ಚಿತ್ರ ಕೃಪೆ, ಎಡದಿಂದ ಬಲಕ್ಕೆ: ಇಯಾನ್ ಚಂಡಮಾರುತ, ಫ್ಲೋರಿಡಾ, ಅಮೆರಿಕ, ಸೆಪ್ಟಂಬರ್ 2022 (Sean Rayford/Getty Images); ಮಧ್ಯದ ಚಿತ್ರ: ತಾಯಿ ತನ್ನ ಮಗನೊಂದಿಗೆ ಮನೆ ಖಾಲಿ ಮಾಡ್ತಿದ್ದಾರೆ, ಡಾಂಟೆಸ್ಕ್, ಉಕ್ರೇನ್, ಜುಲೈ 2022 (Alex Chan Tsz Yuk/SOPA Images/LightRocket via Getty Images); ಬಲಭಾಗದ ಚಿತ್ರ: ತುಂಬ ಜನ ಕೋವಿಡ್ ಟೆಸ್ಟ್ ಮಾಡಿಸಿಕೊಳ್ತಿದ್ದಾರೆ, ಬೀಜಿಂಗ್, ಚೀನಾ, ಏಪ್ರಿಲ್ 2022 (Kevin Frayer/Getty Images)
ಸದಾ ಎಚ್ಚರವಾಗಿರಿ!
2022: ಆತಂಕ ಮತ್ತು ಗೊಂದಲದ ಗೂಡಾದ ವರ್ಷ—ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?
2022ರಲ್ಲಿ ಯುದ್ಧಗಳ ಬಗ್ಗೆ, ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಮತ್ತು ಪ್ರಕೃತಿ ವಿಕೋಪಗಳ ಬಗ್ಗೆ ಯಾವಾಗಲೂ ನ್ಯೂಸ್ನಲ್ಲಿ ಸುದ್ದಿ ಕೇಳ್ತಾನೆ ಇದ್ವಿ. ಈ ಘಟನೆಗಳೆಲ್ಲಾ ಯಾಕೆ ನಡೀತಿದೆ ಅನ್ನೋದಕ್ಕೆ ಬೈಬಲ್ ಮಾತ್ರ ಉತ್ತರ ಕೊಡುತ್ತೆ.
2022ರಲ್ಲಿ ನಡೆದ ಘಟನೆಗಳು
ಕಳೆದ ವರ್ಷ ನಡೆದ ಘಟನೆಗಳು ನಾವು “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ ಅನ್ನೋದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. (2 ತಿಮೊತಿ 3:1) ಇದು 1914ರಿಂದ ಶುರುವಾಯ್ತು. ಬೈಬಲಿನಲ್ಲಿ ಹೇಳಿರೋ ಭವಿಷ್ಯವಾಣಿಗಳು ಈಗ ಹೇಗೆ ನಿಜ ಆಗ್ತಿದೆ ಅಂತ ಗಮನಿಸಿ:
“ಯುದ್ಧಗಳು.”—ಮತ್ತಾಯ 24:6.
“2022ರಲ್ಲಿ ಯುರೋಪ್ ಖಂಡ ಮತ್ತೆ ರಣರಂಗ ಆಯ್ತು.”a
“ಉಕ್ರೇನ್ ಮೇಲೆ ರಷ್ಯಾ ದಾಳಿ” ಅನ್ನೋ ಲೇಖನ ನೋಡಿ.
“ಆಹಾರದ ಕೊರತೆ.”—ಮತ್ತಾಯ 24:7.
“2022: ಹಸಿವಿನಿಂದ ಕಂಗಾಲಾದ ವರ್ಷ.”b
“ಉಕ್ರೇನ್ ಯುದ್ಧದಿಂದಾಗಿ ಲೋಕದಲ್ಲಿ ಆಹಾರಕ್ಕೆ ಹಾಹಾಕಾರ!” ಅನ್ನೋ ಲೇಖನ ನೋಡಿ.
“ಅಂಟುರೋಗಗಳು.”—ಲೂಕ 21:11.
“ಈ ವರ್ಷ ಮಂಕಿಪಾಕ್ಸ್, ಪೋಲಿಯೋ ಹಾಗೂ ಕೋವಿಡ್-19 ಪುನಃ ಅಬ್ಬರಿಸಿದ್ರಿಂದ ಎಷ್ಟೋ ಜನ್ರಿಗೆ ತೊಂದ್ರೆ ಆಯ್ತು. ಇದ್ರಿಂದ ಈ ಅಂಟುರೋಗಗಳು ಎಷ್ಟು ಮಾರಣಾಂತಿಕ ಮತ್ತು ಇವನ್ನು ಮನುಷ್ಯರಿಂದ ತೆಗೆದು ಹಾಕೋಕೆ ಆಗಲ್ಲ ಅಂತ ಗೊತ್ತಾಯ್ತು.”c
“ಕೋವಿಡ್ಗೆ 60 ಲಕ್ಷ ಜನರು ಬಲಿ” ಅನ್ನೋ ಲೇಖನ ನೋಡಿ.
“ಭಯಾನಕ ದೃಶ್ಯಗಳು.”—ಲೂಕ 21:11.
“ತುಂಬ ಕಡೆ ಮಿತಿಮೀರಿದ ತಾಪಮಾನ, ಬರಗಾಲ, ಕಾಡ್ಗಿಚ್ಚು ಮತ್ತು ಪ್ರಳಯ ಆಯ್ತು. 2022ರ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿದ್ರಿಂದ ತುಂಬ ಜನ್ರಿಗೆ ನಷ್ಟ ಆಯ್ತು, ಸಾವಿರಾರು ಜನ್ರು ಜೀವ ಕಳಕೊಂಡರು, ಲಕ್ಷಾಂತರ ಜನ್ರು ಮನೆಯನ್ನೂ ಕಳಕೊಂಡ್ರು.”d
“ಭೂಮಿಯಲ್ಲಿ ಮಿತಿಮೀರುತ್ತಿರುವ ತಾಪಮಾನ” ಅನ್ನೋ ಲೇಖನ ನೋಡಿ.
“ಪರಿಸ್ಥಿತಿ ಹದಗೆಟ್ಟಿರೋ ಸುದ್ದಿಗಳು.”—ಲೂಕ 21:9.
“ಆರ್ಥಿಕ ಸಮಸ್ಯೆ ಮತ್ತು ಬೆಲೆಯೇರಿಕೆ ಜಾಸ್ತಿಯಾಗಿದ್ರಿಂದ 2022ರಲ್ಲಿ ಜನ್ರೆಲ್ಲಾ ಕೋಪದಿಂದ ತುಂಬ ಸಲ ಪ್ರತಿಭಟನೆ ಮಾಡಿದ್ರು, ದಂಗೆಯೆದ್ರು.”e
“ಲೋಕವ್ಯಾಪಕವಾಗಿ ಗಗನಕ್ಕೇರುತ್ತಿರುವ ಬೆಲೆ” ಅನ್ನೋ ಲೇಖನ ನೋಡಿ.
ಮುಂದಿನ ವರ್ಷ ಏನಾಗುತ್ತೆ?
2023ರಲ್ಲಿ ಏನಾಗುತ್ತೆ ಅಂತ ನಮಗೆ ಗೊತ್ತಿಲ್ಲ. ಆದ್ರೆ ದೇವರ ಆಳ್ವಿಕೆ ಅಥವಾ ದೇವರ ಸರ್ಕಾರ ಆದಷ್ಟು ಬೇಗ ಭೂಮಿ ಮೇಲಿರೋ ಎಲ್ಲ ಕೆಟ್ಟತನವನ್ನ ನಾಶ ಮಾಡುತ್ತೆ ಅಂತ ನಮಗೆ ಗೊತ್ತು. (ದಾನಿಯೇಲ 2:44) ಈ ಸರ್ಕಾರ ಮನುಷ್ಯರ ಕಷ್ಟ ಸಂಕಟಗಳನ್ನ ತೆಗೆದು ದೇವರ ಇಷ್ಟವನ್ನ ಈ ಭೂಮಿ ಮೇಲೆ ನೆರವೇರಿಸುತ್ತೆ.—ಮತ್ತಾಯ 6:9, 10.
ಬೈಬಲಿನಲ್ಲಿರೋ ಭವಿಷ್ಯವಾಣಿಗಳ ತರಾನೆ ಈ ಲೋಕದಲ್ಲಿ ಘಟನೆಗಳು ಹೇಗೆ ನಡಿತಿದೆ ಅಂತ ಗಮನಿಸಿ ಮತ್ತು ಯೇಸು ಹೇಳಿದ ತರ “ಸದಾ ಎಚ್ಚರವಾಗಿರಿ.” (ಮಾರ್ಕ 13:37) ಬೈಬಲ್ ನಿಮಗೆ ಈಗ ಹೇಗೆ ಸಹಾಯ ಮಾಡುತ್ತೆ ಮತ್ತು ಭವಿಷ್ಯದಲ್ಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಯಾವ ನಿರೀಕ್ಷೆ ಕೊಡುತ್ತೆ ಅನ್ನೋದ್ರ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನಮ್ಮನ್ನ ಸಂಪರ್ಕಿಸಿ.
a ಎಪಿ ನ್ಯೂಸ್ನಲ್ಲಿ ಜಿಲ್ ಲಾಲೆಸ್ರವರು, “2022ರಲ್ಲಿ ಯುರೋಪ್ ಖಂಡ ಮತ್ತೆ ರಣರಂಗ ಆಯ್ತು” ಅನ್ನೋ ಲೇಖನ ಬರೆದ್ರು—ಡಿಸೆಂಬರ್ 8, 2022.
b ವಿಶ್ವ ಆಹಾರ ಕಾರ್ಯಕ್ರಮ, “ಲೋಕದಲ್ಲಿ ಆಹಾರಕ್ಕೆ ಹಾಹಾಕಾರ!”
c ಜೆಎಎಮ್ಎ ಹೆಲ್ತ್ ಫೋರಂನಲ್ಲಿ ಲಾರೆನ್ಸ್ ಒ. ಗಾಸ್ಟಿನ್ ಜೆಡಿರವರು, “ಅಂಟುರೋಗಗಳ ಸಮಯದಲ್ಲಿ ಜೀವಿಸೋದು—ಕೋವಿಡ್-19ರಿಂದ ಮಂಕಿಪಾಕ್ಸ್, ಪೋಲಿಯೋ ಮತ್ತು ಡಿಸೀಸ್ ಎಕ್ಸ್” ಬಗ್ಗೆ ಲೇಖನ ಬರೆದ್ರು—ಸೆಪ್ಟಂಬರ್ 22, 2022.
d ಮಾರ್ಟಿನಾ ಇಗಿನಿರವರು Earth.Orgನಲ್ಲಿ, “2022ರ ಬೇಸಿಗೆಯಲ್ಲಿ ಮಿತಿ ಮೀರಿದ ತಾಪಮಾನ ಅಥ್ವಾ ಬಿಸಿಗಾಳಿ ಜಾಸ್ತಿಯಾಗಿರೋಕೆ ಕಾರಣ ಏನು?” ಅನ್ನೋ ಲೇಖನ ಬರೆದ್ರು—ಅಕ್ಟೋಬರ್ 24, 2022.
e ಕಾರ್ನೇಗಿ ಎಂಡೋವ್ಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ನಲ್ಲಿ, ಥಾಮಸ್ ಕ್ಯಾರೋಥರ್ಸ್ ಮತ್ತು ಬೆಂಜಮಿನ್ ಫೆಲ್ಡ್ಮನ್ರವರು “2022ರಲ್ಲಿ ಆರ್ಥಿಕ ಸಮಸ್ಯೆ ಮತ್ತು ಬೆಲೆಯೇರಿಕೆ ಜಾಸ್ತಿಯಾಗಿದ್ದರಿಂದ ಜನರು ಕೋಪದಿಂದ ಪ್ರತಿಭಟನೆಗಳನ್ನ ಮಾಡಿದ್ರು” ಅನ್ನೋ ಲೇಖನ ಬರೆದ್ರು—ಡಿಸೆಂಬರ್ 8, 2022.