ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ. - ಜೂನ್
“ಇಂದು ಜನರು ಅನೇಕ ದೇವರುಗಳನ್ನು ಆರಾಧಿಸುತ್ತಾರೆ. ಆದರೆ ಯೇಸು ತನ್ನ ಸ್ವರ್ಗೀಯ ತಂದೆಯ ಕುರಿತು ಪ್ರಾರ್ಥನೆಯಲ್ಲಿ ಏನು ಹೇಳಿದನೆಂಬುದನ್ನು ಗಮನಿಸಿ. [ಯೋಹಾನ 17:3ನ್ನು ಓದಿರಿ.] ಸತ್ಯ ದೇವರು ಒಬ್ಬನು ಮಾತ್ರವೇ ಆಗಿರುವಲ್ಲಿ, ಇತರ ಎಲ್ಲ ದೇವರುಗಳ ಕುರಿತು ಏನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಇದರ ಕುರಿತು ಬೈಬಲಿನ ದೃಷ್ಟಿಕೋನವನ್ನು ಈ ಪತ್ರಿಕೆಯು ನೀಡುತ್ತದೆ. 14-15ನೇ ಪುಟಗಳಲ್ಲಿರುವ ಲೇಖನವನ್ನು ತೋರಿಸಿರಿ.
ಕಾವಲಿನಬುರುಜು ಏಪ್ರಿ.15
“ಒಳ್ಳೆಯ ಸಂವಾದವು ಸಂತೋಷಕರ ಕುಟುಂಬ ಜೀವನದ ಒಂದು ಕೀಲಿ ಕೈಯಾಗಿದೆ ಎಂದು ಹೆಚ್ಚಿನ ಜನರು ಒಪ್ಪುವುದಾದರೂ ಅನೇಕರಿಗೆ ಒಳ್ಳೇ ರೀತಿಯಲ್ಲಿ ಸಂವಾದಿಸುವುದು ಕಷ್ಟಕರವಾಗಿರುತ್ತದೆ. ಹಾಗೇಕಿರಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು ಸಂವಾದ ಕೌಶಲ್ಯಗಳನ್ನು ಉತ್ತಮಗೊಳಿಸುವುದರ ಬಗ್ಗೆ ಸಲಹೆಗಳನ್ನು ನೀಡುತ್ತದೆ.” ಯಾಕೋಬ 1:19ನ್ನು ಓದಿರಿ.
ಎಚ್ಚರ! ಏಪ್ರಿ. - ಜೂನ್
“ಇಂದು ಶಾಲೆಗಳಲ್ಲಿ ವ್ಯಾಪಕವಾಗಿ ಹಬ್ಬಿರುವ ನೈತಿಕತೆಯ ಕೊರತೆಯ ಕುರಿತು ಆಲೋಚಿಸುವಾಗ, ನಮ್ಮ ಯುವಜನರು ತಮ್ಮ ನೈತಿಕ ಶುದ್ಧತೆಯನ್ನು ಕಾಪಾಡಿಕೊಳ್ಳಲು ಯಾವುದು ಸಹಾಯಮಾಡುವುದು ಎಂದು ನೀವು ನೆನಸುತ್ತಿರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಜ್ಞಾನೋಕ್ತಿ 22:3ನ್ನು ಓದಿರಿ. ಪುಟ 16ರಲ್ಲಿರುವ ಲೇಖನವನ್ನು ತೋರಿಸಿರಿ.] ಶಾಲೆಯಲ್ಲಿರುವ ನಮ್ಮ ಮಕ್ಕಳಿಗೆ ಸಹಾಯವನ್ನು ನೀಡುವ ಕೆಲವು ಪ್ರಾಯೋಗಿಕ ಮಾರ್ಗದರ್ಶನಗಳು ಈ ಲೇಖನದಲ್ಲಿವೆ.”
ಕಾವಲಿನಬುರುಜು ಮೇ1
“ಬಡತನದ ವೇದನಾಮಯ ಪರಿಣಾಮಗಳಿಂದ ಕೋಟಿಗಟ್ಟಲೆ ಜನರು ನರಳುತ್ತಿದ್ದಾರೆ. ಅವರ ಸಹಾಯಾರ್ಥವಾಗಿ ಏನು ಮಾಡಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ 1 ಪೇತ್ರ 2:21ನ್ನು ಓದಿರಿ.] ಬಡವರಿಗೆ ಕಾಳಜಿ ತೋರಿಸುವುದರಲ್ಲಿ ನಾವು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸಬಹುದೆಂದು ಈ ಪತ್ರಿಕೆಯು ವಿವರಿಸುತ್ತದೆ.”