ಭೂಮಿಯಲ್ಲಿ ಶಾಂತಿ—ಅದು ಹೇಗೆ ಬರುತ್ತೆ?
ಬೈಬಲ್ ಕೊಡುವ ಉತ್ರ
ಭೂಮಿ ಮೇಲೆ ಶಾಂತಿ ಬರುತ್ತೆ. ಆದ್ರೆ ಅದು ಮನುಷ್ಯರ ಪ್ರಯತ್ನದಿಂದ ಅಲ್ಲ, ದೇವರ ಆಳ್ವಿಕೆಯಿಂದ ಬರುತ್ತೆ. ದೇವರ ಆಳ್ವಿಕೆ ಅಂದ್ರೆ ಸ್ವರ್ಗದಲ್ಲಿರೋ ಒಂದು ಸರ್ಕಾರ, ಅದನ್ನ ಕ್ರಿಸ್ತ ಯೇಸು ಆಳ್ತಾನೆ. ಈ ಅದ್ಭುತ ನಿರೀಕ್ಷೆ ಬಗ್ಗೆ ಬೈಬಲ್ ನಮಗೆ ಹೇಗೆ ಕಲಿಸುತ್ತೆ ಅಂತ ಗಮನಿಸಿ.
ದೇವರು “ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.” ಹೀಗೆ ‘ತನಗೆ ಇಷ್ಟವಾಗಿರೋ ಜನ್ರಿಗೆ ಭೂಮಿಯಲ್ಲಿ ಶಾಂತಿ ಕೊಡ್ತೀನಿ’ ಅಂತ ತಾನು ಕೊಟ್ಟಿರೋ ಮಾತನ್ನ ನಿಜ ಮಾಡ್ತಾನೆ.—ಕೀರ್ತನೆ 46:9; ಲೂಕ 2:14.
ದೇವರ ಆಳ್ವಿಕೆ ಸ್ವರ್ಗದಿಂದ ಇಡೀ ಭೂಮಿಯನ್ನ ಆಳುತ್ತೆ. (ದಾನಿಯೇಲ 7:14) ಆಗ ಭೂಮಿಯನ್ನ ಒಂದೇ ಒಂದು ಸರ್ಕಾರ ಆಳೋದ್ರಿಂದ ತುಂಬ ಸಮಸ್ಯೆಗಳಿಗೆ ಮೂಲಕಾರಣ ಆಗಿರೋ ದೇಶಾಭಿಮಾನವನ್ನ ಅದು ತೆಗೆದುಹಾಕುತ್ತೆ.
ದೇವರ ಸರ್ಕಾರದ ರಾಜನಾದ ಯೇಸುವನ್ನ “ಸಮಾಧಾನದ ಪ್ರಭು” ಅಂತ ಕರೆಯಲಾಗಿದೆ ಮತ್ತು ಆತನು ‘ಶಾಂತಿಗೆ ಅಂತ್ಯ ಇರದ’ ಹಾಗೆ ನೋಡ್ಕೊಳ್ತಾನೆ.—ಯೆಶಾಯ 9:6, 7.
ಹೊಡೆದಾಡ್ತಾ ಇರಬೇಕು ಅಂತ ತೀರ್ಮಾನ ಮಾಡಿರೋ ಜನ್ರಿಗೆ ದೇವರ ಆಳ್ವಿಕೆಯಲ್ಲಿ ಜಾಗ ಇಲ್ಲ, ಯಾಕಂದ್ರೆ ದೇವರು “ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ.”—ಕೀರ್ತನೆ 11:5; ಜ್ಞಾನೋಕ್ತಿ 2:22.
ದೇವರು ತನ್ನ ಜನ್ರಿಗೆ ಶಾಂತಿಯಿಂದ ಜೀವನ ಮಾಡೋದು ಹೇಗೆ ಅಂತ ಕಲಿಸ್ತಾನೆ. ದೇವರ ಈ ನಿರ್ದೇಶನ ಪಾಲಿಸೋದ್ರಿಂದ ಜನ್ರು “ತಮ್ಮ ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ ಮಾಡ್ತಾರೆ, ತಮ್ಮ ಈಟಿಗಳನ್ನ ಬಡಿದು ಕುಡುಗೋಲುಗಳಾಗಿ ಮಾಡ್ತಾರೆ. ಜನಾಂಗ ಜನಾಂಗಕ್ಕೆ ವಿರುದ್ಧ ಕತ್ತಿ ಎತ್ತಲ್ಲ, ಇನ್ನು ಯಾವತ್ತೂ ಅವರು ಯುದ್ಧ ಮಾಡೋಕೆ ಕಲಿಯಲ್ಲ” ಅಂತ ಬೈಬಲ್ ಹೇಳುತ್ತೆ.—ಯೆಶಾಯ 2:3, 4.
ಇಡೀ ಭೂಮಿಯಲ್ಲಿರೋ ಲಕ್ಷಾಂತರ ಯೆಹೋವನ ಸಾಕ್ಷಿಗಳು ಈಗಾಗ್ಲೇ ಶಾಂತಿಯಿಂದ ಇರೋದು ಹೇಗೆ ಅಂತ ದೇವರಿಂದ ಕಲಿತಾ ಇದ್ದಾರೆ. (ಮತ್ತಾಯ 5:9) ನಾವು 230ಕ್ಕಿಂತ ಹೆಚ್ಚು ದೇಶ-ದ್ವೀಪದಲ್ಲಿ ಜೀವಿಸ್ತಾ ಇದ್ದೀವಿ ಮತ್ತು ಬೇರೆ-ಬೇರೆ ಸಂಸ್ಕೃತಿಯಿಂದ ಬಂದಿದ್ದೀವಿ. ಆದ್ರೂ ನಾವು ಜೊತೆ ಮಾನವರ ವಿರುದ್ಧ ಯಾವುದೇ ಕಾರಣಕ್ಕೂ ಹೊಡೆದಾಟ, ಯುದ್ಧ ಮಾಡಲ್ಲ.
ಇವತ್ತು ಯೆಹೋವನ ಸಾಕ್ಷಿಗಳು ಶಾಂತಿಯಿಂದ ಇರೋದು ಹೇಗೆ ಅಂತ ಕಲಿತಾ ಇದ್ದಾರೆ