ಎಲ್ಲಾ ಕಷ್ಟಗಳಿಗೂ ಪಿಶಾಚನೇ ಕಾರಣನಾ?
ಬೈಬಲ್ ಕೊಡೋ ಉತ್ತರ
ಪಿಶಾಚನಾದ ಸೈತಾನ ನಿಜವಾಗ್ಲೂ ಇದ್ದಾನೆ, ಕೆಟ್ಟತನ ಮತ್ತು ಕ್ರೂರತನದ ಮೂಲ ಇವನೇ. ಇವನಿಗೆ ತುಂಬ ಶಕ್ತಿ ಇದೆ. “ಸುಳ್ಳು ಗುರುತುಗಳನ್ನ” ಮತ್ತು ‘ವಂಚಿಸೋ ಎಲ್ಲ ಕುತಂತ್ರಗಳನ್ನ ಮಾಡಿ’ ತಾನು ಅಂದ್ಕೊಂಡಿದ್ದನ್ನ ಸಾಧಿಸ್ತಾನೆ. ನಿಜ ಹೇಳಬೇಕಂದ್ರೆ ಇವನು “ಬೆಳಕಿನ ದೇವದೂತನ ತರ ವೇಷ ಹಾಕೊಳ್ತಾ” ನಾಟಕ ಮಾಡ್ತಾನೆ ಅಂತ ಬೈಬಲ್ ಹೇಳುತ್ತೆ. (2 ಥೆಸಲೊನೀಕ 2:9, 10; 2 ಕೊರಿಂಥ 11:14) ಅವನಿಂದ ಆಗ್ತಿರೋ ಹಾನಿಯನ್ನ ನೋಡಿದ್ರೆ ಅವನು ಇದ್ದಾನೆ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ.
ಆದ್ರೆ ನಮಗೆ ಬರೋ ಎಲ್ಲಾ ಕಷ್ಟಕ್ಕೂ ಅವನೇ ಕಾರಣ ಅಂತ ಹೇಳಕ್ಕಾಗಲ್ಲ. ಯಾಕೆ? ಯಾಕಂದ್ರೆ ದೇವರು ನಮ್ಮನ್ನ ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಅಂತ ಆಯ್ಕೆ ಮಾಡೋ ಸಾಮರ್ಥ್ಯ ಕೊಟ್ಟು ಸೃಷ್ಟಿ ಮಾಡಿದ್ದಾನೆ. (ಯೆಹೋಶುವ 24:15) ಹಾಗಾಗಿ ನಾವು ತಪ್ಪಾದ ಆಯ್ಕೆ ಮಾಡಿದ್ರೆ ಕಷ್ಟ ಅನುಭವಿಸ್ತೀವಿ.—ಗಲಾತ್ಯ 6:7, 8.