ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“ವೈದ್ಯಕೀಯ ವಿಜ್ಞಾನವು ರೋಗರುಜಿನಗಳನ್ನು ನಿರ್ಮೂಲಗೊಳಿಸುವುದರಲ್ಲಿ ಗಮನಾರ್ಹ ಪ್ರಗತಿಯನ್ನು ಮಾಡಿದೆ. ಆದರೆ, ಕಾಯಿಲೆಗಳೇ ಇಲ್ಲದ ಒಂದು ಲೋಕವನ್ನು ನಾವೆಂದಾದರೂ ನೋಡುವೆವು ಎಂದು ನೀವು ನೆನಸುತ್ತೀರೋ? [ಪ್ರತ್ಯುತ್ತರಕ್ಕಾಗಿ ಅವಕಾಶಕೊಡಿ.] ಇಲ್ಲಿರುವ ಈ ಪ್ರವಾದನೆ ನೆರವೇರುವಾಗ, ಭೂಮಿಯ ಮೇಲಿರುವ ಪ್ರತಿಯೊಬ್ಬರೂ ಒಂದು ದಿನ ಪರಿಪೂರ್ಣ ಆರೋಗ್ಯದಿಂದ ಇರುವರೆಂದು ಈ ಪತ್ರಿಕೆಯು ವಿವರಿಸುತ್ತದೆ.” ಯೆಶಾಯ 33:24ನ್ನು ಓದಿ.
ಕಾವಲಿನಬುರುಜು ಜೂನ್1
“ಬಹುಮಟ್ಟಿಗೆ ಪ್ರತಿದಿನ ನಾವು ದುಷ್ಕೃತ್ಯವೆಸಗುವ ಜನರ ಕುರಿತು ಕೇಳಿಸಿಕೊಳ್ಳುತ್ತೇವೆ. [ಸ್ಥಳಿಕವಾಗಿ ತಿಳಿದಿರುವ ಇತ್ತೀಚಿನ ಉದಾಹರಣೆಯೊಂದನ್ನು ಕೊಡಿ.] ಜನರ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕೆಡುಕಿನ ಒಂದು ಅದೃಶ್ಯ ಮೂಲವು ಇದೆ ಎಂಬುದರ ಕುರಿತು ನೀವೆಂದಾದರೂ ಯೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಬಳಿಕ ಪ್ರಕಟನೆ 12:12ನ್ನು ಓದಿ.] ನಾವು ನಮ್ಮನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು ಎಂದು ಈ ಪತ್ರಿಕೆಯು ವಿವರಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ಲೋಕದ ಅನೇಕ ಭಾಗಗಳಲ್ಲಿ ಜನರು ನೈತಿಕ ಮೌಲ್ಯಗಳು ಅಧೋಗತಿಗಿಳಿಯುತ್ತಿವೆ ಎಂದು ನೆನಸುತ್ತಾರೆ. ನೀವಿದನ್ನು ಗಮನಿಸಿದ್ದೀರೋ? [ಪ್ರತ್ಯುತ್ತರಕ್ಕಾಗಿ ಅವಕಾಶಕೊಡಿ.] ನಾವಿಂದು ನೋಡುತ್ತಿರುವ ಪರಿಸ್ಥಿತಿಗಳು ಒಂದು ಪುರಾತನ ಪ್ರವಾದನೆಯನ್ನು ನೆರವೇರಿಸುತ್ತಿವೆ. [2 ತಿಮೊಥೆಯ 3:2-4ನ್ನು ಓದಿ.] ಈ ಪತ್ರಿಕೆಯು ನೈತಿಕ ಮೌಲ್ಯಗಳ ಕುಸಿತದ ಅರ್ಥ ಮತ್ತು ಅದು ಮಾನವಕುಲವನ್ನು ಎತ್ತ ನಡೆಸುತ್ತಿದೆ ಎಂಬುದನ್ನು ತಿಳಿಸುತ್ತದೆ.”
ಕಾವಲಿನಬುರುಜು ಜುಲೈ1
“ಭಿನ್ನ ಜಾತಿ, ರಾಷ್ಟ್ರ ಮತ್ತು ಭಾಷೆಯ ಕಾರಣ ಜನರು ತುಚ್ಛವಾಗಿ ಕಾಣಲ್ಪಡುವುದೇಕೆ ಎಂದು ನೀವೆಂದಾದರು ಯೋಚಿಸಿದ್ದೀರೋ? [ಪ್ರತ್ಯುತ್ತರಕ್ಕಾಗಿ ಅವಕಾಶಕೊಡಿ.] ಇದಕ್ಕಿರುವ ಕಾರಣವೇನೆಂದು ಇಲ್ಲಿ ಗಮನಿಸಿ. [1 ಯೋಹಾನ 4:20ನ್ನು ಓದಿರಿ.] ಈ ಪತ್ರಿಕೆಯು ಜನಾಂಗೀಯ ಸಾಮರಸ್ಯ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವನ್ನು ಕೊಡುತ್ತದೆ.”