ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 22-24
ಯೆಹೋವನನ್ನು ‘ತಿಳಿದುಕೊಳ್ಳುವ ಹೃದಯ’ ನಿಮಗಿದೆಯಾ?
ಯೆಹೋವನು ಜನರನ್ನು ಅಂಜೂರದ ಹಣ್ಣುಗಳಿಗೆ ಹೋಲಿಸಿದನು
ಬಾಬೆಲಿನಲ್ಲಿ ಬಂದಿಗಳಾಗಿದ್ದ ಯೆಹೂದ್ಯರಲ್ಲಿ ನಂಬಿಗಸ್ತರಾಗಿದ್ದವರು ಉತ್ತಮವಾದ ಅಂಜೂರದಂತಿದ್ದರು
ಅಪನಂಬಿಗಸ್ತ ರಾಜ ಚಿದ್ಕೀಯ ಮತ್ತು ಕೆಟ್ಟದ್ದನ್ನು ಮಾಡಿದ ಜನರು ಕೆಟ್ಟ ಅಂಜೂರದಂತಿದ್ದರು
ಯೆಹೋವನನ್ನು ‘ತಿಳಿದುಕೊಳ್ಳುವ ಹೃದಯವನ್ನು’ ನಾವು ಹೇಗೆ ಪಡೆದುಕೊಳ್ಳಬಹುದು?
ಬೈಬಲನ್ನು ಓದಿ ಅದರಂತೆ ನಡೆದುಕೊಳ್ಳುವಾಗ ಆತನನ್ನು ‘ತಿಳಿದುಕೊಳ್ಳುವ ಹೃದಯವನ್ನು’ ಯೆಹೋವನು ನಮಗೆ ಕೊಡುವನು
ನಮ್ಮ ಹೃದಯವನ್ನು ಯಥಾರ್ಥವಾಗಿ ಪರೀಕ್ಷಿಸಿ ಯೆಹೋವನೊಂದಿಗಿನ ನಮ್ಮ ಸ್ನೇಹಕ್ಕೆ ಹಾನಿಯಾಗುವಂಥ ಮನೋಭಾವ ಮತ್ತು ಆಸೆಗಳನ್ನು ಸಂಪೂರ್ಣವಾಗಿ ಕಿತ್ತುಹಾಕಬೇಕು