ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಏಪ್ರಿಲ್‌ ಪು. 5
  • ನಿಷ್ಕ್ರಿಯರನ್ನು ಉತ್ತೇಜಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಷ್ಕ್ರಿಯರನ್ನು ಉತ್ತೇಜಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ನಿಷ್ಕ್ರಿಯರಾಗಿರುವವರನ್ನು ಮರೆಯದಿರಿ
    2007 ನಮ್ಮ ರಾಜ್ಯದ ಸೇವೆ
  • “ನನ್ನ ಬಳಿಗೆ ಮರಳಿ ಬನ್ನಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಅವರು ತಡಮಾಡದೇ ಮರಳುವಂತೆ ನೆರವಾಗಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಮಂದೆಯಿಂದ ತಪ್ಪಿಸಿಕೊಂಡವರಿಗೆ ಸಹಾಯಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಏಪ್ರಿಲ್‌ ಪು. 5

ನಮ್ಮ ಕ್ರೈಸ್ತ ಜೀವನ

ನಿಷ್ಕ್ರಿಯರನ್ನು ಉತ್ತೇಜಿಸಿ

 ಕಳೆದುಹೋದ ಕುರಿಯನ್ನು ಕಾಪಾಡಲು ಪ್ರಯತ್ನಿಸುತ್ತಿರುವ ಕುರುಬ

ಏಪ್ರಿಲ್‌ 11, ಮಂಗಳವಾರದಂದು ಕ್ರಿಸ್ತನ ಮರಣದ ಸ್ಮರಣೆಗೆ ಅನೇಕ ನಿಷ್ಕ್ರಿಯರು ಹಾಜರಾಗಲಿದ್ದಾರೆ. ಅವರು ಜೀವದ ಓಟವನ್ನು ಆರಂಭಿಸಿರುವುದಾದರೂ ಅನೇಕ ಕಾರಣಗಳಿಗಾಗಿ ತಮ್ಮ ಓಟವನ್ನು ನಿಧಾನಿಸಿದ್ದಾರೆ. ಆ ಕಾರಣಗಳಲ್ಲಿ ಕೆಲವನ್ನು ಮರಳಿ ಬನ್ನಿ ಯೆಹೋವನ ಬಳಿ ಕಿರುಹೊತ್ತಗೆಯಲ್ಲಿ ತಿಳಿಸಲಾಗಿದೆ. (ಇಬ್ರಿ 12:1) ಯೆಹೋವನು ನಿಷ್ಕ್ರಿಯರನ್ನು ತುಂಬಾ ಅಮೂಲ್ಯವೆಂದು ಎಣಿಸುತ್ತಾನೆ, ಕಾರಣ ಅವರನ್ನೂ ತನ್ನ ಮಗನ ರಕ್ತದಿಂದ ಕೊಂಡುಕೊಂಡಿದ್ದಾನೆ. (ಅಕಾ 20:28; 1ಪೇತ್ರ 1:18, 19) ಹಾಗಾದರೆ ನಿಷ್ಕ್ರಿಯರು ಸಭೆಗೆ ಮರಳಿ ಬರುವಂತೆ ನಾವು ಹೇಗೆ ಸಹಾಯ ಮಾಡಬಹುದು?

ಒಬ್ಬ ಕುರುಬ ತನ್ನ ಹಿಂಡಿನಿಂದ ಕಳೆದು ಹೋದ ಕುರಿಯನ್ನು ಹುಡುಕಲು ಎಷ್ಟು ಪ್ರಯತ್ನಿಸುತ್ತಾನೋ ಹಿರಿಯರು ಸಹ ನಿಷ್ಕ್ರಿಯರನ್ನು ಹುಡುಕಿ ಅವರಿಗೆ ಸಹಾಯ ಮಾಡಲು ಅಷ್ಟೇ ಪ್ರಯತ್ನಿಸುತ್ತಾರೆ. (ಲೂಕ 15:4-7) ಇದು ತಾನೇ ಯೆಹೋವ ದೇವರು ಅವರನ್ನು ಎಷ್ಟು ಪ್ರೀತಿಸುತ್ತಾನೆ ಅಂತ ತೋರಿಸುತ್ತದೆ. (ಯೆರೆ 23:3, 4) ಅವರನ್ನು ಹಿರಿಯರು ಮಾತ್ರವಲ್ಲ, ನಾವು ಕೂಡ ಪ್ರೋತ್ಸಾಹಿಸಬಹುದು. ಅವರಿಗೆ ನಾವು ದಯೆ ಮತ್ತು ಅನುಕಂಪವನ್ನು ತೋರಿಸುವಾಗ ಯೆಹೋವನಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಒಳ್ಳೇ ಫಲಿತಾಂಶಗಳು ಸಿಗುತ್ತವೆ. (ಜ್ಞಾನೋ 19:17; ಅಕಾ 20:35) ಹಾಗಾಗಿ ಅಂಥವರು ಯಾರಾದರೂ ಇದ್ದಾರಾ ಅಂತ ಯೋಚಿಸಿ. ಅವರಿಗೆ ತಕ್ಷಣ ಸಹಾಯ ಮಾಡಿ.

ಲೋರಾ ಕಿಟಕಿ ಕಡೆ ನೋಡುತ್ತಿದ್ದಾಳೆ, ಆ್ಯಬಿ ಪ್ರಾರ್ಥಿಸುತ್ತಿದ್ದಾಳೆ, ಆ್ಯಬಿ ಮತ್ತು ಲೋರಾ ಅಪ್ಪಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ

ನಿಷ್ಕ್ರಿಯರನ್ನು ಉತ್ತೇಜಿಸಿ ಎಂಬ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳನ್ನು ಪರಿಗಣಿಸಿ:

  • ತನಗೆ ಪರಿಚಯ ಇಲ್ಲದ ಒಬ್ಬ ಸಾಕ್ಷಿಯನ್ನು ಭೇಟಿಯಾದ ಮೇಲೆ ಆ್ಯಬೀ ಏನು ಮಾಡಿದಳು?

  • ನಿಷ್ಕ್ರಿಯರಿಗೆ ಸಹಾಯ ಮಾಡಲು ಯೋಚಿಸುತ್ತಿದ್ದರೆ ಅದರ ಬಗ್ಗೆ ಹಿರಿಯರ ಹತ್ತಿರ ಏಕೆ ಮಾತಾಡಬೇಕು?

  • ಎರಡನೇ ಬಾರಿ ಲೋರಾಳನ್ನು ಭೇಟಿಯಾಗಲು ಆ್ಯಬೀ ಏನೆಲ್ಲಾ ತಯಾರಿ ಮಾಡಿದಳು?

  • ಲೋರಾಳನ್ನು ಉತ್ತೇಜಿಸುವಾಗ ಆ್ಯಬೀ ಹೇಗೆ ಪಟ್ಟುಹಿಡಿದಳು ಮತ್ತು ಪ್ರೀತಿ, ತಾಳ್ಮೆ ತೋರಿಸಿದಳು?

  • ಲೂಕ 15:8-10 ರಲ್ಲಿರುವ ಯೇಸುವಿನ ದೃಷ್ಟಾಂತದಿಂದ ನಾವು ಯಾವ ಪಾಠ ಕಲಿಯಬಹುದು?

  • ಲೋರಾಳಿಗೆ ಸಹಾಯ ಮಾಡಲು ಹಾಕಿದ ಪ್ರಯತ್ನಕ್ಕೆ ಯಾವ ಪ್ರತಿಫಲ ಸಿಕ್ಕಿತು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ