ, ಕೆಲವರು ಎಚ್ಚತ್ತಿರುವಾಗ, ಕೆಲವು ಸೆಕೆಂಡುಗಳಿಗೊಮ್ಮೆ ಯಾ ನಿಮಿಷಗಳಿಗೊಮ್ಮೆ, ತಾಸು, ದಿನ, ವಾರ ಯಾ ತಿಂಗಳುಗಳ ಸಮಯ ಪದೇ ಪದೇ ಸೀನುವುದುಂಟು.

ಸೀನುವಂತೆ ಯಾವುದು ಮಾಡುತ್ತದೆ? ಸೀನನ್ನು ತಡೆಹಿಡಿಯಲು ಖಾತ್ರಿಯಾದ ವಿಧಾನವಿದೆಯೆ? ಈ ಸೀನುಚಕ್ರ ಪ್ರಾರಂಭವಾದ ಬಳಿಕ ಅದನ್ನು ಬಲಾತ್ಕಾರದಿಂದ ನಿಲ್ಲಿಸುವುದರಲ್ಲಿ ಅಪಾಯಗಳಿವೆಯೆ? ಮತ್ತು ಸೀನನ್ನು ದೂರ ಮಾಡಲು ಯಾವ ಹೆಜ್ಜೆಗಳನ್ನಾದರೂ ಇಡಬಹುದೆ?

ಸೀನಿಗೆ ಕಾರಣ

ಹಳಬರು, ಎಳೆಯರು, ವಯಸ್ಕರು, ಶಿಶುಗಳು—ಹೀಗೆ ಪ್ರತಿಯೊಬ್ಬರೂ ಕೆಲವೊಮ್ಮೆ ಸೀನುತ್ತಾರೆ. ಮೃಗಗಳೂ ಸೀನುತ್ತವೆಂದು ತಿಳಿದು ಬಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಮೂಗಿನ ದಾರಿಗಳನ್ನು ಉದ್ರೇಕಿಸುವ ಪರಕೀಯ ವಸ್ತು(ದೂಳು ಯಾ ಪರಾಗ) ಇದಕ್ಕೆ ಕಾರಣ. ಆದರೆ ನಮ್ಮ ಭಾವೋಕತೆಯೂ ಸೀನಿನ ಕೆರಳನ್ನು ತರಬಲ್ಲದು. ನಮ್ಮಲ್ಲಿ ಕೆಲವರಿಗೆ ಹೊಳೆಯುವ ಸೂರ್ಯಪ್ರಕಾಶವೂ ಸೀನಿಗೆ ಕಾರಣವಾಗಬಹುದು. ಕಣ್ಣಿನ ನರಗಳು ಮೂಗಿನ ನರಾಂತಗಳಿಗೆ ಒತ್ತಾಗಿ ಹೊಂದಿಕೆಯಾಗಿರುವುದೆ ಇದಕ್ಕೆ ಕಾರಣ.

ಸೂಕ್ಷ್ಮಗ್ರಾಹಿ ನರಗಳು ಮಿದುಳಿಗೆ ಸಂದೇಶವನ್ನು ಕಳುಹಿಸಿ ಉದ್ರೇಕಿಸುವ ವಸ್ತುವಿನ ಇರುವಿಕೆಗೆ ಪ್ರತಿಕ್ರಿಯೆ ತೋರಿಸುತ್ತವೆ. ಆಗ ಮಿದುಳು, ಆ ಅನಪೇಕ್ಷಿತ ವಸ್ತುವನ್ನು ತೊಲಗಿಸುವರೆ ಮೂಗು ತೆಳ್ಳಗಿನ ದ್ರವವನ್ನು ಒದಗಿಸುವಂತೆ ಆಜ್ಞೆ ಕೊಡುತ್ತದೆ. ಶ್ವಾಸಕೋಶವು ತುಂಬ ಗಾಳಿ ಸೇದಿ ಇಡುವಂತೆ ಶ್ವಾಸಕೋಶಕ್ಕೂ ಧ್ವನಿ ತಂತುಗಳು ಗಾಳಿಯ ಮಾರ್ಗವನ್ನು ಮುಚ್ಚಿ ಗಾಳಿ ಹೊರಗೆ ಹೋಗದಂತೆ ತಡೆಯಲು ಧ್ವನಿ ತಂತುಗಳಿಗೂ ಸಂದೇಶವನ್ನು ಮಿದುಳು ಕಳುಹಿಸುತ್ತದೆ. ಎದೆ ಗೋಡೆ ಮತ್ತು ಹೊಟ್ಟೆಯ ಸ್ನಾಯುಗಳಿಗೆ ಅವು ಬಿಗಿಯುವಂತೆ ಹೇಳಲಾಗುತ್ತದೆ. ಹೀಗೆ, ಶ್ವಾಸಕೋಶದ ಗಾಳಿ ಸಂಕುಚಿತವಾಗುತ್ತದೆ. ಕೊನೆಗೆ, ಧ್ವನಿ ತಂತುಗಳಿಗೆ ವಿಶ್ರಮಿಸಲು ಆಜ್ಞೆ ದೊರಕಿದಾಗ ಸಂಕುಚಿತ ಗಾಳಿ ವೇಗವಾಗಿ ಹೊರಗೆ ತಳ್ಳಲ್ಪಡುತ್ತದೆ. ಇದರೊಂದಿಗೆ ಸಾಮಾನ್ಯವಾಗಿ ಅನಪೇಕ್ಷಿತ ವಸ್ತು ತೆಳ್ಳಗಿನ ದ್ರವದ ಸಮೇತ ಹೊರ ಬೀಳುತ್ತದೆ. ಇದೆಲ್ಲ ಜಾಗೃತ ಪ್ರಯತ್ನವಿಲ್ಲದೆ ನಡೆಯುತ್ತದೆ ಮತ್ತು ಇದನ್ನು ಓದಲು ಹಿಡಿಯುವ ಸಮಯಕ್ಕಿಂತ ವೇಗವಾಗಿ ಸಂಭವಿಸುತ್ತದೆ.

ಅಧಿಕ ಸಂದರ್ಭಗಳಲ್ಲಿ, ಸದಾ ಸೀನುವುದು ಹೇ ಫೀವರ್‌ ಎಂಬ ಸಾಮಾನ್ಯ ಎಲರ್ಜಿಯ ರೋಗಸೂಚನೆಯಾಗಿದೆ. ಸಸ್ಯ ಪರಾಗ ಉದ್ರೇಕವನ್ನು ಒದಗಿಸುತ್ತದೆ, ಮತ್ತು ಹೇ ಫೀವರ್‌(ಒಣಹುಲ್ಲು ಜ್ವರ) ಎಂಬ ಹೆಸರು ಒಣಹುಲ್ಲು ಯಾ ಕತ್ತರಿಸಿದ ಹುಲ್ಲು ಇದರ ದೋಷಿ ಎಂಬ ಅಭಿಪ್ರಾಯವನ್ನು ಕೊಡಬಹುದಾದರೂ ಅದು ಸದಾ ಹಾಗಿರಬೇಕೆಂದಿಲ್ಲ. ವಿವಿಧ ಪರಾಗಗಳಿಗೆ ಅಥವಾ ಕೇವಲ ಒಂದು ಪರಾಗಕ್ಕೆ ರೋಗಿಗಳು ಸೂಕ್ಷ್ಮ ಸಂವೇದಿಗಳಾಗಿರಬಹುದು. ಆದುದರಿಂದ ಇಂಥ ರೋಗಿಗಳು ಅನೇಕ ದಿನಗಳ ತನಕ ಬಲವಾದ ಒಣಗಾಳಿ ಬೀಸುವ ಕಾಲಗಳಿಗೆ ಏಕೆ ಭಯಪಡುತ್ತಾರೆಂದು ನಮಗೆ ತಿಳಿಯುವುದು ಸುಲಭ. ಮೂಗಿನ ದಾರಿ ಉದ್ರೇಕಗೊಂಡು ಮುಂದುವರಿಯುವ ಸೀನು ಪ್ರಾರಂಭಿಸಿದೊಡನೆ, ಸಾಧಾರಣವಾಗಿ ಉದ್ರೇಕಿಸದ ದೂಳಿನ ಅತಿ ಚಿಕ್ಕ ಕಣವೂ ರೋಗಿಯನ್ನು ಪುನಃ ಸೀನುತ್ತಾ ಹೋಗುವಂತೆ ಮಾಡುತ್ತದೆ.

ಇತರರ ಪರಿಗಣನೆ

ತೀರಾ ತಲೆ ನೆಗಡಿಯ ಕಾರಣ ಮೂಗಿನ ದಾರಿಗಳು ಮುಚ್ಚಲ್ಪಟ್ಟಿರುವಾಗ, ಸೀನು ರೋಗಿಗೆ ತುಸು ಉಪಶಮನವನ್ನು ತರಬಲ್ಲದು. ಈ ರೀತಿ ಲೋಳೆ ಪದಾರ್ಥ ತೆಗೆಯಲ್ಪಡುವಾಗ ಉಸಿರಾಟ ಹೆಚ್ಚು ಸುಲಭವಾಗುತ್ತದೆ. ಆದರೆ ಸೀನು ಬರುವಾಗ ಅದನ್ನು ಮುಚ್ಚಿ ಹಿಡಿಯದಿದ್ದರೆ ಸಮೀಪದಲ್ಲಿರುವವರಿಗೆ ಯಾವ ಪರಿಣಾಮವಾಗುತ್ತದೆ?

ನೆಗಡಿ ಹರಡುವ ಸಕಲ ವಿಧಗಳೂ ತಮಗೆ ಪೂರ್ತಿಯಾಗಿ ತಿಳಿದಿವೆಯೆಂದು ವೈದ್ಯರು ಇನ್ನೂ ವಾದಿಸುವುದಿಲ್ಲ. ಆದರೂ, ಸೀನಿನ ಮೂಲಕ ಗಾಳಿಯಲ್ಲಿ ಹರಡಿರುವ ಅಣುಗಳನ್ನು ಸೇದುವುದರ ಮೂಲಕ ಒಬ್ಬನಿಗೆ ನೆಗಡಿ ಹಿಡಿಯಬಹುದೆಂಬುದಕ್ಕೆ ಬಲವಾದ ಸೂಚನೆಗಳಿವೆ. ಶುದ್ಧ ಗಾಳಿ ಕಡಮೆಯಿರುವ ಬೆಚ್ಚಗೆನ ಕೋಣೆಯ ಒತ್ತಾವರಣದಲ್ಲಿ ಯಾ ಜನ ತುಂಬಿರುವ ಟ್ರೆಯ್ನ್‌ ಮತ್ತು ಬಸ್ಸುಗಳಲ್ಲಿ ಇದಕ್ಕೆ ವಿಶೇಷ ಸಾಧ್ಯತೆ ಇದೆ. ಇನ್‌ಫ್ಲುವೆಂಸ, ದಡಾರ, ಕೆಪ್ಪಟೆ, ನಿಮೋನ್ಯ, ಕ್ಷಯ ರೋಗ ಮತ್ತು ಕಪ್ಪೆ ಕೆಮ್ಮಲು ಸೇರಿರುವ ಇತರ ರೋಗಗಳೂ ಸೀನಿನಿಂದ ಹರಡುತ್ತವೆಂದು ನಂಬಲಾಗುತ್ತದೆ.

ಸೀನು ಹೊರಗೆ ನೂಕಲ್ಪಡುವ ವೇಗದ ವಿಷಯ ನಡೆದ ಸಂಶೋಧನೆ, ರೋಗಾಣುಗಳು ಸೇರಿರುವ ದ್ರವಹನಿಗಳು ಮೂಗು ಮತ್ತು ಬಾಯಿಯಿಂದ ತಾಸಿಗೆ 100ಕ್ಕೂ ಹೆಚ್ಚು ಮೈಲು ವೇಗದಲ್ಲಿ ಹೊರಬೀಳುತ್ತವೆಂದೂ ಸುಮಾರು 12 ಅಡಿ ದೂರದ ವಸ್ತುಗಳ ಮೇಲೆ ಅಂಟಿಕೊಳ್ಳುತ್ತವೆಂದೂ ತೋರಿಸುತ್ತದೆ. ಇತರ ಹನಿಗಳು ತುಸುಕಾಲ ಗಾಳಿಯಲ್ಲಿ ತೇಲಿಕೊಂಡು ಹೋಗಿ ನಿರಪರಾಧಿ ದಾರಿಹೋಕರಿಂದ ಸೇದಲ್ಪಡುತ್ತದೆ.

ಸೀನನ್ನು ತಡೆಹಿಡಿಯುವುದು ಸಾಧ್ಯವೆ?

ಅನೇಕ ವಿಧಾನಗಳನ್ನು ವಿವಿಧ ಮಟ್ಟದ ಸಾಫಲ್ಯದಿಂದ ಉಪಯೋಗಿಸಲಾಗಿದೆ. ಕೆಲವರು, ಮೂಗಿನ ಸರಿ ಕೆಳಗಿರುವ ಮೇಲ್ತುಟಿಯನ್ನು ಬೆರಳಿನಿಂದ ಗಟ್ಟಿಯಾಗಿ ಒತ್ತಿ ಹಿಡಿದು, ಹೀಗೆ ಸೀನಿನ “ಸ್ಫೋಟನ”ವನ್ನು ನಿಲ್ಲಿಸಿದ್ದೇವೆ ಯಾ ತಡೆಹಿಡಿದಿದ್ದೇವೆಂದು ಹೇಳಿದ್ದಾರೆ. ಅಲ್ಲಿ ಹಾಕುವ ಗಟ್ಟಿಯಾದ ಒತ್ತಡವು ಸೀನುಚಕ್ರ ಯಾ ವ್ಯೂಹದಲ್ಲಿ ಸೇರಿರುವ ನರಗಳನ್ನು ತಡೆಯುತ್ತದೆ ಎಂದು ಹೇಳಲಾಗುತ್ತದೆ. ಸೀನು ಬರುತ್ತದೆ ಎಂದೆಣಿಸುವಾಗ ಕರವಸ್ತ್ರದೊಳಗೆ ಸಿಂಬಳ ಸೀದುವುದು ಇನ್ನೊಂದು ವಿಧವಾಗಿರಬಹುದು.

ಹೆಚ್ಚು ಸಮಯ ಮುಂದುವರಿಯುವ ಯಾ ಅಸ್ಥಿಗತ ಸೀನಿಗೆ ಸೇದುವ ಸಲಕರಣೆಗಳು—ಅದು ಬಿಸಿ ನೀರಿನ ಆವಿಯೆ ಆಗಿರಲಿ—ಕೆಲವು ಸಲ ಉಪಶಮನ ನೀಡುತ್ತವೆ. ಅನೇಕ ಹೇ ಫೀವರ್‌ ರೋಗಿಗಳು ಆವಿ ತುಂಬಿದ ಸ್ನಾನದ ಕೋಣೆಯಲ್ಲಿ ಬಿಸಿ ನೀರಿನ ಸ್ನಾನ ಮಾಡುವಾಗ ತಾತ್ಕಾಲಿಕ ಉಪಶಮನವನ್ನು ಏಕೆ ಪಡೆಯುತ್ತಾರೆಂದು ಇದು ವಿವರಿಸಬಲ್ಲದು.

ಗತ ವರುಷಗಳಲ್ಲಿ ಅನೇಕ ಕ್ರಮ, ವಿಧಾನಗಳು—ಕೆಲವು ನ್ಯಾಯಸಮ್ಮತ, ಇನ್ನು ಕೆಲವು ಹಾಸ್ಯಾಸ್ಪದ— ಸೂಚಿಸಲ್ಪಟ್ಟಿವೆ. ವೇದನ ಪ್ರತಿಬಂಧಿ ಕ್ರೀಮನ್ನು ಮೂಗಿನೊಳಗೆ ಹಚ್ಚುವುದರಿಂದ ಸ್ವಲ್ಪ ಸಾಫಲ್ಯ ಲಭ್ಯವಾಗಿದೆ. ಇತರ ಔಷಧಗಳಲ್ಲಿ ಸೆಡೆಟಿವ್‌, ಇಂಜೆಕ್ಷನ್‌, ತೊಟ್ಟು ಔಷಧ, ದ್ರವ ಔಷಧ, ಮನೋರೋಗ ಚಿಕಿತ್ಸೆ, ಮೂಗಿನ ಪೊರೆಗಳ ಜಡ್ಡುಗಟ್ಟಿಸುವಿಕೆ ಮತ್ತು ಬೆಳ್ಳುಳ್ಳಿ ಮತ್ತು ಹಾರ್ಸ್‌ರ್ಯಾಡಿಶ್‌ಗಳನ್ನು ಮೂಸುವುದು ಸೇರಿವೆ. ಹಾಸ್ಯಾಸ್ಪದ ಸೂಚನೆಗಳಲ್ಲಿ ಕ್ಲಿಪ್‌ ಹಿಡಿಕೆಯಿಂದ ಮೂಗನ್ನು ಮುಚ್ಚುವುದು, ತಲೆಕೆಳಗೆ ಕಾಲುಮೇಲೆ ಮಾಡಿ ನಿಲ್ಲುವುದು, ಅಕ್ಷರ ಮಾಲೆಯನ್ನು ಹಿಮ್ಮೊಗವಾಗಿ ಹೇಳುವುದು ಯಾ ಹಂದಿಯ ಕೊಬ್ಬನ್ನು ಸವರುವುದು ಸೇರಿವೆ.

ಒಂದು ಎಚ್ಚರಿಕೆ: ಸೀನನ್ನು ಯಾವಾಗಲು ಅಡಗಿಸುವುದು ಯಾ ತಡೆಹಿಡಿಯುವುದು ಒಳ್ಳೆಯದಲ್ಲ. ಹುರುಪಿನ ಸೀನನ್ನು ತಡೆಯುವುದು ಮೂಗಿನಿಂದ ರಕ್ತ ಸುರಿಯುವಂತೆ ಮಾಡಬಲ್ಲದೆಂದು ಗೊತ್ತಾಗಿ ಬಂದಿದೆ. ಇದು ಆಕ್ರಮಿಸಿರುವ ಬ್ಯಾಕ್ಟೀರಿಯವನ್ನು ಸೈನಸ್‌ ಕಂಡಿಗಳೊಳಗೆ ಕಳುಹಿಸಿ ರೋಗ ಹರಡುವಂತೆ ಮಾಡೀತು. ವಿರಳ ಸಂಭವಗಳಲ್ಲಿ ಮೂಗಿನೊಳಗೂ ಸುತ್ತಲೂ ಇರುವ ಎಲುಬುಗಳು ಒಡೆದಿವೆ ಮತ್ತು ಮಧ್ಯ ಕಿವಿಯ ಒಂದು ಎಲುಬಿನ ಕೀಲು ತಪ್ಪಿದೆ.

“ನಿನ್ನನ್ನು ಆಶೀರ್ವದಿಸಲಿ!”

ಅನೇಕ ದೇಶಗಳಲ್ಲಿ ಸೀನುವವನಿಗೆ ಹತ್ತಿರ ನಿಂತವರು “ನಿನ್ನನ್ನು ಆಶೀರ್ವದಿಸಲಿ” ಎಂದು ಹೇಳುವುದು ವಾಡಿಕೆ. ಇಂಥ ವಾಡಿಕೆ ಯಾವಾಗ ಆರಂಭಗೊಂಡಿತು?

ಆರ್‌. ಬ್ರಾಷ್‌ ಎಂಬವರ ಹೌ ಡಿಡ್‌ ಇಟ್‌ ಬಿಗಿನ್‌ ಎಂಬ ಪುಸ್ತಕಾನುಸಾರ, ಮನುಷ್ಯನು ಸೀನಿದಾಗ ಅವನು ಮರಣಕ್ಕೆ ಅತಿ ಹತ್ತಿರವಿರುತ್ತಾನೆ ಎಂದು ಕೆಲವು ಪೂರ್ವಿಕರು ನಂಬಿದರಂತೆ. ಬ್ರಾಷ್‌ ಮಂದುವರಿಸುವುದು: “ಈ ಭಯ ತಪ್ಪಾದರೂ ವ್ಯಾಪಕವಾದ ಕಲ್ಪನೆಯ ಮೇಲೆ ಆಧಾರಗೊಂಡಿತ್ತು. ಮಾನವನ ಆತ್ಮ ಜೀವದ ಸತ್ವವೆಂದೆಣಿಸಲ್ಪಡುತ್ತಿತ್ತು. ಸತ್ತ ಮನುಷ್ಯರು ಉಸಿರಾಡದೆ ಇರುವುದು, ಅವನ ಆತ್ಮ ಉಸಿರಾಗಿರಲೇ ಬೇಕೆಂಬ ತಪ್ಪು ವಾದಕ್ಕೆ ನಡೆಸಿತು. . . . ಆದುದರಿಂದ ಆದಿಯಿಂದಲೂ ಜನರು ಸೀನಿಗೆ ಗಾಬರಿಯಿಂದ ಪ್ರತಿವರ್ತನೆ ತೋರಿಸಿ, ಸೀನಿದವನಿಗೆ ದೇವರು ಸಹಾಯ ಮಾಡಿ, ಆಶೀರ್ವದಿಸಿ, ಅವನ ಜೀವವನ್ನು ಉಳಿಸಲಿ ಎಂದು ಶ್ರದ್ಧೆಯಿಂದ ಅಪೇಕ್ಷಿಸಿದ್ದು ಆಶ್ಚರ್ಯವಲ್ಲ. ಆದರೆ ಹೇಗೊ, ಮಧ್ಯ ಯುಗಗಳಲ್ಲಿ ಈ ಪದ್ಧತಿಯ ಆದಿ ಮೂಲವು ಮರೆತು ಹೋಗಿದ್ದಿರಬೇಕು. ಏಕೆಂದರೆ, ಸೀನಿದವನಿಗೆ, ‘ದೇವರು ನಿನ್ನನ್ನು ಆಶೀರ್ವದಿಸಲಿ’ ಎಂಬ ಮಾತನ್ನು ಪರಿಚಯ ಮಾಡಿಸಿದ ಪ್ರಶಸ್ತಿ ಮಹಾ ಪೋಪ್‌ ಗ್ರೆಗರಿಯದ್ದು ಎಂದು ಹೇಳಲಾಗಿದೆ.”

ನಿಮ್ಮ ಕರವಸ್ತ್ರ ನೆನಪಿರಲಿ

ಸೀನನ್ನು ಪಾತಕಕ್ಕೂ ಉಪಯೋಗಿಸಲಾಗಿದೆ ಎಂದು ತಿಳಿಯುವಾಗ ನಿಮಗೆ ಆಶ್ಚರ್ಯವಾದೀತು. ಹೌದು, ನಿಯಮೋಲ್ಲಂಘನೆ ಮಾಡುವವರು ಸೀನನ್ನು ದುಷ್ಟ ಕೆಲಸಗಳಿಗಾಗಿ ಉಪಯೋಗಿಸಲು ಯಾ ದುರುಪಯೋಗಿಸಲು ದಾರಿ ಕಂಡುಹಿಡಿದಿದ್ದಾರೆ. ಸುಮಾರು ನೂರು ವರ್ಷಗಳ ತಗ್ಗಿಗೆ ಇಂಗ್ಲೆಂಡಿನ ಕೆಲವು ಕಳ್ಳರನ್ನು ಸೀನು ಬೇಹುಗಾರರು ಎಂದು ಕರೆಯಲಾಯಿತು. ಅವರು ನಸ್ಯವನ್ನು ಅಪರಿಚಿತರ ಮುಖಕ್ಕೆ ಎಸೆಯುತ್ತಿದ್ದರು. ಬಳಿಕ, ಭಯಂಕರ ಸೀನಿನಿಂದ ನರಳಿ ಚಿತ್ತಭ್ರಮಣೆಯಾಗಿರುವ ಅವನ ಬೆಲೆಬಾಳುವ ವಸ್ತುಗಳನ್ನು ಆ ಕಳ್ಳರು ಅಪಹರಿಸುತ್ತಿದ್ದರು.

ನಮ್ಮಲ್ಲಿ ಅಧಿಕಾಂಶ ಮಂದಿಗೆ ಮುಖ ತುಂಬ ನಸ್ಯದಿಂದ ಉಂಟಾಗುವ ಸೀನು ಬರಲಿಕ್ಕಿಲ್ಲ. ಆದರೆ, ಸೀನು ಥಟ್ಟನೆ ಬರಲಿ, ನೀಳಿಸಿ ಬರಲಿ, ಪರರ ಚಿಂತೆ ಮಾಡುವ ವ್ಯಕ್ತಿ ಸದಾ, ತನ್ನ ಮೂಗು ಮತ್ತು ಮುಖವನ್ನು ಮುಚ್ಚಲು ಕರವಸ್ತ್ರ ಯಾ ದಪ್ಪದ ಕರಕಾಗದವನ್ನು ಉಪಯೋಗಿಸುವನು. ಇದು ಸಭ್ಯ ನಡತೆ ಮಾತ್ರವಲ್ಲ ವಿವೇಕದ ಮುಂಜಾಗ್ರತೆಯೂ ಆಗಿರುವುದು. ಗಾಳಿಯನ್ನು ರೋಗಾಣು ತುಂಬಿದ ಹನಿಗಳಿಂದ ಚಿಮುಕಿಸಿ ಆ ಮಾರ್ಗವಾಗಿ ಬರಲಿರುವ ಅನನುಮಾನಿ ವ್ಯಕ್ತಿ ಅದನ್ನು ಸೇದುವಂತೆ ಮಾಡುವುದರ ವಿರುದ್ಧ ಇದು ನಮಗೆ ಎಚ್ಚರಿಕೆ ಕೊಡುತ್ತದೆ. ನೆರೆಯವನ ಮೇಲೆ ನಮಗಿರುವ ಪ್ರೀತಿಯು, ನಾವು ರೋಗಾಣುಗಳ ಹರಡುವಿಕೆಯನ್ನು ಸೀಮಿತವಾಗಿಡಲು ಸಾಧ್ಯವಿರುವುದನ್ನೆಲ್ಲ ಮಾಡಿ ಇತರರನ್ನು ರೋಗಗಳಿಂದ ರಕ್ಷಿಸಲು ಪ್ರಯತ್ನಿಸುವಂತೆ ವಿಧಿಸುತ್ತದೆ.

ಸೀನನ್ನು ಅಡಗಿಸುವುದು ವಿವೇಕಪೂರ್ಣ ಯಾ ಸಾಧ್ಯವಾಗಿರಲಿಕ್ಕಿಲ್ಲ. ಆದರೆ ಆ ಸೀನನ್ನು ತಡೆದು ಹಿಡಿಯಲು ನೀವು ಮಾಡುವ ಪರಚಿಂತನೆ—ಮತ್ತು ಕರವಸ್ತ್ರದ ಉಪಯೋಗ—ಯನ್ನು ಇತರರು ಎಷ್ಟೊಂದು ಗಣ್ಯ ಮಾಡಿಯಾರು! (g90 6/8)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ