ಲೋಕದ ಶಾಂತಿ—ಇದನ್ನ ತರೋದು ಯಾಕಷ್ಟು ಕಷ್ಟ?
ಬೈಬಲ್ ಕೊಡುವ ಉತ್ತರ
ಶಾಂತಿ ತರೋಕೆ ಮನುಷ್ಯರು ಹಾಕಿರೋ ಎಲ್ಲ ಪ್ರಯತ್ನಗಳು ಸೋತಿದೆ ಮತ್ತು ಇನ್ನು ಮುಂದೆನೂ ಸೋಲುತ್ತಾ ಇರುತ್ತೆ. ಇದಕ್ಕೆ ಕಾರಣಗಳು ಮುಂದೆ ಇದೆ:
“ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.” (ಯೆರೆಮೀಯ 10:23) ದೇವರು ಮನುಷ್ಯರನ್ನ ಸೃಷ್ಟಿ ಮಾಡಿದಾಗ ಅವರು ತಮ್ಮನ್ನೇ ತಾವು ಆಳ್ಕೊಳ್ಳೋ ಸಾಮರ್ಥ್ಯ ಅಥವಾ ಹಕ್ಕನ್ನ ಅವ್ರಿಗೆ ಕೊಟ್ಟಿಲ್ಲ. ಅದಕ್ಕೆ ಅವ್ರಿಂದ ಶಾಂತಿ ತರೋಕೆ ಆಗ್ತಿಲ್ಲ.
“ದೊಡ್ಡದೊಡ್ಡ ಅಧಿಕಾರಿಗಳ ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ, ಅವರು ರಕ್ಷಣೆ ಕೊಡೋಕೆ ಆಗಲ್ಲ. ಮನುಷ್ಯನ ಉಸಿರು ಹೋದಾಗ ಮಣ್ಣಿಗೆ ಸೇರ್ತಾನೆ. ಆ ದಿನಾನೇ ಅವನ ಯೋಚನೆಗಳೆಲ್ಲ ಅಳಿದು ಹೋಗುತ್ತೆ.” (ಕೀರ್ತನೆ 146:3, 4) ಒಳ್ಳೇದು ಮಾಡಬೇಕು ಅಂತ ಮನಸ್ಸಿರೋ ಸರ್ಕಾರಿ ಅಧಿಕಾರಿಗಳಿಗೆ ಕೂಡ ಯುದ್ಧಗಳು ನಡೀತಾ ಇರೋದಕ್ಕೆ ಕಾರಣಗಳೇನು ಅಂತ ತಿಳ್ಕೊಂಡು ಅದಕ್ಕೆ ಶಾಶ್ವತ ಪರಿಹಾರ ತರೋಕೆ ಆಗಲ್ಲ.
‘ಕೊನೇ ದಿನಗಳಲ್ಲಿ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ. ಯಾಕಂದ್ರೆ ಮನುಷ್ಯರು ಉಗ್ರರು, ಒಳ್ಳೇದನ್ನ ದ್ವೇಷಿಸುವವರು, ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು ಆಗಿರ್ತಾರೆ.’ (2 ತಿಮೊತಿ 3:1-4) ನಾವು ಈ ದುಷ್ಟ ಲೋಕದ “ಕೊನೇ ದಿನಗಳಲ್ಲಿ” ಜೀವನ ಮಾಡ್ತಿದ್ದೀವಿ. ಇವತ್ತು ಜನ್ರಲ್ಲಿ ಇಂಥ ಕೆಟ್ಟ ಗುಣಗಳು ಇರೋದ್ರಿಂದ ಶಾಂತಿ ತರೋಕೆ ಕಷ್ಟ ಆಗ್ತಿದೆ.
“ಭೂಮಿಯೇ, ಸಮುದ್ರವೇ ಇನ್ಮುಂದೆ ನಿಮಗೆ ತುಂಬ ಕಷ್ಟ ಆಗುತ್ತೆ. ಯಾಕಂದ್ರೆ ತನಗಿರೋ ಸಮಯ ತುಂಬ ಕಮ್ಮಿ ಅಂತ ಸೈತಾನನಿಗೆ ಗೊತ್ತು. ಅದಕ್ಕೇ ಅವನು ತುಂಬ ಕೋಪದಿಂದ ಭೂಮಿಗೆ ಬಂದಿದ್ದಾನೆ.” (ಪ್ರಕಟನೆ 12:12) ದೇವರ ಶತ್ರು ಆಗಿರೋ ಸೈತಾನ ಈ ಭೂಮಿಗೆ ಬಂದು ಬಿದ್ದಿದ್ದಾನೆ ಮತ್ತು ತನ್ನಲ್ಲಿರೋ ಕೆಟ್ಟ ಗುಣಗಳನ್ನ ಮನುಷ್ಯರೂ ತೋರಿಸೋ ತರ ಮಾಡ್ತಿದ್ದಾನೆ. ಎಲ್ಲಿವರೆಗೂ ಅವನು ‘ಈ ಲೋಕದ ನಾಯಕನಾಗಿ’ ಇರ್ತಾನೋ ಅಲ್ಲಿವರೆಗೂ ನಾವು ಶಾಂತಿಯಿಂದ ಜೀವನ ಮಾಡೋಕಾಗಲ್ಲ.—ಯೋಹಾನ 12:31.
“[ದೇವರ ಆಳ್ವಿಕೆ] ಈ ಎಲ್ಲ ಸಾಮ್ರಾಜ್ಯಗಳನ್ನ [ದೇವರನ್ನ ವಿರೋಧಿಸೋ ಸರ್ಕಾರಗಳನ್ನ] ನಜ್ಜುಗುಜ್ಜು ಮಾಡಿ ನಾಶ ಮಾಡುತ್ತೆ. ಆ ಆಡಳಿತ ಸದಾಕಾಲ ಇರುತ್ತೆ.” (ದಾನಿಯೇಲ 2:44) ಯಾವುದೇ ಮನುಷ್ಯ ಸರ್ಕಾರ ಅಲ್ಲ, ದೇವರ ಆಳ್ವಿಕೆ ಮಾತ್ರ ಈ ಲೋಕದಲ್ಲಿ ಶಾಶ್ವತವಾಗಿ ಶಾಂತಿ ತರುತ್ತೆ. ಹೀಗೆ ನಮ್ಮ ಆಸೆಯನ್ನ ಈಡೇರಿಸುತ್ತೆ.—ಕೀರ್ತನೆ 145:16.