ಮಾದರಿ ನಿರೂಪಣೆಗಳು
ಎಚ್ಚರ! ಅಕ್ಟೋಬರ್-ಡಿಸೆಂಬರ್
“ಅನೇಕರ ಜೀವನದಲ್ಲಿ ಒಂದಲ್ಲ ಒಂದು ರೀತಿಯ ದುರ್ಘಟನೆ ಸಂಭವಿಸಿರುತ್ತದೆ. ನೈಸರ್ಗಿಕ ವಿಪತ್ತಿನಿಂದ ತಮ್ಮದ್ದೆಲ್ಲವನ್ನು ಕಳೆದುಕೊಂಡಿರಬಹುದು, ಗಂಭೀರ ಕಾಯಿಲೆ ಬಂದಿರಬಹುದು ಅಥವಾ ತುಂಬ ಬೇಕಾದವರು ಯಾರಾದರೂ ತೀರಿಕೊಂಡಿರಬಹುದು. ಆಘಾತ ತರುವ ಇಂಥ ಪರಿಸ್ಥಿತಿಯಲ್ಲಿ ನಾವು ಸಕಾರಾತ್ಮಕವಾಗಿ ಆಲೋಚಿಸುವುದು ಪ್ರಾಮುಖ್ಯ ಎಂದು ನಿಮಗನಿಸುತ್ತದಾ? [ಪ್ರತಿಕ್ರಿಯೆಗೆ ಕಾಯಿರಿ.] ಇಂಥ ಸನ್ನಿವೇಶಗಳನ್ನು ನಿಭಾಯಿಸಲು ತುಂಬ ಜನರಿಗೆ ಯಾವುದು ಸಹಾಯಮಾಡಿದೆ ಎಂದು ನಿಮಗೆ ತೋರಿಸಬಹುದಾ? [ಮನೆಯವನು ಇಷ್ಟಪಡುವಲ್ಲಿ ರೋಮನ್ನರಿಗೆ 15:4 ಓದಿ.] ದುರ್ಘಟನೆಗೆ ತುತ್ತಾದಾಗ ನಮಗೆ ಬೈಬಲಿನಿಂದ ಹೇಗೆ ಸಹಾಯ ಸಿಗುತ್ತದೆ ಎಂದು ಈ ಪತ್ರಿಕೆಯಲ್ಲಿ ತಿಳಿಸಲಾಗಿದೆ.”