ದೇವಪ್ರಭುತ್ವ ವಾರ್ತೆಗಳು
◆ ಕೆನಡಾ ಎಪ್ರಿಲಿನಲ್ಲಿ ಜುಮ್ಲಾ ಪ್ರಚಾರಕರಲ್ಲಿ 1,00,000 ಬಿಂದುವನ್ನು ದಾಟಿ, ಹೊಸ ಪ್ರಚಾರಕ ಉಚ್ಛಾಂಕವಾದ 1,00,368ನ್ನು ಪಡೆಯಿತು.
◆ ಕೇಪ್ ವರ್ಡೆ ದ್ವೀಪವು ಎಪ್ರಿಲಿನಲ್ಲಿ 410 ಪ್ರಚಾರಕರ ಉನ್ನತ ಸಂಖ್ಯೆಯನ್ನು ಪಡೆಯಿತು, ಇದು ಕಳೆದ ವರ್ಷದ ಸರಾಸರಿಗಿಂತ 19 ಶೇಕಡಾ ವೃದ್ಧಿ. ಸಭಾ ಪ್ರಚಾರಕರು ಸರಾಸರಿ 14.5 ತಾಸನ್ನು ಹಾಕಿದ್ದಾರೆ, 856 ಬೈಬಲಧ್ಯಯನಗಳ ಉಚ್ಛಾಂಕವು ವರದಿಯಾಗಿದೆ.
◆ ಹೊಂಡುರಾಸ್‌ಗೆ ಎಪ್ರಿಲ್ ಒಂದು ಮಹತ್ತಾದ ತಿಂಗಳಾಗಿತ್ತು. ಅವರು ಪ್ರಚಾರಕರಲ್ಲಿ, ಪಯನೀಯರರಲ್ಲಿ, ತಾಸುಗಳಲ್ಲಿ, ಪತ್ರಿಕೆಗಳಲ್ಲಿ, ಪುನರ್ಭೇಟಿಗಳಲ್ಲಿ ಮತ್ತು ಬೈಬಲಧ್ಯಯನಗಳಲ್ಲಿ ಹೊಸ ಉಚ್ಛಾಂಕಗಳನ್ನು ಮುಟ್ಟಿದ್ದಾರೆ. ಮೂರು ಹೊಸ ಸಭೆಗಳು ಸಹಾ ಮಾಡಲ್ಪಟ್ಟವು. 5,706 ಪ್ರಚಾರಕರು 9,614 ಮನೆ ಬೈಬಲಧ್ಯಯನಗಳನ್ನು ನಡಿಸಿದರು.
◆ ದಕ್ಷಿಣ ಆಫ್ರಿಕಾ ಎಪ್ರಿಲಿನಲ್ಲಿ ಪ್ರಚಾರಕರ 48,590 ಹೊಸ ಉಚ್ಚಾಂಕವನ್ನು ಪಡೆಯಿತು. ಒಂದು ಮಹತ್ತಾದ ಹೊಸ ಉಚ್ಛಾಂಕವಾದ 49,967 ಬೈಬಲಧ್ಯಯನಗಳ ಉನ್ನತ ಸಂಖ್ಯೆಯೂ ವರದಿಯಾಗಿದೆ.