ಆಸಕ್ತಿಯನ್ನು ವಿವೇಚನೆಯಿಂದ ಅನುಸರಿಸಿಕೊಂಡು ಹೋಗಿ
1 ಡಿಸೆಂಬರ್ ತಿಂಗಳು, ನಮ್ಮ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸಿರುವವರಲ್ಲಿ ಕೆಲವರು ರಜೆಯ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿರುವ ಒಂದು ತಿಂಗಳಾಗಿದೆ. ಇತರ ಅನೇಕರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಸರ್ವದಾ ಕಾರ್ಯಮಗ್ನರಾಗಿರುವಂತೆ ತೋರುತ್ತದೆ. ಆದುದರಿಂದ, ಆಸಕ್ತಿಯನ್ನು ಅನುಸರಿಸಿಕೊಂಡು ಹೋಗುವಾಗ, ನಾವು ವಿವೇಚಿಸುವವರಾಗಿರುವ ಅಗತ್ಯವಿದೆ ಮತ್ತು ಮನೆಯವನು ಹೆಚ್ಚು ದೀರ್ಘವಾದ ಸಂಭಾಷಣೆಗಾಗಿ ಬಯಕೆಯನ್ನು ತೋರಿಸುವ ಹೊರತು, ಕೂಡಲೆ ಪ್ರಸಕ್ತ ವಿಷಯಕ್ಕೆ ಬರಲು ಸಿದ್ಧರಾಗಿರಬೇಕು.
2 ನಾವು ಹೇಳಲಿರುವ ವಿಷಯವನ್ನು ಮುಂಚಿತವಾಗಿ ಆಲೋಚಿಸಿರಿ: ನಾವು ಹೇಳಲು ಬಯಸುವ ವಿಷಯವು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿಗಿರಬೇಕು. ಹಿಂದಿನ ಭೇಟಿಯ ಕುರಿತಾದ ಟಿಪ್ಪಣಿಗಳನ್ನು ಪರಾಮರ್ಶಿಸುವುದು ಮತ್ತು ಸಂಭಾಷಣೆಯಲ್ಲಿ ಆವರಿಸಲ್ಪಟ್ಟ ಅಂಶಗಳು ಮತ್ತು ಮನೆಯವನೊಂದಿಗೆ ಉತ್ತರಿಸಲ್ಪಡದೆ ಬಿಡಲ್ಪಟ್ಟ ಯಾವುದೇ ಪ್ರಶ್ನೆಗೆ ಸಂಬಂಧಿಸಿದ ನಮ್ಮ ಜ್ಞಾಪಕಶಕ್ತಿಯನ್ನು ಪುನಃ ಚೈತನ್ಯಗೊಳಿಸುವುದನ್ನು ಇದು ಅಗತ್ಯಪಡಿಸುತ್ತದೆ.
3 ಯೇಸುವಿನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಳ್ಳುವ ಒಬ್ಬ ವ್ಯಕ್ತಿಯನ್ನು ಪುನಃ ಭೇಟಿ ಮಾಡುವಾಗ, ನಾವು ಹೀಗೆ ಹೇಳಸಾಧ್ಯವಿದೆ:
◼ “ವರ್ಷದ ಈ ಸಮಯದಲ್ಲಿ, ಅನೇಕ ಜನರು ಕ್ರಿಸ್ತನ ಜನನದ ಕುರಿತು ಯೋಚಿಸುತ್ತಿದ್ದಾರೆ. ಕಳೆದ ಸಲ ನಾವು ಮಾತಾಡಿದಾಗ, ಯೇಸು ಕ್ರಿಸ್ತನು ಇತರರೆಲ್ಲರಿಂದ ಪ್ರತ್ಯೇಕಿಸಲ್ಪಟ್ಟಿರುವ ಒಬ್ಬ ಅಸದೃಶ ವ್ಯಕ್ತಿಯಾಗಿದ್ದಾನೆಂದು ನಾನು ಹೇಳಿದ್ದೆ. ಯೇಸುವು ಬೇತ್ಲೆಹೇಮಿನಲ್ಲಿ ಜನಿಸುವನೆಂದು ಬೈಬಲು 700 ವರ್ಷಗಳಿಗೆ ಮುಂಚಿತವಾಗಿಯೇ ಮುಂತಿಳಿಸಿತೆಂದು ನಿಮಗೆ ತಿಳಿದಿತ್ತೊ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ತದನಂತರ, ಮೀಕ 5:2ನ್ನು ಓದಿದ ಬಳಿಕ, ನೀವು ಹೀಗೆ ಹೇಳಸಾಧ್ಯವಿದೆ: “ಅದು ಒಂದು ಆಶ್ಚರ್ಯಕರವಾದ ಪ್ರವಾದನೆಯಾಗಿದೆ ಅಲ್ಲವೆ? ಇದು ಬೈಬಲ್ ಸಂಬಂಧಿತವಾದ ಒಂದು ಆಸಕ್ತಿಭರಿತ ವಾಸ್ತವಾಂಶವಾಗಿರುವಾಗ, ನಮ್ಮ ದಿನದಲ್ಲಿ ಸಹ ಬೈಬಲ್ ಪ್ರವಾದನೆಗಳು ನಿಜವಾಗುತ್ತಿವೆ ಎಂಬುದು ನಿಮಗೆ ತಿಳಿದಿತ್ತೊ?” ಆ ವ್ಯಕ್ತಿಗೆ ಸಮಯವಿರುವಲ್ಲಿ, ನಾವು ಸಂಭಾಷಣೆಯನ್ನು ಮುಂದುವರಿಸಸಾಧ್ಯವಿದೆ, ಅಥವಾ ಅವನು ಕಾರ್ಯಮಗ್ನನಾಗಿರುವಲ್ಲಿ, ನಾವು ಹಿಂದಿರುಗಲು ಮತ್ತು ಇದರ ಕುರಿತು ಇನ್ನೂ ಹೆಚ್ಚಾಗಿ ಅವನೊಂದಿಗೆ ಚರ್ಚಿಸಲಿಕ್ಕಾಗಿ ಸಿದ್ಧರಿದ್ದೇವೆಂದು ಹೇಳಬಹುದು.
4 “ಈ ಲೋಕವು ಪಾರಾಗುವುದೋ?” ಎಂಬ ಕಿರುಹೊತ್ತಗೆಯನ್ನು, ಬೈಬಲ್ ಜ್ಞಾನದ ಹಿನ್ನೆಲೆಯಿರದ ಯಾರೊಂದಿಗಾದರೂ ಬಿಟ್ಟುಬಂದಿರುವಲ್ಲಿ, ನಾವು ಈ ಕೆಳಗಿನ ವಿಷಯವನ್ನು ಹೇಳಬಹುದು:
◼ “4ನೆಯ ಪುಟದಲ್ಲಿ, ‘ಸೂಚನೆ’ ಎಂಬ ಉಪಶಿರೋನಾಮದ ಕೆಳಗೆ ತಿಳಿಸಲ್ಪಟ್ಟಿರುವ ವಿಷಯವನ್ನು ಗಮನಿಸಿರಿ. ಇದು ಸದ್ಯದ ಲೋಕದ ಕಡೆಯ ದಿವಸಗಳನ್ನು ಗುರುತಿಸುವವು ಎಂದು ಯೇಸು ಹೇಳಿದ ಪ್ರವಾದನೆಗಳಿಗೆ ಸಂಬಂಧಿಸುತ್ತದೆ. [ಮನೆಯವನೊಂದಿಗೆ ಎರಡು ಅಥವಾ ಮೂರು ಪ್ರವಾದನೆಗಳನ್ನು ಪರಿಗಣಿಸಿರಿ.] ಈ ಪ್ರವಾದನೆಗಳು ನಮ್ಮ ದಿನದಲ್ಲಿ ನೆರವೇರಲ್ಪಡುತ್ತಿವೆ ಎಂಬುದಕ್ಕೆ ಪುರಾವೆಯಿದೆಯೆಂದು ನೀವು ಹೇಳಸಾಧ್ಯವಿದೆಯೊ?” ಈಗ ನೀವು, ಮನೆಯವನು ಸದಾ ಜೀವಿಸಬಲ್ಲಿರಿ ಅಥವಾ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಪಡೆದುಕೊಳ್ಳುವಂತೆ ಸಲಹೆಯನ್ನು ನೀಡಲು ಬಯಸಬಹುದು. ಸದಾ ಜೀವಿಸಬಲ್ಲಿರಿ ಪುಸ್ತಕದ 18ನೆಯ ಅಧ್ಯಾಯ ಅಥವಾ ಅತ್ಯಂತ ಮಹಾನ್ ಪುರುಷ ಪುಸ್ತಕದ 111ನೆಯ ಅಧ್ಯಾಯವು, ಯೇಸು ಕೊಟ್ಟ ಸೂಚನೆಯ ಸಂಬಂಧವಾಗಿ ಹೆಚ್ಚಿನ ವಿವರಣೆಯನ್ನು ಹೇಗೆ ಕೊಡುತ್ತದೆ ಎಂಬುದನ್ನು ತೋರಿಸಿರಿ.
5 ಒಂದು ಮನೆ ಬೈಬಲ್ ಅಭ್ಯಾಸವನ್ನು ನೀಡುವುದು: ನಾವು ಮನೆಯವನೊಂದಿಗೆ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಬಿಟ್ಟುಬರುವುದಾದರೆ ಅಥವಾ ಈಗಾಗಲೇ ಅವನಲ್ಲಿ ಒಂದು ಪ್ರತಿಯಿರುವುದಾದರೆ, 111ನೆಯ ಅಧ್ಯಾಯವನ್ನು ಉಪಯೋಗಿಸಿ ಒಂದು ಮನೆ ಬೈಬಲ್ ಅಭ್ಯಾಸವನ್ನು ಪ್ರತ್ಯಕ್ಷಾಭಿನಯಿಸಿ ತೋರಿಸುವುದು ಒಳ್ಳೆಯದಾಗಿರುವುದು. ಸಭಾ ಪುಸ್ತಕ ಅಭ್ಯಾಸದಲ್ಲಿ ಉಪಯೋಗಿಸಲ್ಪಡುವ ವಿಧಾನಕ್ಕೆ ತತ್ಸಮಾನವಾದ ಒಂದು ವಿಧಾನವನ್ನು ನಾವು ಉಪಯೋಗಿಸಬಲ್ಲೆವು. ಅಭ್ಯಾಸವು ಪ್ರಗತಿಹೊಂದುತ್ತಾ ಮುಂದುವರಿಯುವುದಾದರೆ, ನಾವು ಬ್ರೋಷರ್ಗಳಲ್ಲಿ ಒಂದನ್ನು ಅಭ್ಯಾಸಿಸಲು ಅಥವಾ ನೇರವಾಗಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಅಭ್ಯಾಸಿಸಲು ಬದಲಾಯಿಸಸಾಧ್ಯವಿದೆ.
6 ತೋರಿಸಲ್ಪಡುವ ಎಲ್ಲ ಆಸಕ್ತಿಯನ್ನು ಅನುಸರಿಸಿಕೊಂಡು ಹೋಗಲು ನಾವು ಸದಾ ಸಿದ್ಧರಾಗಿರೋಣ. ನಾವು ವಿವೇಚಿಸುವವರೂ ಪ್ರತಿಯೊಂದು ಸಂಭಾಷಣೆಯ ಅಂತ್ಯದಲ್ಲಿ ಆಸಕ್ತಿಭರಿತ ಪ್ರಶ್ನೆಗಳನ್ನು ಎಬ್ಬಿಸುವ ಮೂಲಕ ಮುಂದಿನ ಭೇಟಿಗಾಗಿ ಮಾರ್ಗ ಸರಿಮಾಡಲು ಸದಾ ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುವವರೂ ಆಗಿರತಕ್ಕದ್ದು. ಇದು ನಾವು “ಸಕಲಸತ್ಕಾರ್ಯಕ್ಕೆ ಸಂಪೂರ್ಣವಾಗಿ ಸನ್ನದ್ಧರಾಗಿ”ರಲು ಸಹಾಯ ಮಾಡುವುದು.—2 ತಿಮೊ. 3:17, NW.