ದೇವಪ್ರಭುತ್ವ ವಾರ್ತೆಗಳು
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್: 1,846 ಪ್ರಚಾರಕರ ಒಂದು ಹೊಸ ಉಚ್ಚಾಂಕದೊಂದಿಗೆ, ಅಕ್ಟೋಬರ ತಿಂಗಳಿನಲ್ಲಿ ಸೇವಾ ಚಟುವಟಿಕೆಯು ಗಮನಾರ್ಹವಾಗಿತ್ತು. 19 ನಿವೇಶನಗಳಲ್ಲಿ ವಿಶೇಷ ದಿನದ ಸಮ್ಮೇಳನಗಳ ಕಾರ್ಯಕ್ರಮಗಳನ್ನು ಸಾದರಪಡಿಸಲಾಯಿತು, 5,577 ಮಂದಿ ಹಾಜರಿಯಲ್ಲಿದ್ದು 32 ಮಂದಿ ದೀಕ್ಷಾಸ್ನಾನ ಹೊಂದಿದರು.
ಮೆಕ್ಸಿಕೋ: ನವಂಬರದಲ್ಲಿ 411,292 ಪ್ರಚಾರಕರು ವರದಿಸಿದರು. ಇದು ಇನ್ನೊಂದು ಹೊಸ ಉಚ್ಚಾಂಕವಾಗಿತ್ತು.
ಶ್ರೀಲಂಕಾ: ನವಂಬರದಲ್ಲಿ 1,873 ಪ್ರಚಾರಕರು ವರದಿ ಮಾಡುತ್ತಿದ್ದರು, ಇದು 9 ಶೇಕಡದ ಒಂದು ಉತ್ತಮ ಅಭಿವೃದ್ಧಿಯಾಗಿದೆ.